ಫ್ಲಿಪ್‌ಕಾರ್ಟ್‌ ಟಿವಿ ಡೇಸ್‌ ಸೇಲ್‌: ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್‌!

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಟಿವಿಗಳ ವಿನ್ಯಾಸ ಸಾಕಷ್ಟು ಬದಲಾಗಿದೆ. ಹೊಸ ಮಾದರಿಯ ಡಿಸ್‌ಪ್ಲೇ ವಿನ್ಯಾಸ, ಮಲ್ಟಿ ಫಂಕ್ಷನ್‌ ಕಾರ್ಯನಿರ್ವಿಹಿಸುವ ಸ್ಮಾರ್ಟ್‌ಟಿವಿಗಳ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವುದಕ್ಕೆ ಎಲ್ಲರೂ ಬಯಸುತ್ತಾರೆ. ಆದರಿಂದ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮದೇ ಆದ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಸದ್ಯ ಇದೀಗ ನಿಮ್ಮ ನೆಚ್ಚಿನ ಬ್ರ್ಯಾಂಡ್‌ ಸ್ಮಾರ್ಟ್‌ಟಿವಿಯನ್ನು ರಿಯಾಯಿತಿ ದರದಲ್ಲಿ ಖರೀದಿಸುವುದಕ್ಕೆ ಫ್ಲಿಪ್‌ಕಾರ್ಟ್‌ ಒಳ್ಳೆಯ ಅವಕಾಶ ನೀಡಿದೆ.

ಫ್ಲಿಪ್‌ಕಾರ್ಟ್

ಹೌದು, ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫ್ಲಿಪ್‌ಕಾರ್ಟ್ ಟಿವಿ ಡೇಸ್ ಸೇಲ್ ಅನ್ನು ಆಯೋಜಿಸಿದೆ. ಇದು ಹೊಸ ವರ್ಷದಲ್ಲಿ ನಡೆಯುತ್ತಿರುವ ಮೊದಲ ಸೇಲ್‌ ಆಗಿದೆ. ಇನ್ನು ಈ ಸೇಲ್‌ ಜನವರಿ 1 ರಿಂದ ಪ್ರಾರಂಭವಾಗಿದ್ದು, ಮಾರಾಟವು ಜನವರಿ 5, 2022 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್‌ ಈ ಸೇಲ್‌ನಲ್ಲಿ ಪ್ರಮುಖ ಬ್ರಾಂಡ್‌ಗಳಾದ ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ರಿಯಲ್‌ಮಿ ಸ್ಮಾರ್ಟ್‌ಟಿವಿಗಳ ಮೇಲೆ 11,000 ರೂ.ಗಳ ತನಕ ಡಿಸ್ಕೌಂಟ್‌ ನೀಡುತ್ತಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ನೀವು ರಿಯಾಯಿತಿ ದರದಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳನ್ನು ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ಲೌಪುಂಕ್ಟ್ ಸೈಬರ್‌ ಸೌಂಡ್‌ ಪ್ರಿಮಿಯಂ 4K ಆಂಡ್ರಾಯ್ಡ್‌ ಟಿವಿ

ಬ್ಲೌಪುಂಕ್ಟ್ ಸೈಬರ್‌ ಸೌಂಡ್‌ ಪ್ರಿಮಿಯಂ 4K ಆಂಡ್ರಾಯ್ಡ್‌ ಟಿವಿ

ಫ್ಲಿಪ್‌ಕಾರ್ಟ್‌ ಟಿವಿ ಡೇಸ್‌ ಸೇಲ್‌ ನಲ್ಲಿ ಬ್ಲೌಪುಂಕ್ಟ್ 43 ಇಂಚಿನ ಸೈಬರ್‌ ಸೌಂಡ್‌ ಪ್ರಿಮಿಯಂ 4K ಆಂಡ್ರಾಯ್ಡ್‌ ಟಿವಿ ಭರ್ಜರಿ ಡಿಸ್ಕೌಂಟ್‌ ಪಡೆದುಕೊಂಡಿದೆ. ಸದ್ಯ ಈ ಸ್ಮಾರ್ಟ್‌ಟಿವಿ 27,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 43 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು HDR10+ ಫೀಚರ್ಸ್‌ ಗಳನ್ನು ಬೆಂಬಲಿಸುತ್ತದೆ. ಈ ಟಿವಿಯು ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಂನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ಟಿವಿಯಲ್ಲಿ ಪ್ಲೇ ಸ್ಟೋರ್‌ ಮೂಲಕ ಹಲವು ಅಪ್ಲಿಕೇಶನ್‌ಗಳನ್ನು ಬಳಸಲು ಅವಕಾಶ ಸಿಗಲಿದೆ. ಇದಲ್ಲದೆ ಟಿವಿ ರಿಮೋಟ್ ಅನ್ನು ಗೂಗಲ್ ಅಸಿಸ್ಟೆಂಟ್ ಮೂಲಕ ಕಂಟ್ರೋಲ್‌ ಮಾಡಬಹುದು. ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ MS12 ಸೌಂಡ್ ಟೆಕ್ನಾಲಜಿಯನ್ನು ಬಳಸುತ್ತದೆ. ಇದು ಡಾಲ್ಬಿ ಅಟ್ಮೋಸ್‌ ಅನ್ನು ಡಿಕೋಡ್ ಮಾಡಬಹುದು ಮತ್ತು ಅಪ್ಡೇಟ್‌ ಮಾಡಬಹುದು ಎಂದು ಕಂಪನಿ ಹೇಳಿದೆ.

ಸ್ಯಾಮ್‌ಸಂಗ್‌ ಕ್ರಿಸ್ಟಲ್‌ 4K 43 ಇಂಚು ಅಲ್ಟ್ರಾ ಹೆಚ್‌ಡಿ ಎಲ್‌ಇಡಿ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ ಕ್ರಿಸ್ಟಲ್‌ 4K 43 ಇಂಚು ಅಲ್ಟ್ರಾ ಹೆಚ್‌ಡಿ ಎಲ್‌ಇಡಿ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ ಕ್ರಿಸ್ಟಲ್‌ 4K 43 ಇಂಚು ಅಲ್ಟ್ರಾ ಹೆಚ್‌ಡಿ ಎಲ್‌ಇಡಿ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ ಕ್ರಿಸ್ಟಲ್‌ 4K 43 ಇಂಚಿನ ಅಲ್ಟ್ರಾ ಹೆಚ್‌ಡಿ ಎಲ್‌ಇಡಿ ಸ್ಮಾರ್ಟ್‌ಟಿವಿ ರಿಯಾಯಿತಿ ದರದಲ್ಲಿ ಪ್ರಸ್ತುತ 36,999ರೂ.ಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಉತ್ತಮ ಗುಣಮಟ್ಟದ ದೃಶ್ಯಗಳನ್ನು ವೀಕ್ಷಿಸಲು ಅನುಮತಿ ನೀಡಲಿದೆ. ಇದು 60Hzನ ರಿಫ್ರೆಶ್ ರೇಟ್‌ ಹೊಂದಿದ್ದು, 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಈ ಸ್ಮಾರ್ಟ್‌ಟಿವಿ ಪರ್‌ಕಲರ್‌, Motion Xcelerator ಮತ್ತು ಕ್ರಿಸ್ಟಲ್ ಪ್ರೊಸೆಸರ್ 4K ಟೆಕ್ನಾಲಜಿಯನ್ನು ಒಳಗೊಂಡಿದೆ. ಅಲ್ಲದೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿಗೆ ಕನೆಕ್ಟ್‌ ಮಾಡುವ ಮೂಲಕ ನಿಮ್ಮ ನೆಚ್ಚಿನ ವಿಷಯಗಳನ್ನು ವೀಕ್ಷಿಸಬಹುದಾಗಿದೆ. ಇದು ಟ್ಯಾಪ್ ವ್ಯೂ ಮತ್ತು ಪಿಸಿ ಆನ್ ಟಿವಿ ಫೀಚರ್ಸ್‌ಗಳನ್ನು ಹೊಂದಿದೆ.

ಮಿ ಟಿವಿ 4X 43 ಇಂಚು

ಮಿ ಟಿವಿ 4X 43 ಇಂಚು

ಮಿ ಟಿವಿ 4X ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿದ್ದು, ಪ್ರಸ್ತುತ 29,999ರೂ.ಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಟಿವಿ 60Hz ರಿಫ್ರೆಶ್ ರೇಟ್‌ ಹೊಂದಿರುವ 43-ಇಂಚಿನ 4K ಅಲ್ಟ್ರಾ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಪ್ಯಾಚ್ ವಾಲ್ ಲಾಂಚರ್‌ನೊಂದಿಗೆ Android TV 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಂತಹ ಜನಪ್ರಿಯ OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯು 3 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳು ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಫೆರೇಂಟ್ಸ್‌ ಲಾಕ್‌, ಸ್ಮಾರ್ಟ್ ಆಲರ್ಟ್‌ ನೋಟಿಫಿಕೇಶನ್‌ಗಳು ಮತ್ತು ಚೈಲ್ಡ್‌ ಮೋಡ್‌ ಅನ್ನು ಸಹ ನೀಡಲಿದೆ.

ಒನ್‌ಪ್ಲಸ್‌ Y ಸರಣಿ

ಒನ್‌ಪ್ಲಸ್‌ Y ಸರಣಿ

ಒನ್‌ಪ್ಲಸ್‌ Y ಸರಣಿಯ 43Y1 ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್ ಇದೀಗ ಕೇವಲ 26,999ರೂ.ಗಳಿಗೆ ಲಭ್ಯವಾಗಲಿದೆ. ಇದು 43 ಇಂಚಿನ ಫುಲ್‌ HD ವಂಡರ್ ಗ್ಯಾಮಟ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 88.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದು ಸ್ಪಷ್ಟ, ಎದ್ದುಕಾಣುವ ಮತ್ತು ಶ್ರೀಮಂತ ಬಣ್ಣದ ವಿವರಗಳನ್ನು ಉತ್ಪಾದಿಸಲು ಬ್ರ್ಯಾಂಡ್‌ನಿಂದ ಕ್ಲೈಮ್ ಮಾಡಲಾದ 93% ಬಣ್ಣದ ಹರವು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯು 2 HDMI, Wi-Fi 2.4 GHz ಮತ್ತು ಬ್ಲೂಟೂತ್ 5.0 ಕನೆಕ್ಟಿವಿಟಿಯೊಂದಿಗೆ 2 USB ಪೋರ್ಟ್‌ಗಳನ್ನು ಹೊಂದಿದೆ. RF, AV, Ethernet, ಮತ್ತು Audio Out ನಂತಹ ಪೋರ್ಟ್‌ಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಎರಡು ಸ್ಪೀಕರ್‌ಗಳೊಂದಿಗೆ ಟಿವಿ ಒಟ್ಟು 20W ಧ್ವನಿ ಉತ್ಪಾದನೆಯನ್ನು ಹೊಂದಿದ್ದು, ಡಾಲ್ಬಿ ಆಡಿಯೊವನ್ನು ಬೆಂಬಲಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್‌ TV 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಇಂಟರ್‌ಬಿಲ್ಟ್‌ ಗೂಗಲ್‌ ಅಸಿಸ್ಟೆಂಟ್‌ ಮತ್ತು ಕ್ರೋಮ್‌ಕಾಸ್ಟ್‌ ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ರಿಯಲ್‌ಮಿ 43 ಇಂಚಿನ ಅಲ್ಟ್ರಾ HD 4K ಎಲ್‌ಇಡಿ ಸ್ಮಾರ್ಟ್‌ಟಿವಿ

ರಿಯಲ್‌ಮಿ 43 ಇಂಚಿನ ಅಲ್ಟ್ರಾ HD 4K ಎಲ್‌ಇಡಿ ಸ್ಮಾರ್ಟ್‌ಟಿವಿ

ರಿಯಲ್‌ಮಿ 43 ಇಂಚಿನ ಅಲ್ಟ್ರಾ HD 4K ಎಲ್‌ಇಡಿ ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 29,999.ರೂ.ಗಳಿಗೆ ಲಭ್ಯವಾಗಲಿದೆ. ಇದರಲ್ಲಿ ನೀವು ಸಿನಿಮೀಯ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಟಿವಿ 4K ಯುಎಚ್‌ಡಿ ಮೀಡಿಯಾ ಟೆಕ್‌ ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದಲ್ಲದೆ ನೀವು ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್ ಫೀಚರ್ಸ್‌ ಅನ್ನು ಸಹ ಬಳಸಬಹುದು. ಜೊತೆಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವ ಅನೇಕ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ನೀಡಲಿದೆ.

Most Read Articles
Best Mobiles in India

English summary
Flipkart, the e-commerce giant is currently hosting its Flipkart TV days sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X