Subscribe to Gizbot

ಡಿಸೆಂಬರ್ 15, 16ನೇ ತಾರೀಖು ಆನ್‌ಲೈನ್ ಶಾಪಿಂಗ್ ಮಾಡುವುದನ್ನು ಮರೆಯದಿರಿ!!..ಯಾಕೆ ಗೊತ್ತಾ?

Written By:

ಗ್ರಾಹಕರ ನೆಚ್ಚಿನ ಜಾಲತಾಣ ಎಂಬ ಖ್ಯಾತಿಗೆ ಪಾತ್ರವಾಗಿರುವ ಪ್ರಖ್ಯಾತ ಆನ್‌ಲೈನ್ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್ ಮಗದೊಂದು ಆಫರ್ ಅನ್ನು ಘೋಷಿಸಿದೆ.! ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಭಾರಿ ಡಿಸ್ಕಂಟ್ಸ್ ಹೊಂದಿರುವ "ಫ್ಲಿಪ್‌ಕಾರ್ಟ್ ಪಿಂಚ್ ಡೇಸ್" ಆಫರ್ ಈ ತಿಂಗಳಿನಲ್ಲಿ ಕೇವಲ ಎರಡು ದಿನಗಳು ಗ್ರಾಹಕರಿಗೆ ಲಭ್ಯವಿದೆ.!!

ಡಿಸೆಂಬರ್ 15 ರಿಂದ ಡಿಸೆಂಬರ್ 17ರ ವರೆಗೆ "ಪಿಂಚ್ ಡೇಸ್" ಆಫರ್ ಆಯೋಜನೆಯಾಗಿದ್ದು, ಈ ಆಫರ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್ ಫೋನ್‌ ಅನ್ನು 'ಆಫರ್ ಆಫ್ ದಿ ಇಯರ್' ಎಂದು ಘೋಷಿಸಲಾಗಿದೆ.!! ಹಾಗಾದರೆ, ಈ ಆಫರ್‌ನಲ್ಲಿ ಫ್ಲಿಪ್‌ಕಾರ್ಟ್ ಬೇರೆ ಏನೆಲ್ಲಾ ಆಫರ್‌ಗಳನ್ನು ನೀಡಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಹಬ್ಬ!!

ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಹಬ್ಬ!!

ಬಹುತೇಕ ಎಲ್ಲಾ ಸಮಯದಲ್ಲಿಯೂ ಫ್ಲಿಪ್‌ಕಾರ್ಟ್ ಜೊತೆಗಾರನಾಗಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ "ಪಿಂಚ್ ಡೇಸ್" ಆಫರ್‌ನಲ್ಲಿಯೂ ಫ್ಲಿಪ್‌ಕಾರ್ಟ್ ಕೈಜೋಡಿಸಿದೆ. ಹಾಗಾಗಿ, ಯಾವುದೇ ಉತ್ಪನ್ನಗಳ ಮೇಲೆ ಹೆಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಗ್ರಾಹಕರು 10% ಹೆಚ್ಚು ಡಿಸ್ಕೌಂಟ್ಸ್ ಪಡೆಯಲಿದ್ದಾರೆ.!!

ಎಕ್ಸ್‌ಚೇಂಜ್ ಮತ್ತು ಇಎಮ್ಐ ಮೇಳ!!

ಎಕ್ಸ್‌ಚೇಂಜ್ ಮತ್ತು ಇಎಮ್ಐ ಮೇಳ!!

ಡಿಸೆಂಬರ್ 15 ರಿಂದ ಡಿಸೆಂಬರ್ 17ರ ವರೆಗೆ ನಡೆಯಲಿರುವ ಫ್ಲಿಪ್‌ಕಾರ್ಟ್ "ಪಿಂಚ್ ಡೇಸ್" ದಿನಗಳನ್ನು ಎಕ್ಸ್‌ಚೇಂಜ್ ಮತ್ತು ಇಎಮ್ಐ ಮೇಳ ಎನ್ನಬಹುದು.!! ನೋ ಕಾಸ್ಟ್ ಇಎಮ್ಐ ಮೂಲಕ ವಸ್ತುಗಳನ್ನು ಖರೀದಿಸಬಹುದಾದ ಹಾಗೂ ಹಳೆ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾದ ಆಯ್ಕೆ ಇಲ್ಲಿ ಲಭ್ಯವಿದೆ.!!

ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ 80% ಡಿಸ್ಕೌಂಟ್ಸ್!!

ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ 80% ಡಿಸ್ಕೌಂಟ್ಸ್!!

ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ "ಪಿಂಚ್ ಡೇಸ್" ಆಫರ್ 80% ಡಿಸ್ಕೌಂಟ್ಸ್ ಹೊಂದಿರಲಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ. ಮೊಬೈಲ್ ಬಿಡಿಭಾಗಗಳು, ಪವರ್‌ಬ್ಯಾಂಕ್, ಲ್ಯಾಪ್‌ಟಾಪ್‌ಗಳು ಮತ್ತು ಹೆಡ್‌ಫೋನ್‌ಗಳ ಮೇಲೆ ಶೇ80 ರಷ್ಟು ರಿಯಾಯಿತಿ ನೀಡಿದ್ದು, ಟಿವಿಗಳು ಮತ್ತು ಗೃಹೋಪಯೋಗಿ ಉಪಕರಣಗಳಿಗೆ ಎಕ್ಸ್‌ಚೇಂಜ್ ಆಫರ್ ಜೊತೆ ಹೆಚ್ಚುವರಿಯಾಗಿ 80 ರಷ್ಟು ರಿಯಾಯಿತಿ ನೀಡಲಿದೆ.!!

ಮೊಬೈಲ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!

ಮೊಬೈಲ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್ ಫೋನ್‌ ಅನ್ನು 'ಆಫರ್ ಆಫ್ ದಿ ಇಯರ್' ಎಂದು ಫ್ಲಿಪ್‌ಕಾರ್ಟ್‌ನಲ್ಲಿ ಘೋಷಣೆ ಮಾಡಿರುವುದರಿಂದ ಈ ಫೋನ್ ಮೇಲೆ ಭಾರಿ ಆಫರ್ ನೀಡುವ ಸಂಭವವಿದೆ. ಇನ್ನು ಶಿಯೋಮಿ ಎಮ್‌ಐ ಎ1, ವಿವೊ ವಿ 7, ಐಫೋನ್ 10 ಹಾಗೂ ಗೂಗಲ್ ಪಿಕ್ಸೆಲ್ ಫೋನ್‌ಗಳ ಮೇಲೆ ಭಾರಿ ಡಿಸ್ಕಂಟ್ಸ್ ನೀಡಲಾಗುತ್ತದೆ.!!

ಡಿಜಿಟಲ್ ಕ್ಯಾಮೆರಾ ಖರೀದಿಸಲು ಬೆಸ್ಟ್ ಆಫರ್!!

ಡಿಜಿಟಲ್ ಕ್ಯಾಮೆರಾ ಖರೀದಿಸಲು ಬೆಸ್ಟ್ ಆಫರ್!!

ಕೇವಲ ಮೊಬೈಲ್‌ಗಳು ಮತ್ತು ಟಿವಿಗಳ ಮೇಲೆ ಮಾತ್ರವಲ್ಲದೆ ಡಿಜಿಟಲ್ ಕ್ಯಾಮೆರಾ ಖರೀದಿಸಲು "ಪಿಂಚ್ ಡೇಸ್" ಆಫರ್ ಬೆಸ್ಟ್ ಆಗಿದೆ. ಫ್ಲಿಪ್‌ಕಾರ್ಟ್‌ ಡಿಜಿಟಲ್ ಕ್ಯಾಮೆರಾಗಳ ಮೇಲೆ ಹೆಚ್ಚು ಡಿಸ್ಕಂಟ್ಸ್ ನೀಡುವುದಾಗಿ ಹೇಳಿದೆ. ಆದರೆ, ಡಿಸ್ಕಂಟ್ಸ್ ಎಷ್ಟಿರಲಿದೆ ಎಂದು ಮಾಹಿತಿ ನೀಡಿಲ್ಲ.!!

ಓದಿರಿ: 'ಗೂಗಲ್ ಮ್ಯಾಪ್‌'ಗೆ ಬರಲಿದೆ ಮತ್ತೊಂದು ವಿಶಿಷ್ಟ ಫೀಚರ್!!..ನೀವು ಊಹೆ ಸಹ ಮಾಡಿರೊಲ್ಲ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart's New Pinch Days is offering discounts on mobile phones.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot