ಲಾಕ್‌ಡೌನ್‌ ಬೇಸರ ಮರೆಸುವುದಕ್ಕಾಗಿ ಫ್ಲಿಪ್‌ಕಾರ್ಟ್‌ ನಿಂದ ಹೊಸ ಗೇಮ್‌ ಶೋ!

|

ಕೋವಿಡ್‌-19 ನಿಂದಾಗಿ ಇಡೀ ಜಗತ್ತೇ ಲಾಕ್‌ಡೌನ್‌ ಆಗಿದೆ. ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ. ಈ ನಡುವೆ ಲಾಕ್‌ಡೌನ್‌ ನಿಂದಾಗಿ ಮನೆಯಿಂದ ಹೊರಬರಲಾರದೇ ಮನೆ ಮಂದಿಯೆಲ್ಲಾ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇವರ ಬೇಸರವನ್ನ ಕಳೆಯುವುದಕ್ಕಾಗಿ ಬಹುತೇಕ ಸೊಶೀಯಲ್‌ ಮಿಡೀಯಾ ಆಪ್‌ಗಳು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಿವೆ. ಲಾಕ್‌ಡೌನ್‌ ನೆಪವನ್ನೇ ಇಟ್ಟುಕೊಂಡು ಹೊಸ ಮಾದರಿಯ ಗೇಮ್‌ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸದ್ಯ ಇದೀಗ ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಕೂಡ ಹೊಸದೊಂದು ಗೇಮ್‌ ಶೋ ಅನ್ನು ಪರಿಚಯಿಸಿದೆ.

ಜನಪ್ರಿಯ

ಹೌದು, ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್ಕಾರ್ಟ್ ಹೊಸದೊಂದು ಗೇಮ್‌ ಶೋ ಅನ್ನು ತನ್ನ ಗ್ರಾಹಕರಿಗಾಗಿ ಪ್ರಾರಂಭಿಸಿದೆ. ಇದೊಂದು ವೀಡಿಯೋ ಸ್ಟ್ರಿಮಿಂಗ್‌ ಜೊತೆಗೆ ನಡೆಯುವ ಗೇಮ್‌ ಆಗಿದೆ. ಇದನ್ನ ‘ಕ್ಯಾ ಬೋಲ್ಟಿ ಪಬ್ಲಿಕ್' ಎಂದು ಹೆಸರಿಸಲಾಗಿದ್ದು, ವೋಟಿಂಗ್‌ ಆಧಾರಿತ ಗೇಮ್‌ ಶೋ ಆಗಿದೆ. ಅಲ್ಲದೆ ಈ ಪರಿಕಲ್ಪನೆಯು ಗೇಮಿಂಗ್ ಮತ್ತು ವಿಡಿಯೋ ಸ್ಟ್ರೀಮಿಂಗ್ ಎರಡನ್ನು ಕೂಡ ಒಟ್ಟಿಗೆ ತರುತ್ತದೆ. ಇನ್ನು ಈ ಗೇಮ್‌ ಅನ್ನು ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯ ವರೆಗೆ ಆಡಬಹುದಾಗಿದೆ. ಹಾಗಾದ್ರೆ ಈ ಗೇಮ್‌ಶೋನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ವೋಟಿಂಗ್‌

ಇನ್ನು ಇದೊಂದು ವೋಟಿಂಗ್‌ ಆಧಾರಿತ ಗೇಮ್‌ ಶೋ ಹಾಗೂ ಕ್ಯಾ ಬೋಲ್ಟಿ ಪಬ್ಲಿಕ್‌ ಎಂದು ಹೆಸರೇ ಸೂಚಿಸುವಂತೆ ಇದರಲ್ಲಿ ಸೆಲಿಬ್ರಿಟಿಗಳ ಕೆಲಸ ಕಾರ್ಯಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನಿಡುವ ಮಾದರಿಯನ್ನ ಹೊಂದಿರಬಹುದು. ಅಲ್ಲದೆ ಈ ಗೇಮ್‌ ಅನ್ನು ಖ್ಯಾತ ಕಾಮಿಡಿಯನ್‌ ಹಾಗೂ ನಿರೂಪಕ ಮನಿಶ್‌ ಪಾಲ್‌ ನಡೆಸಿಕೊಡಲಿದ್ದಾರೆ. ಇನ್ನು ಈ ಗೇಮ್‌ನಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿರುವ ಇತರೆ ವ್ಯಕ್ತಿಗಳ ಕುರಿತಾದ ಪ್ರಶ್ನೆಗಳನ್ನ ಕೇಳುವ ಹಾಗೂ ಹಾಸ್ಯ ಭರಿತ ಪ್ರಶ್ನೆಗಳ ಸರಮಾಲೆಯನ್ನೇ ನೀಡುವ ಸಾಧ್ಯತೆ ಇದೆ. ಇನ್ನ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ನೀವು ವೀಡಿಯೊ ವಿಭಾಗದ ಅಡಿಯಲ್ಲಿ ಈ ಗೇಮ್‌ ಅನ್ನು ಆಡಬಹುದು. ಜೊತೆಗೆ ನೀವು ಸರಿ ಉತ್ತರ ನಿಡುವಾಗ ಗೇಮ್‌ ಶೋ ಬಟನ್‌ ಅನ್ನು ಟ್ಯಾಪ್‌ ಮಾಡಬೇಲಕು. ಸರಿ ಉತ್ತ ನೀಡಿದರೆ ನಿಮಗೆ ಬಹುಮಾನ ನೀಡಲಾಗುತ್ತದೆ. ಅಲ್ಲದೆ ಈ ಆಟದ ಮೂಲಕ ಆಟಗಾರರು ದಿನವಿಡೀ ದೊಡ್ಡ ಬಹುಮಾನಗಳನ್ನು ಗೆಲ್ಲುವ ಭರವಸೆ ಹೊಂದಬಹುದು.

ವೋಟಿಂಗ್‌

ಅಲ್ಲದೆ ಇದು ವೋಟಿಂಗ್‌ ಆಧಾರಿತ ಗೇಮ್‌ ಪ್ರದರ್ಶನವು ಪ್ರತಿ ಸಂಚಿಕೆಯಲ್ಲಿ ಐದು ಪ್ರಶ್ನೆಗಳ ಒಂದು ಗುಂಪನ್ನು ವೀಕ್ಷಕರಿಗೆ ಕೇಳುತ್ತದೆ, ಪ್ರತಿ ಪ್ರಶ್ನೆಗೆ ನೀವು ಆಯ್ಕೆ ಮಾಡಬಹುದಾದ ಎರಡು ಆಯ್ಕೆಗಳಿರುವೆ. ಆದ್ದರಿಂದ, ಯಾರೂ ಸರಿಯಾದ ಮತ್ತು ತಪ್ಪು ಎನ್ನುವುದಿಲ್ಲ, ಇದರಲ್ಲಿ ಜನಪ್ರಿಯ ಆಯ್ಕೆ ಏನು ಎಂಬುದರ ಮೇಲೆ ನಿಮ್ಮ ಉತ್ತರ ಸರಿಯೋ ಇಲ್ಲವೋ ಎಂದು ಅವಲಂಬಿತವಾಗಿರುತ್ತದೆ. ಜನರು ಮನೆಯಲ್ಲಿ ಉಳಿಯಲು ಮತ್ತು ಮನರಂಜನೆ ಪಡೆಯಲು ಲಾಕ್‌ಡೌನ್ ಅನ್ನು ಗಮನದಲ್ಲಿಟ್ಟುಕೊಂಡು ಕ್ಯಾ ಬೋಲ್ಟಿ ಪಬ್ಲಿಕ್ ಅನ್ನು ರಚಿಸಲಾಗಿದೆ.

ಗೇಮ್‌

ನೀವು ಈ ಗೇಮ್‌ ಶೋ ಸ್ಟ್ರೀಮ್ ಮಾಡುವಾಗ ಪರದೆಯಿಂದಲೇ ನಿಮ್ಮ ಆಯ್ಕೆಯ ಉತ್ತರವನ್ನು ನೀವು ಆಯ್ಕೆ ಮಾಡಬಹುದು. ಕತ್ರಿನಾ ಕೈಫ್ ಮತ್ತು ಶಿಖರ್ ಧವನ್ ನಡುವಿನ ಮನೆಕೆಲಸದಲ್ಲಿ ಯಾರು ಉತ್ತಮ? ಮತ್ತು ವಿರಾಟ್ ಕೊಹ್ಲಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ನಡುವೆ ಯಾರು ಉತ್ತಮ ಗಡ್ಡವನ್ನ ಹೊಂದಿದ್ದಾರೆ? ಹೀಗೆ ನಿಮಗಿಷ್ಟದ ಪ್ರಶ್ನೆಗೆ ಉತ್ತರವನ್ನ ನೀಡಬಹುದಾಗಿದೆ. ಇನ್ನು ಈ ಗೇಮ್ ಶೋ ಒಂದು ತಿಂಗಳು ನಡೆಯುತ್ತದೆ ಮತ್ತು ಪ್ರತಿದಿನ ಹೊಸ ಎಪಿಸೋಡ್ ನಡೆಯಲಿದೆ. ಆದ್ದರಿಂದ ಜನರು ನಿಯಮಿತವಾಗಿ ಲಾಗ್ ಇನ್ ಆಗಬಹುದು ಮತ್ತು ದೊಡ್ಡ ಮೊತ್ತದ ಬಹುಮಾನವನ್ನ ಗೆಲ್ಲಬಹುದು. ಇದರಲ್ಲಿ ಭಾಗವಹಿಸಲು, ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಫ್ಲಿಪ್‌ಕಾರ್ಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಲಾಗ್‌ ಇನ್‌ ಆದರೆ ಸಾಕಾಗಿದೆ.

Most Read Articles
Best Mobiles in India

Read more about:
English summary
The show is going to be hosted by comedian and TV anchor Maniesh Paul, combines video and gaming and is now live on the video section of the Flipkart app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more