ಫ್ಲಿಪ್‌ಕಾರ್ಟ್ ವಿರುದ್ದ 10 ಕೋಟಿ ರೂ. ವಂಚನೆ ಪ್ರಕರಣ ದಾಖಲು!!

ಉದ್ಯಮಿಯೋರ್ವರು ಫ್ಲಿಪ್‌ಕಾರ್ಟ್ ಸ್ಥಾಪಕರಾದ ಸಚಿನ್‌ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಹಾಗೂ ಇತರ ಮೂವರು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿರುವ ಪ್ರಕರಣ ವರದಿಯಾಗಿದೆ.!!

|

ಭಾರತದ ಪ್ರಮುಖ ಇ-ಕಾಮರ್ಸ್ ಕಂಪೆನಿ ಫ್ಲಿಪ್‌ಕಾರ್ಟ್ ತನಗೆ 9.96 ಕೋಟಿ ರೂ. ಹಣವನ್ನು ವಂಚಿಸಿದೆ ಎಂದು ಉದ್ಯಮಿಯೋರ್ವರು ಫ್ಲಿಪ್‌ಕಾರ್ಟ್ ಸ್ಥಾಪಕರಾದ ಸಚಿನ್‌ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಹಾಗೂ ಇತರ ಮೂವರು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿರುವ ಪ್ರಕರಣ ವರದಿಯಾಗಿದೆ.!!

ಇಂದಿರಾನಗರದಲ್ಲಿನ ಸಿ-ಸ್ಟೋರ್ ಕಂಪೆನಿ ಮಾಲೀಕರಾದ ನವೀನ್ ಕುಮಾರ್ ಅವರು ಈ ಬಗ್ಗೆ ನಗರದ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಸೇರಿದಂತೆ ಮಾರಾಟ ನಿರ್ದೇಶಕ ಹರಿ, ವ್ಯವಸ್ಥಾಪಕರಾದ ಸುಮಿತ್ ಆನಂದ್ ಮತ್ತು ಶಾರೌಕ್ ಎಂಬುವವರ ವಿರುದ್ದ ದೂರು ದಾಖಲಾಗಿದೆ.!!

ಫ್ಲಿಪ್‌ಕಾರ್ಟ್ ವಿರುದ್ದ 10 ಕೋಟಿ ರೂ. ವಂಚನೆ ಪ್ರಕರಣ ದಾಖಲು!!

ಬಿಗ್‌ಬಿಲಿಯನ್ ಡೇಸ್ ಮಾರಾಟದ ಸಂದರ್ಭದಲ್ಲಿ ಲ್ಯಾಪ್‌ಟಾಪ್ ಮತ್ತು ಇತರೆ ಎಲೆಕ್ಟ್ರಾನಿಕ್ ಸರಕುಗಳನ್ನು ಪೂರೈಸಲು ಫ್ಲಿಪ್‌ಕಾರ್ಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಜೂನ್ 2015 ಮತ್ತು ಜೂನ್ 2016 ರ ನಡುವೆ ಪೂರೈಸಿರುವ ಉತ್ಪನ್ನಗಳ ಪೈಕಿ ಒಟ್ಟು ಮೊತ್ತ 9,96,21,419 ರೂ. ಹಣವನ್ನು ಫ್ಲಿಪ್‌ಕಾರ್ಟ್ ಪಾವತಿಸಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.!

ಫ್ಲಿಪ್‌ಕಾರ್ಟ್ ವಿರುದ್ದ 10 ಕೋಟಿ ರೂ. ವಂಚನೆ ಪ್ರಕರಣ ದಾಖಲು!!

ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದು, ಸಚಿನ್ ಬನ್ಸಾಲ್, ಬಿನ್ನಿ ಬನ್ಸಾಲ್ ಸೇರಿದಂತೆ ಉಳಿದ ಮೂವರ ವಿರುದ್ದ ಐಪಿಸಿ ಸೆಕ್ಷನ್ 34 (ಸಾಮಾನ್ಯ ಉದ್ದೇಶ),ಸೆಕ್ಷನ್ 406 (ಅಪರಾಧ ಉಲ್ಲಂಘನೆ) ಮತ್ತು ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.!!

ಓದಿರಿ: ಶಿಯೋಮಿಯಿಂದ ಮತ್ತೊಂದು ಬಂಪರ್ ಆಫರ್!!...ಗೊತ್ತಾದ್ರೆ ಈಗಲೇ ಫೋನ್ ಖರೀದಿಸ್ತೀರಾ!!

Best Mobiles in India

English summary
Flipkart company have been booked for allegedly cheating a Bengaluru-based businessman of Rs 9.96 crore. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X