ಫ್ಲಿಪ್‌ಕಾರ್ಟ್ ‘ಬಿಗ್‌ ಬಿಲಿಯನ್‌ ಡೇಸ್‌’..1 ಲಕ್ಷ ಮಾರಾಟಗಾರರಿಗೂ ಸಿಹಿಸುದ್ದಿ!

  ಅಕ್ಟೋಬರ್ 10 ರಿಂದ 5 ದಿನಗಳ ಕಾಲ ಬಿಗ್‌ಬಿಲಿಯನ್ ಡೇಟ್ ಮಾರಾಟ ಮೆಳವನ್ನು ಹಮ್ಮಿಕೊಂಡಿರುವ ಇ-ಕಾಮರ್ಸ್ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್, ಸರಕುಗಳ ಮಾರಾಟಗಾರರ ಹಲವು ವೆಚ್ಚಗಳನ್ನು ಕಡಿತಗೊಳಿಸಿದೆ. ಈ ಮೂಲಕ ಗ್ರಾಹಕರಿಗೆ ಮಾತ್ರವಲ್ಲದೆ, ಮಾರಾಟಗಾರರ ವಹಿವಾಟು ಮತ್ತು ಲಾಭ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದೆ.

  'ಹಬ್ಬದ ಸಂದರ್ಭದಲ್ಲಿ ನಡೆಸಲಾಗುವ 'ಬಿಗ್‌ ಬಿಲಿಯನ್‌ ಡೇಸ್‌' ಮಾರಾಟ ಅಭಿಯಾನ ಯಶಸ್ವಿಗೊಳಿಸಲು, ಸಂಸ್ಥೆಯಲ್ಲಿನ 1 ಲಕ್ಷಕ್ಕೂ ಹೆಚ್ಚು ಮಾರಾಟಗಾರರಿಗೆ ಶುಲ್ಕ ಕಡಿತ, ಸಂಸ್ಥೆಯ ತಂತ್ರಜ್ಞಾನ, ಗೋದಾಮು ಬಳಕೆ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಿ ಅವರ ವೆಚ್ಚ ತಗ್ಗಿಸಲು ನೆರವಾಗುವುದಾಗಿ ಮಾರುಕಟ್ಟೆ ವಿಭಾಗದ ನಿರ್ದೇಶಕ ನಿಶಾಂತ್ ಗುಪ್ತಾ ಹೇಳಿದ್ದಾರೆ.

  ಫ್ಲಿಪ್‌ಕಾರ್ಟ್ ‘ಬಿಗ್‌ ಬಿಲಿಯನ್‌ ಡೇಸ್‌’..1 ಲಕ್ಷ ಮಾರಾಟಗಾರರಿಗೂ ಸಿಹಿಸುದ್ದಿ!

  'ಬಿಗ್‌ ಬಿಲಿಯನ್‌ ಡೇಸ್‌' ಮಾರಾಟ ಅಭಿಯಾನ ಸಂದರ್ಭದಲ್ಲಿನ ಮಾರಾಟಗಾರರ ವಹಿವಾಟನ್ನು ಹಲವು ಪಟ್ಟು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಮಾರಾಟಗಾರರ ವಹಿವಾಟಿಗೆ ಸಂಬಂಧಿಸಿದ ಶುಲ್ಕಗಳ ಕಡಿತದಿಂದ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಇದು ಮಾರಾಟಗಾರರಿಗೂ ಖುಷಿ ತಂದಿದೆ.

  ಇನ್ನು ಫ್ಲಿಪ್‌ಕಾರ್ಟ್ ಬಿಗ್‌ ಬಿಲಿಯನ್‌ ಡೇ ಸೇಲ್ ಮೇಲೆ ಗ್ರಾಹಕರು ನಿರೀಕ್ಷೆಯ ಮೂಟೆಯನ್ನು ಕಟ್ಟಿಕೊಂಡು ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗಾದರೆ, ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಏನೆಲ್ಲಾ ಇರುತ್ತದೆ? ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಇದು ಯೋಗ್ಯ ಸಮಯವೇ? ಯಾವ ಯಾವ ವಸ್ತುಗಳು ಡಿಸ್ಕೌಂಟ್ ಸೇಲ್‌ಗೆ ಬರುತ್ತಿವೆ ಎಂಬುದನ್ನು ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಖಂಡಿತವಾಗಿ ಇದು ಯೋಗ್ಯಸಮಯ!

  ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿಯ ಮೌಲ್ಯ ಕುಸಿತವಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೆಲ ಸರಕುಗಳ ಮೇಲೆ ಆಮದು ಸುಂಕವನ್ನು ಏರಿಕೆ ಮಾಡಿದೆ. ಹಾಗಾಗಿ, ವಿದೇಶದಿಂದ ಆಮದಾಗುವ ಸ್ಪೀಕರ್​ಗಳು, ಏರ್‌ ಕಂಡೀಶನರ್, ರೆಫ್ರಿಜರೇಟರ್ ಸಹಿತ ಈ ಎಲ್ಲ ವಸ್ತುಗಳ ದರ ಶೀಘ್ರವೇ ಏರಿಕೆಯಾಗಲಿವೆ. ಹಾಗಾಗಿ, ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲಲು ಇದು ಯೋಗ್ಯ ಸಮಯ.!

  ನಿರೀಕ್ಷೆಯ ಮಹಾಪೂರ

  ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇ ಸೇಲ್‌ ವಿವಿಧ ವರ್ಗಗಳಲ್ಲಿ ನಡೆಯುತ್ತಿದೆ. ಮೊದಲ ದಿನದಿಂದ ಫ್ಯಾಶನ್ಸ್, ಟಿವಿ ಮತ್ತು ಗೃಹೋಪಯೋಗಿ ವಸ್ತುಗಳು, ಸ್ಮಾರ್ಟ್‌ ಡಿವೈಸ್‌ಗಳು ಮತ್ತೀತರ ಉತ್ಪನ್ನಗಳು ಮಾರಾಟಕ್ಕಿದ್ದರೆ, ಎರಡನೇ ದಿನದಿಂದ ಸ್ಮಾರ್ಟ್‌ಫೋನ್‌, ಗ್ಯಾಡ್ಜೆಟ್ಸ್‌ ಮತ್ತು ಅಕ್ಸೇಸರಿಸ್‌ ಮತ್ತೀತರ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮಾರಾಟ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್‌ 14ರವರೆಗೂ ಮುಂದುವರೆಯುತ್ತದೆ. ಇಷ್ಟು ದೈನಂದಿನ ಡೀಲ್‌ಗಳನ್ನು ಬಿಟ್ಟು ಫ್ಲಿಪ್‌ಕಾರ್ಟ್‌ ಮತ್ತಷ್ಟು ವಿಶೇಷ ಡೀಲ್‌ಗಳನ್ನು ಗ್ರಾಹಕರಿಗೆ ನೀಡಿದೆ.

  ಕ್ರೇಜ್ ಹೆಚ್ಚಿಸುವ ಡೀಲ್ ಗಳು

  ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಪ್ರತಿ ಎಂಟು ಗಂಟೆಗಳಿಗೊಮ್ಮೆ ಕೆಲವು ವಸ್ತುಗಳ ಮೇಲೆ ಹೊಸ ಡೀಲ್‌ಗಳು ಲಭ್ಯವಾಗುತ್ತದೆ. ಇದರ ಮೂಲಕ ನೀವು ಯಾವಾಗಲೂ ಹೊಸ ಡೀಲ್‌ಗಳನ್ನು ನೋಡಿ ಹೊಸ ಹೊಸ ಉತ್ಪನ್ನಗಳನ್ನು ಖರೀದಿಸಬಹುದುಈ ಆಫರ್‌ ಅನ್ವಯ ನಿಮಗೆ ಬೇಕಾದ ಉತ್ಪನ್ನಗಳು ಶೇ. 20ರವರೆಗೆ ಮಹಾ ಪ್ರೈಸ್‌ಡ್ರಾಪ್‌ನಲ್ಲಿ ನಿಮಗೆ ಸಿಗಬಹುದು. ಆದರೆ, ಇದು ಸೇಲ್ ನ ಎಲ್ಲಾ ಸಮಯದಲ್ಲೂ ಲಭ್ಯವಿರುವುದಿಲ್ಲ. ಕೆಲವು ಸಮಯದಲ್ಲಿ ಮಾತ್ರ ಲಭ್ಯವಿರುವ ಆಫರ್ ಇದಾಗಿದ್ದು, ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

  ರಷ್ ಅವರ್ ಮತ್ತು ಫ್ಲ್ಯಾಶ್ ಸೇಲ್ ಡೀಲ್‌

  ರಷ್ ಅವರ್ ಡೀಲ್‌ ಭಾಗವಾಗಿ, ನಿಮ್ಮ ಇಷ್ಟದ ಉತ್ಪನ್ನದ ಮೇಲೆ ಹೆಚ್ಚುವರಿ ರಿಯಾಯಿತಿ ಪಡೆಯಲು ಅವಕಾಶವಿರುತ್ತದೆ. ಆದರೆ, ಈ ಡೀಲ್ ಸೇಲ್ ಆರಂಭವಾದ ಎರಡು ಘಂಟೆಗಳು ಮಾತ್ರ ಇದ್ದು, ಈ ಅವಧಿಯಲ್ಲಿಯೇ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇನ್ನು ಬಿಗ್‌ ಬಿಲಿಯನ್‌ ಡೇ ಸೇಲ್‌ನ ಫ್ಲ್ಯಾಶ್ ಸೇಲ್ 120 ವಿಭಿನ್ನ ಡೀಲ್‌ಗಳನ್ನು ವಿವಿಧ ವಸ್ತುಗಳ ಮೇಲೆ ಹೊಂದಿದೆ. ಇದು ಒಟ್ಟಾರೆ 120 ಘಂಟೆಗಳ ಅವಧಿಗೆ ಫಿಕ್ಸ್‌ ಆಗಿದ್ದು, ಈ ಸೇಲ್‌ನಲ್ಲಿ ನಿಮಗೆ ಖಂಡಿತ ಲಾಭವಾಗಲಿದೆ.

  ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ

  ಆಕರ್ಷಕ ಮೊಬೈಲ್ ಆಫರ್‌ಗಳು ಈ ಸೇಲ್‌ನಲ್ಲಿ ಗ್ರಾಹಕರನ್ನು ಸೆಳೆಯಲಿದೆ. ಬಿಗ್‌ ಬಿಲಿಯನ್‌ ಡೇ ಸೇಲ್‌ಗಳಲ್ಲಿ ಗ್ಯಾರೆಂಟಿ, ಉತ್ತಮ ಎಕ್ಸ್‌ಚೇಂಜ್ ಆಫರ್ ಇದೆ. ಮಾಸ್ಟರ್ ಕಾರ್ಡ್ ಮೂಲಕ ಮೊದಲ ಬಾರಿಗೆ ಆನ್‌ಲೈನ್ ಪೇಮೆಂಟ್ ಮಾಡುವವರಿಗೆ ಶೇ. 10ರಷ್ಟು ತ್ವರಿತ ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸುವವರಿಗೆ ಶೇ.5 ರಷ್ಟು ರಿಯಾಯಿತಿ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ. 5ರಷ್ಟು ರಿಯಾಯಿತಿ ಲಭ್ಯವಾಗಲಿದೆ. ನೋಕಿಯಾ, ಓಪ್ಪೋ, ಒನ್‌ಪ್ಲಸ್, ಸ್ಯಾಮ್‌ಸಂಗ್, ಆಪಲ್ ಸೇರಿ ಹಲವು ಕಂಪೆನಿಯ ಫೋನ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

  ಟಿವಿ ಮತ್ತು ಅಪ್ಲಯನ್ಸಸ್ ಮೇಲೂ ಬಿಗ್‌ ಡಿಸ್ಕೌಂಟ್

  ಟಿವಿ ಮತ್ತು ಅಪ್ಲಯನ್ಸಸ್ ಮೇಲೂ ಬಿಗ್‌ ಡಿಸ್ಕೌಂಟ್ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ 55 ಇಂಚಿನ ಟಿವಿ 43 ಇಂಚಿನ ಟಿವಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಸಣ್ಣ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಶೇ. 80ರಷ್ಟು ರಿಯಾಯಿತಿ ದೊರೆಯುತ್ತಿದ್ದು, ಗ್ರಾಹಕರು ಭರಪೂರ ಲಾಭ ಮಾಡಿಕೊಳ್ಳಬಹುದು. ಆಗೆಯೇ ಕೆಲವು ಗ್ಯಾಜೆಟ್ ಆಕ್ಸೆಸರೀಸ್ ಗಳು ಶೇ.80ರಷ್ಟು ಆಫರ್‌ನಲ್ಲಿ ಮಾರಾಟಕ್ಕಿದ್ದು, ಡೆಲ್, ಆಪಲ್, ಲೆನೊವಾ ಮತ್ತು ಇತರೆ ಕಂಪೆನಿಯ ಲ್ಯಾಪ್‌ಟಾಪ್‌ಗಳ ಮೇಲೆ ಭಾರೀ ರಿಯಾಯತಿ ಇದೆ.

  ಹೆಚ್ಚಿನ ಪೇಮೆಂಟ್ ಆಫರ್‌ಗಳು

  ಮಾರ್ಕೆಟಿಂಗ್‌ ಅಷ್ಟೇ ಅಲ್ಲದೇ ಫ್ಲಿಪ್‌ಕಾರ್ಟ್‌ ಈ ಸಲ ಹೆಚ್ಚಿನ ಪೇಮೆಂಟ್ ಆಫರ್‌ಗಳನ್ನು ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ನೀಡುತ್ತಿದೆ. ಗ್ರಾಹಕರು ತಮಗೆ ಇಷ್ಟವಾದ ಉತ್ಪನ್ನಗಳನ್ನು ಕನಿಷ್ಟ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದ್ದು, ಇದು ಮೊದಲ ಸಲ ಖರೀದಿಸುವ ಗ್ರಾಹಕರನ್ನು ಉತ್ತೇಜಿಸುತ್ತದೆ. ಅದಲ್ಲದೇ ಫ್ಲಿಪ್‌ಕಾರ್ಟ್‌ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಡೆಬಿಟ್ ಮತ್ತು ಕ್ರೆಟಿಟ್‌ ಕಾರ್ಡ್‌ ಬಳಕೆದಾರರಿಗೆ ಶೇ.10ರಷ್ಟು ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್‌ ಪ್ಲಸ್‌ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳಿವೆ.

  ಸೆಲೆಬ್ರಿಟಿಗಳಿಂದ ಜಾಹೀರಾತು

  ಈ ಸಲದ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನ್ನು ಪ್ರೊಮೋಟ್‌ ಮಾಡಲು ಸಾಲು ಸಾಲು ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುತ್ತಿದೆ. ಹೌದು, ಅಮಿತಾಬ್ ಬಚ್ಚನ್‌ ಸೇರಿದಂತೆ ದೀಪಿಕಾ ಪಡುಕೋಣೆ, ವಿರಾಟ್‌ ಕೊಹ್ಲಿ, ಸೌರವ್‌ ಗಂಗೂಲಿ ಮತ್ತಿತರರು ಬಿಗ್ ಬಿಲಿಯನ್‌ ಡೇ ಸೇಲ್‌ನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗ್ರಾಹಕರ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಹಾಗಾಗಿ, ಈ ಬಾರಿಯ ಗ್‌ ಬಿಲಿಯನ್‌ ಡೇ ಸೇಲ್ ಮಿಸ್ ಮಾಡಿಕೊಳ್ಳಲು ಕಾರಣಗಳೇ ಇಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Flipkart doubles seller additions ahead of BigBillionDays sale this month. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more