ಫ್ಲಿಪ್‍ಕಾರ್ಟ್‌ನಿಂದ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ!

|

ಭಾರತದ ನಂ1 ಇ-ಕಾಮರ್ಸ್ ಜಾಲತಾಣ ಫ್ಲಿಪ್‍ಕಾರ್ಟ್ ಮತ್ತು ಎಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಗ್ರಾಹಕರು ಈ ಕಾರ್ಡ್ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್ ಶಾಪಿಂಗ್ ಮಾಡಿದರೆ ಅತ್ಯುತ್ತಮ ಮಟ್ಟದ ಪ್ರಯೋಜನಗಳನ್ನು ಮತ್ತು ಅನಿಯಮಿತ ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದು. ಈ ಯೋಜನೆಯಿಂದ ಗ್ರಾಹಕರಿಗೆ ಸಾಲ ಸೌಲಭ್ಯ ಮತ್ತಷ್ಟು ಸುಲಭವಾಗಲಿದೆ ಎಂದು ಫ್ಲಿಪ್‌ಕಾರ್ಟ್, ಮಾಸ್ಟರ್‌ಕಾರ್ಡ್ ಮತ್ತು ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಫ್ಲಿಪ್‍ಕಾರ್ಟ್‌ನಿಂದ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ!

ದೇಶಾದ್ಯಂತ ಇರುವ ಎಕ್ಸಿಸ್ ಬ್ಯಾಂಕ್ & ಫ್ಲಿಪ್‍ಕಾರ್ಟ್ ಶಕ್ತಿಯುತವಾದ ಜಾಲ ಮತ್ತು ವಿತರಣೆ ಜಾಲದ ಮೂಲಕ ಈ ಕ್ರೆಡಿಟ್ ಕಾರ್ಡನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಇದಕ್ಕೆ ಮಾಸ್ಟರ್‌ಕಾರ್ಡ್ ಕೂಡ ಸಹಯೋಗ ಹೊಂದಿದ್ದು, ಈ ನೂತನ ಕ್ರೆಡಿಟ್ ಕಾರ್ಡ್ ಆಯ್ದ ಗ್ರಾಹಕರಿಗೆ ಜುಲೈನಿಂದ ಲಭ್ಯವಾಗಲಿದೆ. ಗ್ರಾಹಕರು ಈ ಕಾರ್ಡನ್ನು ಮೇಕ್‍ಮೈ ಟ್ರಿಪ್, ಗೋಇಬಿಬೊ, ಉಬರ್, ಪಿವಿಆರ್, ಗಾನಾ, ಕ್ಯೂರ್‍ಫಿಟ್ ಮತ್ತು ಅರ್ಬನ್ ಕ್ಲಾಪ್ ಸೇರಿದಂತೆ ಮತ್ತಿತರೆ ವ್ಯವಹಾರಗಳಿಗೆ ಸಹ ಬಳಸಿಕೊಳ್ಳಬಹುದಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ.

ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಾವು ಗ್ರಾಹಕರನ್ನು ಕೇಂದ್ರ ಸ್ಥಾನದಲ್ಲಿಡುವುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಇಕೊಸಿಸ್ಟಮ್‍ನಲ್ಲಿ ಎಲ್ಲಾ ಪಾಲುದಾರರಿಗೆ ಮೌಲ್ಯವರ್ಧಿತ ಸೇವೆಗಳನ್ನು ಹಂಚಿಕೆ ಮಾಡುತ್ತೇವೆ. ಎಕ್ಸಿಸ್ ಬ್ಯಾಂಕ್ ಮತ್ತು ಮಾಸ್ಟರ್ ಕಾರ್ಡ್ ಸಹಯೋಗದಲ್ಲಿನ ಈ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಮೂಲಕ ನಮ್ಮ ಔಪಚಾರಿಕ ಸಾಲ ಸೌಲಭ್ಯವು ಲಭ್ಯವಾಗುವಂತೆ ಮಾಡುವುದನ್ನು ನಾವು ಮುಂದುವರೆಸುತ್ತೇವೆ ಎಂದು ಫ್ಲಿಪ್‍ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಈ ಹೊಸ ಯೋಜನೆಯ ಬಗ್ಗೆ ಹೆಚ್ಚು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫ್ಲಿಪ್‍ಕಾರ್ಟ್‌ನಿಂದ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ!

ಭಾರತದಲ್ಲಿ ಇನ್ನೂ ಶೇ.90 ರಷ್ಟು ವ್ಯವಹಾರಗಳು ನಗದಿನಲ್ಲೇ ನಡೆಯುತ್ತಿವೆ. ಇತ್ತೀಚಿಗೆ ಗಣನೀಯ ಪ್ರಮಾಣದಲ್ಲಿ ಡಿಜಿಟಲ್ ಪಾವತಿಗಳಿಗೆ ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಆನ್‌ಲೈನ್ ಶಾಪಿಂಗ್ ಮತ್ತು ಇ-ಕಾಮರ್ಸ್ ಜನಪ್ರಿಯತೆ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಭಾರತ ಸರ್ಕಾರ ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮತ್ತಷ್ಟು ಹೆಚ್ಚಾಗಲಿದೆ. ಇದೇ ನಿಟ್ಟಿನಲ್ಲಿ ನಾವು ಹೊಸ ಸೇವೆಗಳನ್ನು ಬದ್ಧರಾಗಿದ್ದೇವೆ ಎಂದು ಮಾಸ್ಟರ್‌ಕಾರ್ಡ್‌ ಏಷ್ಯಾ-ಪೆಸಿಫಿಕ್ ಸಹ-ಅಧ್ಯಕ್ಷ ಅರಿ ಸರ್ಕಾರ್ ಅವರು ಹೇಳಿದ್ದಾರೆ.

ಗೂಗಲ್ ಆಫೀಸ್ ಒಳಗೆ ಹೇಗಿರುತ್ತದೆ ಗೊತ್ತಾ?..ನೀವು ಖಂಡಿತಾ ಶಾಕ್ ಆಗ್ತೀರಾ!!ಗೂಗಲ್ ಆಫೀಸ್ ಒಳಗೆ ಹೇಗಿರುತ್ತದೆ ಗೊತ್ತಾ?..ನೀವು ಖಂಡಿತಾ ಶಾಕ್ ಆಗ್ತೀರಾ!!

ಎಕ್ಸಿಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತಾಭ್ ಚೌಧರಿ ಅವರು ಮಾತನಾಡಿ, ಎಕ್ಸಿಸ್ ಬ್ಯಾಂಕ್ ಪೂರ್ಣ ಪ್ರಮಾಣದ ಪಾವತಿಗಳಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯಾಗಿದೆ. ನಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಕೇವಲ ಆಕರ್ಷಣೀಯ ಮಾಡುವುದಷ್ಟೇ ಅಲ್ಲ, ಬೆಳೆಯುತ್ತಿರುವ ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವಾರು ಆಫರ್‍ಗಳನ್ನು ನೀಡುವತ್ತ ಆದ್ಯತೆ ನೀಡಲಾಗುತ್ತಿದೆ. ಇದರ ಪ್ರಯತ್ನವಾಗಿ ಫ್ಲಿಪ್‍ಕಾರ್ಟ್ ಮತ್ತು ಮಾಸ್ಟರ್‌ಕಾರ್ಡ್ ಜೊತೆಗೆ ಪಾಲುದಾರಿಕೆ ಹೋಂದಿರುವುದಾಗಿ ತಿಳಿಸಿದ್ದಾರೆ.

Best Mobiles in India

English summary
Flipkart Co-Branded Credit Card Launched in Partnership With Axis Bank, Mastercard. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X