ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಬೊಂಬಾಟ್ ಕೊಡುಗೆ!

|

ಪ್ರಮುಖ ಇ-ಕಾಮರ್ಸ್‌ ಸೈಟ್‌ ಆದ ಫ್ಲಿಪ್‌ಕಾರ್ಟ್‌ ತನ್ನ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಡಿಸ್ಕೌಂಟ್‌ ಘೋಷಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ, ಸ್ಪೀಕರ್ಸ್‌ಗಳು, ಸ್ಮಾರ್ಟ್‌ವಾಚ್‌ ಸೇರಿದಂತೆ ಇನ್ನಿತರೆ ಡಿವೈಸ್‌ಗಳಿಗೆ ಭಾರೀ ರಿಯಾಯಿತಿ ನೀಡಲಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ನ ಈ ಬಿಗ್‌ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಪ್ರಮುಖ ಬ್ರಾಂಡ್‌ಗಳಾದ ಆಪಲ್‌, ಸ್ಯಾಮ್‌ಸಂಗ್‌, ರೆಡ್‌ಮಿ ಸೇರಿದಂತೆ ಇನ್ನಿತರ ಬ್ರಾಂಡ್‌ಗಳ ಸ್ಮಾರ್ಟ್‌ವಾಚ್‌ಗಳಿಗೆ ಆಕರ್ಷಕ ರಿಯಾಯಿತಿ ನೀಡಿದೆ. ಇದರ ಜೊತೆಗೆ ಬ್ಯಾಂಕ್‌ ಆಫರ್‌ಗಳಿಂದ ತ್ವರಿತ ರಿಯಾಯಿತಿ ಸಹ ಪಡೆದುಕೊಳ್ಳಬಹುದಾಗಿದೆ. ಈ ಲೇಖನದಲ್ಲಿ ನಾವು ಕೆಲವು ಪ್ರಮುಖ ಸ್ಮಾರ್ಟ್‌ವಾಚ್‌ಗಳ ರಿಯಾಯಿತಿ ಬೆಲೆ ಹಾಗೂ ಫೀಚರ್ಸ್‌ಗಳ ವಿವರವನ್ನು ನೀಡಿದ್ದೇವೆ, ಮುಂದೆ ಓದಿರಿ.

ಆಪಲ್ ವಾಚ್‌ ಸರಣಿ 7 GPS + ಸೆಲ್ಯುಲಾರ್

ಆಪಲ್ ವಾಚ್‌ ಸರಣಿ 7 GPS + ಸೆಲ್ಯುಲಾರ್

ಈ ಸ್ಮಾರ್ಟ್‌ವಾಚ್‌ ಮೂಲ ದರ 50,900 ರೂ. ಗಳಾಗಿದ್ದು, ಇದನ್ನು 45,999 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ವಾಚ್ 41mm OLED ರೆಟಿನಾ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ರಕ್ತದ ಆಮ್ಲಜನಕ ಪತ್ತೆ ಮಾಡುವ ಸೆನ್ಸಾರ್‌, ಹೃದಯ ಬಡಿತ ಟ್ರ್ಯಾಕಿಂಗ್‌‌ ಮಾಡುವ ಜೊತೆ ಇನ್ನಿತರ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ 4

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ 4

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ವಾಚ್‌ 4 ಸಾಮಾನ್ಯ ದರ 29,999 ರೂ. ಗಳಿದ್ದು, ಇದನ್ನು ನೀವು ಕೇವಲ 9,999 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ವಾಚ್‌1.4 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಬ್ಲೂಟೂತ್ ಕರೆ ಫಿಚರ್‌ ಇದರಲ್ಲಿದೆ. ಇದು 40 ಗಂಟೆಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ.

ಅಮಾಜ್‌ಫಿಟ್ T-Rex ಪ್ರೊ

ಅಮಾಜ್‌ಫಿಟ್ T-Rex ಪ್ರೊ

ಅಮಾಜ್‌ಫಿಟ್ T-Rex ಪ್ರೊ ವಾಚ್‌ಗೆ 7,999 ರೂ.ಗಳ ರಿಯಾಯಿತಿ ಬೆಲೆ ನಿಗದಿ ಮಾಡಲಾಗಿದ್ದು, ಇದರ ಮೂಲ ಬೆಲೆ 17,999 ರೂ.ಗಳಾಗಿದೆ. ಈ ಸ್ಮಾರ್ಟ್‌ವಾಚ್‌ 1.3 ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, ದೈಹಿಕ ಆರೋಗ್ಯದ ಮೇಲೆ ನಿಗಾ ಇಡಲಿದೆ. ಹಾಗೆಯ 390mAh ಬ್ಯಾಟರಿ ಸಾಮರ್ಥ್ಯ ಪಡದಿದ್ದು, ಬರೋಬ್ಬರಿ 18 ದಿನಗಳ ಬ್ಯಾಕ್‌ಅಪ್‌ ನೀಡಲಿದೆ.

ಫೈರ್-ಬೋಲ್ಟ್ ನ್ಯೂಕ್ಲಿಯಸ್

ಫೈರ್-ಬೋಲ್ಟ್ ನ್ಯೂಕ್ಲಿಯಸ್

ಫೈರ್-ಬೋಲ್ಟ್ ನ್ಯೂಕ್ಲಿಯಸ್ ಸ್ಮಾರ್ಟ್‌ವಾಚ್‌ 15,999 ರೂ. ಗಳ ಮೂಲ ದರ ಹೊಂದಿದ್ದು, ಇದನ್ನು ಕೇವಲ 3,799 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು 1.78 ಇಂಚಿನ AMOLED ಡಿಸ್‌ಪ್ಲೇ ಜೊತೆಗೆ ಇನ್‌ಬಿಲ್ಟ್‌ ಧ್ವನಿ ಸಹಾಯಕದೊಂದಿಗೆ ಬರುತ್ತದೆ. ಇದರಲ್ಲಿ ಬ್ಲೂಟೂತ್ ಕಾಲ್‌ ಫೀಚರ್‌ ಇದ್ದು, ಇದು ಕೆಲವು ಸ್ಪೋರ್ಟ್ಸ್‌ ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ.

ಅಂಬ್ರೇನ್ ವೈಸ್ ಇಯಾನ್

ಅಂಬ್ರೇನ್ ವೈಸ್ ಇಯಾನ್

ಅಂಬ್ರೇನ್ ವೈಸ್ ಇಯಾನ್ ಸ್ಮಾರ್ಟ್‌ವಾಚ್‌ ಕೇವಲ 1,299 ರೂ.ಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 4,999 ರೂ. ಗಳಾಗಿದೆ. ಈ ಸ್ಮಾರ್ಟ್‌ವಾಚ್‌1.69 ಇಂಚಿನ ಲುಸಿಡ್ ಡಿಸ್‌ಪ್ಲೇ ಜೊತೆಗೆ 450nits ಗರಿಷ್ಠ ಹೊಳಪನ್ನು ಹೊಂದಿದೆ. ಜೊತೆಗೆ ರಕ್ತದ ಆಮ್ಲಜನಕ ಬಗ್ಗೆ ಟ್ರ್ಯಾಕಿಂಗ್, ಹೃದಯ ಬಡಿತ ಮಾನಿಟರಿಂಗ್, ನಿದ್ರೆ ಟ್ರ್ಯಾಕಿಂಗ್ ಸೇರಿದಂತೆ ಇನ್ನಿತರ ಆಯ್ಕೆಗಳನ್ನು ಒಳಗೊಂಡಿದೆ. ಇದನ್ನು ಒಮ್ಮೆ ಚಾರ್ಜ್‌ ಮಾಡಿದರೆ ಹತ್ತು ದಿನಗಳ ವರೆಗೆ ಬಳಕೆ ಮಾಡಬಹುದಾಗಿದೆ.

ರಿಯಲ್‌ಮಿ ಬ್ಯಾಂಡ್ 2

ರಿಯಲ್‌ಮಿ ಬ್ಯಾಂಡ್ 2

ರಿಯಲ್‌ಮಿ ಬ್ಯಾಂಡ್ ಸ್ಮಾರ್ಟ್‌ವಾಚ್‌ 3,499 ರೂ.ಗಳ ಮೂಲ ಬೆಲೆ ಹೊಂದಿದ್ದು, ಇದನ್ನು ನೀವು ಕೇವಲ 1,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ 1.4 ಇಂಚಿನ ಡಿಸ್‌ಪ್ಲೇ ಜೊತೆಗೆ 500nits ಹೊಳಪನ್ನು ನೀಡಲಿದೆ. ಇದು ಫಿಟ್‌ನೆಸ್‌, ರಕ್ತದ ಆಮ್ಲಜನಕ ಟ್ರ್ಯಾಕರ್ ಮತ್ತು ಹೃದಯ ಬಡಿತದ ಮಾನಿಟರಿಂಗ್ ಮಾಡಲಿದೆ. ಇದನ್ನು ಒಮ್ಮೆ ಚಾರ್ಚ್‌ ಮಾಡಿದರೆ ಬರೋಬ್ಬರಿ 12 ದಿನಗಳ ವರೆಗೆ ಬಳಕೆ ಮಾಡಬಹುದಾಗಿದೆ.

Best Mobiles in India

English summary
In this Big Billion Days sale, Flipkart has given attractive discounts on leading brands like Apple, Samsung, Redmi and other smart watches.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X