ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಡೇಟ್ ಫಿಕ್ಸ್‌!..ಫೋನ್‌ಗಳಿಗೆ 80% ಡಿಸ್ಕೌಂಟ್‌!

|

ಹಬ್ಬಗಳ ಸೀಸನ್‌ ಶುರುವಾಗ್ತಿದ್ದ ಹಾಗೇ ಇ-ಕಾಮರ್ಸ್‌ ತಾಣಗಳು ಆಫರ್‌ಗಳ ಸುರಿಮಳೆಯನ್ನೇ ನೀಡುತ್ತವೆ. ಇನ್ನು ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಸೇಲ್ ಕೆಲ ದಿನಗಳ ಹಿಂದೆಯಷ್ಟೇ ಮುಗಿದಿದೆ. ಇದೀಗ ಪುನಃ ದೀಪಾವಳಿ ಆಫರ್ ಗಳನ್ನ ನೀಡಲು ಸಿದ್ದತೆ ನಡೆಸಿದೆ. ದೀಪಗಳ ಹಬ್ಬ ದೀಪಾವಳಿ ಇನ್ನೇನು ಸಮೀಪಿಸುತ್ತಿದೆ. ನಿಮ್ಮ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದಕ್ಕೆ ಫ್ಲಿಪ್‌ಕಾರ್ಟ್‌ ಸಜ್ಜಾಗಿದ್ದು, ಇದೇ ಆಕ್ಡಟೋಬರ್‌ 29 ರಿಂದ ನವೆಂಬರ್‌ 4 ರವರೆಗೆ ಫ್ಲಿಪ್ಕಾರ್ಟ್ ಬಿಗ್‌ ದೀಪಾವಳಿ ಸೇಲ್‌ ಅನ್ನು ನಡೆಸಲಿದೆ.

ದೀಪಾವಳಿ

ಹೌದು, ದೀಪಾವಳಿ ಸಡಗರಕ್ಕಾಗಿ ಫ್ಲಿಪ್ ಕಾರ್ಟ್ ನಲ್ಲಿ ಹಲವಾರು ರಿಯಾಯಿತಿ ಮತ್ತು ಆಫರ್ ಬೆಲೆಯ ಮಾರಾಟವನ್ನು ಆಯೋಜಿಸಲಾಗಿದೆ. ಈ ಮೂಲಕ ನಿಮ್ಮ ದೀಪಾವಳಿ ಸಡಗರವನ್ನು ಇನ್ನಷ್ಟು ಇಮ್ಮಡಿಗೊಳಿಸಲಿದೆ. ಆನ್‌ಲೈನ್‌ ಗ್ರಾಹಕರು ಈ ಸೇಲ್‌‌ನಲ್ಲಿ ಹಲವು ರಿಯಾಯಿತಿಗಳನ್ನ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಫ್ಲಿಪ್ ಕಾರ್ಟ್ ನ ಬಿಗ್‌ ದೀಪಾವಳಿ ಸೇಲ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೀಪಾವಳಿ

ದೀಪಾವಳಿ ಸಡಗರ ಶುರುವಾಗುವ ಮುನ್ನವೇ ಫ್ಲಿಪ್‌ಕಾರ್ಟ್ ತನ್ನ ಹಬ್ಬದ ಕೊಡುಗೆಗಳನ್ನು ದೇಶದಲ್ಲಿ ಆನ್‌ಲೈನ್‌ ಗ್ರಾಹಕರಿಗೆ ನೀಡಲಿದೆ. ಇ-ಕಾಮರ್ಸ್ ದೈತ್ಯ ಈಗಾಗಲೇ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಹಲವಾರು ಆಫರ್‌ಗಲನ್ನ ನೀಡುವ ಮೂಲಕ ಯಶಸ್ವಿ ಸೇಲ್‌ ಅನ್ನು ಮುಗಿಸಿದೆ. ಇದೀಗ ದೇಶದಲ್ಲಿ ದೀಪಗಳ ಹಬ್ಬದ ಕೆಲವು ದಿನಗಳ ಮೊದಲು ಈ ಸೇಲ್‌ ನಡೆಯಲಿದೆ. ಕಂಪನಿಯು ತನ್ನ ಬಿಗ್‌ ದೀಪಾವಳಿ ಸೇಲ್ ಕಾರ್ಯಕ್ರಮವನ್ನು ಅಕ್ಟೋಬರ್ 29 ರಿಂದ ನವೆಂಬರ್ 4 ರವರೆಗೆ ಆಯೋಜಿಸುತ್ತಿದೆ. ಆದಾಗ್ಯೂ, ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಆಕ್ಟೋಬರ್‌ 28 ರಿಂದಲೇ ಸೇಲ್‌ ಒಪ್ಪಂದಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ.

ಮೊಬೈಲ್‌

ಅಕ್ಟೋಬರ್ 29 ರ ಮಧ್ಯರಾತ್ರಿಯಿಂದ ಪ್ಲಸ್ ಸದಸ್ಯರು ವಿಶೇಷ ರಿಯಾಯಿತಿ ಒಪ್ಪಂದಗಳನ್ನು ಪಡೆಯಬಹುದಾಗಿದೆ. ಇನ್ನು ಈ ಸೇಲ್‌ನಲ್ಲಿ ಮೊಬೈಲ್‌ಗಳು, ಟಿವಿಗಳು ಮತ್ತು ಇತರ ಉತ್ಪನ್ನಗಳ ವಿಶೇಷ ಕೊಡುಗೆಗಳ ಜೊತೆಗೆ, ಗ್ರಾಹಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಬ್ಯಾಂಕುಗಳಿಂದ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ಪಡೆಯಬಹುದು. ಜೊತೆಗೆ ಅಗತ್ಯವಿದ್ದರೆ ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಎಸ್‌ಬಿಐ ಮುಂತಾದ ಬ್ಯಾಂಕುಗಳಿಂದ ನೋ ಕಾಸ್ಟ್‌ ಇಎಂಐ ಕೊಡುಗೆಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಮೊಬೈಲ್

ಇನ್ನು ಈ ಸೇಲ್‌ನಲ್ಲಿ ಮೊಬೈಲ್ ಫೋನ್‌ಗಳಲ್ಲಿ ಗ್ರಾಹಕರಿಗೆ ಶೇಕಡಾ 80% ರಿಯಾಯಿತಿ ಸಿಗುತ್ತದೆ ಎಂದು ಫ್ಲಿಪ್‌ಕಾರ್ಟ್‌ ಹೇಳಿಕೊಂಡಿದೆ. ಅಲ್ಲದೆ ಲ್ಯಾಪ್‌ಟಾಪ್ ಖರೀದಿಸುವವರು ಸಾಧನಗಳಲ್ಲಿ 50% ರಿಯಾಯಿತಿಯಂತಹ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ ಸಮಯದಲ್ಲಿ ಸ್ಯಾಮ್‌ಸಂಗ್, ಪೊಕೊ, ಒಪ್ಪೊ ಮತ್ತು ರಿಯಲ್‌ಮೆ ಫೋನ್‌ಗಳು ಸೀಮಿತ ಅವಧಿಗೆ ರಿಯಾಯಿತಿ ದರದಲ್ಲಿ ಮಾರಾಟವಾಗುವ ಸಾಧ್ಯತೆಯಿದೆ. ಜೊತೆಗೆ ಫೋನ್‌ಗಳು, ಟಿವಿಗಳು ಮತ್ತು ಇತರ ಉತ್ಪನ್ನಗಳಲ್ಲಿ ಇವುಗಳನ್ನು 12AM, 8AM, ಮತ್ತು 4PM ನಲ್ಲಿ ನೀಡಲಾಗುವುದು ಎನ್ನಲಾಗಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ F41, ವಿವೊ v20, ಎಲ್ಜಿ G8X, ಮತ್ತು ಇನ್ಫಿನಿಕ್ಸ್ ಹಾಟ್ 9 ಸಹ ರಿಯಾಯಿತಿ ಆಫರ್‌ನಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
Flipkart Big Diwali sale will continue through November 4.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X