ವಿವೋ ಫೋನ್‌ ಬಳಕೆದಾರರಿಗೆ ಗುಡ್‌ನ್ಯೂಸ್‌!..ಸದ್ಯದಲ್ಲೇ ಈ ಅಪ್‌ಡೇಟ್‌ ಲಭ್ಯ!

|

ಸದ್ಯ ಸರ್ಚ್ ಇಂಜಿನ್ ದೈತ್ಯ ಗೂಗಲ್‌ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಓಎಸ್‌ ಅನ್ನು ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯ ಮಾಡಿದೆ. ಇನ್ನುಳಿದಂತೆ ಬಹುತೇಕ ಎಲ್ಲ ಸಂಸ್ಥೆಗಳ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 13 ಓಎಸ್‌ನ ಹೊಸ್ತಿಲಲ್ಲಿ ಇದ್ದು, 12 ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಫೋನ್‌ಗಳಲ್ಲಿ ಸ್ಕಿನ್‌ ಓಎಸ್‌ ಅಪ್‌ಡೇಟ್‌ ಆಂಡ್ರಾಯ್ಡ್‌ ಓಎಸ್‌ಗೆ ಪೂರಕವಾಗಿರುತ್ತದೆ. ಸದ್ಯ ವಿವೋ Funtouch OS 13 ಅನ್ನು ಬಹಿರಂಗಪಡಿಸಿದೆ.

Funtouch OS 13

ಹೌದು, ವಿವೋ ಸಂಸ್ಥೆಯು ಆಂಡ್ರಾಯ್ಡ್‌ 13 ಆಧಾರಿತ ಫನ್‌ಟಚ್‌ ಓಎಸ್‌ 13 (Funtouch OS 13) ಅನ್ನು ಬಹಿರಂಗಪಡಿಸಿದ್ದು, ವಿವೋ ಜೊತೆಗೆ ಐಕ್ಯೂ ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್‌ ಪಡೆಯಲಿವೆ. ಇನ್ನು ವಿವೋ X80 ಪ್ರೊ (Vivo X80 Pro) ಫೋನ್ ಫನ್‌ಟಚ್‌ ಓಎಸ್‌ 13 ಓಎಸ್‌ ಪಡೆದ ಮೊದಲ ಫೋನ್ ಎನ್ನಲಾಗಿದೆ. ನೂತನ ಓಎಸ್‌ನಲ್ಲಿ ಕೆಲವು ಆಕರ್ಷಕ ಫೀಚರ್ಸ್‌ಗಳು ಸೇರ್ಪಡೆಯಾಗಲಿವೆ.

ಫನ್‌ಟಚ್‌ ಓಎಸ್‌ 13

ಫನ್‌ಟಚ್‌ ಓಎಸ್‌ 13

ಇದೇ ಅಕ್ಟೋಬರ್ 24 ರಂದು ವಿವೋ X80 ಪ್ರೊ ಫೋನ್ ಮೂಲಕ ವಿವೋ ಸಂಸ್ಥೆಯು ಫನ್‌ಟಚ್‌ ಓಎಸ್‌ 13 (Funtouch OS 13) ಲೈವ್ ಆಗದ್ದು, ಉಳಿದ ವಿವೋ ಸ್ಮಾರ್ಟ್‌ಫೋನ್‌ಗಳು ಹಂತಹಂತವಾಗಿ ಅಪ್‌ಡೇಟ್‌ ಸ್ವೀಕರಿಸುತ್ತವೆ. ಹಾಗೆಯೇ ವಿವೋ X80, ವಿವೋ X70 ಪ್ರೊ+, ವಿವೋ X70 ಪ್ರೊ ಹಾಗೂ ವಿವೋ X ಸರಣಿಯ ಇತರೆ ಫೋನ್‌ಗಳು ಅಪ್‌ಡೇಟ್‌ ಪಡೆಯಲಿವೆ. ಇನ್ನು ವಿವೋ X60 ಪ್ರೊ+, ವಿವೋ X60 ಪ್ರೊ ಮತ್ತು ವಿವೋ X60 ಫೋನ್‌ಗಳು ಡಿಸೆಂಬರ್‌ನಲ್ಲಿ ಫನ್‌ಟಚ್‌ ಓಎಸ್‌ 13 ಓಎಸ್‌ ಅಪ್‌ಡೇಟ್‌ ಕಾಣಲಿವೆ.

 ವಿವೋ V23 ಪ್ರೊ

ವಿವೋ V25 ಪ್ರೊ, ವಿವೋ V25, ವಿವೋ V23 ಪ್ರೊ, ವಿವೋ V23 5G, ವಿವೋ V23e, ವಿವೋ V23e 5G, ವಿವೋ T1 ಪ್ರೊ 5G, ವಿವೋ Y35, ವಿವೋ Y22 ಸೇರಿದಂತೆ ವಿವೋ ಸಂಸ್ಥೆಯ V ಸರಣಿಯ ಫೋನ್‌ಗಳಿಗೆ ನವೆಂಬರ್‌ ಅಂತ್ಯದ ವೇಳಗೆ ಫನ್‌ಟಚ್‌ ಓಎಸ್‌ 13 ಅಪ್‌ಡೇಟ್‌ ಲಭ್ಯವಿರುತ್ತದೆ. ಅದೇ ರೀತಿ ವಿವೋ Y22s. ವಿವೋ V21 5G, ವಿವೋ V21e, ವಿವೋ V20 ಪ್ರೊ ಮತ್ತು ವಿವೋ V20 2021 ಫೋನ್‌ಗಳು ಮುಂಬರುವ 2023 ರ ಮೊದಲಾರ್ಧದಲ್ಲಿ ಅಪ್‌ಡೇಟ್‌ ಸ್ವೀಕರಿಸಲಿವೆ.

iQoo

ಹಾಗೆಯೇ ಐಕ್ಯೂ (iQoo) ನ ಟ್ವೀಟ್ ಪ್ರಕಾರ, ಫನ್‌ಟಚ್‌ ಓಎಸ್‌ 13 ಅಪ್‌ಡೇಟ್ ಐಕ್ಯೂ 9 ಸರಣಿ, ಐಕ್ಯೂ 7 ಸರಣಿ, ಐಕ್ಯೂ Z ಸರಣಿ ಮತ್ತು ಐಕ್ಯೂ 6 ನಿಯೋ ಸರಣಿಗಳಿಗೆ ಲಭ್ಯವಿರುತ್ತದೆ. ಆದಾಗ್ಯೂ, ಐಕ್ಯೂ 3 ಸರಣಿಯುಫನ್‌ಟಚ್‌ ಓಎಸ್‌ 13 ಗೆ ಅಪ್‌ಡೇಟ್‌ ಸ್ವೀಕರಿಸುವುದಿಲ್ಲ ಎನ್ನಲಾಗಿದೆ.

ಸೆಪ್ಟೆಂಬರ್ ಅಂತ್ಯ

ಸೆಪ್ಟೆಂಬರ್ ಅಂತ್ಯ

ಅದೇ ರೀತಿ ಈ ವರ್ಷದ ಸೆಪ್ಟೆಂಬರ್ ಅಂತ್ಯದ ಮೊದಲು ಐಕ್ಯೂ 9 ಮತ್ತು ಐಕ್ಯೂ 9 ಪ್ರೊ ಫೋನ್‌ಗಳು ಅಪ್‌ಡೇಟ್‌ಗೆ ಲಭ್ಯವಿರುತ್ತದೆ. ಹಾಗೆಯೇ ಈ ವರ್ಷದ ನವೆಂಬರ್ ವೇಳೆಗೆ ಐಕ್ಯೂ 9T, ಐಕ್ಯೂ 9 SE, ಮತ್ತು ಐಕ್ಯೂ ನಿಯೋ 6 ಗೆ ಅಪ್‌ಡೇಟ್‌ಗೆ ಲಭ್ಯವಿರುತ್ತದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಫನ್‌ಟಚ್‌ ಓಎಸ್‌ 13 ಕೆಲವು ಪ್ರಮುಖ ಫೀಚರ್ಸ್‌:

ಫನ್‌ಟಚ್‌ ಓಎಸ್‌ 13 ಕೆಲವು ಪ್ರಮುಖ ಫೀಚರ್ಸ್‌:

ಫನ್‌ಟಚ್‌ ಓಎಸ್‌ 13 ನಲ್ಲಿ ಬಳಕೆದಾರರು ತಮ್ಮ ಫೋನ್‌ನಲ್ಲಿ ವಿವಿಧ ಆಪ್‌ಗಳಿಗೆ ಬದಲಾಯಿಸುವುದನ್ನು ತಡೆಯಲು, ಅಪ್ಲಿಕೇಶನ್ ಪಿನ್ನಿಂಗ್ ಆಯ್ಕೆ ಲಭ್ಯವಾಗಲಿದೆ. ಹಾಗೆಯೇ iManager ನೊಂದಿಗೆ ಮತ್ತಷ್ಟು ಹೆಚ್ಚಿನ ನಿಯಂತ್ರಣ ಸಾಮರ್ಥ್ಯಗಳು ಸೇರ್ಪಡೆ ಆಗಲಿವೆ. ಜೊತೆಗೆ ಫೋಟೊ ತೆಗೆಯುವಾಗ ವ್ಯೂಫೈಂಡರ್‌ನಲ್ಲಿ ಸ್ಟೇಬಿಲೈಸರ್ ರಿಂಗ್ (stabiliser ring) ಲಭ್ಯವಿದ್ದು, ವಾಲ್‌ಪೇಪರ್ ಬ್ಯಾಕ್‌ಗ್ರೌಂಡ್‌ ಮತ್ತು ಸಿಸ್ಟಮ್ UI ಥೀಮ್‌ಗೆ ಸರಿಹೊಂದುವಂತೆ ಐಕಾನ್‌ಗಳನ್ನು ಬದಲಾಯಿಸುವ ಆಯ್ಕೆಗಳು ಇರಲಿವೆ.

Best Mobiles in India

English summary
Vivo has started rolling out Funtouch OS 13, the update for compatible Vivo devices running Android 13.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X