ಫ್ಲಿಪ್‌ಕಾರ್ಟ್ 'ದಿ ಬಿಗ್ ಬಿಲಿಯನ್ ಡೇಸ್' ಮೇಳ ಆರಂಭಕ್ಕೆ ಕ್ಷಣಗಣನೆ!

|

ಆನ್‌ಲೈನ್ ಗ್ರಾಹಕರು ಪ್ರತಿವರ್ಷವೂ ಕುತೂಹಲದಿಂದ ಕಾಯುವಂತಹ ಫ್ಲಿಪ್‌ಕಾರ್ಟ್ "ದಿ ಬಿಗ್ ಬಿಲಿಯನ್ ಡೇಸ್" ಮೇಳ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಬಿಗ್ ಬಿಲಿಯನ್ ಡೇಸ್ ಆಫರ್ ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಫ್ಲಿಪ್ ಕಾರ್ಟ್, ಈ ಬಾರಿ ಇದೇ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4ರವರೆಗೂ "ದಿ ಬಿಗ್ ಬಿಲಿಯನ್ ಡೇಸ್" ಆಫರ್ ಸೇಲ್ ನಡೆಸುತ್ತಿದೆ. ಫ್ಲಿಪ್‌ಕಾರ್ಟ್ ಸಂಸ್ಥೆಯ ವಿಶೇಷ ಗ್ರಾಹಕರಾದ ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರಿಗೆ ಇಂದು ರಾತ್ರಿ 8 ಗಂಟೆಯಿಂದಲೇ ಆಫರ್ ತೆರೆದುಕೊಳ್ಳಲಿದೆ.

ಸೆಪ್ಟೆಂಬರ್ 29 ರಂದು

ಮೊಬೈಲ್, ಸ್ಮಾರ್ಟ್‌ ಟಿವಿಗಳು, ಉಪಕರಣಗಳು, ಗೃಹ ಮತ್ತು ಪೀಠೋಪಕರಣಗಳು, ಫ್ಯಾಷನ್ ಸಾಮಾಗ್ರಿಗಳು, ಕ್ರೀಡಾ ವಸ್ತುಗಳು, ಸ್ಮಾರ್ಟ್ ಡಿವೈಸ್ ಗಳು ಇನ್ನಿತರ ವಸ್ತುಗಳ ಮಾರಾಟ ಸೆಪ್ಟೆಂಬರ್ 29 ರಂದು ನಡೆಯಲಿದೆ. 30ರ ನಂತರ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣ ಅದರ ಜೊತೆಗೆ ಆಕ್ಸಸ್ಸೆರಿಗಳನ್ನು ಭಾರೀ ಡಿಸ್ಕೌಂಟ್ಸ್ ದರದಲ್ಲಿ ಮಾರಾಟ ಮಾಡಲಾಗುವುದು. ಈ ರೀತಿ ಅಕ್ಟೋಬರ್ 4ರವರೆಗೂ ಹಲವು ಆಫರ್ ಗಳ ಮೂಲಕ ವಿವಿಧ ವಸ್ತುಗಳ ಮಾರಾಟ ಮಾಡಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್

ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4ರವರೆಗೂ ನಡೆಯಲಿರುವ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಈ ಬಾರಿ ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡುದಾರರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಆಕ್ಸಿಸ್ ಮತ್ತು ಐಸಿಐಸಿಐ ಕಾರ್ಡ್ ಬಳಕೆದಾರರಿಗೆ 10% ಕ್ಕಿಂತ ಹೆಚ್ಚು ಡಿಸ್ಕೌಂಟ್, 5 % ಕ್ಕಿಂತ ಹೆಚ್ಚು ಕ್ಯಾಶ್ ಬ್ಯಾಕ್ ಸಿಗಲಿದೆ. ಜೊತೆಗೆ ಮೊದಲ ಬಾರಿಗೆ ಗ್ರಾಹಕರು ವಿಮೆಗಳ ಮೂಲಕವೂ ವಸ್ತುಗಳನ್ನು ಖರೀದಿ ಮಾಡುವ ಅವಕಾಶಗಳನ್ನು ಕಲ್ಪಿಸಲಾಗಿದೆ.

ಫ್ಲಿಪ್ಕಾರ್ಟ್ ಪ್ಲಸ್ ಗ್ರಾಹಕರಿಗೆ

ಫ್ಲಿಪ್ಕಾರ್ಟ್ ಪ್ಲಸ್ ಗ್ರಾಹಕರಿಗೆ ನಾಲ್ಕು ಗಂಟೆ ಮೊದಲೇ 'ದಿ ಬಿಗ್ ಬಿಲಿಯನ್ ಡೇಸ್' ಅವಕಾಶಗಳ ಬಾಗಿಲು ತೆರೆಯಲಿದ್ದು, ಹೆಚ್ಚು ಹೆಚ್ಚು ಆಫರ್‌ಗಳು ದೊರೆಕಲಿದೆ. ಪ್ರತಿನಿತ್ಯ ಯಾವೆಲ್ಲಾ ವಸ್ತುಗಳ ಮಾರಾಟವಾಗುತ್ತದೆ ಎಂಬ ವಿಷಯವನ್ನು ದಿನದಾರಂಭದಲ್ಲಿ ಮಾಹಿತಿ ನೀಡಲಿದೆ. ಈ ಬಾರಿ ಗ್ಯಾಜೆಟ್ಸ್, ಗೃಹೋಪಯೋಗಿ ಸಲಕರಣೆಗಳು ಮತ್ತು ಫ್ಯಾಷನ್ ಉತ್ಪನ್ನಗಳ ಮೇಲೆ ಹೆಚ್ಚು ರಿಯಾಯಿತಿ ಸಿಗುವ ಮುನ್ಸೂಚನೆಯನ್ನು ಫ್ಲಿಪ್‌ಕಾರ್ಟ್ ನೀಡಿರುವುದನ್ನು ಸಹ ನಾವಿಲ್ಲಿ ನೋಡಬಹುದು.

ಪೂರೈಕೆ ಸರಣಿ

ಈ ವರ್ಷದಲ್ಲಿ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಸರಣಿಯನ್ನು ಹೆಚ್ಚಿಸಿದ್ದು, ಗ್ರಾಹಕರು ಮತ್ತು ಮಾರಾಟಗಾರರ ಅಗತ್ಯಗಳನ್ನು ಪೂರೈಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸದಾಗಿ 30,000 ಕಿರಾಣಿ ಅಂಗಡಿಗಳನ್ನು ತನ್ನ ಜಾಲಕ್ಕೆ ಸೇರಿಸಿಕೊಂಡಿದೆ. ಮೇಳದಲ್ಲಿ ವಿವಿಧ ವರ್ಗಗಳಲ್ಲಿ ಮಾರಾಟ ನಡೆಯಲಿದ್ದು, ದಿ ಬಿಗ್ ಬಿಲಿಯನ್ ಡೇಸ್ ಗಾಗಿ ದೇಶದ ಪ್ರಮುಖ ತಾರೆಗಳಾದ ಅಮಿತಾಬ್ ಬಚ್ಚನ್, ಪುನೀತ್ ರಾಜ್‌ಕುಮಾರ್, ಮಹೇಶ್ ಬಾಬು ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆ ಮತ್ತು ಎಂ,ಎಸ್ ಧೋನಿ ಅವರು ಫ್ಲಿಪ್‌ಕಾರ್ಟ್ ಪಾಲುದಾರಿಕೆ ಹೊಂದಿದೆ.

Best Mobiles in India

English summary
India's biggest sale, Flipkart Big Billion Days, is back!. shopping festival will kick start from the 29th September to 04th October with early access to Flipkart Plus members. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X