ಸ್ಯಾಮ್ಸಂಗ್’ನ ಮುಂಬರುವ ಸ್ಮಾರ್ಟ್ ಫೋನ್’ನಲ್ಲಿ 4GB RAM!: ಸೀಕ್ರೆಟ್ ಬಿಚ್ಚಿಟ್ಟ ಬೆಂಚ್ ಮಾರ್ಕ್ಸ್!

By: Precilla Dias

ಪ್ರತಿ ಬಾರಿ ವಿನೂತನ ಫೀಚರ್’ಗಳುಳ್ಳ ಸ್ಮಾರ್ಟ್ ಫೋನ್’ಗಳನ್ನು ಲಾಂಚ್ ಮಾಡುವ ಸ್ಯಾಮ್ಸಂಗ್ ಈ ಬಾರಿ ಮತ್ತೊಂದು ವಿಶೇಷತೆ ಹೊಂದಿರುವ ಗ್ಯಾಲಕ್ಸಿ On7 ಪ್ರೊ ಡಿವೈಸ್’ನ್ನು ಬಿಡುಗಡೆ ಮಾಡಲಿದೆ. ಸದ್ಯ ಬೆಂಚ್ ಮಾರ್ಕ್ಸ್ ತನ್ನ ಜಾಲಾತಾಣವಾದ GFXBench ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬಿಚ್ಚಿಟ್ಟಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ On7 ಪ್ರೊನಲ್ಲಿ 4GB RAM!

ಈ ಮೊದಲೇ ಗ್ಯಾಲಕ್ಸಿ On7 ಪ್ರೊ ನಲ್ಲಿರಬಹುದಾದ ಫೀಚರ್’ಗಳನ್ನು ಬೆಂಚ್ ಮಾರ್ಕ್ಸ್ ರಿವೀಲ್ ಮಾಡಿತ್ತು. ಆದರೆ ಸದ್ಯ ಬಿಡುಗಡೆ ಮಾಡಿರುವ ವರದಿ ಹಾಗೂ ಹಳೆಯ ವರದಿಯನ್ನು ಹೋಲಿಕೆ ಮಾಡಿದರೆ ಕೊಂಚ ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ಬೆಂಚ್’ಮಾರ್ಕ್ ತಿಳಿಸಿರುವ ಪ್ರಕಾರ ಗ್ಯಾಲಕ್ಸಿ On7 ಪ್ರೊನಲ್ಲಿ 1920X1080 ರೆಸಲೂಶನ್’ನ 5.7 ಇಂಚಿನ ಡಿಸ್ಪ್ಲೇ ಇರುತ್ತದೆ ಎಂದು ತಿಳಿದು ಬಂದಿದೆ.

ಆಪ್ಟಿಕ್ಸ್ ಕುರಿತಾಗಿ ನೋಡುವುದಾದರೆ ಮೈನ್ ಕ್ಯಾಮರಾ ಹಾಗೂ ಮುಂಬದಿಲ್ಲಿರುವ ಸೆಲ್ಫೀ ಶೂಟರ್ ಇವೆರಡೂ 12 ಮೆಗಾ ಪಿಕ್ಸೆಲ್ ಸಾಮರ್ಥ್ಯದ್ದಾಗಿದೆ. ಈ ಮೊದಲು ಬೆಂಚ್ದ ಮಾರ್ಕ್ಸ್ ತನ್ನ ವರದಿಯಲ್ಲಿ ಗ್ಯಾಲಕ್ಸಿ On7 ಪ್ರೊನಲ್ಲಿ ಕೇವಲ 3GB RAM ಇರಲಿದೆ ಎಂದು ತಿಳಿಸಿತ್ತು, ಆದರೆ ಈ ಬಾರಿ ಕೊಂಚ ಬದಲಾವಣೆ ಮಾಡಿ 4GB ಎಂದಿದೆ ಹಾಗೂ 24GB ಸ್ಟೋರೇಜ್ ಸಾಮರ್ಥ್ಯವನ್ನು 25GB ಎಂದು ನಮೂದಿಸಿದೆ.

ಓದಿರಿ: ಮೋಟೋ G5 ಮತ್ತು ಮೋಟೋ G5 ಪ್ಲಸ್: ಎರಡರಲ್ಲೂ ಯಾವುದು ಬೆಸ್ಟ್? ಇಲ್ಲಿದೆ ವಿವರ

GFXBench ಈ ಮಾಹಿತಿ ರಿವೀಲ್ ಮಾಡಿದ್ದು ನೋಡಿದರೆ ಸ್ಯಾಮ್ಸಂಗ್ ತನ್ನ ನೂತನ ಸ್ಮಾರ್ಟ್ ಫೋನ್ ಗ್ಯಾಲಕ್ಸಿ On7 ಪ್ರೊವನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡಿ ಗ್ರಾಹಕರ ಮುಖದಲ್ಲಿ ಸಂತಸ ಮೂಡಿಸುವ ತಯಾರಿಯಲ್ಲಿದೆ ಎನ್ನಬಹುದು.

English summary
The Samsung On7 Pro is spotted on GFXBenchmark listing.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot