Subscribe to Gizbot

ಮೋಟೋ G5 ಮತ್ತು ಮೋಟೋ G5 ಪ್ಲಸ್: ಎರಡರಲ್ಲೂ ಯಾವುದು ಬೆಸ್ಟ್? ಇಲ್ಲಿದೆ ವಿವರ

Posted By: Precilla Dias

ಲಿನೊವೋ ಮೊಬೈಲ್ ನಿಂದ ಬಿಡುಗಡೆಗೊಂಡಿರುವ ಮೋಟೋ G5 ಮತ್ತು ಮೋಟೋ G5 ಪ್ಲಸ್ ಸ್ಮಾರ್ಟ್ ಫೋನ್'ಗಳು ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಈ ಎರಡು ಸ್ಮಾರ್ಟ್ ಫೋನುಗಳು ಮೋಟೋ G ಸರಣಿಯ ಟಾಪ್ ಫೋನ್'ಗಳಾಗಿದೆ. ಮೊಟ್ಟ ಮೊದಲು ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಮೋಟೋ G5 ಪ್ಲಸ್ ಎರಡು ಆವೃತ್ತಿಯಲ್ಲಿ ದೊರೆತರೆ, ಬಳಿಕ ಬಂದ ಕಡಿಮೆ ಬೆಲೆಯ ಮೋಟೋ G5 ಒಂದು ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಮೋಟೋ G5 ಮತ್ತು ಮೋಟೋ G5 ಪ್ಲಸ್'ನಲ್ಲಿ ಯಾವುದು ಬೆಸ್ಟ್?

ಈ ಎರಡೂ ಸ್ಮಾರ್ಟ್ ಫೋನ್'ಗಳು G5 ಸರಣಿಯದ್ದೇ ಆದರೂ ಬೇರೆ -ಬೇರೆ ವಿಶೇಷತೆಗಳನ್ನು ಹೊಂದಿವೆ, ನೋಡಲು ಒಂದೇ ಮಾದರಿಯಲ್ಲಿ ಕಾಣಿಸಿಕೊಂಡರೂ ವಿಭಿನ್ನ ಆಯ್ಕೆಗಳಿಂದ ಗುರುತಿಸಿಕೊಂಡಿವೆ. ಈ ಫೋನುಗಳು ಆನ್ ಲೈನ್ ಶಾಂಪಿಂಗ್ ತಾಣ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ನಲ್ಲಿ ಲಭ್ಯವಿವೆ. ಹಾಗಾದ್ರೆ ಈ ಎರಡು ಫೋನುಗಳ ವಿಶೇಷತೆ ಏನು..? ನಿಮ್ಮ ಬಜೆಟ್'ಗೆ ಯಾವ ಫೋನ್ ಸೂಕ್ತ ಯಾವುದು? ಈ ಕುರಿತಾದ ಡಿಟೇಲ್ಸ್ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್ಪ್ಲೇ ಮತ್ತು ಪ್ರೋಸೆಸರ್:

ಡಿಸ್ಪ್ಲೇ ಮತ್ತು ಪ್ರೋಸೆಸರ್:

ಡಿಸ್ಪ್ಲೇ ವಿಚಾರಕ್ಕೆ ಬಂದರೆ ಮೋಟೋ G5, 5 ಇಂಚಿನ ಫುಲ್ HD (1080X 1920) ಡಿಸ್ಪ್ಲೇಯನ್ನು ಹೊಂದಿದ್ದರೆ, ಮೋಟೋ G5 ಪ್ಲಸ್'ನಲ್ಲಿ 5.2 ಇಂಚಿನ ಡಿಸ್ಪ್ಲೇ ಇದೆ. ಹಾಗಾಗಿ ಡಿಸ್ಪ್ಲೇ ವಿಚಾರದಲ್ಲಿ ಮೋಟೋ G5 ಉತ್ತಮವಾಗಿದೆ ಎನ್ನಬಹುದು. ಇದಲ್ಲದೇ ಈ ಎರಡೂ ಫೋನಿನ ಬಹುದೊಡ್ಡ ವ್ಯತ್ಯಾಸ ಎಂದರೆ ಮೋಟೋ G5 ಆರಂಭಿಕ ಪ್ರೊಸೆಸರ್ ಆದಂತಹ 1.4GHz ವೇಗದ ಕ್ವಾಲಕಮ್ ಸ್ನಾಪ್ ಡ್ರಾಗನ್ 430 ಪ್ರೊಸೆಸರ್ ಹೊಂದಿದ್ದರೆ, ಮೋಟೋ G5 ಪ್ಲಸ್ ಮಧ್ಯಮ ವೇಗದ ಸ್ನಾಪ್ ಡ್ರಾಗನ್ 625 ಪ್ರೊಸೆಸರ್ ಹೊಂದಿ, ವೇಗದ ಕಾರ್ಯಚರಣೆಗೆ ಸಹಕಾರಿಯಾಗಿದೆ.

ಮೆಮೊರಿ ಆಯ್ಕೆ:

ಮೆಮೊರಿ ಆಯ್ಕೆ:

ಮೊಮೊರಿ ವಿಚಾರಕ್ಕೆ ಬಂದರೆ ಮೋಟೋ G5 ಒಂದು ಆವೃತ್ತಿಯಲ್ಲಿ ಲಭ್ಯವಿದ್ದು, 3 GB RAM ಮತ್ತು 16GB ಇಂಟರ್ನಲ್ ಮೊಮೊರಿಯೊಂದಿಗೆ ದೊರೆಯಲಿದೆ. ಆದರೆ ಮೋಟೋ G5 ಪ್ಲಸ್, 3 GB RAM ಮತ್ತು 32GB ಇಂಟರ್ನಲ್ ಮೊಮೊರಿಯ ಒಂದು ಆವೃತ್ತಿ ಮತ್ತು 4 GB RAM ಮತ್ತು 64 GB ಇಂಟರ್ನಲ್ ಮೊಮೊರಿಯ ಇನ್ನೊಂದು ಆವೃತ್ತಿಯಲ್ಲಿ ದೊರೆಯುತ್ತಿದೆ. ಈ ಎರಡು ಫೋನ್'ಗಳು ಮೈಕ್ರೋ SD ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿವೆ.

ಓದಿರಿ:ಲಾಂಚ್ ಆಯ್ತು ಮೋಟೋ G5 ಪ್ಲಸ್‌: ಬೆಲೆ 14,999 ರೂ. ಮಾತ್ರ..!!

ಬ್ಯಾಟರಿ ಮತ್ತು ಇತರೆ ವಿಶೇಷತೆಗಳು:

ಬ್ಯಾಟರಿ ಮತ್ತು ಇತರೆ ವಿಶೇಷತೆಗಳು:

ಈ ಎರಡು ಫೋನ್'ಗಳು ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿವೆ ಎನ್ನಲಾಗಿದೆ. ಮೋಟೋ G5 2800 mAh ಬ್ಯಾಟರಿಯನ್ನು ಹೊಂದಿದ್ದರೆ, G5 ಪ್ಲಸ್ ಫೋನ್'ನಲ್ಲಿ 3000 mAh ಬ್ಯಾಟರಿ ಇರುವುದನ್ನು ನೋಡಬಹುದಾಗಿದೆ. ಅಲ್ಲದೇ ಮೋಟೋ G5 ಹಿಂಭಾಗದಲ್ಲಿ 13 MP ಕ್ಯಾಮರಾದೊಂದಿಗೆ ಡ್ಯುಯಲ್ LED ಫ್ಲಾಷ್ ಹಾಗೂ ಮುಂಭಾಗದಲ್ಲಿ 5 MP ಕ್ಯಾಮರಾವನ್ನು ನೀಡಲಾಗಿದೆ. ಆದರೆ G5 ಪ್ಲಸ್ ಫೋನಿನಲ್ಲಿ 12 MP ಕ್ಯಾಮರಾವನ್ನು ನೀಡಲಾಗಿದ್ದು, ಇದು ಕೂಡಾಹ ಡ್ಯುಯಲ್ ಫ್ಲಾಷ್ ಹೊಂದಿದೆ. ಮುಂಭಾಗದಲ್ಲಿಯೂ ಉತ್ತಮ ಸೆಲ್ಫಿ ಪ್ರಿಯರಿಗಾಗಿ 12MP ಕ್ಯಾಮರಾ ನೀಡಲಾಗಿದೆ.

ಬೆಲೆ ಎಷ್ಟು..?

ಬೆಲೆ ಎಷ್ಟು..?

ಮೋಟೋ G5 ಸ್ಮಾರ್ಟ್ ಫೋನ್ 11,999 ರೂ.ಗಳಿಗೆ ಲಭ್ಯವಿದೆ. ಆದರೆ ಮೋಟೋ G5 ಪ್ಲಸ್ ನ 4GB RAM ಆವೃತ್ತಿ 16,999ರೂಪಾಯಿಗೆ ದೊರೆತರೆ, 3GB RAM ಆವೃತ್ತಿ 14,999 ರೂ.ಗಳಿಗೆ ಮಾರಾಟವಾಗುತ್ತಿದೆ. ಈ ಎರಡು ಸ್ಮಾರ್ಟ್ ಫೋನ್'ಗಳು ಗ್ರೇ ಮತ್ತು ಗೋಲ್ಡ್ ಬಣ್ಣದಲ್ಲಿ ಲಭ್ಯವಿದೆ. G5 ಮಾತ್ರ ಬ್ಲೂ ಬಣ್ಣದಲ್ಲೂ ದೊರೆಯಲಿದೆ.

ಇವು ಮೋಟೋ G5 ಮತ್ತು ಮೋಟೋ G5 ಪ್ಲಸ್ ನಡುವಿರುವ ವ್ಯತ್ಯಾಸಗಳು. ಇವುಗಳಲ್ಲಿ ಯಾವ ಫೋನ್ ನಿಮ್ಮ ಬಜೆಟ್'ನಲ್ಲಿ ಬರುತ್ತದೆ ಎಂದು ನೋಡಿ ಖರೀದಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you are planning to buy a Moto phone but confused to select among G5 and G5 Plus, then you are at the right place.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot