ಫೇಸ್‌ಬುಕ್‌ ಮೆಸೆಂಜರ್‌ ಸೇರಿದ ವಾಟ್ಸಾಪ್‌ ಮಾದರಿಯ ಫೀಚರ್ಸ್‌!

|

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಕಾಲಕಾಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿರುವ ಪೇಸ್‌ಬುಕ್‌ ಇದೀಗ ಹೊಸ ಫಿಚರ್ಸ್‌ ಪರಿಚಯಿಸಿದೆ. ತನ್ನ ಮೆಸೆಂಜರ್‌ ಸೇವೆಯೆ ವಾಯ್ಸ್‌ ಮತ್ತು ವೀಡಿಯೊ ಕರೆಗಳಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊರತಂದಿದೆ. ಈ ಮೂಲಕ ಮೆಸೆಂಜರ್‌ನ ವೀಡಿಯೊ ಮತ್ತು ವಾಯ್ಸ್‌ ಕಾಲ್‌ಗೆ ಹೊಸ ಸುರಕ್ಷತೆಯ ಪದರವನ್ನು ಸೇರಿಸಿದೆ. ಇದರಿಂದ ವಾಟ್ಸಾಪ್‌ ಮಾದರಿಯಲ್ಲಿಯೇ ಮೆಸೆಂಜರ್‌ ಕೂಡ ಸುರಕ್ಷಿತವಾಗಿರಲಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ವಾಟ್ಸಾಪ್ ಮತ್ತು ಮೆಸೆಂಜರ್ ಸೇವೆಗಳು ಈಗಾಗಲೇ ಬಳಕೆದಾರರು ಕಳುಹಿಸಿದ ವೈಯಕ್ತಿಕ ಪಠ್ಯ ಸಂದೇಶಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿವೆ. ಸಾಮಾಜಿಕ ಮಾಧ್ಯಮ ದೈತ್ಯ ತನ್ನ ಸಂದೇಶ ಸೇವೆಗಳ ಸಾಲಿಗೆ ಕ್ರಮೇಣ ಆಡಿಯೋ ಮತ್ತು ವಿಡಿಯೋ ಫೀಚರ್ಸ್‌ಗಳನ್ನು ಸೇರಿಸುತ್ತಾ ಬಂದಿದೆ. ಆದರಂತೆ ಇದೀಗ ಮೆಸೆಂಜರ್‌ನಲ್ಲಿ ವಾಯ್ಸ್‌ ಮತ್ತು ವಿಡಿಯೋ ಕರೆಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಹಾಗಾದ್ರೆ ಪೇಸ್‌ಬುಕ್‌ ಮೆಸೆಂಜರ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ವಿಡಿಯೋ ಮತ್ತು ವಾಯ್ಸ್‌ ಕಾಲ್‌ಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸೇರಿಸಿರುವುದರಿಂದ ಫೇಸ್‌ಬುಕ್‌ ಸೇರಿದಂತೆ ಬೇರೆಯವರು ಕಳುಹಿಸಿದ ಅಥವಾ ಹೇಳಿದ್ದನ್ನು ನೋಡಲು ಅಥವಾ ಕೇಳಲು ಸಾಧ್ಯವಿಲ್ಲ ಎಂದು ಹೇಳಿದರು. "ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂಭಾಷಣೆಯಲ್ಲಿ ನಿಮ್ಮ ಸಂದೇಶಗಳು ಮತ್ತು ಕರೆಗಳ ವಿಷಯವು ನಿಮ್ಮ ಸಾಧನವನ್ನು ಬಿಟ್ಟ ಕ್ಷಣದಿಂದ ರಿಸೀವರ್‌ನ ಸಾಧನವನ್ನು ತಲುಪುವವರೆಗೂ ರಕ್ಷಿಸುತ್ತದೆ.

ವಾಟ್ಸಾಪ್‌

ಇನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್‌ ಅನ್ನು ಈಗಾಗಲೇ ವಾಟ್ಸಾಪ್‌ನಂತಹ ಆಪ್‌ಗಳು ವ್ಯಾಪಕವಾಗಿ ವೈಯಕ್ತಿಕ ಸಂಭಾಷಣೆಗಳನ್ನು ಹ್ಯಾಕರ್‌ಗಳು ಮತ್ತು ಕ್ರಿಮಿನಲ್‌ಗಳಿಂದ ಸುರಕ್ಷಿತವಾಗಿರಿಸಲು ಬಳಸುತ್ತಿವೆ. ಇದು ಲಾಕ್ ಮತ್ತು ಕೀಲಿಯಂತೆ ಕೆಲಸ ಮಾಡುತ್ತದೆ. ಇಲ್ಲಿ ನೀವು ಮತ್ತು ಚಾಟ್ ಅಥವಾ ಕರೆಯಲ್ಲಿರುವ ಜನರು ಸಂಭಾಷಣೆಗೆ ಪ್ರವೇಶವನ್ನು ಹೊಂದಿರುತ್ತಾರೆ. ಆದರೆ ಈ ಚಾಟ್‌ಗಳನ್ನು, ವಾಯ್ಸ್‌ ಇಲ್ಲವೇ ವೀಡಿಯೊ ಕರೆಗಳನ್ನು ಬೇರೆಯವರು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ಎಂಡ್

ಇದಲ್ಲದೆ ಮುಂಬರುವ ವಾರಗಳಲ್ಲಿ ಮೆಸೆಂಜರ್‌ನಲ್ಲಿ ಗುಂಪು ಚಾಟ್‌ಗಳು ಮತ್ತು ಕರೆಗಳಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನ ಸಾರ್ವಜನಿಕ ಪರೀಕ್ಷೆಗಳನ್ನು ಪ್ರಾರಂಭಿಸಲು ಇದು ಯೋಜಿಸುತ್ತಿದೆ. ಇನ್‌ಸ್ಟಾಗ್ರಾಮ್ ನೇರ ಸಂದೇಶಗಳಿಗಾಗಿ E2EE ನ ಸೀಮಿತ ಪರೀಕ್ಷೆಯನ್ನು ಯೋಜಿಸುತ್ತಿದೆ. ಪ್ರಯೋಗದಲ್ಲಿ ಭಾಗಿಯಾಗಿರುವವರು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಆಯ್ಕೆ ಮಾಡಲು ಮತ್ತು ಫೋಟೋ ಹಂಚಿಕೆ ಪ್ಲಾಟ್‌ಫಾರ್ಮ್‌ನಲ್ಲಿ ಒಬ್ಬರಿಗೊಬ್ಬರು ಸಂಭಾಷಣೆಗಳಿಗೆ ಕರೆ ಮಾಡಲು ಸಾಧ್ಯವಾಗುತ್ತದೆ.

ಫೇಸ್‌ಬುಕ್

ಫೇಸ್‌ಬುಕ್ ತನ್ನ ಜನಪ್ರಿಯ ಇಮೇಜ್-ಶೇರ್‌ ಅಪ್ಲಿಕೇಶನ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರಿಗೊಬ್ಬರು ಸಂಭಾಷಣೆಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರಿಚಯಿಸಲು ಯೋಜಿಸಿದೆ ಎಂದು ಹೇಳಿದೆ. ಇನ್ನು ಫೇಸ್‌ಬುಕ್‌ ತನ್ನ ಬ್ಲಾಗ್‌ಫೋಸ್ಟ್‌ನಲ್ಲಿ "ನಾವು ಕೆಲವು ದೇಶಗಳಲ್ಲಿನ ವಯಸ್ಕರೊಂದಿಗೆ ಸೀಮಿತ ಪರೀಕ್ಷೆಯನ್ನು ಪ್ರಾರಂಭಿಸುತ್ತೇವೆ, ಅದು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರಿಗೊಬ್ಬರು ಸಂಭಾಷಣೆಗಳಿಗೆ ಕರೆ ಮಾಡಲು ಅವಕಾಶ ನೀಡುತ್ತದೆ" ಎಂದು ಹೇಳಿದೆ.

ಕಣ್ಮರೆಯಾಗುವ ಸಂದೇಶಗಳಿಗಾಗಿ ಹೊಸ ನಿಯಂತ್ರಣಗಳು

ಕಣ್ಮರೆಯಾಗುವ ಸಂದೇಶಗಳಿಗಾಗಿ ಹೊಸ ನಿಯಂತ್ರಣಗಳು

ಮೆಸೆಂಜರ್‌ನಲ್ಲಿ ಕಣ್ಮರೆಯಾಗುತ್ತಿರುವ ಸಂದೇಶಗಳ ಫೀಚರ್ಸ್‌ ಅನ್ನು ಬಳಕೆದಾರರು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಫೇಸ್‌ಬುಕ್ ಹೆಚ್ಚಿನ ಆಯ್ಕೆಗಳನ್ನು ಸೇರಿಸಿದೆ. ಬಳಕೆದಾರರು ಈಗ ಟೈಮರ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ. 5 ಸೆಕೆಂಡುಗಳಿಂದ 24 ಗಂಟೆಗಳ ನಡುವೆ ಸಂದೇಶಗಳು ರಿಸೀವರ್ ಸಾಧನದಿಂದ ಮಾಯವಾಗುತ್ತವೆ. ಇದಲ್ಲದೆ ಮುಂದಿನ ದಿನಗಳಲ್ಲಿ ಗುಂಪು ಚಾಟ್‌ಗಳಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸಹ ಪರೀಕ್ಷಿಸುವುದಾಗಿ ಫೇಸ್‌ಬುಕ್ ಹೇಳಿದೆ.

Best Mobiles in India

English summary
Facebook Messenger as well as WhatsApp already have end-to-end encryption on personal texts messages.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X