Subscribe to Gizbot

ಫ್ಲಿಪ್‌ಕಾರ್ಟ್ ಮೋಸ: ಫೋನ್ ಬದಲು ಮಾವು ನೀಡಿ ಪಂಗನಾಮ

Written By:

ಗ್ರಾಹಕರು ಆನ್‌ಲೈನ್‌ನಲ್ಲಿ ಹೆಚ್ಚೆಚ್ಚು ಖರೀದಿ ಮಾಡಿದಷ್ಟು ರೀಟೈಲ್ ತಾಣಗಳು ಅವರನ್ನು ಮೂರ್ಖರನ್ನಾಗಿಸುತ್ತಿರುವುದು ಹೆಚ್ಚುತ್ತಿದೆ. ತಾಣಗಳು ಜಾಹೀರಾತಿನಲ್ಲಿ ನೀಡುತ್ತಿರುವ ರಿಯಾಯಿತಿ ಕೊಡುಗೆಗಳು ಅಥವಾ ಇನ್ನಾವುದೇ ಪ್ರಯೋಜನಗಳನ್ನು ಗ್ರಾಹಕರು ನಂಬಿ ಇಂತಹ ತಾಣಗಳಿಂದ ಉತ್ಪನ್ನಗಳನ್ನು ಖರೀದಿಸುತ್ತಾರೆ. ಆದರೆ ಈ ನಂಬುಗೆಗೇ ತಾಣಗಳು ದ್ರೋಹ ಬಗೆದರೆ ಯಾರನ್ನೂ ದೂರುವುದು ಹೇಳಿ?

ಫ್ಲಿಪ್‌ಕಾರ್ಟ್ ಮೋಸ: ಫೋನ್ ಬದಲು ಮಾವು ನೀಡಿ ಪಂಗನಾಮ

ಇಂತಹ ಘಟನೆಗಳು ಈಗೀಗ ಹೆಚ್ಚು ಉಂಟಾಗುತ್ತಿದ್ದು ಫ್ಲಿಪ್‌ಕಾರ್ಟ್ ತಾಣವು ಇಂತಹುದೇ ಇನ್ನೊಂದು ಮೋಸವನ್ನು ನಡೆಸುವುದರ ಮೂಲಕ ನಂಬುಗೆ ದ್ರೋಹವನ್ನು ಬಗೆದಿದೆ. ಕರೀಮ್ ನಗರ್ ನಿವಾಸಿಗೆ ಮೊಬೈಲ್ ಫೋನ್‌ನ ಬದಲಿಗೆ ಮಾವಿನ ಹಣ್ಣುಗಳನ್ನು ವಿತರಿಸಿ ಅವರನ್ನು ಮೂರ್ಖರನ್ನಾಗಿಸಿದೆ.

ಓದಿರಿ: ಹುವಾಯಿ ಹೋನರ್ 4ಸಿ: ಮಾರುಕಟ್ಟೆಯಲ್ಲಿರುವ ಸೂಪರ್ ಬಜೆಟ್ ಫೋನ್

ಮೇ 26 ರಂದು ಈ ವ್ಯಕ್ತಿ ಕ್ರೆಡಿಟ್ ಕಾರ್ಟ್ ಅನ್ನು ಬಳಸಿ ರೂ 8099 ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಫೋನ್‌ಗಾಗಿ ಆರ್ಡರ್ ಮಾಡಿದ್ದಾರೆ. ತನಗೆ ತಪ್ಪಾದ ಡೆಲಿವರಿ ತಲುಪಿದೆ ಎಂದು ಈ ವ್ಯಕ್ತಿ ಸಂಸ್ಥೆಗೆ ತಿಳಿಸಿದ್ದರೂ ಅವರು ತಡವಾಗಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ಕುಪಿತಗೊಂಡ ಅವರು ಮಾಧ್ಯಮಕ್ಕೆ ಈ ವಿಷಯವನ್ನು ತಿಳಿಸಿದ್ದು ಫ್ಲಿಪ್‌ಕಾರ್ಟ್‌ನ ಇನ್ನೊಂದು ಮೋಸ ಇದರಿಂದ ಹೊರಬಿದ್ದಿದೆ. ಫ್ಲಿಪ್‌ಕಾರ್ಟ್ ಈ ರೀತಿ ಸಿಕ್ಕಿಬೀಳುತ್ತಿರುವುದು ಇದೇ ಮೊದಲಲ್ಲ. ಉತ್ಪನ್ನದ ದರವನ್ನು ಹೆಚ್ಚಿಸಿದ್ದಕ್ಕಾಗಿ ಕೂಡ ಈ ವೆಬ್‌ಸೈಟ್ ಇತ್ತೀಚೆಗೆ ಆರೋಪವನ್ನು ಎದುರಿಸಿತ್ತು.

English summary
We have seen many cases when Flipkart has misplaced the orders many times. Here is one such scenario where Flipkart has sent a pair of Mangoes to a person in Karimnagar instead of A Mobile Phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot