ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ವಾಚ್‌!..ಬೆಲೆ ಅತಿ ಕಡಿಮೆ!

|

ಜನಪ್ರಿಯ ಸ್ಮಾರ್ಟ್‌ವಾಚ್‌ ಬ್ರ್ಯಾಂಡ್‌ಗಳಲ್ಲಿ ಭಾರತದ ಗಿಜ್ಮೋರ್‌ ಕಂಪೆನಿ ಕೂಡ ಒಂದಾಗಿದೆ. ಸ್ವದೇಶಿ ಬ್ರ್ಯಾಂಡ್‌ ಎನಿಸಿಕೊಂಡಿರುವ ಗಿಜ್ಮೋರ್‌ ಮೇಕ್‌ ಇನ್‌ ಇಂಡಿಯಾ ಅಡಿಯಲ್ಲಿ ಅನೇಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಗಿಜ್‌ಫಿಟ್‌ ಪ್ಲಾಸ್ಮಾ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಇದು ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ವಾಚ್‌ ಆಗಿದ್ದು, ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನಸೆಳೆದಿದೆ. ಈ ಸ್ಮಾರ್ಟ್‌ವಾಚ್‌ 2,000ರೂ. ಬೆಲೆಯನ್ನು ಹೊಂದಿದ್ದು, ಕೈ ಗೆಟಕುವ ಬೆಲೆಯಲ್ಲಿ ದೊರೆಯುವ ಅತ್ಯಾಕರ್ಷಕ ಸ್ಮಾರ್ಟ್‌ವಾಚ್‌ ಇದಾಗಿದೆ.

ಗಿಜ್ಮೋರ್‌

ಹೌದು, ಗಿಜ್ಮೋರ್‌ ಕಂಪೆನಿ ಭಾರತದಲ್ಲಿ ಹೊಸ ಗಿಜ್‌ಫಿಟ್‌ ಫ್ಲಾಸ್ಮಾ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದು 'ಸೂಪರ್ ಬ್ರೈಟ್' ಡಿಸ್‌ಪ್ಲೇಯನ್ನು ಒಳಗೊಂಡಿರುವ ಸ್ಮಾರ್ಟ್‌ವಾಚ್‌ ಆಗಿದೆ. ಇದರಲ್ಲಿ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಕೂಡ ಲಭ್ಯವಿದೆ. ಜೊತೆಗೆ ಇನ್‌ಬಿಲ್ಟ್‌ ವಾಯ್ಸ್‌ ಅಸಿಸ್ಟೆಂಟ್‌ ಕೂಡ ಲಭ್ಯವಿದೆ. ಇದಲ್ಲದೆ 24×7 ಹಾರ್ಟ್‌ಬೀಟ್‌ ಸೆನ್ಸಾರ್‌, SpO2 ಸೆನ್ಸಾರ್‌, ಸ್ಲಿಪ್‌ ಟ್ರ್ಯಾಕರ್‌ ಮತ್ತು ಬಾಡಿ ಟೆಂಪ್‌ರೇಚರ್‌ ಮಾನಿಟರ್‌ ಕೂಡ ಸೇರಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಏನೆಲ್ಲಾ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿರಿ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

GizFit ಪ್ಲಾಸ್ಮಾ ಸ್ಮಾರ್ಟ್‌ವಾಚ್‌ 1.9 ಇಂಚಿನ 2.5D ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240×280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 550 ನೀಟ್ಸ್‌ ಬ್ರೈಟ್‌ನೆಸ್‌ ಕೂಡ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಹಲವು ವಾಚ್‌ಫೇಸ್‌ ಆಯ್ಕೆಗಳನ್ನು ಕೂಡ ನೀಡಲಿದೆ. ವಾಚ್‌ಫೇಸ್‌ಗಳು ಮತ್ತು ಮೆನು ಶೈಲಿಗಳನ್ನು ಸ್ಮಾರ್ಟ್‌ವಾಚ್‌ ರೈಟ್‌ ಸೈಟ್‌ನಲ್ಲಿರುವ ಫಿಸಿಕಲ್‌ ಬಟನ್‌ ಮೂಲಕ ಸುಲಭವಾಗಿ ಬದಲಾಯಿಸಬಹುದಾಗಿದೆ.

ಸ್ಮಾರ್ಟ್‌ವಾಚ್‌

ಇನ್ನು ಸ್ಮಾರ್ಟ್‌ವಾಚ್‌ ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸವನ್ನು ಪಡೆದಿದೆ. ಇದು ಬ್ಲೂಟೂತ್ ಕಾಲ್‌ ಫೀಚರ್ಸ್‌ ಅನ್ನು ಹೊಂದಿದ್ದು, ಇನ್‌ಬಿಲ್ಟ್‌ ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲವನ್ನು ಸಹ ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ ಹೆಲ್ತ್‌ ಫೀಚರ್ಸ್‌ಗಳಲ್ಲಿ 24×7 ಹೃದಯ ಬಡಿತ ಸೆನ್ಸಾರ್‌, SpO2 ಸೆನ್ಸಾರ್‌, ಸ್ಲಿಪ್‌ ಟ್ರ್ಯಾಕರ್ ಮತ್ತು ಬಾಡಿ ಟೆಂಪ್‌ರೇಚರ್‌ ಮಾನಿಟರ್ ಅನ್ನು ಒಳಗೊಂಡಿದೆ. ಜೊತೆಗೆ ಇದು ಸ್ಟೆಪ್‌ ಟ್ರ್ಯಾಕಿಂಗ್ ಮತ್ತು ಉಸಿರಾಟದ ವ್ಯಾಯಾಮಗಳನ್ನು ಸಹ ಅನುಮತಿಸುತ್ತದೆ.

GPS

GizFit ಪ್ಲಾಸ್ಮಾ ಸ್ಮಾರ್ಟ್‌ವಾಚ್‌ ಆಕ್ಟಿವಿಟಿಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು GPS ಟ್ರಾಜೆಕ್ಟರಿ ಡಿಸ್‌ಪ್ಲೇಯೊಂದಿಗೆ ಬರಲಿದೆ. ಇದನ್ನು ಸೊಶೀಯಲ್‌ ಪ್ಲಾಟ್‌ಫಾರ್ಮ್‌ ಗಳಲ್ಲಿಯೂ ಶೇರ್‌ ಮಾಡಿಕೊಳ್ಳುವುದಕ್ಕೆ ಕೂಡ ಅವಕಾಶವನ್ನು ಸಹ ನೀಡಲಾಗಿದೆ. ಸ್ವಿಮ್ಮಿಂಗ್‌, ಯೋಗ, ರನ್ನಿಂಗ್‌, ಔಟ್‌ಸೈಡ್‌ ವಾಕಿಂಗ್‌, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಫುಟ್‌ಬಾಲ್, ಸೈಕ್ಲಿಂಗ್ ಮತ್ತು ಹೆಚ್ಚಿನ ಆಕ್ಟಿವಿಟಿಗಳನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಹಲವು ಸ್ಪೋರ್ಟ್ಸ್‌ ಮೋಡ್‌ಗಳನ್ನು ಸಹ ನೀಡಲಾಗಿದೆ.

ಅವಧಿಯೊಂದಿಗೆ

ಇನ್ನು ಈ ಸ್ಮಾರ್ಟ್ ವಾಚ್ ಸಿಂಗಲ್‌ ಚಾರ್ಜ್‌ನಲ್ಲಿ 7 ದಿನಗಳ ಬ್ಯಾಟರಿ ಅವಧಿಯೊಂದಿಗೆ ಬರಲಿದೆ. ಇದು ವಾಯರ್‌ ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ವಾಟರ್‌ ಮತ್ತು ಡಸ್ಟ್‌ ರೆಸಿಸ್ಟೆನ್ಸಿಯನ್ನು ಕೂಡ ಪಡೆದಿದೆ. ವೆದರ್‌ ಅಪ್ಡೇಟ್‌, ಇನ್‌ಬಿಲ್ಟ್‌ ಪ್ರೈವೆಸಿ ಲಾಕ್, ನೋಟಿಫಿಕೇಶನ್‌ ಆಲರ್ಟ್‌ ಮತ್ತು ಹೆಚ್ಚಿನ ವಿಷಯಗಳಿಗಾಗಿ IP67 ರೇಟಿಂಗ್ ಬೆಂಬಲವನ್ನು ಕೂಡ ಪಡೆದಿದೆ. ಈ ಸ್ಮಾರ್ಟ್‌ವಾಚ್‌ AI-ಆಧಾರಿತ ಹೆಲ್ತ್‌ ಟ್ರ್ಯಾಕಿಂಗ್ ಸಲ್ಯೂಶನ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಗಿಜ್‌ಮೋರ್‌ GizFit ಪ್ಲಾಸ್ಮಾ ಸ್ಮಾರ್ಟ್‌ವಾಚ್‌ ಬೆಲೆ 1,999ರೂ.ಬೆಲೆಯನ್ನು ಹೊಂದಿದೆ. ಆದರೆ ಲಾಂಚ್‌ ಆಫರ್‌ನಲ್ಲಿ ಈ ಸ್ಮಾರ್ಟ್‌ವಾಚ್‌ 1,799ರೂ. ಬೆಲೆಯಲ್ಲಿ ಸೇಲ್‌ ಆಗಲಿದೆ. ಈ ಸ್ಮಾರ್ಟ್‌ವಾಚ್‌ ಫ್ಲಿಪ್‌ಕಾರ್ಟ್‌ ಮೂಲಕ ಕಪ್ಪು, ನೇವಿ ಬ್ಲೂ ಮತ್ತು ಬರ್ಗಂಡಿ ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ.

Best Mobiles in India

English summary
Gizmore GizFit Plasma Smartwatch Launched in India: Price details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X