Subscribe to Gizbot

DSLR ಕೊಳ್ಳುವ ಪ್ಲಾನ್ ಮಾಡಿದ್ರೆ ಇದೇ ಸರಿಯಾದ ಟೈಮ್..! ಯಾಕೆ ಅಂದ್ರಾ..?

Written By:

ವಾಲ್‌ಮಾರ್ಟ್‌ ತೆಕ್ಕೆಗೆ ಸೇರುವ ಮೂಲಕ ಭಾರೀ ಸದ್ದು ಮಾಡುತ್ತಿರುವ ಫ್ಲಿಪ್‌ಕಾರ್ಟ್‌, ಹೊಸದೊಂದು ಸೇಲ್‌ಆಯೋಜನೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲು ಮುಂದಾಗಿದೆ. ತನ್ನನ್ನು ಖರೀದಿಸುವ ಅಮೆಜಾನ್ ಪ್ರಯತ್ನವನ್ನು ವಿಫಲಗೊಳಿಸಿದಲ್ಲದೇ, ಈಗ ಭಾರಿ ಪ್ರಮಾಣದ ಆಫರ್ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿದೆ.

DSLR ಕೊಳ್ಳುವ ಪ್ಲಾನ್ ಮಾಡಿದ್ರೆ ಇದೇ ಸರಿಯಾದ ಟೈಮ್..! ಯಾಕೆ ಅಂದ್ರಾ..?

ಏಪ್ರಿಲ್ 24 ರಿಂದ 26ರ ವರೆಗೆ ಗ್ರಾಂಡ್ ಗ್ಯಾಜೆಟ್ ಸೇಲ್ ಅನ್ನು ಆಯೋಜಿಸಿದ್ದು, ಗ್ಯಾಜೆಟ್ ಪ್ರಿಯರಿಗೆ ಅತೀ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಈ ಸೇಲ್ ಕುರಿತು ಮಾಹಿತಿಯನ್ನು ಫ್ಲಿಪ್‌ಕಾರ್ಟ್ ಬಿಟ್ಟು ಕೊಟ್ಟಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯೂ ಮುಂದಿನಂತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಮೆರಾ:

ಕ್ಯಾಮೆರಾ:

ಮಾರುಕಟ್ಟೆಯಲ್ಲಿ DSLR ಕ್ಯಾಮೆರಾ ಬೇಡಿಕೆ ಮತ್ತು ಫ್ಯಾಷನ್ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಆಫರ್ ಗಳನ್ನು ಇದರ ಮೇಲೆ ನೀಡಲು ಫ್ಲಿಪ್‌ಕಾರ್ಟ್ ಮುಂದಾಗಿದೆ. ಕ್ಯಾನನ್ ಮತ್ತು ನಿಕಾನ್ ಕ್ಯಾಮೆರಾ ಕೊಳ್ಳುವವರಿಗೆ ಹಬ್ಬ ಎನ್ನಬಹುದಾಗಿದೆ.

ಬೆಲೆಯಲ್ಲಿ ಶೇ.70% ರಷ್ಟು ಕಡಿತ:

ಬೆಲೆಯಲ್ಲಿ ಶೇ.70% ರಷ್ಟು ಕಡಿತ:

ಫ್ಲಿಪ್‌ಕಾರ್ಟ್‌ ಗ್ರಾಂಡ್ ಗ್ಯಾಜೆಟ್ ಸೇಲ್‌ನಲ್ಲಿ ಕೆಲವು ಆಯ್ದ ಗ್ಯಾಜೆಟ್‌ಗಳ ಮೇಲೆ ಭಾರೀ ಆಫರ್ ಗಳನ್ನು ನೀಡಲು ಮುಂದಾಗಿದೆ. ಬೆಲೆಯಲ್ಲಿ ಶೇ.70% ರಷ್ಟು ಕಡಿತವನ್ನು ಮಾಡಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಸಮೀಪದ ಸ್ಪರ್ಧಿಗಳಿಗೆ ಸಾಕಷ್ಟು ಹೊಡೆತವನ್ನು ನೀಡಲಿದೆ. ಇದರಲ್ಲಿ ಕ್ಯಾಮೆರಾ, ಪವರ್ ಬ್ಯಾಂಕ್ ಸೇರಿದಂತೆ ಹಲವು ವಸ್ತುಗಳು ಸೇರಿಕೊಂಡಿವೆ ಎನ್ನಲಾಗಿದೆ.

ಸ್ಪೀಕರ್ ಗಳ ಮೇಲೆ ಶೇ.60% ಕಡಿತ:

ಸ್ಪೀಕರ್ ಗಳ ಮೇಲೆ ಶೇ.60% ಕಡಿತ:

ಸದ್ಯ ಮಾರುಕಟ್ಟೆಯಲ್ಲಿ ಸ್ಪೀಕರ್ ಗಳ ಬೇಡಿಕೆಯೂ ಹೆಚ್ಚಾಗಿದ್ದು, ಇದನ್ನು ಮನದಲ್ಲಿ ಇಟ್ಟುಕೊಂಡು ಫ್ಲಿಪ್‌ಕಾರ್ಟ್‌ ಗ್ರಾಂಡ್ ಗ್ಯಾಜೆಟ್ ಸೇಲ್‌ನಲ್ಲಿ ಹೋಮ್ ಎಂಟರ್‌ಟೈನ್ ಮೆಂಟ್ ಸ್ಪೀಕರ್ ಗಳ ಮೇಲೆ ಶೇ.60% ಕಡಿತವನ್ನು ಮಾಡಲಿದೆ ಎನ್ನಲಾಗಿದೆ. ಅಲಲದೇ ಇದರಲ್ಲಿ ಕ್ರೋಮ್ ಕಾಸ್ಟ್ ಸಹ ಸೇರಿಕೊಳ್ಳಲಿದೆ.

ಲ್ಯಾಪ್ ಟಾಪ್:

ಲ್ಯಾಪ್ ಟಾಪ್:

ಇದಲ್ಲದೇ ಲ್ಯಾಪ್‌ಟಾಪ್‌ಗಳ ಬೇಡಿಕೆ ಹೆಚ್ಚಿಗಾಗಿರುವ ಕಾರಣದಿಂದಾಗಿ ಅನೇಕ ಶ್ರೇಣಿಯ ಲ್ಯಾಪ್‌ಟಾಪ್ ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಲು ಮುಂದಾಗಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ. ಕಡಿಮೆ ಬೆಲೆಗೆ ವಸ್ತುಗಳನ್ನು ಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Flipkart Grand Gadget Day sale: Top offers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot