ಈ ಶಿಯೋಮಿ ಫೋನ್‌ ಗ್ರಾಹಕರಿಗೆ ಸಿಗುತ್ತೆ ಭರ್ಜರಿ ಕೊಡುಗೆ!

|

ಶಿಯೋಮಿ ಇಂಡಿಯಾ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ತಿಳಿಸಿದೆ. ಶಿಯೋಮಿ ಮತ್ತು ರೆಡ್ಮಿ ಆಯ್ದ ಕೆಲವು ಫೋನ್‌ಗಳಲ್ಲಿ ಮೂರು ತಿಂಗಳವರೆಗೆ ಉಚಿತ ಯೂಟ್ಯೂಬ್‌ ಪ್ರೀಮಿಯಂ (YouTube Premium) ಚಂದಾದಾರಿಕೆಯನ್ನು ನೀಡಲಿದೆ. ಈ ಬಗ್ಗೆ ಶಿಯೋಮಿ ದೇಶದಲ್ಲಿ ಯೂಟ್ಯೂಬ್‌ ಜೊತೆಗೆ ಪಾಲುದಾರಿಕೆ ಹೊಂದಿದೆ. ಶಿಯೋಮಿ ಮತ್ತು ರೆಡ್ಮಿ ಫೋನ್‌ ಖರೀದಿಸುವ ಗ್ರಾಹಕರಿಗೆ ಈ ಪ್ರಯೋಜನ ಲಭ್ಯವಾಗಲಿದೆ.

ಹೌದು, ಶಿಯೋಮಿ ಸಂಸ್ಥೆಯು ತನ್ನ ಫೋನ್‌ ಖರೀದಿಸುವ ಗ್ರಾಹಕರಿಗೆ ಮೂರು ತಿಂಗಳವರೆಗೆ ಉಚಿತ ಯೂಟ್ಯೂಬ್‌ ಪ್ರೀಮಿಯಂ (YouTube Premium) ಚಂದಾದಾರಿಕೆಯನ್ನು ನೀಡುವುದಾಗಿದೆ ತಿಳಿಸಿದೆ. ಈ ಬಗ್ಗೆ ಸಂಸ್ಥೆಯು ಟ್ವಿಟರ್‌ನಲ್ಲಿ ದೃಢಪಡಿಸಿದೆ. ಇನ್ನು ಯೂಟ್ಯೂಬ್‌ ಪ್ರೀಮಿಯಂ ಒಂದು ತಿಂಗಳ ಚಂದಾದಾರಿಕೆಗೆ ಶುಲ್ಕ 129 ರೂ ಆಗಿದೆ. ಹಾಗೆಯೇ ಮೂರು ತಿಂಗಳ ಶುಲ್ಕ 387 ರೂ. ಆಗಿದೆ. ಆದರೆ ಶಿಯೋಮಿ ಫೋನ್ ಖರೀದಿಸುವ ಎಲ್ಲಾ ಅರ್ಹ ಗ್ರಾಹಕರು ಶೂನ್ಯ ವೆಚ್ಚದಲ್ಲಿ ಯೂಟ್ಯೂಬ್‌ ಪ್ರೀಮಿಯಂ ಅನ್ನು ಪಡೆಯುತ್ತಾರೆ. ಹಾಗಾದರೇ ಉಚಿತ ಯೂಟ್ಯೂಬ್ ಪ್ರೀಮಿಯಂಗೆ ಅರ್ಹವಾದ ಫೋನ್‌ಗಳ ಲಿಸ್ಟ್‌ ಮುಂದೆ ತಿಳಿಯೋಣ ಬನ್ನಿರಿ.

ಯೂಟ್ಯೂಬ್ ಪ್ರೀಮಿಯಂ ಕೊಡುಗೆ
ಈ ಹಿಂದೆ ಯೂಟ್ಯೂಬ್ ಪ್ರೀಮಿಯಂ, ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ, ಯೂಟ್ಯೂಬ್ ರೆಡ್ ಅಥವಾ ಗೂಗಲ್ ಪ್ಲೇ ಮ್ಯೂಸಿಕ್‌ನ ಉಚಿತ ಪ್ರಯೋಗವನ್ನು ಈಗಾಗಲೇ ಪಡೆದಿರುವ ಗ್ರಾಹಕರು ಶಿಯೋಮಿ ಆಫರ್‌ಗೆ ಅರ್ಹರಾಗಿರುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಅಲ್ಲದೆ, ಅರ್ಹ ಫೋನ್‌ಗಳನ್ನು ಫೆಬ್ರವರಿ 1, 2022 ರಂದು ಅಥವಾ ನಂತರ ಸಕ್ರಿಯಗೊಳಿಸಿರಬೇಕು. ಅರ್ಹ ಗ್ರಾಹಕರು ಅರ್ಹ ಸಾಧನಗಳಲ್ಲಿ ಯೂಟ್ಯೂಬ್ ಅಪ್ಲಿಕೇಶನ್‌ನಲ್ಲಿ ಜೂನ್ 6 ಮತ್ತು 28 ಫೆಬ್ರವರಿ 2023 ರ ನಡುವೆ ರಾತ್ರಿ 11:59 ರೊಳಗೆ ಆಫರ್ ಅನ್ನು ರಿಡೀಮ್ ಮಾಡಬಹುದು. ಒಮ್ಮೆ ಕೊಡುಗೆ ಮುಗಿದ ಬಳಿಕ, ಬಳಕೆದಾರರಿಗೆ ಮತ್ತೆ ಯೂಟ್ಯೂಬ್‌ ಪ್ರೀಮಿಯಂ ಚಂದಾದಾರಿಕೆ ಮುಂದುವರಿಸಲು 129ರೂ. ಶುಲ್ಕ ವಿಧಿಸಲಾಗುತ್ತದೆ.

ಈ ಶಿಯೋಮಿ ಫೋನ್‌ ಗ್ರಾಹಕರಿಗೆ ಸಿಗುತ್ತೆ ಭರ್ಜರಿ ಕೊಡುಗೆ!

ಉಚಿತ ಯೂಟ್ಯೂಬ್ ಪ್ರೀಮಿಯಂಗೆ ಅರ್ಹವಾದ ಫೋನ್‌ಗಳ ಲಿಸ್ಟ್‌:
* ಶಿಯೋಮಿ 12 ಪ್ರೊ
* ಶಿಯೋಮಿ 11i
* ಶಿಯೋಮಿ 11i ಹೈಪರ್ಚಾರ್ಜ್
* ಶಿಯೋಮಿ 11T ಪ್ರೊ
* ಶಿಯೋಮಿ ಪ್ಯಾಡ್ 5
* ರೆಡ್ಮಿ ನೋಟ್ 11 ಪ್ರೊ+
* ರೆಡ್ಮಿ ನೋಟ್ 11 ಪ್ರೊ
* ರೆಡ್ಮಿ ನೋಟ್ 11
* ರೆಡ್ಮಿ ನೋಟ್ 11T
* ರೆಡ್ಮಿ ನೋಟ್ 11S

ಕೊಡುಗೆಯನ್ನು ಸಕ್ರಿಯಗೊಳಿಸುವುದು ಹೇಗೆ
ಅರ್ಹವಾದ ಶಿಯೋಮಿ ಅಥವಾ ರೆಡ್ಮಿ ಫೋನ್ ಅನ್ನು ಖರೀದಿಸಿದ ನಂತರ, ಗ್ರಾಹಕರು ಕೇವಲ ಯೂಟ್ಯೂಬ್ ಅಪ್ಲಿಕೇಶನ್ ಅನ್ನು ತೆರೆಯಬೇಕು ಮತ್ತು ಕೊಡುಗೆಯನ್ನು ಪಡೆಯಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಬೇಕು.

Best Mobiles in India

English summary
Free YouTube Premium subscription for select Xiaomi, Redmi users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X