ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಸಿಗಲಿದೆ ಬಿಗ್‌ ಡಿಸ್ಕೌಂಟ್‌!

|

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ 2022 ಸೇಲ್‌ನಲ್ಲಿ ಊಹೆಗೂ ನಿಲುಕದ ಆಫರ್‌ಗಳ ಸುರಿಮಳೆ ಆಗ್ತಿದೆ. ಆನ್‌ಲೈನ್‌ ಗ್ರಾಹಕರಿಗೆ ದೀಪಾವಳಿಗೂ ಮುನ್ನವೇ ಹಬ್ಬದ ಸಂಭ್ರಮವನ್ನು ಅನುಭವಿಸುವಂತಾಗಿದೆ. ವಿವಿಧ ಮಾದರಿಯ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳ ಮೇಲೆ ನಿಡಲಾಗ್ತಿರುವ ಡಿಸ್ಕೌಂಟ್‌ ಗ್ರಾಹಕರ ಗಮನವನ್ನು ಸೆಳೆದಿದೆ. ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ 66% ವರೆಗಿನ ಡಿಸ್ಕೌಂಟ್‌ ಲಭ್ಯವಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಕೊಟಕ್ ಮತ್ತು ಎಸ್‌ಬಿಐ ಬ್ಯಾಂಕ್ ಕಾರ್ಡ್ ವಹಿವಾಟುಗಳ ಮೇಲೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ನೀವು ಯಾವೆಲ್ಲಾ ಸ್ಮಾರ್ಟ್‌ಟಿವಿಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

LG 55 ಇಂಚಿನ 4K LED ಸ್ಮಾರ್ಟ್ ಟಿವಿ

LG 55 ಇಂಚಿನ 4K LED ಸ್ಮಾರ್ಟ್ ಟಿವಿ

LG 55 ಇಂಚಿನ 4K LED ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 66% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಟಿವಿಯನ್ನು 1,77,990ರೂ ಬದಲಿಗೆ ಕೇವಲ 58,999ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 55 ಇಂಚಿನ 4K LED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ನ್ಯಾನೋ ಸೆಲ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಪಡೆದಿದೆ. ಇನ್ನು 4K HDR ಮತ್ತು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಹೊಂದಿದೆ. ಇದು ಅಲ್ಫಾ7 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, WebOS ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸೋನಿ ಬ್ರಾವಿಯಾ 43-ಇಂಚಿನ 4K LED ಸ್ಮಾರ್ಟ್ ಟಿವಿ

ಸೋನಿ ಬ್ರಾವಿಯಾ 43-ಇಂಚಿನ 4K LED ಸ್ಮಾರ್ಟ್ ಟಿವಿ

ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಸೋನಿ 43-ಇಂಚಿನ 4K LED ಸ್ಮಾರ್ಟ್ ಟಿವಿ 34% ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ ಮೂಲಬೆಲೆ 69,900ರೂ ಆಗಿದ್ದು, ಇದೀಗ ಡಿಸ್ಕೌಂಟ್‌ನಲ್ಲಿ 45,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸೋನಿಯ X1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ TV ಯ ಮೇಲ್ಭಾಗದಲ್ಲಿ ಗೂಗಲ್‌ ಟಿವಿ ಇಂಟರ್‌ಫೇಸ್‌ ಅನ್ನು ಹೊಂದಿದೆ. ಮೋಷನ್‌ಫ್ಲೋ XR 100 ಚಲನಚಿತ್ರಗಳಲ್ಲಿಯೂ ಸ್ಪಷ್ಟವಾದ ದೃಶ್ಯಗಳಿಗೆ ಬೆಂಬಲವನ್ನು ನೀಡುತ್ತದೆ.

ಶಿಯೋಮಿ 5A 32 ಇಂಚಿನ ಸ್ಮಾರ್ಟ್ ಟಿವಿ

ಶಿಯೋಮಿ 5A 32 ಇಂಚಿನ ಸ್ಮಾರ್ಟ್ ಟಿವಿ

ಶಿಯೋಮಿ 5A 32 ಇಂಚಿನ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 48% ಡಿಸ್ಕೌಂಟ್‌ನಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಟಿವಿ ಮೂಲಬೆಲೆ 24,999ರೂ. ಆಗಿದ್ದು, ಡಿಸ್ಕೌಂಟ್‌ನಲ್ಲಿ ಕೇವಲ 12,999ರೂ. ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 1,366 x 768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 'HD ರೆಡಿ' ಡಿಸ್‌ಪ್ಲೇ ಆಗಿದೆ. ಇದು ಕ್ವಾಡ್-ಕೋಡ್ A35 ಚಿಪ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಇಫ್ಕಾಲನ್‌ TCL K61 ಅಲ್ಟ್ರಾ HD

ಇಫ್ಕಾಲನ್‌ TCL K61 ಅಲ್ಟ್ರಾ HD

ಇಫ್ಕಾಲನ್‌ TCL K61 ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 60% ಡಿಸ್ಕೌಂಟ್‌ ಪಡೆದಿದೆ. ಈ ಸ್ಮಾರ್ಟ್‌ಟಿವಿ ಮೂಲಬೆಲೆ 47,990ರೂ.ಆಗಿದ್ದು, ಡಿಸ್ಕೌಂಟ್‌ನಲ್ಲಿ 18,999ರೂ. ಬೆಲೆಗೆ ಲಭ್ಯವಾಗಲಿದೆ. ಇದು 43 ಇ೯ಂಚಿನ ಡಿಸ್‌ಪ್ಲೇ ಹೊಂದಿದ್ದು, 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಡಾಲ್ಬಿ ಆಡಿಯೋ MS 12D/Y ಸೌಂಡ್‌ ಟೆಕ್ನಾಲಜಿಯನ್ನು ಒಳಗೊಂಡಿದೆ.

ರಿಯಲ್‌ಮಿ 32 ಇಂಚಿನ HD ರೆಡಿ ಎಲ್‌ಇಡಿ ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ

ರಿಯಲ್‌ಮಿ 32 ಇಂಚಿನ HD ರೆಡಿ ಎಲ್‌ಇಡಿ ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ

ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಈ ಸ್ಮಾರ್ಟ್‌ಟಿವಿ 38% ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿಯ ಮೂಲಬೆಲೆ 17,999ರೂ ಆಗಿದ್ದು, ಇದನ್ನು ಡಿಸ್ಕೌಂಟ್‌ನಲ್ಲಿ 10,999ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದು ಮೀಡಿಯಾ ಟೆಕ್ ಕ್ವಾಡ್ ಕೋರ್ 6883 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೋ ಟೆಕ್ನಾಲಜಿಯನ್ನು ಒಳಗೊಂಡಿದೆ.

Best Mobiles in India

Read more about:
English summary
Flipkart Big Diwali Sale 2022: Deals on Smart TVs

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X