5 ಆಪ್‌ ರೂಪಿಸಿ ವಿಶ್ವದ ಗಮನ ಸೆಳೆದ 13ರ ಬಾಲಕ!..ಫೇಸ್‌ಬುಕ್‌, ಆಪಲ್‌ ಫಿದಾ!!

13ನೇ ವರ್ಷದಲ್ಲಿ ಆಟ, ಪಾಠದಲ್ಲಿ ತಲಲ್ಲೀನರಾಗುವ ಮಕ್ಕಳ ನಡುವೆ 13ರ ಬಾಲಕನೋರ್ವ 5 ಆಪ್‌ಗಳನ್ನು ರೂಪಿಸಿ ವಿಶ್ವದ ಗಮನಸೆಳೆದಿದ್ದಾನೆ.!

|

13ನೇ ವರ್ಷದಲ್ಲಿ ಆಟ, ಪಾಠದಲ್ಲಿ ತಲಲ್ಲೀನರಾಗುವ ಮಕ್ಕಳ ನಡುವೆ 13ರ ಬಾಲಕನೋರ್ವ 5 ಆಪ್‌ಗಳನ್ನು ರೂಪಿಸಿ ವಿಶ್ವದ ಗಮನಸೆಳೆದಿದ್ದಾನೆ.! ಹೌದು, ಹೈದರಾಬಾದ್‌ನಲ್ಲಿ ನಡೆದ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ ದೇಶ ವಿದೇಶಗಳ ಹೊಸ ಸಂಶೋಧಕರಲ್ಲಿ ಆಸ್ಟ್ರೇಲಿಯಾದ ಹಮೀಶ್ ಫಿನ್ಲೆಷನ್ ಎಂಬ ಬಾಲಕ ಸೆಲೆಬ್ರಿಟಿಯಾಗಿ ಮಿಂಚಿದ್ದಾನೆ.!!

ಇದೀಗ 7ನೇ ತರಗತಿಯಲ್ಲಿ ಓದುತ್ತಿರುವ ಹಮೀಶ್ ಫಿನ್ಲೆಷನ್ ತನ್ನ ಗೇಮಿಂಗ್ ಮತ್ತು ಜಾಗೃತಿ ಆಪ್‌ಗಳ ಮೂಲಕ ಸೆಳೆದಿದ್ದು, ಆರನೇ ವಯಸ್ಸಿನಲ್ಲೇ ವೆಬ್‌ಸೈಟ್‌ ರೂಪಿಸುವಲ್ಲಿ ಗುರುತಿಸಿಕೊಂಡ ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಯುಮಾ ಸೇರಿಯಾಂಟೊ ರೀತಿಯೇ ಹಮೀಶ್ ಹೆಸರಾಗಿದ್ದಾನೆ.! ಹಾಗಾದರೆ, ಹಮೀಶ್ ಅಭಿವೃದ್ದಿಪಡಿಸಿರುವ ಆಪ್‌ಗಳು ಯಾವುವು? ಮತ್ತು ಆತನ ಸಾಧನೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ಹಮೀಶ್ ಅಭಿವೃದ್ದಿಪಡಿಸಿರುವ ಆಪ್‌ಗಳು!!

ಹಮೀಶ್ ಅಭಿವೃದ್ದಿಪಡಿಸಿರುವ ಆಪ್‌ಗಳು!!

ತನ್ನ 13 ನೇ ವರ್ಷಕ್ಕೆ ಹಮೀಶ್ ಆಟಿಸಂ (ಸ್ವಲೀನತೆ) ಕುರಿತು ಜಾಗೃತಿ ಆಪ್‌, ಕಡಲಾಮೆಗಳ ರಕ್ಷಣೆಗೆ ಅರಿವು ಮೂಡಿಸುವ ಆಪ್ ಸೇರಿ 5 ಆಪ್‌ಗಳನ್ನು ಅಭಿವೃದ್ದಿಪಡಿಸಿದ್ದಾನೆ.! ಇವುಗಳಲ್ಲಿ ನಾಲ್ಕು ಆಪ್‌ಗಳು ಪರಿಸರ ಸಂರಕ್ಷಣೆ ಕುರಿತಂತೆ ಇದ್ದರೆ, ಒಂದು ಆಟಿಸಂಗೆ ಸಂಭಂದಿದ್ದಾಗಿದೆ.!!

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ಫೇಸ್‌ಬುಕ್‌ ಮತ್ತು ಆಪಲ್‌ ಮೆಚ್ಚಿಸಿದ ಬಾಲಕ!!

ಫೇಸ್‌ಬುಕ್‌ ಮತ್ತು ಆಪಲ್‌ ಮೆಚ್ಚಿಸಿದ ಬಾಲಕ!!

ಹಮೀಶ್ ಸಾಧನೆಗೆ ಫೇಸ್‌ಬುಕ್‌ ಮತ್ತು ಆಪಲ್‌ನಂತಹ ದಿಗ್ಗಜ ಕಂಪನಿಗಳು ಈತನ ಆಪ್‌ಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿವೆ. ಫೇಸ್‌ಬುಕ್‌ ಕಚೇರಿಗೆ ಭೇಟಿ ನೀಡಿರುವ ಈತನಿಗೆ ಆಪ್‌ಗಳನ್ನು ಅಭಿವೃದ್ಧಿಪಡಿಸಲು ಹಣಕಾಸಿನ ನೆರವು ನೀಡುವ ಭರವಸೆಯನ್ನು ಫೇಸ್‌ಬುಕ್ ಕಂಪನಿ ನೀಡಿದೆ.!!

ಎಂಟು ವರ್ಷದವನಿಂದಲೇ ಆರಂಭ!!

ಎಂಟು ವರ್ಷದವನಿಂದಲೇ ಆರಂಭ!!

ತನ್ನ 13ನೇ ವರ್ಷಕ್ಕೆ ವಿಶ್ವದಲ್ಲಿ ಹೆಸರು ಮಾಡಿರುವ ಹಮೀಶ್ ಫಿನ್ಲೆಷನ್ ಎಂಟು ವರ್ಷದವನಾಗಿದ್ದಾಗಲೇ ಆಪ್ ಸಿದ್ಧಪಡಿಸುವ ಕಡೆ ಆಸಕ್ತಿ ವಹಿಸಿದ್ದನಂತೆ. ಅದರಲ್ಲಿಯೂ ಒಮ್ಮೆ ಆಪ್‌ ರೂಪಿಸುವ ಸ್ಪರ್ಧೆಯೊಂದಕ್ಕೆ ಹೋದ ನಂತರ ಇವನ ಆಸಕ್ತಿ ಇನ್ನೂ ಹೆಚ್ಚಿತ್ತು ಎಂದು ಹಮೀಶ್ ತಂದೆ ಗ್ರೆಮ್ಮೆ ಫಿನ್ಲೆಸನ್ ಹೇಳಿದ್ದಾರೆ.!!

ಶಾಲೆ ಮನೆಕೆಲಸ ನಂತರ ಆಪ್‌ ಅಭಿವೃದ್ದಿ!!

ಶಾಲೆ ಮನೆಕೆಲಸ ನಂತರ ಆಪ್‌ ಅಭಿವೃದ್ದಿ!!

ಇದೀಗ 7ನೇ ತರಗತಿಯಲ್ಲಿ ಓದುತ್ತಿರುವ ಹಮೀಶ್ ಫಿನ್ಲೆಷನ್ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ಆಸಕ್ತಿ ವಹಿಸಿದ್ದಾನೆ. ತಂತ್ರಜ್ಞಾನದ ಬಗ್ಗೆ ಈತನಿಗೆ ಹೆಚ್ಚು ಆಸಕ್ತಿ ಇದ್ದರೂ ತರಗತಿಯ ಅಧ್ಯಯನಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾನೆ.!!. ಆತನೇ ಹೇಳುವಂತೆ, ಶಾಲೆಯ ಮನೆಕೆಲಸ ಮುಗಿದ ನಂತರವೇ ಆಪ್‌ಗಳ ಕಡೆ ಕೆಲಸ ಮಾಡುತ್ತೇನೆ ಎಂದಿದ್ದಾನೆ.!!

ಆರನೇ ಆಪ್‌ ತಯಾರಾಗುತ್ತಿದೆ.!!

ಆರನೇ ಆಪ್‌ ತಯಾರಾಗುತ್ತಿದೆ.!!

ಈಗಾಗಲೇ 5 ಆಪ್‌ಗಳನ್ನು ರೂಪಿಸಿರುವ ಹಮೀಶ್ ಫಿನ್ಲೆಷನ್ ಆರನೇ ಆಪ್‌ ತಯಾರಿಸುವತ್ತ ಗಮನಹರಿಸುತ್ತಿದ್ದಾನೆ. ಈಗ ಅಭಿವೃದ್ದಿಯಾಗುತ್ತಿರುವ ಆಪ್ ಟ್ರಾಫಿಕ್‌ ಜಾಮ್‌ಗೆ ಸಂಭಂದಿಸಿದ ಆಪ್ ಆಗಿರಲಿದೆ ಎಂದು ಗ್ರೆಮ್ಮೆ ಫಿನ್ಲೆಸನ್ ಹೇಳಿದ್ದು, ಟ್ರಾಫಿಕ್ ಜಾಮ್‌ ಸೇರಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ನನ್ನ ಮಗ ಮುಂದಾಗಿದ್ದಾನೆ ಎಂದು ಹೇಳಿದ್ದಾರೆ.!!

ಅಪಾಯ ತಿಳಿದಿದ್ದರೂ ತಪ್ಪು ಮಾಡುತ್ತಿದ್ದಾರೆ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು!!ಅಪಾಯ ತಿಳಿದಿದ್ದರೂ ತಪ್ಪು ಮಾಡುತ್ತಿದ್ದಾರೆ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು!!

Best Mobiles in India

English summary
Australian child entrepreneur Hamish Finlayson at GES 2017 in Hyderabad on Tuesday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X