Subscribe to Gizbot

ಫ್ಯಾಷನ್ ಸೈಟ್ ಮಿಂತ್ರಾ ಇನ್ನು ಮೊಬೈಲ್ ಅಪ್ಲಿಕೇಶನ್ ರೂಪದಲ್ಲಿ

Posted By:

ಫ್ಲಿಪ್‌ಕಾರ್ಟ್ ಮಾಲೀಕತ್ವದ ಫ್ಯಾಷನ್ ಪೋರ್ಟಲ್ ಮಿಂತ್ರಾ ಮೇ 1 ರಿಂದ ತನ್ನ ವೆಬ್‌ಸೈಟ್ ಅನ್ನು ಮುಚ್ಚಲಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿನ ಇಂಟರ್ನೆಟ್ ಬಳಕೆಯನ್ನು ಗಮನಿಸಿ ಇದು ಮೊಬೈಲ್ ಅಪ್ಲಿಕೇಶನ್ ಆಗಿ ಮಾರ್ಪಡಲಿದ್ದು ತನ್ನ ವೆಬ್‌ಸೈಟ್ ಅನ್ನು ಸದ್ಯದಲ್ಲಿಯೇ ಮುಚ್ಚಲಿದೆ.

ಇದನ್ನೂ ಓದಿ: ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಫ್ಯಾಷನ್ ಸೈಟ್ ಮಿಂತ್ರಾ ಇನ್ನು ಮೊಬೈಲ್ ಅಪ್ಲಿಕೇಶನ್ ರೂಪದಲ್ಲಿ

ವರದಿಗಳ ಪ್ರಕಾರ, ಫ್ಲಿಪ್‌ಕಾರ್ಟ್ 60 ಶೇಕಡಾಕ್ಕಿಂತ ಹೆಚ್ಚು ಮಾರಾಟಗಳನ್ನು ತನ್ನ ಅಪ್ಲಿಕೇಶನ್ ಮೂಲಕ ನೋಂದಾಯಿಸುತ್ತಿದ್ದು ಅದರ ಫ್ಯಾಷನ್ ಇಸ್ಟೋರ್ ಮಿಂತ್ರಾ ತನ್ನ 80 ಶೇಕಡಾಕ್ಕಿಂತ ಹೆಚ್ಚಿನ ಟ್ರಾಫಿಕ್ ಅನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಗಳಿಸಿಕೊಳ್ಳಲಿದೆ.

ಫ್ಯಾಷನ್ ಸೈಟ್ ಮಿಂತ್ರಾ ಇನ್ನು ಮೊಬೈಲ್ ಅಪ್ಲಿಕೇಶನ್ ರೂಪದಲ್ಲಿ

ವರ್ಷಗಳ ಹಿಂದೆಯೇ ಮಿಂತ್ರಾವನ್ನು ತನ್ನ ಒಡೆತನಕ್ಕೆ ಪಡೆದುಕೊಂಡಿದ್ದ ಫ್ಲಿಪ್‌ಕಾರ್ಟ್, ಈ ಸಂಶೋಧನೆ ಫಲಕಾರಿಯಾಯಿತೆಂದರೆ ಫ್ಲಿಪ್‌ಕಾರ್ಟ್ ಕೂಡ ಇದೇ ನೀತಿಯನ್ನೇ ಅನುಸರಿಸಲಿದೆ.

ಫ್ಯಾಷನ್ ಸೈಟ್ ಮಿಂತ್ರಾ ಇನ್ನು ಮೊಬೈಲ್ ಅಪ್ಲಿಕೇಶನ್ ರೂಪದಲ್ಲಿ

ಇನ್ನು ವದಂತಿಗಳ ಪ್ರಕಾರ ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾ ಇವೆರಡೂ ಈಗಾಗಲೇ ತಮ್ಮ ಮೊಬೈಲ್ ವೆಬ್‌ಸೈಟ್‌ಗಳನ್ನು ಮುಚ್ಚಿದ್ದು ತಮ್ಮದೇ ಅಪ್ಲಿಕೇಶನ್‌ಗಳಿಗೆ ಭೇಟಿದಾರರು ಬರುವಂತೆ ಮಾಡಿದೆ.

ಮಿಂತ್ರಾ ಸಹಸ್ಥಾಪಕರಾದ ಮುಕೇಶ್ ಬನ್ಸಾಲ್ ಹೇಳುವಂತೆ, 360 ಡಿಗ್ರಿ ಜಾಹೀರಾತು ಹಾಗೂ ಮಾರುಕಟ್ಟೆ ಯೋಜನೆಯನ್ನು ಮಿಂತ್ರಾ ಯೋಜಿಸಿದ್ದು ಇದರ ಅಪ್ಲಿಕೇಶನ್ ಮಾತ್ರವೇ ಈ ಸೌಲಭ್ಯಗಳನ್ನು ಮುಂಬರುವ ವಾರಗಳಲ್ಲಿ ಪ್ರಸ್ತುತಪಡಿಸಲಿದೆ.

English summary
In a move to solely become a mobile app based retailer, the Flipkart-owned fashion portal Myntra will shut its website from May 1.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot