ಭಾರತದಲ್ಲಿ ನೀವು ಖರೀದಿಸಬಹುದಾದ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳು!

|

ಟೆಕ್‌ ವಲಯದಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಇವುಗಳಲ್ಲಿ ನಿಮ್ಮ ಊಹೆಗೂ ಮೀರಿದ ಸ್ಮಾರ್ಟ್‌ಫೋನ್‌ಗಳೆಂದರೆ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳು. ಟೆಕ್‌ ವಲಯದಲ್ಲಿ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳು ವಿಸ್ಮಯ ಅಂತಾನೇ ಕರೆಯಬಹುದು. ಈ ಮಾದರಿಯ ಸ್ಮಾರ್ಟ್‌ಫೋನ್‌ಗಳು ಕೂಡ ಸಾಧ್ಯ ಅನ್ನೊದನ್ನ ಈಗಾಗಲೇ ಹಲವು ಕಂಪೆನಿಗಳು ಯಶಸ್ವಿಯಾಗಿ ನಿರೂಪಿಸಿವೆ. ಅಷ್ಟೇ ಅಲ್ಲ ಟ್ರಿಪಲ್‌ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ ಪರಿಚಯಿಸುವುದಕ್ಕೂ ಮುಂದಾಗಿವೆ. ಇನ್ನು ಭಾರತದಲ್ಲೂ ಕೂಡ ಹಲವು ಕಂಪೆನಿಯ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ.

ಫೋಲ್ಡೇಬಲ್‌

ಹೌದು, ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದ ಸ್ಮಾರ್ಟ್‌ಫೋನ್‌ಗಳು. ಈ ಮಾದರಿಯ ಸ್ಮಾರ್ಟ್‌ಫೋನ್‌ಗಳು ದುಬಾರಿ ಬೆಲೆ ಹೊಂದಿದ್ದರೂ ಸಹ ಜನಪ್ರಿಯತೆಗೆನೂ ಕಡಿಮೆ ಆಗಿಲ್ಲ. ಇನ್ನು ಸ್ಯಾಮ್‌ಸಂಗ್, ಹುವಾವೇ, ಮೊಟೊರೊಲಾ ಮತ್ತು ಮೈಕ್ರೋಸಾಫ್ಟ್ ಇತ್ತೀಚಿನ ದಿನಗಳಲ್ಲಿ ಮಡಿಸಬಹುದಾದ ಫೋನ್‌ಗಳನ್ನು ಬಿಡುಗಡೆ ಮಾಡಿದ ಕೆಲವು ಕಂಪನಿಗಳು. ಈ ಪೈಕಿ ಸ್ಯಾಮ್‌ಸಂಗ್ ಮತ್ತು ಮೊಟೊರೊಲಾ ತಮ್ಮ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿವೆ. ಹಾಗಾದ್ರೆ ಭಾರತದಲ್ಲಿ ನೀವು ಖರೀದಿಸಬಹುದಾದ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ ಕ್ಲಾಮ್‌ಶೆಲ್ ವಿನ್ಯಾಸದಲ್ಲಿ ಬರುತ್ತದೆ. ಇದು ತೆರೆದಾಗ 6.7 ಇಂಚಿನ ಪರದೆಯ ಗಾತ್ರವಾಗಿರುತ್ತದೆ. ಇದು 2636x1080p ರೆಸಲ್ಯೂಶನ್ ಹೊಂದಿರುವ ಫುಲ್‌ ಹೆಚ್‌ಡಿ + ಆಮೋಲೆಡ್‌ ಡಿಸ್‌ಪ್ಲೇ ಆಗಿದೆ. ಇನ್ನು ಮುಖ್ಯ ಪರದೆಯ ಹೊರತಾಗಿ, ಇದು ಹೊರಭಾಗದಲ್ಲಿ ಸಣ್ಣ 1.05-ಇಂಚಿನ OLED ಟಚ್ ಡಿಸ್ಪ್ಲೇಯನ್ನು ಸಹ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 ಪ್ಲಸ್ SoC ಪ್ರೊಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ 10 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಹೊರಗಿನ ಸ್ಕ್ರೀನ್‌ನಲ್ಲಿ, ಸಣ್ಣ ಪರದೆಯ ಪಕ್ಕದಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾಗಳ ಡ್ಯುಯಲ್ ಸೆನ್ಸಾರ್ ಸೆಟಪ್ ಅನ್ನು ಸಹ ಒಳಗೊಂಡಿದೆ. ಇದು 3,300mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 83,900 ರೂ ಆಗಿದೆ.

ಮೋಟೋ ರೇಜರ್ (2019)

ಮೋಟೋ ರೇಜರ್ (2019)

ಮೋಟೋ ರೇಜರ್ (2019) 2142x876 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.2-ಇಂಚಿನ ಮಡಿಸಬಹುದಾದ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 21: 9 ರಚನೆಯ ಅನುಪಾತದೊಂದಿಗೆ ಸಿನೆಮಾವಿಷನ್ ಪ್ರದರ್ಶನವನ್ನು ಹೊಂದಿದೆ. ಅಲ್ಲದೆ ಕ್ವಿಕ್ ವ್ಯೂ ಡಿಸ್‌ಪ್ಲೇ 4: 3 ಆಕಾರ ಅನುಪಾತದೊಂದಿಗೆ 2.7-ಇಂಚಿನ ಗೋಲ್ಡ್ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 710 ಆಕ್ಟಾ-ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಇದು 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದು 1.22 ಎಂ ಪಿಕ್ಸೆಲ್ ಗಾತ್ರ, ಇಐಎಸ್ ಮತ್ತು ಡ್ಯುಯಲ್ ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಡ್ಯುಯೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 2510mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ಟರ್ಬೊಪವರ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಬೆಲೆ 1,17,999 ರೂ,ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್‌ ಸ್ಮಾರ್ಟ್‌ಫೋನ್‌ ಮೇನ್‌ ಡಿಸ್‌ಪ್ಲೇ 7.3-ಇಂಚಿನ ಕ್ಯೂಎಕ್ಸ್‌ಜಿಎ + ಡೈನಾಮಿಕ್ ಅಮೋಲೆಡ್ ಆಗಿದೆ. ಇದು 4.2: 3 ರ ಅನುಪಾತವನ್ನು ಹೊಂದಿದೆ. ಇನ್ನು ಮಡಿಸಿದಾಗ, ಕವರ್ ಪ್ರದರ್ಶನವು 4.6-ಇಂಚಿನ ಎಚ್‌ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇ ಆಗಿದ್ದು 21: 9 ರ ಅನುಪಾತವನ್ನು ಹೊಂದಿದೆ. ಇದು 7nm 64-ಬಿಟ್ ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 10 ಎಂಪಿ ಎಫ್ 2.2 ನ ಕವರ್ ಕ್ಯಾಮೆರಾದೊಂದಿಗೆ ಬರುತ್ತದೆ, ಇದನ್ನು ಸೆಲ್ಫಿ ತೆಗೆದುಕೊಳ್ಳಲು ಬಳಸಬಹುದು. ಹಿಂಭಾಗದಲ್ಲಿ 16MP + 12MP + 12MP ಸಾಮರ್ಥ್ಯದ ಟ್ರಿಪಲ್-ಲೆನ್ಸ್ ಕ್ಯಾಮೆರಾ ಸೆಟಪ್ ನೀಡುತ್ತದೆ. ಜೊತೆಗೆ 4,380mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದರ ಬೆಲೆ 1,18,490 ರೂ ಬೆಲೆ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2 ಸ್ಮಾರ್ಟ್‌ಫೋನ್‌ 2208 x 1768 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 7.6-ಇಂಚಿನ QXGA+ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು ಡೈನಾಮಿಕ್ ಅಮೋಲೆಡ್ 2x ಡಿಸ್‌ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. ಇನ್ನು ಇದರಲ್ಲಿರುವ ಎರಡನೇ ಡಿಸ್‌ಪ್ಲೇ 2260 x 816 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಹೊಂದಿದ್ದು, ಇದು 6.2-ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಆಗಿದೆ. ಅಲ್ಲದೆ ಇದು ಸೂಪರ್ ಅಮೋಲೆಡ್ ಪ್ಯಾನೆಲ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಪ್ಲಸ್ ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 1,34,999ರೂ,ಆಗಿದೆ.

ಮೊಟೊರೊಲಾ ರೇಜರ್ 5G

ಮೊಟೊರೊಲಾ ರೇಜರ್ 5G

ಮೊಟೊರೊಲಾ ರೇಜರ್‌ 5G ಫೋಲ್ಡಬಲ್‌ ಫೋನ್‌ 876x2,142 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಇದು 21: 9ರಚನೆಯ ಅನುಪಾತ ಹೊಂದಿರುವ ಮಡಿಸಬಹುದಾದ 6.2-ಇಂಚಿನ ಪ್ಲಾಸ್ಟಿಕ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಫ್ಲಿಪ್ ಪ್ಯಾನೆಲ್‌ನ ಮೇಲ್ಭಾಗದಲ್ಲಿ 2.7-ಇಂಚಿನ ಸೆಕೆಂಡರಿ ಡಿಸ್‌ಪ್ಲೇ ಹೊಂದಿದೆ. ಇದು 4: 3 ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 765G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಅನ್ನು ಒಳಗೊಂಡಿದೆ. ಜೊತೆಗೆ ಇದರಲ್ಲಿ ಲೇಸರ್ ಆಟೋಫೋಕಸ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಅನ್ನು ಮಡಿಸಿದಾಗ ಸೆಕೆಂಡರಿ ಕ್ಯಾಮೆರಾ ಸೆಲ್ಫಿ ಕ್ಯಾಮೆರಾದಂತೆ ದ್ವಿಗುಣಗೊಳ್ಳುತ್ತದೆ. ಇದು 20 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದರ ಬೆಲೆ 89,999 ರೂ,ಆಗಿದೆ.

Best Mobiles in India

English summary
Here we list the foldable smartphones you can buy right now in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X