ಫ್ಯೂಜಿಫಿಲ್ಮ್‌ನಿಂದ ಎರಡು ಹೊಸ ಲೆನ್ಸ್‌ ಬಿಡುಗಡೆ! ವಿಶೇಷತೆ ಏನು?

|

ಕ್ಯಾಮೆರಾ ಮಾರುಕಟ್ಟೆಯಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ವೈವಿಧ್ಯಮಯ ಹಾಗೂ ಆಕರ್ಷಕ ಕ್ಯಾಮೆರಾಗಳ ಮೂಲಕ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಎರಡು ಹೊಸ ಕ್ಯಾಮೆರಾ ಲೆನ್ಸ್‌ಗಳನ್ನು ಪರಿಚಯಿಸಿದೆ. ಇವುಗಳನ್ನು FUJINON XF56mm F1.2 R WR ಮತ್ತು XF30mmF2.8 R LM WR ಮ್ಯಾಕ್ರೋ ಎಂದು ಹೆಸರಿಸಲಾಗಿದೆ.

ಫ್ಯೂಜಿಫಿಲ್ಮ್‌

ಹೌದು, ಫ್ಯೂಜಿಫಿಲ್ಮ್‌ ಕಂಪೆನಿ ಭಾರತದಲ್ಲಿ ಹೊಸದಾಗಿ ಎರಡು ಹೊಸ ಲೆನ್ಸ್‌ಗಳನ್ನಯ ಪರಿಚಯಿಸಿದೆ. ಈ ಲೆನ್ಸ್‌ಗಳನ್ನು ಮಿರರ್‌ಲೆಸ್ ಕ್ಯಾಮೆರಾಗಳಿಗಾಗಿ ಪರಿಚಯಿಸಲಾಗಿದೆ. ಇದಲ್ಲದೆ ಹೊಸ ಲೆನ್ಸ್‌ಗಳು ಟೇಬಲ್-ಟಾಪ್ ಫೋಟೋಗ್ರಫಿಯನ್ನು ಸುಲಭಗೊಳಿಸಲಿವೆ. ಅಲ್ಲದೆ ಸ್ಟ್ರೀಟ್‌ ಫೋಟೋಗ್ರಫಿ ಸೇರಿದಂತೆ ವಿವಿಧ ರೀತಿಯ ಶೂಟಿಂಗ್‌ ಸಂದರ್ಭಗಳನ್ನು ವಶೇಷವಾಗಿ ನಿರ್ವಹಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದ್ರೆ ಫ್ಯೂಜಿಫಿಲ್ಮ್‌ ಪರಿಚಯಿಸಿರುವ ಹೊಸ ಲೆನ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

XF56mm F1.2 R WR ವಿಶೇಷತೆ ಏನು?

XF56mm F1.2 R WR ವಿಶೇಷತೆ ಏನು?

XF56mm F1.2 R WR ಲೆನ್ಸ್‌ 56mm ನ ಮಧ್ಯ-ಟೆಲಿಫೋಟೋ ಫೋಕಲ್ ಲೆಂತ್‌ ಅನ್ನು ಹೊಂದಿರುವ ಸ್ಪೀಡ್‌ ಪ್ರೈಮ್ ಲೆನ್ಸ್ ಆಗಿದೆ. ಈ ಲೆನ್ಸ್ ಕನಿಷ್ಠ 50 ಸೆಂ.ಮೀ ಫೋಕಸಿಂಗ್‌ ಡಿಸ್ಟೇನ್ಸ್‌ ನಲ್ಲಿ ಅಪ್ಡೇಟ್‌ ಅನ್ನು ಮಾಡಲಾಗಿದೆ. ಚಿತ್ರ-ಪರಿಹರಿಸುವ ಕಾರ್ಯಕ್ಷಮತೆ ಮತ್ತು ಔಟ್-ಆಫ್-ಫೋಕಸ್ ಹಿನ್ನೆಲೆಯ ರೆಂಡರಿಂಗ್ ಅನ್ನು ಕೂಡ ಅಪ್ಡೇಟ್‌ ಮಾಡಲಾಗಿದೆ. ಜೊತೆಗೆ ಟೇಬಲ್-ಟಾಪ್ ಫೋಟೋಗ್ರಫಿಯನ್ನು ಸುಲಭಗೊಳಿಸಲು ಕನಿಷ್ಠ ಫೋಕಸಿಂಗ್ ದೂರವನ್ನು ಸುಧಾರಿಸಿದೆ.

XF30mmF2.8 R LM WR ಮ್ಯಾಕ್ರೋ ವಿಶೇಷತೆ ಏನು?

XF30mmF2.8 R LM WR ಮ್ಯಾಕ್ರೋ ವಿಶೇಷತೆ ಏನು?

XF30mmF2.8 R LM WR ಮ್ಯಾಕ್ರೋ ಲೆನ್ಸ್‌ 30mm ಫೋಕಲ್ ಲೆಂತ್ ಹೊಂದಿರುವ ಸ್ಟ್ಯಾಂಡರ್ಡ್ ಪ್ರೈಮ್ ಲೆನ್ಸ್ ಆಗಿದೆ. ಇದು ಸಾಂಪ್ರದಾಯಿಕ ಸ್ಟ್ಯಾಂಡರ್ಡ್ ಲೆನ್ಸ್‌ಗಳಿಗೆ ಹೋಲಿಸಿದರೆ, 3.9 ಇಂಚುಗಳಷ್ಟು ಗಣನೀಯವಾಗಿ-ಕಡಿಮೆಯಾದ ಕನಿಷ್ಠ ಕೆಲಸದ ಅಂತರವನ್ನು ಹೊಂದಿದೆ. ಅಲ್ಲದೆ ಹೆಚ್ಚು-ಸುಧಾರಿತ ಕ್ಲೋಸ್-ಅಪ್ ಕಾರ್ಯಕ್ಷಮತೆಯನ್ನು ಹೊಂದಿದೆ. ಇದರಿಂದ 1:1 ವರ್ಧಕ ಅನುಪಾತದಲ್ಲಿ ಮ್ಯಾಕ್ರೋ ಫೋಟೋಗ್ರಫಿ ಸಾಮರ್ಥ್ಯವನ್ನು ನೀಡಲಾಗಿದೆ.

ಮ್ಯಾಕ್ರೋ

ಇನ್ನು ಡೈನಾಮಿಕ್ ಟ್ರೂ 1:1 ಮ್ಯಾಕ್ರೋ ಫೋಟೋಗ್ರಫಿ ಶೂಟ್ ಮಾಡುವ ಸಾಮರ್ಥ್ಯ ಎಂದರೆ ಬಳಕೆದಾರರು ಸೀಮಿತ ಜಾಗದಲ್ಲಿ ತಮ್ಮ ಮುಂದೆ ಇರುವ ವಿಷಯಕ್ಕೆ ಹತ್ತಿರ ಮತ್ತು ವೈಯಕ್ತಿಕವಾಗಿ ಹೋಗುವ ಟೇಬಲ್‌ಟಾಪ್ ಫೋಟೋಗ್ರಫಿಯನ್ನು ಆನಂದಿಸಬಹುದಾಗಿದೆ. ಜೊತೆಗೆ ಪೋರ್ಟ್ರೇಚರ್ ಮತ್ತು ಸ್ನ್ಯಾಪ್‌ಶಾಟ್‌ಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ವರ್ಗಗಳನ್ನು ಕೂಡ ಕಾಣಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫ್ಯೂಜಿಫಿಲ್ಮ್ XF56mmF1.2 R WR ಲೆನ್ಸ್‌ ಭಾರತದಲ್ಲಿ 1,04,999ರೂ. ಬೆಲೆಯಲ್ಲಿ ಬರಲಿದೆ. ಇದರ XF30mmF2.8 R ಮ್ಯಾಕ್ರೋ ಬೆಲೆ 61,999ರೂ.ಆಗಿದೆ. ಈ ಎರಡೂ ಲೆನ್ಸ್‌ಗಳು ಫ್ಯೂಜಿಫಿಲ್ಮ್-ಅಧಿಕೃತ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ.

ಫ್ಯೂಜಿಫಿಲ್ಮ್‌

ಇದಲ್ಲದೆ ಫ್ಯೂಜಿಫಿಲ್ಮ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಫ್ಯೂಜಿಫಿಲ್ಮ್‌ X-H2 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ ಪರಿಚಯಿಸಿದೆ. ಇದು ಫ್ಯೂಜಿಫಿಲ್ಮ್‌ ಸ್ವಾಮ್ಯದ ಕಲರ್‌ ರಿಪ್ರೊಡಕ್ಷನ್‌ ಟೆಕ್ನಾಲಜಿಯನ್ನು ಹೊಂದಿದ್ದು, ಸ್ಟಿಲ್‌ಗಳು ಮತ್ತು ವೀಡಿಯೊಗಳೆರಡರಲ್ಲೂ ಅತ್ಯುತ್ತಮವಾದ ಚಿತ್ರದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಇನ್ನು ಈ ಕ್ಯಾಮೆರಾದಲ್ಲಿ ಇನ್‌ಬಿಲ್ಟ್‌ 8K/30P ರೆಕಾರ್ಡಿಂಗ್ ಸಾಮರ್ಥ್ಯವನ್ನು ನೀಡಲಾಗಿದೆ. ಇದರಿಂದ ಸ್ಟಿಲ್‌ ಇಮೇಜ್‌ಗಳು ಮತ್ತು ಫಿಲ್ಮ್‌ಗಳಲ್ಲಿ ಗುಣಮಟ್ಟವನ್ನು ಕಾಣಬಹುದಾಗಿದೆ. ಅಲ್ಲದೆ ಸ್ಟಿಲ್ ಇಮೇಜ್‌ಗಳು ಮತ್ತು ಫಿಲ್ಮ್‌ಗಳಲ್ಲಿ ಕಂಟೆಂಟ್ ರಚನೆಗಾಗಿ X ಸರಣಿಯ ಸಾಮರ್ಥ್ಯವನ್ನು ಹೆಚ್ಚಿಸಲು ಇದರಲ್ಲಿ ಇನ್‌ಬಿಲ್ಟ್‌ 8K/30P ರೆಕಾರ್ಡಿಂಗ್ ಅನ್ನು ನೀಡುತ್ತದೆ.

ಫ್ಯೂಜಿಫಿಲ್ಮ್‌

ಫ್ಯೂಜಿಫಿಲ್ಮ್‌ X-H2 ಕ್ಯಾಮೆರಾ ಬ್ಯಾಕ್-ಇಲ್ಯುಮಿನೇಟೆಡ್ 40.2 MP 'X-Trans CMOS 5 HR ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಇದು ಹೈ-ಸ್ಪೀಡ್ 'X-ಪ್ರೊಸೆಸರ್ 5' ವೇಗವನ್ನು ಪಡೆದುಕೊಂಡಿದೆ. ಇನ್ನು ಈ ಕ್ಯಾಮೆರಾ ಫ್ಯೂಜಿಫಿಲ್ಮ್‌ ಸ್ವಾಮ್ಯದ ಕಲರ್‌ ರಿಪ್ರೊಡಕ್ಷನ್‌ ಟೆಕ್ನಾಲಜಿಯನ್ನು ಹೊಂದಿದ್ದು, ಸ್ಟಿಲ್‌ಗಳು ಮತ್ತು ವೀಡಿಯೊಗಳೆರಡರಲ್ಲೂ ಅತ್ಯುತ್ತಮವಾದ ಚಿತ್ರದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.

Best Mobiles in India

Read more about:
English summary
Fujifilm has Launched two new lenses in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X