ಫ್ಲಿಪ್‌ಕಾರ್ಟ್‌ನಿಂದ ಭಾರತದಲ್ಲಿ ಎರಡು ಮಿಲಿಯನ್ ಉದ್ಯೋಗ ಸೃಷ್ಟಿ
ಭಾರತದ ಪ್ರಮುಖ ಇ ರೀಟೈಲರ್ ಫ್ಲಿಪ್‌ಕಾರ್ಟ್ ಎರಡು ಮಿಲಿಯನ್ ಉದ್ಯೋಗವನ್ನು ಸೃಷ್ಟಿಸಲಿದ್ದು ಈ ವರ್ಷವೇ ಇದನ್ನು ಜಾರಿಗೆ ತರಲಿದೆ. ಸಂಸ್ಥೆಯು 2014 ರಲ್ಲಿ 500,000 ಉದ್ಯೋಗವನ್ನು ಸೃಷ್ಟಿಸಿದ್ದು ಇದನ್ನು ಮೀರಿಸಿ ಎರಡು ಮಿಲಿಯನ್ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸಿದೆ. ಫ್ಲಿಪ್‌ಕಾರ್ಟ್ ಇ ರೀಟೈಲರ್ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗೆ ಇದು ಪೂರಕವಾಗಿದೆ.
ನಗರ ಪ್ರದೇಶಗಳಲ್ಲಿ ಕಂಪೆನಿಯ ಮಾರುಕಟ್ಟೆ ತೆರೆದಿದ್ದು ಈ ಭಾಗದಲ್ಲಿ ಶೇಕಡಾ 60 ರಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಮುಂಬರುವ ದಿನಗಳಲ್ಲಿ ಜೈಪುರ, ರಾಜಾಸ್ತಾನ್ ಮತ್ತು ಗುಜರಾತ್‌ನ ಬರೋಡಾದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ಇರಾದೆ ಕಂಪೆನಿಯದ್ದಾಗಿದೆ.

ಮನೆಯ ಉತ್ಪನ್ನಗಳನ್ನುಮಾರುವವರು, ಮೊಬೈಲ್ ಆಕ್ಸಸರೀಸ್ ಮಾರಾಟ ಮಾಡುವುದು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತದೆ. ಇನ್ನು ಮಾರಾಟಗಾರರು ಉದ್ಯೋಗದ ಸೃಷ್ಟಿಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಾರೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 12 ತಿಂಗಳಲ್ಲಿ ಇದೇ ಕ್ಷೇತ್ರದಲ್ಲಿ 75,000 ಉದ್ಯೋಗ ಸೃಷ್ಟಿಸುವುದು ಕಂಪೆನಿಯ ಉದ್ದೇಶವಾಗಿದೆ.


Click it and Unblock the Notifications








