ಅಮೆಜಾನ್‌ ಪ್ರೈಮ್‌ಗೆ ಸೆಡ್ಡು: ಫ್ಲಿಪ್‌ಕಾರ್ಟ್ ನಿಂದ ಫ್ಲಿಪ್‌ಕಾರ್ಟ್ ಪ್ಲಸ್, ಪ್ಲಸ್ ಕಾಯಿನ್‌ ಲಾಂಚ್‌...!

|
Flipkart Plus: A new loyalty programme from Flipkart to tackle Amazon Prime

ಭಾರತೀಯ ಇ ಕಾಮರ್ಸ್ ಮಾರುಕಟ್ಟೆಗೆ ಅಂಬಾನಿ ಎಂಟ್ರಿ ನೀಡುತ್ತಿರುವ ವಿಚಾರ ಬಹಿರಂಗವಾದ ಮರು ದಿನವೇ, ಇ ಕಾಮರ್ಸ್ ಮಾರುಕಟ್ಟೆಯ ದೈತ್ಯ ಫ್ಲಿಪ್‌ಕಾರ್ಟ್‌ ಹೊಸದೊಂದು ಸೇವೆಯನ್ನು ಆರಂಭಿಸಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಲಿದೆ. ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್‌ ಅನ್ನು ತನ್ನ ತೆಕ್ಕೆಗೆ ತೆಗೆದು ಕೊಂಡ ನಂತರದಲ್ಲಿ ಜರುಗುತ್ತಿರುವ ಅತೀ ದೊಡ್ಡ ಪ್ರಮಾಣದ ಬೆಳವಣಿಗೆಯಾಗಿದೆ.

ಈಗಾಗಲೇ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆಜಾನ್, ತನ್ನ ಬಳಕೆದಾರರಿಗೆ ಇ ಕಾಮರ್ಸ್ ಗಿಂತಲೂ ಹೆಚ್ಚಾಗಿ ಸೇವೆಯನ್ನು ನೀಡುವ ಸಲುವಾಗಿ ಪ್ರೈಮ್ ಸದಸ್ಯತ್ವವನ್ನು ನೀಡುತ್ತಿದೆ. ಇದರಲ್ಲಿ ವಿಡಿಯೋ-ಮ್ಯೂಸಿಕ್ ಸೇರಿದಂತೆ ಹಲವು ಮಾದರಿಯ ಎಕ್ಸ್‌ಕ್ಲೂಸಿವ್ ಸೇವೆಯನ್ನು ನೀಡುತ್ತಿದೆ. ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ ಫ್ಲಿಪ್‌ಕಾರ್ಟ್‌ ಮಾರುಕಟ್ಟೆಗೆ ತನ್ನದೇ ಆದ ಫ್ಲಿಪ್‌ಕಾರ್ಟ್‌ ಪ್ಲಸ್ ಎನ್ನುವ ಸೇವೆಯೊಂದನ್ನು ಲಾಂಚ್ ಮಾಡಲು ಮುಂದಾಗಿದೆ.

ಅಮೆಜಾನ್‌ಗಿಂತ ಭಿನ್ನ:

ಅಮೆಜಾನ್‌ಗಿಂತ ಭಿನ್ನ:

ಇ ಕಾಮರ್ಸ್ ಮಾರುಕಟ್ಟೆಯಲ್ಲಿ ತನ್ನ ಪ್ರೈಮ್ ಸೇವೆಯ ಮೂಲಕವೇ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿರುವ ಅಮೆಜಾನ್‌ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ ಹೊಸ ಸೇವೆಯನ್ನು ಆರಂಭಿಸುತ್ತಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರಿಗೆ ಉಚಿತ ಸೇವೆಯನ್ನು ನೀಡಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಹೊಸ ಮಾದರಿಯ ಸೇವೆ:

ಹೊಸ ಮಾದರಿಯ ಸೇವೆ:

ಅಮೆಜಾನ್ ತನ್ನ ಪ್ರೈಮ್ ಸೇವೆಯನ್ನು ಪಡೆದುಕೊಳ್ಳಲು ಬಳಕೆದಾರರಿಂದ ಶುಲ್ಕವನ್ನು ಪಡೆಯುತ್ತದೆ. ಆದರೆ ಫ್ಲಿಪ್‌ಕಾರ್ಟ್‌ ಹೊಸದಾಗಿ ಲಾಂಚ್ ಮಾಡಲಿರುವ ಫ್ಲಿಪ್‌ಕಾರ್ಟ್‌ ಪ್ಲಸ್ ಉಚಿತವಾಗಿ ಸೇವೆಯನ್ನು ನೀಡಲಿದೆ ಮತ್ತು ಫ್ಲಿಪ್‌ ಕಾರ್ಟ್‌ ಸೇಲ್‌ಗಳಲ್ಲಿ ತ್ವರಿತವಾಗಿ ಸೇವೆಯನ್ನು ಪಡೆಯಲು ಅವಕಾಶವನ್ನು ಮಾಡಿಕೊಡಲಿದೆ.

ಆಗಸ್ಟ್ 15ಕ್ಕೆ ಲಾಂಚ್:

ಆಗಸ್ಟ್ 15ಕ್ಕೆ ಲಾಂಚ್:

ಫ್ಲಿಪ್‌ಕಾರ್ಟ್‌ ಪ್ಲಸ್ ಸೇವೆಯನ್ನು ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಲಾಂಚ್ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೇ ಅಂದೇ ದೊಡ್ಡ ಮಟ್ಟದ ಆಫರ್ ಗಳನ್ನು ಲಾಂಚ್ ಮಾಡುವ ಸಾಧ್ಯತೆಗಳು ಇದೆ. ಅಮೆಜಾನ್‌ಗೆ ಸೆಡ್ಡು ಹೊಡೆಯಲು ಎಲ್ಲಾ ಮಾದರಿಯ ಪ್ರಯತ್ನವನ್ನು ಮಾಡುತ್ತಿದೆ.

ಪ್ಲಸ್ ಕಾಯಿನ್ಸ್:

ಪ್ಲಸ್ ಕಾಯಿನ್ಸ್:

ಫ್ಲಿಪ್‌ಕಾರ್ಟ್‌ ಪ್ಲಸ್ ಸದಸ್ಯರಾಗಲು ಪ್ರತಿ ಬಾರಿ ನೀವು ಫ್ಲಿಪ್‌ ಕಾರ್ಟಿನಲ್ಲಿ ಆರ್ಡರ್ ಮಾಡಿದ ಸಂದರ್ಭದಲ್ಲಿ ಪ್ಲಸ್ ಕಾಯಿನ್‌ಗಳು ದೊರೆಯಲಿದೆ. ಇದನ್ನು ಬಳಕೆ ಮಾಡಿಕೊಂಡು ಫ್ಲಿಪ್‌ ಕಾರ್ಟ್‌ ಪ್ಲಸ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಅನೇಕ ಮಾದರಿಯ ಆಫರ್ ಗಳು ದೊರೆಯಲಿದೆ.

ಗ್ರಾಹಕರಿಗೆ ಲಾಭ:

ಗ್ರಾಹಕರಿಗೆ ಲಾಭ:

ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ಅಧ್ಯಾಯನ ನಡೆಸಿದ ನಂತರದಲ್ಲಿಯೇ ಫ್ಲಿಪ್‌ಕಾರ್ಟ್ ಪ್ಲಸ್ ಸೇವೆಯನ್ನು ಉಚಿತವಾಗಿ ನೀಡುತ್ತಿರುವುದಾಗಿ ಮೂಲಗಳು ತಿಳಿಸಿದ್ದು, ಇದರಿಂದಾಗಿ ಫ್ಲಿಪ್‌ಕಾರ್ಟ್ ಸಹ ಲಾಭವನ್ನು ಮಾಡಿಕೊಳ್ಳಲಿದೆ ಮತ್ತು ಗ್ರಾಹಕರಿಗೂ ಲಾಭವಾಗುವಂತೆ ಮಾಡಲಿದೆ.

Best Mobiles in India

English summary
Flipkart Plus to launch on 15 August to take on Amazon Prime. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X