ಒನ್‌ಪ್ಲಸ್ 5Tನಲ್ಲಿ ಫುಲ್‌ಸ್ಕ್ರಿನ್‌ ಡಿಸ್‌ಪ್ಲ: ಮತ್ತಷ್ಟು ವಿಶೇಷತೆಗಳೊಂದಿಗೆ

ಸದ್ಯ ಮಾರುಕಟ್ಟೆಯಲ್ಲಿ ಒಪ್ ಪ್ಲಸ್ ಬಿಡುಗಡೆ ಮಾಡಿರುವ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಎರಡು ಅವೃತ್ತಿಯಲ್ಲಿ ಲಭ್ಯವಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ಅನ್ನು ಶೀಘ್ರವೇ ಲಾಂಚ್ ಮಾಡಲ

|

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲಕದ ಸ್ಮಾರ್ಟ್‌ಫೋನ್‌ ಕಂಪನಿಗಳ ಆರ್ಭಟವು ಹೆಚ್ಚಾಗಿದ್ದು, ಇರುವ ಎಲ್ಲಾ ಕಂಪನಿಗಳು ಬಜೆಟ್ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮುಂದಿದ್ದರೇ ಒನ್‌ಪ್ಲಸ್ ಕಂಪನಿ ಮಾತ್ರವೇ ಇದಕ್ಕೆ ವಿರುದ್ಧವಾಗಿ ಟಾಪ್ ಎಂಟ್ ಕಂಪನಿಗಳಿಗೆ ಸ್ಪರ್ಧೆ ನೀಡುವಂತೆ ಸ್ಮಾರ್ಟ್ ಫೋನ್ ಲಾಂಚ್ ಮಾಡುತ್ತಿದೆ.

ಓದಿರಿ: ಬೆಂಗಳೂರಿಗರಿಗೆ ಹೊಸ ಸೇವೆ ಪರಿಚಯಿಸಿದ ಉಬರ್: ಕ್ಯಾಬ್ ಪ್ರಯಾಣ ಇನ್ನು ಆರಾಮ

ಸದ್ಯ ಮಾರುಕಟ್ಟೆಯಲ್ಲಿ ಒಪ್ ಪ್ಲಸ್ ಬಿಡುಗಡೆ ಮಾಡಿರುವ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಎರಡು ಅವೃತ್ತಿಯಲ್ಲಿ ಲಭ್ಯವಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ಅನ್ನು ಶೀಘ್ರವೇ ಲಾಂಚ್ ಮಾಡಲು ಒನ್‌ಪ್ಲಸ್ ತಯಾರಿ ನಡೆಸಿದೆ ಎನ್ನಲಾಗಿದೆ.

ಫುಲ್‌ ಸ್ಕ್ರಿನ್ ಡಿಸೈನ್:

ಫುಲ್‌ ಸ್ಕ್ರಿನ್ ಡಿಸೈನ್:

ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟಿ ಹಾಕಿರುವ ಫುಲ್‌ ಸ್ಕ್ರಿನ್ ಡಿಸೈನ್ ಅನ್ನು ಈ ಫೋನ್ ಹೊಂದಿರಲಿದೆ ಎನ್ನಲಾಗಿದೆ. 18:9 ಅನುಪಾತದ ಡಿಸ್‌ಪ್ಲೇ ಇದಾಗಿದೆ. ಇದು ನೋಡಲು ಮತ್ತು ಬಳಕೆ ಮಾಡಿಕೊಳ್ಳಲು ಉತ್ತಮವಾಗಿರಲಿದೆ.

6 ಇಂಚಿನ ಡಿಸ್‌ಪ್ಲೇ:

6 ಇಂಚಿನ ಡಿಸ್‌ಪ್ಲೇ:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ನಲ್ಲಿ 6 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಇದು ಗೇಮ್ ಆಡಲು ಮತ್ತು ಸಿನಿಮಾ ನೋಡಲು ಉತ್ತಮ ಅನುಭವನ್ನು ನೀಡಲಿದೆ. ಫೊನಿನ ತುಂಬ ಡಿಸ್‌ಪ್ಲೇಯೇ ಇರಲಿದೆ.

ಹೋಮ್ ಬಟನ್ ಇಲ್ಲ:

ಹೋಮ್ ಬಟನ್ ಇಲ್ಲ:

ಈ ಫೋನಿನಲ್ಲಿ ಹೋಮ್ ಬಟನ್ ಇಲ್ಲ ಎನ್ನಲಾಗಿದೆ. ಈ ಹಿಂದಿನ ಫೋನಿನಲ್ಲಿ ಇದ್ದಂತಹ ಹೋಮ್ ಬಟನ್ ಅನ್ನು ತೆಗೆದು ಹಾಕಲಾಗಿದೆ. ಫೋನಿನ ತುಂಬ ಡಿಸ್‌ಪ್ಲೇ ಇರುವುದರಿಂದ ಹೋಮ್‌ ಬಟನ್ ಇಲ್ಲ ಎನ್ನಲಾಗಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ:

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ:

ಇದಲ್ಲದೇ ಇಷ್ಟು ದಿನ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದಲ್ಲಿ ಅಳವಡಿಸುತ್ತಿದ್ದ ಒನ್‌ಪ್ಲಸ್, ಈ ಬಾರಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ 20MP + 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಫೋಟೋಗ್ರಫಿಗಾಗಿ ಹೇಳಿ ಮಾಡಿಸಿದಂತೆ ಇದೆ. ಇದಲ್ಲದೇ ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಸ್ನಾಪ್‌ಡ್ರಾಗನ್ 835 ಪ್ರೋಸೆಸರ್:

ಸ್ನಾಪ್‌ಡ್ರಾಗನ್ 835 ಪ್ರೋಸೆಸರ್:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅಳವಡಿಸಲಾಗಿದೆ. ಇದು ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದಂತೆ, ಹೆಚ್ಚಿನ ಗ್ರಾಫಿಕ್ಸ್ ಆಟಗಳನ್ನು ಆಡಲು ಹೇಳಿ ಮಾಡಿಸಿದಂತಿದೆ.

ಬೆಲೆ:

ಬೆಲೆ:

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಳ್ಳಲಿದೆ. ಬೆಲೆ ರೂ. 40000ದ ಅಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ.

Best Mobiles in India

English summary
OnePlus 5T Full Screen Design. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X