ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಆಫ್‌ಲೈನ್ ಸ್ಟೋರ್ ಆರಂಭ!

|

ಭಾರತದ ಆನ್‌ಲೈನ್ ಮಾರುಕಟ್ಟೆಯ ದಿಗ್ಗಜ ಕಂಪೆನಿಯಾಗಿರುವ ಫ್ಲಿಪ್‌ಕಾರ್ಟ್ ಇದೀಗ ಅಧಿಕೃತವಾಗಿ ಆಫ್‌ಲೈನ್ ಮಾರುಕಟ್ಟೆಗೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ 1,800 ಅಡಿಗಳಷ್ಟು ವಿಸ್ತಾರವಾಗಿರುವ ತನ್ನ ಮೊದಲ ಆಫ್‌ಲೈನ್ ಸ್ಟೋರ್ ಅನ್ನು ತೆರೆಯುವ ಮೂಲಕ, ಆಫ್‌ಲೈನ್ ಜಗತ್ತಿನಲ್ಲೂ ಸಹ ಫ್ಲಿಪ್‌ಕಾರ್ಟ್ ತನ್ನ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಆಫ್‌ಲೈನ್ ಜಗತ್ತಿನ ಮೊದಲ ಆಕ್ರಮಣ ಭಾಗವಾಗಿ ಪೀಠೋಪಕರಣ ಅನುಭವ ಕೇಂದ್ರವನ್ನು ಫ್ಲಿಪ್‌ಕಾರ್ಟ್ ಸಂಸ್ಥೆ ಪ್ರಾರಂಭಿಸಿದೆ.

ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಆಫ್‌ಲೈನ್ ಸ್ಟೋರ್ ಆರಂಭ!

ಹೌದು, ಗ್ರಾಹಕರು ತಾವು ಖರೀದಿಸುತ್ತಿರುವ ಉತ್ಪನ್ನಗಳನ್ನು ನೋಡಲು ಮತ್ತು ಸ್ಪರ್ಶಿಸಲು ಇಷ್ಟಪಡುತ್ತಾರೆ. ಅದರಲ್ಲೂ ಪೀಠೋಪಕರಣಗಳ ವರ್ಗವು ಸಾಂಪ್ರದಾಯಿಕವಾಗಿ ಆಫ್‌ಲೈನ್‌ನಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದೆ. ಆದರೂ ಪೀಠೋಪಕರಣಗಳು ಆನ್‌ಲೈನ್ ವಿಭಾಗಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ವಸ್ತುಗಳಾಗಿರುವುದರಿಂದ, ಹೊಸ ಮತ್ತು ನವೀನ ಶೈಲಿಯಲ್ಲಿ ಪೀಠೋಪಕರಣಗಳ ಕೊಡುಗೆಗಳನ್ನು ಗ್ರಾಹಕರಿಗೆ ಮಾರಲು ಫ್ಲಿಪ್‌ಕಾರ್ಟ್ ತನ್ನ ಮೊದಲ ಮಳಿಗೆಯನ್ನು ತೆರೆದಿದೆ.

ಆನ್‌ಲೈನಿನಲ್ಲಿ ಲಭ್ಯವಿರುವ ವಿವಿಧ ವಿನ್ಯಾಸ ಮತ್ತು ಗಾತ್ರದ ಪೀಠೋಪಕರಣಗಳು ಈ ಸ್ಟೋರ್‌ನಲ್ಲಿ ಲಭ್ಯವಿವೆ. ಖರೀದಿ ಮತ್ತು ಅಳವಡಿಕೆಗೆ ಅನುಕೂಲವಾಗುವಂತೆ ವಿಶೇಷ ಅವಕಾಶವನ್ನು ಕಂಪೆನಿ ಕಲ್ಪಿಸಿದೆ. ಅನುಭವ ಕೇಂದ್ರಕ್ಕೆ ಭೇಟಿ ನೀಡುವ ಗ್ರಾಹಕರು ಗೂಗಲ್ ಲೆನ್ಸ್ ಮೂಲಕ ಕ್ಯಾಟಲಾಗ್ ಅನ್ನು ಸ್ಕ್ಯಾನ್ ಮಾಡಬಹುದಾದ್ದರಿಂದ ಫ್ಲಿಪ್‌ಕಾರ್ಟ್ ಗೂಗಲ್‌ನೊಂದಿಗೆ ಸಹ ಕಾರ್ಯನಿರ್ವಹಿಸುತ್ತಿದೆ. ಅಂದರೆ, ಫೋನ್ ಮೂಲಕವೇ ಫರ್ನಿಚರ್ ಸ್ಕ್ಯಾನ್ ಮಾಡಿ, ಅದರ ಎಲ್ಲಾ ವಿವರವನ್ನು ಪಡೆಯಬಹುದಾಗಿದೆ.

ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಆಫ್‌ಲೈನ್ ಸ್ಟೋರ್ ಆರಂಭ!

ತಮ್ಮದು ಗ್ರಾಹಕಸ್ನೇಹಿ ಇ-ಕಾಮರ್ಸ್‌ ಕಂಪನಿಯಾಗಿದ್ದು, ಆಫ್‌ಲೈನ್‌ ಅನುಭವವನ್ನು ಗ್ರಾಹಕರಿಗೆ ಕಲ್ಪಿಸಲು ಮುಂದಾಗಿದೆ ಎಂದು ಕಂಪನಿಯ ಪೀಠೋಪಕರಣ, ಎಲೆಕ್ಟ್ರಾನಿಕ್ಸ್‌ ಮತ್ತು ಪ್ರೈವೇಟ್‌ ಲೇಬಲ್‌ ವಿಭಾಗದ ಉಪಾಧ್ಯಕ್ಷ ಆದರ್ಶ್ ಮೆನನ್ ಅವರು ತಿಳಿಸಿದ್ದಾರೆ. ಈ ಫರ್ನಿಶರ್ ಅನುಭವ ವಲಯದ ಹಿಂದಿನ ಮುಖ್ಯ ಆಲೋಚನೆಯೆಂದರೆ, ಫ್ಲಿಪ್ಕಾರ್ಟ್ ಪೀಠೋಪಕರಣಗಳ ಕೊಡುಗೆಗಳನ್ನು ಹೊಸ ಮತ್ತು ನವೀನ ಶೈಲಿಯಲ್ಲಿ ಅನ್ವೇಷಿಸಲು ಗ್ರಾಹಕರಿಗೆ ಅವಕಾಶ ನೀಡುವುದು ಎಂದು ಅವರು ಹೇಳಿದ್ದಾರೆ.

2020ರ ಐಫೋನ್‌ಗಳಲ್ಲಿ ಇರಲಿದೆ 5G ಸಂಪರ್ಕ!2020ರ ಐಫೋನ್‌ಗಳಲ್ಲಿ ಇರಲಿದೆ 5G ಸಂಪರ್ಕ!

ಬೆಂಗಳೂರಿನಲ್ಲಿ ಇನ್ನೂ ಎರಡು ಫ್ಲಿಪ್‌ಕಾರ್ಟ್ ಪೀಠೋಪಕರಣಗಳ ಅನುಭವ ಕೇಂದ್ರಗಳನ್ನು ಪರಿಚಯಿಸಲು ಯೋಜಿಸುತ್ತಿದ್ದು, ಇತರ ಮಹಾನಗರಗಳಿಗೂ ಸಹ ಅನುಭವ ಕೇಂದ್ರಗಳನ್ನು ವಿಸ್ತರಿಸಲು ಕಂಪೆನಿ ಮುಂದಾಗಿದೆ. ಸ್ವೀಡಿಷ್ ಪೀಠೋಪಕರಣ ಚಿಲ್ಲರೆ ವ್ಯಾಪಾರಿ ಇಕಿಯಾ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಫ್ಲಿಪ್‌ಕಾರ್ಟ್ ಅನುಭವ ಕೇಂದ್ರಗಳನ್ನು ಪರಿಚಯಿಸಿರುವುದನ್ನು ನೋಡಿದರೆ ಇನ್ನು ಆಫ್‌ಲೈನ್ ಆಫರ್‌ಗಳ ಸುರಿಮಳೆ ಎಂದು ಹೇಳಬಹುದು.

Best Mobiles in India

English summary
Flipkart Sunday announced its foray into the offline space with its decision to set up the first Furniture Experience Centre in Bengaluru. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X