ಐಫೋನ್‌ ಪ್ರಿಯರಿಗೆ ಸಿಹಿಸುದ್ದಿ!..ಭಾರೀ ಡಿಸ್ಕೌಂಟ್‌ನಲ್ಲಿ ಸಿಗಲಿದೆ ಐಫೋನ್‌ 13!

|

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಆಫರ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸೇಲ್ ಆಯೋಜಿಸುತ್ತದೆ. ಅದೇ ರೀತಿ ಈಗ ಫ್ಲಿಪ್‌ಕಾರ್ಟ್‌ ಮಂತ್ ಎಂಡ್ ಮೊಬೈಲ್ ಫೆಸ್ಟ್‌ (Flipkart Month-End Mobiles Fest) ಸೇಲ್ ಅನ್ನು ಆಯೋಜಿಸಿದ್ದು, ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. ಈ ಸೇಲ್‌ನಲ್ಲಿ ಆಯ್ದ ಐಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ತಿಳಿಸಿದೆ. ಅವುಗಳಲ್ಲಿ ಆಪಲ್‌ನ ಇತ್ತೀಚಿಗಿನ ಹೊಸ ಐಫೋನ್ 13 ಭರ್ಜರಿ ಡಿಸ್ಕೌಂಟ್‌ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಐಫೋನ್‌ ಪ್ರಿಯರಿಗೆ ಸಿಹಿಸುದ್ದಿ!..ಭಾರೀ ಡಿಸ್ಕೌಂಟ್‌ನಲ್ಲಿ ಸಿಗಲಿದೆ ಐಫೋನ್‌ 13!

ಹೌದು, ಫ್ಲಿಪ್‌ಕಾರ್ಟ್ ಇ-ಕಾಮರ್ಸ್‌ ತಾಣವು ಆಯೋಜಿಸಿರುವ ಫ್ಲಿಪ್‌ಕಾರ್ಟ್‌ ಮಂತ್ ಎಂಡ್ ಮೊಬೈಲ್ ಫೆಸ್ಟ್‌ ಸದ್ಯ ಚಾಲ್ತಿ ಇದೆ. ಈ ಸೇಲ್‌ ಮೇಳವು ಇದೇ ಮಾರ್ಚ್ 26 ರ ವರೆಗೂ ಚಾಲ್ತಿ ಇರಲಿದೆ. ಸೇಲ್‌ನಲ್ಲಿ ಐಫೋನ್ 13 ಫೋನ್ 6% ರಿಯಾಯಿತಿ ಪಡೆದಿದ್ದು, 74,900 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಹಕರು ಐಫೋನ್ 13 ಫೋನ್‌ ಅನ್ನು ರಿಯಾಯಿತಿಯೊಂದಿಗೆ ಪಡೆಯಬಹುದು. ಇದಲ್ಲದೆ, ಗ್ರಾಹಕರು ಐಸಿಐಸಿಐ ಹಾಗೂ ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ವಹಿವಾಟಿನಲ್ಲಿ 6,000 ರೂ.ಗಳ ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

ಐಫೋನ್‌ ಪ್ರಿಯರಿಗೆ ಸಿಹಿಸುದ್ದಿ!..ಭಾರೀ ಡಿಸ್ಕೌಂಟ್‌ನಲ್ಲಿ ಸಿಗಲಿದೆ ಐಫೋನ್‌ 13!

ಐಫೋನ್ 13 ಫೋನ್ 128 ಜಿಬಿ ಸ್ಟೋರೇಜ್ ರೂಪಾಂತರ ಬೆಲೆಯು 74,900ರೂ. ಆಗಿದೆ. ಐಫೋನ್ 13 ಫೋನ್ 256 ಜಿಬಿ ಸ್ಟೋರೇಜ್ ರೂಪಾಂತರ ಬೆಲೆಯು 84,900ರೂ. ಆಗಿದೆ. ಐಫೋನ್ 13 ಫೋನ್ 512 ಜಿಬಿ ಸ್ಟೋರೇಜ್ ರೂಪಾಂತರ ಬೆಲೆಯು 1,04,900ರೂ. ಆಗಿದೆ. ಹಾಗಾದರೇ ಐಫೋನ್ 12 ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್‌ ಪ್ರಿಯರಿಗೆ ಸಿಹಿಸುದ್ದಿ!..ಭಾರೀ ಡಿಸ್ಕೌಂಟ್‌ನಲ್ಲಿ ಸಿಗಲಿದೆ ಐಫೋನ್‌ 13!

ಐಫೋನ್ 13 ಫೋನ್‌ ಫೀಚರ್ಸ್‌
ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

ಐಫೋನ್ 13 ಮಿನಿ ಫೋನ್‌ ಫೀಚರ್ಸ್‌
ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. . 800nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Flipkart Month-End Mobiles Fest: Big Discount On iPhone 13.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X