ಜಿಯೋನಿ S10 ಲೈಟ್ ಸ್ಮಾರ್ಟ್ ಫೋನ್ ಶೀಘ್ರವೇ ಮಾರುಕಟ್ಟೆ..!
News
lekhaka-Lekhaka
Written By: Lekhaka
ಇದೇ ಮೇ ತಿಂಗಳಿನಲ್ಲಿ ಲಾಂಚ್ ಆಗಿದ್ದ ಜಿಯೋನಿ S10 ಸ್ಮಾರ್ಟ್ ಫೋನ್ ಒಟ್ಟು ನಾಲ್ಕು ಕ್ಯಾಮೆರಾಗಳೊಂದಿಗೆ ಕಾಣಿಸಿಕೊಂಡು ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತು. ಆದರೆ ಈ ಫೋನ್ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರಲಿಲ್ಲ. ಆದರೆ ಈ ಬಾರಿ ಇದೇ ಫೋನಿನ ಲೈಟ್ ಆವೃತ್ತಿ ಭಾರತದಲ್ಲಿ ಲಾಂಚ್ ಆಗಲಿದೆ. ಜಿಯೋನಿ S10 ಲೈಟ್ ಸ್ಮಾರ್ಟ್ ಫೋನ್ ಶೀಘ್ರವೇ ಮಾರುಕಟ್ಟೆಗೆ ಆಗಮಿಸಲಿದೆ.
ಜಿಯೋನಿ S10 ಲೈಟ್ ಸ್ಮಾರ್ಟ್ ಫೋನ್ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಆಗಿರಲಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಲಾಂಚ್ ಆಗುವ ಸಾಧ್ಯತೆ ಇದೆ. ಇದು ಬಿಡುಗಡೆಯಾದಲ್ಲಿ ಬೇರೆ ಸ್ಮಾರ್ಟ್ ಫೋನ್ ಗಳ ಮಾರಾಟದ ಮೇಲೆ ನೇರ ಹೊಡೆತ ಬೀಳಲಿದೆ ಎನ್ನಲಾಗಿದೆ.
ಈ ಜಿಯೋನಿ S10 ಲೈಟ್ ಸ್ಮಾರ್ಟ್ ಫೋನ್ ನಲ್ಲಿ 5.2 ಇಂಚಿನ HD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಸ್ನಾಪ್ ಡ್ರಾಗನ್ 427 ಚಿಪ್ ಸೆಟ್ ಅಳವಡಿಸಲಾಗಿದ್ದು, ಜಿಯೋನಿ S10 ಲೈಟ್ ಸ್ಮಾರ್ಟ್ ಫೋನ್ ನಲ್ಲಿ 4GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.
ಸೆಲ್ಪಿಗಾಗಿ ಈ ಫೋನಿನ ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಸಹ ಕಾಣಬಹುದಾಗಿದೆ. ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಚಿತ್ರಗಳನ್ನ ಸೆರೆಹಿಡಿಯಲು ಈ ಸ್ಮಾರ್ಟಫೋನ್ ಶಕ್ತವಾಗಿದೆ.
ಜಿಯೋನಿ S10 ಲೈಟ್ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಅಮಿಗೋ 4.0 UI ಅನ್ನು ನೀಡಲಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ನಲ್ಲಿ ಹಲವು ಹೊಸ ಆಯ್ಕೆಗಳನ್ನು ಕಾಣಬಹುದಾಗಿದೆ. ಆಪ್ ಲಾಕ್, ಡ್ಯುಯಲ್ ವಾಟ್ಸ್ ಆಪ್ ಸೇರಿದಂತೆ ವಿಭಿನ್ನ ವಿಶೇಷತೆಗಳನ್ನು ಒಳಗೊಂದಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.
English summary
Gionee S10 Lite, a toned-down variant of the Gionee S10 that was launched in China in May is likely to be launched soon in India.
Story first published: Saturday, December 16, 2017, 6:00 [IST]