ಇಂದೇ ಕೊನೆಯ ದಿನ!..ಹೊಸ ಫೋನ್‌ ಖರೀದಿಸುವವರು ಈ ಚಾನ್ಸ್‌ ಮಿಸ್‌ ಮಾಡ್ಕೋಬೇಡಿ!

|

ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ ಸೆಪ್ಟೆಂಬರ್ 23 ರಿಂದ ಆಯೋಜಿಸಿರುವ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ (Flipkart Big Billion Day Sale 2022) ಇಂದು ಮುಕ್ತಾಯವಾಗಲಿದೆ. ಈ ಮಾರಾಟ ಮೇಳದಲ್ಲಿ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳು ಆಕರ್ಷಕ ರಿಯಾಯಿತಿಯಲ್ಲಿ ಲಭ್ಯ. ಮುಖ್ಯವಾಗಿ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಕೆಲವು ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ದೊರೆಯುತ್ತದೆ.

ಪಿಕ್ಸಲ್‌

ಹೌದು, ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ (Flipkart Big Billion Day Sale 2022) ಇಂದು (ಸೆ. 30) ಮುಗಿಯಲಿದೆ. ಇನ್ನು ಈ ಸೇಲ್‌ನಲ್ಲಿ ಐಫೋನ್‌, ಗೂಗಲ್‌ ಪಿಕ್ಸಲ್‌, ನಥಿಂಗ್ ಫೋನ್‌ 1 ಸೇರಿದಂತೆ ಇತರೆ ಕೆಲವು ಸ್ಮಾರ್ಟ್‌ಫೋನ್‌ಗಳು ಸಹ ಅಧಿಕ ಕೊಡುಗೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಹೀಗಾಗಿ ನೀವೇನಾದರೂ ಭರ್ಜರಿ ಡಿಸ್ಕೌಂಟ್‌ನಲ್ಲಿ ಹೊಸ ಫೋನ್‌ ಖರೀದಿಸಬೇಕಿದ್ದರೆ, ಬಿಗ್ ಬಿಲಿಯನ್‌ ಡೇಸ್‌ ಸೇಲ್‌ ಸೂಕ್ತ.

ನಥಿಂಗ್ ಫೋನ್ 1

ನಥಿಂಗ್ ಫೋನ್ 1

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ನಥಿಂಗ್ ಫೋನ್ (1) ಅನ್ನು 30000ರೂ. ಒಳಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ನಥಿಂಗ್ ಫೋನ್ (1) 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೇ ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಗೂಗಲ್‌ ಪಿಕ್ಸೆಲ್‌ 6a

ಗೂಗಲ್‌ ಪಿಕ್ಸೆಲ್‌ 6a

ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 30000ರೂ. ಒಳಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನ್ 90Hz ರಿಫ್ರೆಶ್ ರೇಟ್‌ ಒಳಗೊಂಡ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಫೋನ್ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಮತ್ತು ಟೈಟಾನ್ M2 ಸೆಕ್ಯುರಿಟಿ ಕೊಪ್ರೊಸೆಸರ್‌ ಹೊಂದಿದೆ. ಜೊತೆಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅನ್ನು ಹೊಂದಿದೆ. ಅಲ್ಲದೇ ಈ ಫೋನ್ 4,306mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಒಪ್ಪೋ ರೆನೋ 8 5G

ಒಪ್ಪೋ ರೆನೋ 8 5G

ಒಪ್ಪೋ ರೆನೋ 8 5G ಫೋನ್ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 29,999ರೂ. ಗಳಿಗೆ ಸಿಗಲಿದೆ. ಇನ್ನು ಈ ಫೋನ್ ಸ್ಮಾರ್ಟ್‌ಫೋನ್ 6.43 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್‌ನಿಂದ ಕೆಲಸ ಮಾಡಲಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 80watt SuperVOOC ವೇಗದ ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಿದೆ.

ಮೊಟೊರೊಲಾ ಎಡ್ಜ್‌ 30 5G

ಮೊಟೊರೊಲಾ ಎಡ್ಜ್‌ 30 5G

ಫ್ಲಿಪ್‌ಕಾರ್ಟ್ ವೆಬ್‌ಪುಟದ ಮಾಹಿತಿಯಂತೆ, ಮೊಟೊರೊಲಾ ಎಡ್ಜ್‌ 30 5G ಫೋನ್ 24,999ರೂ.ಗಳ ರಿಯಾಯಿತಿ ದರದಲ್ಲಿ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.55 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಪಡೆದಿದ್ದು, 144Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 778G ಪ್ಲಸ್ ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದೆ. ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾವನ್ನು ಹೊಂದಿದ್ದು, ಅವುಗಳು ಕ್ರಮವಾಗಿ 50 ಮೆಗಾ ಪಿಕ್ಸಲ್‌ + 50 ಮೆಗಾ ಪಿಕ್ಸಲ್‌ + 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಕ್ಯಾಮೆರಾ ನೀಡಲಾಗಿದೆ.

Best Mobiles in India

English summary
Flipkart Big Billion Days 2022 Sale Ends Today: Attractive Deals on These Phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X