ನಿಮ್ಮ ಸ್ಮಾರ್ಟ್‌ವಾಚ್‌ ಸುರಕ್ಷಿತವಾಗಿರಬೇಕೆ?... ಹಾಗಿದ್ರೆ ಈ ಕೆಲಸ ಮಾಡಿ

|

ಈಗಂತೂ ಬಹುಪಾಲು ಮಂದಿ ಸ್ಮಾರ್ಟ್‌ವಾಚ್‌ ಬಳಕೆ ಮಾಡುತ್ತಾರೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ಗಳು ಒಂದಕ್ಕೊಂದು ಪೈಪೋಟಿಯಲ್ಲಿ ಭಿನ್ನ ವಿಭಿನ್ನ ಫೀಚರ್ಸ್‌ಗಳ ಮೂಲಕ ಗ್ರಾಹರನ್ನು ಸೆಳೆಯುತ್ತಿವೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ಗಳಿಂದ ನಮ್ಮ ದೈನಂದಿನ ಚಟುವಟಿಕೆ ಹಾಗೂ ಆರೋಗ್ಯ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗಿದ್ದ ಮೇಲೆ ನಮಗೆ ಇಷ್ಟೆಲ್ಲಾ ಸೇವೆ ಮಾಡುವ ಸ್ಮಾರ್ಟ್‌ವಾಚ್‌ಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ಸಹ ನಮ್ಮ ಪ್ರಮುಖ ಕೆಲಸವಾಗಬೇಕಿದೆ.

ಸ್ಮಾರ್ಟ್‌ವಾಚ್‌

ಹೌದು, ಸ್ಮಾರ್ಟ್‌ವಾಚ್‌ಗಳು ಸ್ಮಾರ್ಟ್‌ಫೋನ್‌ಗಳ ಹಾಗೆಯೇ ಕಾರ್ಯನಿರ್ವಹಿಸುತ್ತವೆ. ನೀವು ಹೊಸದಾಗಿ ಸ್ಮಾರ್ಟ್‌ಫೋನ್‌ ತೆಗೆದುಕೊಂಡರೆ ಹೇಗೆಲ್ಲಾ ಸುರಕ್ಷತೆ ವಹಿಸುವಿರೋ ಅದೇ ಶೈಲಿಯಲ್ಲಿ ಸ್ಮಾರ್ಟ್‌ವಾಚ್‌ಗಳನ್ನೂ ನೋಡಿಕೊಳ್ಳಬೇಕಿದೆ. ಅಂತೆಯೇ ಸ್ಮಾರ್ಟ್ ವಾಚ್ ಬಳಕೆದಾರರು ತಮ್ಮ ವಾಚ್‌ ಅನ್ನು ಸುರಕ್ಷಿತವಾಗಿರಿಸಲು ಅನುಸರಿಸಬಹುದಾದ 5 ಸಲಹೆಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ ಓದಿರಿ.

ಗಟ್ಟಿಯಾದ ವಸ್ತುಗಳಿಂದ ದೂರ ಇರಿಸಿ

ಗಟ್ಟಿಯಾದ ವಸ್ತುಗಳಿಂದ ದೂರ ಇರಿಸಿ

ನಿಮ್ಮ ಬಳಿ ಸ್ಮಾರ್ಟ್‌ವಾಚ್‌ ಇದ್ದರೆ ಈ ವಿಷಯಕ್ಕೆ ಮೊದಲು ಗಮನಕೊಡಿ. ಯಾಕೆಂದರೆ ನಿಮ್ಮ ಸ್ಮಾರ್ಟ್‌ವಾಚ್‌ಗಳ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ಗಳಂತೆ ಹೆಚ್ಚು ಒರಟಾಗಿರುವುದಿಲ್ಲ. ಆದ್ದರಿಂದ ಗೀರುಗಳು ಸಂಭವಿದಂತೆ ತಡೆಯಬೇಕಿದೆ, ಜೊತೆಗೆ ನೆಲಕ್ಕೆ ಬೀಳಿಸುವುದರಿಂದಲೂ ಇವು ಹಾಳಾಗುತ್ತವೆ. ಇದರೊಂದಿಗೆ ವಾಚ್‌ಗಳನ್ನು ಬಳಕೆ ಮಾಡದೆ ಇದ್ದಾಗ ಎಲ್ಲಾದರೂ ಇರಿಸಬೇಕು ಎಂದರೆ ಯಾವುದೇ ಕಾರಣಕ್ಕೂ ತಲೆಕೆಳಗಾಗಿ ಇಡಬೇಡಿ.

ಟೆಂಪರ್ಡ್ ಗ್ಲಾಸ್ ಹಾಕಿಸಿ

ಟೆಂಪರ್ಡ್ ಗ್ಲಾಸ್ ಹಾಕಿಸಿ

ಮೊದಲೇ ಹೇಳಿದಂತೆ ಸ್ಮಾರ್ಟ್‌ಫೋನ್‌ಗಳಂತೆ, ಸ್ಮಾರ್ಟ್‌ವಾಚ್‌ಗಳು ಕಾರ್ಯನಿರ್ವಹಿಸುತ್ತವೆ. ಇದಿಷ್ಟೇ ಅಲ್ಲ ಇವುಗಳ ಡಿಸ್‌ಪ್ಲೇ ಗೂ ಸಹ ಟೆಂಪರ್ಡ್ ಗ್ಲಾಸ್ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇದರಿಂದ ವಾಚ್‌ ನ ಡಿಸ್‌ಪ್ಲೇಗೆ ಆಗುವ ಹಾನಿಯನ್ನು ತಪ್ಪಿಸಬಹುದು.

ಬಳೆಗಳ ಜೊತೆ ಧರಿಸಬೇಡಿ

ಬಳೆಗಳ ಜೊತೆ ಧರಿಸಬೇಡಿ

ನೀವು ಸ್ಮಾರ್ಟ್‌ವಾಚ್‌ ಜೊತೆ ಬಳೆಗಳನ್ನೂ ಧರಿಸುವುದಿದ್ದರೆ ಇಂದಿನಿಂದ ಆ ತಪ್ಪನ್ನು ಮಾಡಬೇಡಿ. ಬಳೆಯಷ್ಟೇ ಅಲ್ಲದೆ, ಪುರುಷರು ಕಡಗದಂತಹ ಯಾವುದೇ ವಸ್ತುಗಳನ್ನು ವಾಚ್ ಧರಿಸಿರುವ ಕೈಗೆ ಹಾಕಿಕೊಳ್ಳಬೇಡಿ. ಯಾಕೆಂದರೆ ಇವು ನಿಮ್ಮ ಸ್ಮಾರ್ಟ್‌ವಾಚ್‌ಗಳ ಪಟ್ಟಿಯೊಂದಿಗೆ ಘರ್ಷಣೆಗೆ ಇಳಿಯುತ್ತವೆ. ಆಗ ವಾಚ್‌ನಲ್ಲಿ ಗೀರುಗಳು ಸಂಭವಿಸುತ್ತವೆ. ಅದಷ್ಟೇ ಅಲ್ಲದೆ, ಏನಾದರೂ ಇಕ್ಕಟ್ಟಿನ ಪ್ರದೇಶದಲ್ಲಿ ಹೋಗುವಾದ ವಾಚ್‌ನ ಬೆಲ್ಟ್‌ ತುಂಡಾಗುವ ಸಾಧ್ಯತೆ ಸಹ ಹೆಚ್ಚಿಗೆ ಇರಲಿದೆ

ಸ್ವಚ್ಛವಾಗಿಟ್ಟುಕೊಳ್ಳಿ

ಸ್ವಚ್ಛವಾಗಿಟ್ಟುಕೊಳ್ಳಿ

ಸ್ಮಾರ್ಟ್‌ವಾಚ್ ನಲ್ಲಿ ನೀವು ಮೊದಲು ಮಾಡಬೇಕಾದ ಕೆಲಸ ಎಂದರೆ ಸ್ವಚ್ಛತೆ. ಅಂದರೆ ವಾಚ್‌ನಲ್ಲಿ ಕೊಳಕು, ಧೂಳು ಮತ್ತು ಇತರ ಕಣಗಳು ನಿಮ್ಮ ಡಿಸ್‌ಪ್ಲೇ ಸುತ್ತಲೂ ಇರುವ ಸಣ್ಣ ಜಾಗಗಳಲ್ಲಿ ಸಿಲುಕಿರುತ್ತವೆ. ಹಾಗೆಯೇ ಬೆಲ್ಟ್‌ ಸಹ ಬೆವರು ಹಾಗೂ ಇನ್ನಿತರೆ ಕಾರಣಕ್ಕೆ ಕೊಳೆಯಾಗುತ್ತದೆ. ಹೀಗಾಗಿ ನೀವು ಆಗಾಗ್ಗೆ ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡಿ. ಇಲ್ಲದಿದ್ದರೆ ಕೆಲವು ಸೋಂಕುಗಳು ನಿಮ್ಮನ್ನು ಆವರಿಸುತ್ತವೆ.

ವಾಚ್‌ನ ಬ್ಯಾಟರಿ ಕಡೆ ಗಮನಹರಿಸಿ

ವಾಚ್‌ನ ಬ್ಯಾಟರಿ ಕಡೆ ಗಮನಹರಿಸಿ

ಸ್ಮಾರ್ಟ್ ವಾಚ್ ಏಕಕಾಲದಲ್ಲಿ ಅನೇಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಾರಣಕ್ಕೆ ಯಾವಾಗಲೂ ಬ್ಯಾಟರಿ ಸಾಮರ್ಥ್ಯ ಎಷ್ಟಿಗೆ ಎಂಬುದರ ಕಡೆ ಗಮನಹರಿಸಬೇಕಿದೆ. ನೀವೇನಾದರೂ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡದಿದ್ದರೆ, ಅದರ ಬಳಕೆಯ ಸಮಯ ಕಡಿಮೆಯಾಗುತ್ತದೆ. ಹೀಗಾಗಿ ಕೆಲವು ಡೇಟಾಗಳು ಮಿಸ್‌ ಆಗಬಹುದು. ಅದಕ್ಕಾಗಿ ಈ ಕೆಳಗೆ ನೀಡಲಾದ ಮಾರ್ಗ ಅನುಸರಿಸಿ.

ಆಲ್‌ವೇಸ್‌ ಆನ್‌

'ಆಲ್‌ವೇಸ್‌ ಆನ್‌'ಮೋಡ್ ಅನ್ನು ಆಫ್ ಮಾಡಿ ಹಾಗೂ ಡಿಸ್‌ಪ್ಲೇ ಟೈಂಔಟ್‌ ಸಮಯವನ್ನು ಕಡಿಮೆ ಮಾಡಿ. ಹಾಗೆಯೇ ಯಾವಾಗ ಬಳಕೆ ಮಾಡುವುದಿಲ್ಲವೋ ಆಗ ಜಿಪಿಎಸ್‌ ಹಾಗೂ ಮ್ಯಾಪ್‌ ಸೇವೆಗಳನ್ನು ಆಫ್‌ ಮಾಡಿ. ಇದರೊಂದಿಗೆ ಬ್ಯಾಗ್‌ಗ್ರೌಂಡ್‌ನಲ್ಲಿ ರನ್‌ ಆಗುವ ಆಪ್‌ಗಳ ಕಡೆ ಗಮನಹರಿಸಿ, ಅವುಗಳನ್ನು ಸಹ ಕ್ಲೋಸ್‌ ಮಾಡಿ. ಹಾಗೆಯೇ ಡಿಸ್‌ಪ್ಲೇ ಬ್ರೈಟ್‌ನೆಸ್‌ ಅನ್ನು ಕಡಿಮೆ ಮಾಡಿ. ಈ ಎಲ್ಲಾ ಕೆಲಸಗಳನ್ನು ನಿಯಮಿತವಾಗಿ ಮಾಡಿದರೆ ಖಂಡಿತಾ ನಿಮ್ಮ ಬ್ಯಾಟರಿ ಬ್ಯಾಕ್‌ಅಪ್‌ ಹೆಚ್ಚಿಗೆ ಆಗಲಿದೆ.

ತೇವಾಂಶದಿಂದ ದೂರವಿಡಿ

ತೇವಾಂಶದಿಂದ ದೂರವಿಡಿ

ಸಾಮಾನ್ಯವಾಗಿ ವಾಚ್‌ ಮಾರುವಾಗ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ IP ಪ್ರಮಾಣೀಕರಣದೊಂದಿಗೆ ವಾಚ್‌ಗಳನ್ನು ನೀರು ಹಾಗೂ ಧೂಳಿನಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳುತ್ತಾರೆ. ನೀವು ಸಹ ಹಾಗೆ ಮಾಡಲು ಹೋದರೆ ನಿಮ್ಮ ವಾಚ್‌ ಹಾಳಾಗುವುದಂತೂ ಸತ್ಯ. ಕಂಪೆನಿಗಳು ಆ ರೀತಿ ಹೇಳಿದ ಮಾತ್ರಕ್ಕೆ ನಿಮ್ಮ ವಾಚ್‌ಗಳನ್ನು ನೀರಿನಲ್ಲಿ ಮುಳುಗಿಸಿ ಇಡುವುದಲ್ಲ ಎಂಬುದು ನಿಮಗೆ ನೆನಪಿರಲಿ. ಪ್ರಮುಖ ವಿಷಯ ಎಂದರೆ ಯಾವುದೇ ಸ್ಮಾರ್ಟ್‌ವಾಚ್‌ ನೀರಿನಿಂದ ಹಾಳಾದರೆ ಅದಕ್ಕೆ ಕಂಪೆನಿ ಜವಾಬ್ದಾರಿಯಾಗುವುದಿಲ್ಲ.

Best Mobiles in India

English summary
Follow these tips to keep your smartwatch safe.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X