ಆಗಸ್ಟ್ 6 ರಿಂದ ಶುರುವಾಗಲಿದೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌!

|

ಜನಪ್ರಿಯ ಇ-ಕಾಮರ್ಸ್‌ ಫ್ಲಾಟ್‌ಫಾರ್ಮ್‌ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೇಲ್‌ ಇದೇ ಆಗಸ್ಟ್ 6 ರಂದು ಪ್ರಾರಂಭವಾಗಲಿದೆ. ಸದ್ಯ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್‌ ಫ್ಲಿಪ್‌ಕಾರ್ಟ್‌ ಡೇ ಸೇಲ್‌ ನಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳನ್ನ ಮಾರಾಟಮಾಡಲಾಗುತ್ತದೆ. ಯಾವೆಲ್ಲಾ ಪ್ರಾಡಕ್ಟ್‌ಗಳ ಮೇಲೆ ಎಷ್ಟು ರಿಯಾಯಿತಿ ಇರಲಿದೆ ಅನ್ನೊದನ್ನ ತನ್ನ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಿದೆ. ಲಭ್ಯ ಮಾಹಿತಿಯ ಪ್ರಕಾರ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಇದೇ ಆಗಸ್ಟ್ 6 ರಂದು ಬೆಳಿಗ್ಗೆ 12:00 ಗಂಟೆಗೆ ಪ್ರಾರಂಭವಾಗಲಿದ್ದು, ಆಗಸ್ಟ್ 10 ರವರೆಗೆ ನಡೆಯಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ತನ್ನ ಬಿಗ್‌ ಸೇವಿಂಗ್ಸ್‌ ಡೇ ಸೇಲ್‌ನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಉಡುಪು, ವಸ್ತುಗಳು, ಪೀಠೋಪಕರಣಗಳು, ಸೇರಿದಂತೆ ಹೆಚ್ಚಿನ ರೀತಿಯ ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್‌ ಅನ್ನು ಪ್ರಕಟಿಸಿದೆ. ಕುತೂಹಲಕಾರಿ ವಿಚಾರವೆಂದರೆ ಫ್ಲಿಪ್‌ಕಾರ್ಟ್‌ನ ಪ್ರತಿಸ್ಪರ್ಧಿ ಅಮೆಜಾನ್ ಕೂಡ ತನ್ನ ಪ್ರೈಮ್‌ ಡೇ ಸೇಲ್‌ ಅನ್ನು ಇದೇ ಆಗಸ್ಟ್ 6 ಮತ್ತು ಆಗಸ್ಟ್ 7 ರಂದು ಆಯೋಜಿಸುತ್ತಿದೆ. ಫ್ಲಿಪ್‌ಕಾರ್ಟ್‌ ಕೂಡ ಅಗಸ್ಟ್‌ 6ರಿಂದಲೇ ಸೇವಿಂಗ್ಸ್‌ ಡೇ ಸೇಲ್‌ ಪ್ರಾರಂಭಿಸುತ್ತಿದ್ದು, ಗ್ರಾಹಕರಿಗೆ ಭಾರಿ ಡಿಸ್ಕೌಂಟ್ಸ್‌ ನೀಡುತ್ತಿದೆ.

ಫ್ಲಿಪ್‌ಕಾರ್ಟ್

ಇನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಡೇ ಸೇಲ್‌ನಲ್ಲಿ ಆಪಲ್ ಐಫೋನ್‌ಗಳು ಸೇರಿದಂತೆ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಲ್ಲದೆ ಮೊಟೊರೊಲಾ, ಮೋಟೋ ರೇಜರ್‌ ಪ್ಲಿಪ್‌ ಡಿವೈಸ್‌ಗಳ ಮೇಲೂ ಡಿಸ್ಕೌಂಟ್ಸ್‌ ಅನ್ನು ನೀಡಲಾಗಿದೆ. ಇನ್ನು ಈ ಸೇವಿಂಗ್ಸ್‌ ಡೇ ಸೇಲ್‌ನಲ್ಲಿ ಆಪಲ್ ಐಫೋನ್ SE 2020 ರೂ 36,999 ಕ್ಕೆ ಲಭ್ಯವಿರುತ್ತದೆ. ಅಲ್ಲದೆ ಆಪಲ್ ಐಫೋನ್ 7 ಪ್ಲಸ್ 32GB ರೂಪಾಂತರವು ಬಿಗ್ ಸೇವಿಂಗ್ಸ್ ಡೇ ಸೇಲ್‌ ಸಮಯದಲ್ಲಿ ಕೇವಲ 34,999 ರೂಗಳಿಗೆ ಲಭ್ಯವಿರುತ್ತದೆ.

ಸೇವಿಂಗ್ಸ್‌

ಇದಲ್ಲದೆ 1,49,000 ರೂ.ಗಳ ಬೆಲೆಯ ಮೊಟೊರೊಲಾ ರೇಜರ್ ಬಿಗ್‌ ಸೇವಿಂಗ್ಸ್‌ ಡೇ ಟೈಂನಲ್ಲಿ ಕೇವಲ 1,24,999 ರೂಗಳಿಗೆ ಲಭ್ಯವಿರುತ್ತದೆ. ಅಲ್ಲದೆ ಖರೀದಿದಾರರು ತಿಂಗಳಿಗೆ 5209 ರೂ.ಗಳಿಂದ ಪ್ರಾರಂಭವಾಗುವ ನೋ ಕಾಸ್ಟ್‌ ಇಎಂಐ ಅನ್ನು ಸಹ ಪಡೆಯಬಹುದಾಗಿದೆ. ಇದಲ್ಲದೆ, ರಿಯಲ್‌ಮಿ X2 ಪ್ರೊ, ರಿಯಲ್‌ಮಿ 6 ಮತ್ತು ರಿಯಲ್‌ಮಿ 6 ಪ್ರೊ, ಒಪ್ಪೊ f11 ಪ್ರೊ, ಒಪ್ಪೊ ರೆನೋ 2Z ಮತ್ತು ಒಪ್ಪೊ ರೆನೋ 2 ಮತ್ತು ರೆಡ್‌ಮಿ K20 ಪ್ರೊ ಸ್ಮಾರ್ಟ್‌ಫೋನ್‌ಗಳ ಮೇಲೂ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್ಸ್‌ ಡೇ ಸೇಲ್‌ನಲ್ಲಿ ಭಾರಿ ರಿಯಾಯಿತಿಯನ್ನು ನಿಡಲಾಗುತ್ತೆ ಎಂದು ಫ್ಲಿಪ್‌ಕಾರ್ಟ್‌ ಹೇಳಿಕೊಂಡಿದೆ.

ಬಿಗ್‌ ಸೇವಿಂಗ್ಸ್‌ ಡೇ ಸೇಲ್‌

ಇನ್ನು ಈ ಬಿಗ್‌ ಸೇವಿಂಗ್ಸ್‌ ಡೇ ಸೇಲ್‌ನಲ್ಲಿ ಸಿಟಿಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರಿಗೆ 10% ಇನ್ಸಟಂಟ್‌ ಡಿಸ್ಕೌಂಟ್‌ ಸಿಗುತ್ತದೆ. ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರಿಗೆ 10% ತ್ವರಿತ ರಿಯಾಯಿತಿ ಸಿಗಲಿದೆ ಎಂದು ಫ್ಲಿಪ್ಕಾರ್ಟ್ ಘೋಷಿಸಿದೆ. ಬಳಕೆದಾರರು ಆಗಸ್ಟ್ 2 ಮತ್ತು ಆಗಸ್ಟ್ 4 ರ ನಡುವೆ ಮುಂಗಡ ಮೊತ್ತವನ್ನು 30 ರೂ. ಮತ್ತು ಉಳಿದ ಮೊತ್ತವನ್ನು ಆಗಸ್ಟ್ 6 ರಂದು ಪಾವತಿಸಿ ಪ್ರಿ-ಬುಕ್ ಮಾಡಬಹುದು, ಸೇಲ್‌ ಲೈವ್‌ ಶುರುವಾದಾಗ ಖರೀದಿದಾರರಿಗೆ ಆರ್ಡರ್‌ಗಳನ್ನು ತಲುಪಿಸಲಾಗುತ್ತದೆ ಎನ್ನಲಾಗಿದೆ.

Most Read Articles
Best Mobiles in India

English summary
Flipkart’s Big Saving Days sale is all set to go live on August 6. The Walmart-owned company has revealed everything about the upcoming sale on its website.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X