Just In
Don't Miss
- Sports
ಪಂತ್ ಮತ್ತೆ ವಿಫಲ ಸ್ಥಾನ, ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ
- News
ಸದ್ಯಕ್ಕೆ ಯಾಕಿಲ್ಲ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ?
- Lifestyle
ಬಿಳಿ ಕಾಳುಮೆಣಸಿನಲ್ಲಿರುವ ಆರೋಗ್ಯಕರ ಗುಣಗಳಿವು
- Education
Bank Of Maharashtra Recruitment 2019: 300 ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್
- Finance
ಡಾಲರ್ ಎದುರು ಹೆಚ್ಚಿದ ರುಪಾಯಿ ಬಲ: 6 ವಾರಗಳಲ್ಲಿ ಗರಿಷ್ಠ ಮಟ್ಟ
- Movies
ಮಧ್ಯರಾತ್ರಿ ಆರಾಧ್ಯ ದೈವನ ಹುಟ್ಟು ಹಬ್ಬ ಆಚರಿಸಿದ ವಿಜಿ 'ಸಲಗ' ಟೀಮ್
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಶೇ 100% ಮರುಬಳಕೆ ಪ್ಲಾಸ್ಟಿಕ್ ಬಳಕೆ ಮಾಡುವುದಾಗಿ ಫ್ಲಿಪ್‌ಕಾರ್ಟ್ ವಾಗ್ದಾನ!
ಮಾರ್ಚ್ 2021ರ ವೇಳೆಗೆ ಪ್ಯಾಕೇಜಿಂಗ್ನಲ್ಲಿ ಒಂದು ಬಾರಿ ಬಳಕೆಯಾಗುವಂತಹ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವುದಾಗಿ ದೇಶದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಗುರುವಾರ ತಿಳಿಸಿದೆ. ಅಷ್ಟೇ ಅಲ್ಲದೇ, 2019 ರ ಆಗಸ್ಟ್ 1 ರ ವೇಳೆಗೆ ವಿವಿಧ ಪ್ಯಾಕೇಜಿಂಗ್ ಪ್ರಕ್ರಿಯೆಗಳಲ್ಲಿ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಪ್ರಮಾಣವನ್ನು ಶೇ. 25 ರಷ್ಟು ಕಡಿಮೆ ಮಾಡಿದೆ ಎಂದು ಇಂದು ಘೋಷಿಸಿದೆ. ಈ ಕಾರ್ಯವು ಪರಿಸರ ರಕ್ಷಣೆಗೆ ಆದ್ಯತೆ ನೀಡುವ ಸಲುವಾಗಿ ಎಂದು ಕಂಪೆನಿ ಹೇಳಿದೆ.
ಹೌದು, ತನ್ನ ದೀರ್ಘಾವಧಿಯ ಸುಸ್ಥಿತ ಉಪಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ಫ್ಲಿಪ್‍ಕಾರ್ಟ್, ಪರಿಸರ ರಕ್ಷಣೆಗೆ ಆದ್ಯತೆ ನೀಡುವ ಸಲುವಾಗಿ 2021ರ ಮಾರ್ಚ್ ವೇಳೆಗೆ ಪ್ಯಾಕೇಜಿಂಗ್ನಲ್ಲಿ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆಯಂತೆ. ಈ ಬಗ್ಗೆ ವಾಗ್ದಾನ ಮಾಡಿರುವ ಸಂಸ್ಥೆಯು ಅದೇ ದಿನಾಂಕದೊಳಗೆ ತನ್ನ ಉತ್ಪನ್ನ ಪೂರೈಕೆಯಲ್ಲಿ " ಶೇ 100% ಮರುಬಳಕೆಯ ಪ್ಲಾಸ್ಟಿಕ್ ಬಳಕೆಯತ್ತ ಸಾಗಲು" ತಾನು ಬದ್ಧವಾಗಿರುವುದಾಗಿ ತಿಳಿಸಿದೆ.
ಇಕೋ-ಫ್ರೆಂಡ್ಲಿ ಪೇಪರ್ ಶ್ರೇಡ್ಸ್, ಮರುಬಳಕೆಯ ಕಾಗದದ ಚೀಲಗಳನ್ನು ಪರಿಚಯಿಸುವ ಮೂಲಕ ಪಾಲಿ ಪೌಚ್‍ಗಳನ್ನು ಬದಲಿಸುವುದು, ಬಬಲ್ ರಾಪ್‍ಗಳನ್ನು ಬದಲಿಸುವುದು, ಕಾರ್ಟನ್ ವೇಸ್ಟ್ ಶ್ರೆಡ್ಡೆಡ್ ಮಟೀರಿಯಲ್‍ನಿಂದ ಏರ್‌ಬ್ಯಾಗ್‍ಗಳನ್ನು ಬದಲಿಸುವುದು ಮತ್ತು ಇನ್ನೂ ಹಲವಾರು ಉಪಕ್ರಮಗಳನ್ನು ಜಾರಿಗೆ ತರಲು ಫ್ಲಿಪ್‍ಕಾರ್ಟ್ ನಿರ್ಧರಿಸಿದೆ. ಈ ಉಪಕ್ರಮಗಳು ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಭೂಮಿಯೊಳಗೆ ಸೇರುವುದನ್ನು ತಪ್ಪಿಸಲು ನೆರವಾಗಲಿವೆ ಎಂದು ಕಂಪೆನಿ ತಿಳಿಸಿದೆ.
ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಪರಿಹರಿಸುವ ಬಗೆ ಹೇಗೆಂಬ ನಿಟ್ಟಿನಲ್ಲಿ ಫ್ಲಿಪ್‍ಕಾರ್ಟ್ ಪರಿಸರ ಸ್ನೇಹಿ ಉಪಕ್ರಮಗಳತ್ತ ಗಮನಹರಿಸಿದೆ. ಪ್ಲಾಸ್ಟಿಕ್ ಮುಕ್ತಗೊಳಿಸುವ ಕಾರ್ಯಕ್ರಮದಡಿ ಎರಡನೇ ಹಂತದಲ್ಲಿ ಫ್ಲಿಪ್‍ಕಾರ್ಟ್ ತನ್ನ ಸಾವಿರಾರು ಮಾರಾಟಗಾರರೂ ಉತ್ಪನ್ನಗಳ ಪ್ಯಾಕೇಜಿಂಗ್ ಅನ್ನುಪ್ಲಾಸ್ಟಿಕ್ ಮುಕ್ತ ಮಾಡುವ ಕಾರ್ಯವನ್ನು ವಿಸ್ತರಣೆ ಮಾಡಲಿದೆ. 2021 ರ ಮಾರ್ಚ್ ವೇಳೆಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಬದ್ಧತೆಯಲ್ಲಿ ಈಗಾಗಲೇ ಶೇ. 25 ರಷ್ಟು ಪ್ರಗತಿ ಸಾಧಿಸಲಾಗಿದೆ.
ಕೇವಲ 10 ಸಾವಿರಕ್ಕೆ 'ರೆಡ್ಮಿ ನೋಟ್ 8' ರಿಲೀಸ್!..ಫೀಚರ್ಸ್ ನೋಡಿ ಬೆಚ್ಚಿತು ಮಾರುಕಟ್ಟೆ!
ಮಾರ್ಚ್ 2020 ರ ವೇಳೆಗೆ ತನ್ನ ವಿತರಣಾ ವಾಹನಗಳಲ್ಲಿ 40% ವಿದ್ಯುತ್ ಮಾಡುವುದಾಗಿ ಕಂಪನಿಯು ಜೂನ್‌ನಲ್ಲಿ ಘೋಷಿಸಿದೆ. ಫ್ಲಿಪ್‍ಕಾರ್ಟ್‍ನ ಮತ್ತೊಂದು ವಿಶೇಷವೆಂದರೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೂ ಪ್ಲಾಸ್ಟಿಕ್ ಬಳಸದಿರುವ ಜಾಗೃತಿ ಮೂಡಿಸಿರುವುದು. ಬೆಂಗಳೂರಿನ ಫ್ಲಿಪ್‍ಕಾರ್ಟ್ ಘಟಕದಲ್ಲಿ 8500ಕ್ಕೂ ಅಧಿಕ ನೌಕರರಿದ್ದಾರೆ. ಅವರೆಲ್ಲಾ ಊಟವನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ತರುವುದಿಲ್ಲ. ಇದರ ಬದಲಾಗಿ ಸ್ಟೀಲ್ ಕಂಟೇನರ್, ಗ್ಲಾಸ್‍ವೇರ್‌ಗಳನ್ನು ಬಳಸುತ್ತಿದ್ದಾರೆ.!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090