ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌: ಈ ಮೂರು ಫೋನ್‌ಗಳಿಗೆ ಬೊಂಬಾಟ್‌ ರಿಯಾಯಿತಿ!

|

ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಏನಾದರೂ ರಿಯಾಯಿತಿ ನೀಡುತ್ತಲೇ ಗ್ರಾಹಕರ ಗಮನ ಸೆಳೆದಿದೆ. ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ ಇದೀಗ ಎಲೆಕ್ಟ್ರಾನಿಕ್ಸ್‌ ಸೇಲ್‌ ಅನ್ನು ಆಯೋಜಿಸಿ ಗಮನ ಸೆಳೆದಿದೆ. ಫ್ಲಿಪ್‌ಕಾರ್ಟ್‌ ತಾಣವು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿಭಾಗಗಳಾದ್ಯಂತ ಹಲವಾರು ಕೊಡುಗೆಗಳನ್ನು ಒದಗಿಸುತ್ತಿದೆ.

ಎಲೆಕ್ಟ್ರಾನಿಕ್ಸ್‌

ಹೌದು, ಫ್ಲಿಪ್‌ಕಾರ್ಟ್‌ ಇದೀಗ ಮತ್ತೊಂದು ಸೇಲ್‌ ಮೂಲಕ ಮರಳಿದೆ. ಅದುವೇ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌ ಅನ್ನು ಆಗಿದೆ. ಈ ಸೇಲ್‌ ಈಗಾಗಲೇ ಲೈವ್‌ ಆಗಿದ್ದು, ಈ ಮಾರಾಟವು ಇದೇ ಆಗಸ್ಟ್ 25 ರ ವರೆಗೆ ಮುಂದುವರಿಯುತ್ತದೆ. ಇನ್ನು ಮುಖ್ಯವಾಗಿ ಈ ಸೇಲ್‌ನಲ್ಲಿ ಕೆಲವು ಟಾಪ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಬೊಂಬಾಟ್ ಡಿಸ್ಕೌಂಟ್‌ ನೀಡುತ್ತಿದೆ. ಆ ಪೈಕಿ ಸ್ಯಾಮ್‌ಸಂಗ್‌, ವಿವೋ, ಪೊಕೊ ಸ್ಮಾರ್ಟ್‌ಫೋನ್‌ ಗಳು ಹೆಚ್ಚು ರಿಯಾಯಿತಿಯಲ್ಲಿ ಗಮನ ಸೆಳೆದಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಆಕರ್ಷಕ ಆಫರ್‌ ಪಡೆದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಫೋನಿನ ಬೇಸ್‌ ವೇರಿಯಂಟ್‌ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 14,999ರೂ. ಗಳಿಗೆ ಪಟ್ಟಿಮಾಡಲಾಗಿದೆ. ಬ್ಯಾಂಕ್ ರಿಯಾಯಿತಿ ಮತ್ತು ಕೊಡುಗೆಗಳೊಂದಿಗೆ, ಮಾರಾಟದಲ್ಲಿ ಗ್ರಾಹಕರು 13,249 ರೂ.ಗಳಿಗೆ ಖರೀದಿಸಬಹುದು. ಜೊತೆಗೆ ಫ್ಲಿಪ್‌ಕಾರ್ಟ್ ಎಸ್‌ಬಿಐ ಬ್ಯಾಂಕ್ ಕಾರ್ಡ್‌ಗಳ ಮೇಲೆ 1,000ರೂ. ರಿಯಾಯಿತಿ ನೀಡುತ್ತಿದೆ. ಹಾಗೆಯೇ 5,000ರೂ. ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ 750ರೂ. ವರೆಗೆ ರಿಯಾಯಿತಿ ನೀಡುತ್ತಿದೆ.

ಕಾರ್ನಿಂಗ್

ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ + ಇನ್ಫಿನಿಟಿ-ಯು ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ವಿವೋ T1 ಸ್ಮಾರ್ಟ್‌ಫೋನ್

ವಿವೋ T1 ಸ್ಮಾರ್ಟ್‌ಫೋನ್

ವಿವೋ T1 ಸ್ಮಾರ್ಟ್‌ಫೋನ್ ಅನ್ನು ಮೂರು RAM ಮಾದರಿಗಳಲ್ಲಿ ನೀಡಲಾಗುತ್ತದೆ. ಕ್ರಮವಾಗಿ 4GB, 6GB ಮತ್ತು 8GB ಆಗಿವೆ. ಫೋನ್‌ನ ಬೇಸ್‌ ರೂಪಾಂತರವು ಪ್ರಸ್ತುತ 14,499 ರೂ. ಗಳಿಗೆ ಮಾರಾಟವಾಗುತ್ತಿದೆ. SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ (EMI ಅಲ್ಲದ ವಹಿವಾಟುಗಳು ಮಾತ್ರ) ಬಳಸಿಕೊಂಡು ಖರೀದಿದಾರರು 1,000 ರೂ. ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

ಸ್ನಾಪ್‌ಡ್ರಾಗನ್‌

ಇನ್ನು ವಿವೋ T1 5G ಸ್ಮಾರ್ಟ್‌ಫೋನ್‌ 1,080 x 2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.58 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್‌ ಮತ್ತು 240 Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಜೊತೆಗೆ ಸ್ನಾಪ್‌ಡ್ರಾಗನ್‌ 695 5G SoC ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ಫನ್‌ ಟಚ್‌ OS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಪೊಕೊ M4 ಪ್ರೊ

ಪೊಕೊ M4 ಪ್ರೊ

ಪೊಕೊ M4 ಪ್ರೊ ಫೋನ್ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ 12,249 ರೂ. ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G96 ಪ್ರೊಸೆಸರ್‌ನಿಂದ ಚಾಲಿತವಾಗಿದೆ.EMI ವಹಿವಾಟುಗಳು ಸೇರಿದಂತೆ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಖರೀದಿಗಳ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ ಲಭ್ಯ. ಫೋನ್‌ನ ಬೇಸ್ ಮಾದರಿಯು 6GB RAM ವೇರಿಯಂಟ್‌ನಲ್ಲಿ ಇದ್ದು, ಹಾಗೆಯೇ 8GB RAM ಮತ್ತು 128GB ವೇರಿಯಂಟ್‌ ಆಯ್ಕೆ ಸಹ ಪಡೆದಿದೆ.

ಇಂಚಿನ

ಇನ್ನು ಪೊಕೊ M4 ಪ್ರೊ ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ HD + ಡಾಟ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G96 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ಅನ್ನು ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ತ್ರಿವಳಿ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Flipkart Electronics Sale: Check Best Deals on Smartphones Here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X