ಡೌನ್‌ಲೋಡ್‌ ಪ್ರಮಾಣದಲ್ಲಿ ಹೊಸ ದಾಖಲೆ ಬರೆದ ಜಿ-ಮೇಲ್‌ ಅಪ್ಲಿಕೇಶನ್‌!

|

ಜಿ-ಮೇಲ್‌ ಅಪ್ಲಿಕೇಶನ್‌ ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಒಂದಾಗಿದೆ. ಪ್ರಸ್ತುತ ದಿನಗಳಲ್ಲಿ ಜಿ-ಮೇಲ್‌ ಅಪ್ಲಿಕೇಶನ್‌ ಪ್ರತಿಯೊಬ್ಬರ ಸ್ಮಾರ್ಟ್‌ಫೋನ್‌ನಲ್ಲಿಯೂ ಇದ್ದೆ ಇರುತ್ತದೆ. ಯಾವುದೇ ಡಿಜಿಟಲ್‌ ಖಾತೆಗಳಿಗೆ ಲಾಗ್‌ಇನ್‌ ಆಗಬೇಕಾದರೂ ಜಿ-ಮೇಲ್‌ ಅಕೌಂಟ್‌ ಅವಶ್ಯಕತೆ ಇರೊದ್ರಿಂದ ಜಿ-ಮೇಲ್‌ ಅಪ್ಲಿಕೇಶನ್‌ ಬಳಕೆ ಹೆಚ್ಚಾಗುತ್ತಲೇ ಇದೆ. ಇದೇ ಕಾರಣಕ್ಕೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಜಿ-ಮೇಲ್‌ ಅಪ್ಲಿಕೇಶನ್‌ ಹೊಸ ದಾಖಲೆ ಬರೆದಿದೆ. ಜಿ-ಮೇಲ್‌ನ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಸಂಖ್ಯೆ 10 ಬಿಲಿಯನ್‌ ದಾಟಿದೆ. ಈ ಮೂಲಕ 10 ಬಿಲಿಯನ್‌ ಡೌನ್‌ಲೋಡ್‌ ಪಡೆದ ಅಪ್ಲಿಕೇಶನ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಜಿ-ಮೇಲ್‌‌

ಹೌದು, ಗೂಗಲ್‌ನ ಜಿ-ಮೇಲ್‌‌ ಅಪ್ಲಿಕೇಶನ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 10 ಬಿಲಿಯನ್‌ಗೂ ಅಧಿಕ ಬಾರಿ ಡೌನ್‌ಲೋಡ್‌ ಆದ ಅಪ್ಲಿಕೇಶನ್‌ಗಳ ಸಾಲಿಗೆ ಸೇರಿದೆ. ಈಗಾಗಲೇ ಗೂಗಲ್‌ನ ಜನಪ್ರಿಯ ಸೇವೆಗಳಾದ ಗೂಗಲ್‌ ಪ್ಲೇ ಸರ್ವಿಸ್‌, ಯುಟ್ಯೂಬ್‌ ಮತ್ತು ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ಗಳು 10 ಬಿಲಿಯನ್‌ಗೂ ಹೆಚ್ಚಿನ ಡೌನ್‌ಲೋಡ್‌ ಸಂಖ್ಯೆಗಳನ್ನು ಪಡೆದುಕೊಂಡಿದೆ. ಈ ನಾಲ್ಕು ಅಪ್ಲಿಕೇಶನ್‌ಗಳನ್ನು ಕೂಡ ಗೂಗಲ್‌ ಅಭಿವೃದ್ದಿಪಡಿಸಿರೋದು ವಿಶೇಷ. ಹಾಗಾದ್ರೆ 10 ಬಿಲಿಯನ್‌ ಡೌನ್‌ಲೋಡ್‌ ದಾಟಿದ ಜಿ-ಮೇಲ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿ-ಮೇಲ್‌

ಇನ್ನು ಜಿ-ಮೇಲ್‌ ಇತ್ತೀಚಿನ ದಿನಗಳಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರ ಗಮನವನ್ನು ಸೆಳೆದಿದೆ. ಇದು ಕೂಡ ಜಿ-ಮೇಲ್‌ ಅಪ್ಲಿಕೇಶನ್‌ ಹೆಚ್ಚು ಡೌನ್‌ಲೋಡ್‌ ಸಂಕ್ಯೆ ಪಡೆದುಕೊಳ್ಳಲು ಕಾರಣ ಅಂತಾನೇ ಹೇಳಬಹುದು. ಅದರಲ್ಲೂ ಗೂಗಲ್‌ನ ಜಿ-ಮೇಲ್ ಸೇವೆಯು ಇತ್ತೀಚಿಗೆ ವಿವಿಧ ಸಮಯದ ಚೌಕಟ್ಟುಗಳ ಆಯ್ಕೆಗಳನ್ನು ನೀಡಿದೆ. ಇದರಲ್ಲಿ 5 ಸೆಕೆಂಡುಗಳು, 10 ಸೆಕೆಂಡುಗಳು, 20 ಸೆಕೆಂಡುಗಳು, ಅಥವಾ 30 ಸೆಕೆಂಡುಗಳು. ಈ ಸಮಯದ ಒಳಗೆ ನೀವು ಕಳುಹಿಸಿದ ಇಮೇಲ್ ತಪ್ಪಾಗಿದ್ದರೆ ಅದನ್ನು ಡಿಲೀಟ್‌ ಮಾಡುವ ಅವಕಾಶ ಕೂಡ ಇದೆ. ಅಂಡೂ ಸೆಂಡ್‌ ಮೆಸೇಜ್‌ ಕಾರ್ಯವನ್ನು ವೆಬ್ ಮತ್ತು ಜಿ-ಮೇಲ್‌ ಮೊಬೈಲ್ ಅಪ್ಲಿಕೇಶನ್‌ಗಳಿಗಾಗಿ ಜಿ-ಮೇಲ್‌ನಲ್ಲಿ ಲಭ್ಯವಿದೆ.

ಜಿ-ಮೇಲ್‌

ಇದಲ್ಲದೆ ಜಿ-ಮೇಲ್‌ನಲ್ಲಿ ಕೆಲವು ದಿನಗಳ ಹಿಂದೆ ಗೂಗಲ್‌ ಚಾಟ್‌ಗಾಗಿ ಹೊಸ ಅಪ್ಡೇಟ್‌ ಮಾಡಿದೆ. ಈ ಅಪ್ಡೇಟ್‌ ಮೂಲಕ ಬಳಕೆದಾರರು 1:1 ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ವಿಶೇಷವಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮೊಬೈಲ್ ಬಳಕೆದಾರರಿಗಾಗಿ ಈ ಅಪ್ಡೇಟ್‌ ಮಾಡಲಾಗಿದೆ. ಆದರೆ ಚಾಟ್ ಪಟ್ಟಿಯಲ್ಲಿ ಲಭ್ಯವಿರುವ ವೈಯಕ್ತಿಕ ಬಳಕೆದಾರರೊಂದಿಗೆ ಮಾತ್ರ ಈ ಕರೆಗಳನ್ನು ಮಾಡಬಹುದು. ಇದರೊಂದಿಗೆ ಜಿ-ಮೇಲ್‌ನಲ್ಲಿನ ಚಾಟ್ ರೋಸ್ಟರ್‌ನಲ್ಲಿ ಬಳಕೆದಾರರು ಮಿಸ್ಡ್‌ ಕಾಲ್‌ ಮತ್ತು ಚಾಲ್ತಿಯಲ್ಲಿರುವ ಕರೆ ವಿವರಗಳನ್ನು ಸಹ ಪರಿಶೀಲಿಸಬಹುದು.

ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ನಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ನಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಜಿ-ಮೇಲ್‌ ಅಕೌಂಟ್‌ ತೆರೆಯಿರಿ.
ಹಂತ:2 ನಂತರ ಜಿ-ಮೇಲ್‌ ಟಾಸ್ಕ್ ಬಾರ್‌ನಲ್ಲಿರುವ "ಮೀಟ್" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ "ನ್ಯೂ ಮೀಟ್‌" ಬಟನ್ ಮೇಲೆ ಟ್ಯಾಪ್ ಮಾಡಿ. ಮೀಟಿಂಗ್ ಲಿಂಕ್ ಅನ್ನು ಹಂಚಿಕೊಳ್ಳಲು ಆಯ್ಕೆಗಳನ್ನು ಕಂಡು ಬರಲಿದೆ.
ಹಂತ:4 ನೀವು ತ್ವರಿತ ಸಭೆಗೆ ಸೇರಲು ಆಯ್ಕೆಮಾಡಿದರೆ, ನಿಮ್ಮ ಕಾಲರ್ ಜೊತೆಗೆ ಲಿಂಕ್ ಅನ್ನು ಹಂಚಿಕೊಳ್ಳಲು "ಇನ್ವೈಟ್‌ ಲಿಂಕ್‌ ಶೇರ್‌" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:5 ನೀವು ಲಿಂಕ್ ಅನ್ನು ಟ್ಯಾಪ್ ಮಾಡಿದರೆ, ಸ್ವಯಂಚಾಲಿತವಾಗಿ ಮೀಟಿಂಗ್ ಸ್ಪೇಸ್‌ಗೆ ಸೇರಬಹುದು.
ಹಂತ:6 ನಂತರ ಜಿ-ಮೇಲ್‌ ತೆರೆಯಿರಿ ಮತ್ತು "ಚಾಟ್" ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:7 ನಿಮ್ಮ ಚಾರ್ ವಿಂಡೋವನ್ನು ಆಯ್ಕೆಮಾಡಿ ಮತ್ತು ಅದನ್ನು ತೆರೆಯಿರಿ.
ಹಂತ:8 ಈಗ "+" ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು "ಮೀಟ್ ಲಿಂಕ್" ಆಯ್ಕೆಮಾಡಿ.
ಹಂತ:9 ಲಿಂಕ್‌ ಅನ್ನು ನಿಮ್ಮ ಸಭೆಗೆ ಭಾಗವಹಿಸುವವರಿಗೆ ಕಳುಹಿಸಬೇಕಾಗುತ್ತದೆ.
ಹಂತ:10 ಈಗ ನೀವು ಮತ್ತು ನಿಮ್ಮ ಸಂಪರ್ಕದ ಇಬ್ಬರೂ ಸಭೆಯನ್ನು ಪ್ರಾರಂಭಿಸಲು ಲಿಂಕ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಜಿ-ಮೇಲ್‌ನಲ್ಲಿ ಆಡಿಯೋ/ವಿಡಿಯೋ ಕರೆಗಳನ್ನು ಮಾಡುವುದು ಹೇಗೆ?

ಜಿ-ಮೇಲ್‌ನಲ್ಲಿ ಆಡಿಯೋ/ವಿಡಿಯೋ ಕರೆಗಳನ್ನು ಮಾಡುವುದು ಹೇಗೆ?

ಹಂತ:1 ಮೊದಲನೇಯದಾಗಿ ನಿಮ್ಮ ಡಿವೈಸ್‌ನಲ್ಲಿ ಜಿ-ಮೇಲ್‌ ಅಪ್ಲಿಕೇಶನ್‌ ಇತ್ತೀಚಿನ ಆವೃತ್ತಿಗೆ ಅಪ್ಡೇಟ್‌ ಮಾಡಿ
ಹಂತ:2 ನಂತರ, ನೀವು ಜಿ-ಮೇಲ್‌ ಅನ್ನು ತೆರೆಯಬೇಕು ಮತ್ತು "ಚಾಟ್‌ಗಳು" ಟ್ಯಾಬ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. Google Workspace ಬಳಕೆದಾರರಿಗೆ, ಇದನ್ನು ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ. ನಿಯಮಿತ ಬಳಕೆದಾರರು ಸೆಟ್ಟಿಂಗ್‌ಗಳಿಂದ ಚಾಟ್ಸ್ ಆಯ್ಕೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.
ಹಂತ:3 ಚಾಟ್‌ಗಳ ವಿಭಾಗದ ಅಡಿಯಲ್ಲಿ, ಪಟ್ಟಿ ಮಾಡಲಾದ ಎಲ್ಲಾ ಸಂಭಾಷಣೆಗಳನ್ನು ನೀವು ನೋಡುತ್ತೀರಿ. ಇದರಲ್ಲಿ ಒಂದನ್ನು ಟ್ಯಾಪ್ ಮಾಡಿ.
ಹಂತ:4 ನಂತರ ಮೇಲಿನ ಮೂಲೆಯಿಂದ, ನೀವು ಕ್ರಮವಾಗಿ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಲು ಫೋನ್ ಅಥವಾ ವೀಡಿಯೊ ಐಕಾನ್‌ಗಳನ್ನು ಟ್ಯಾಪ್ ಮಾಡಬಹುದು.
ಹಂತ:5 ನೀವು ಜಿ-ಮೇಲ್‌ ಮೂಲಕ ಕರೆಯನ್ನು ಸ್ವೀಕರಿಸಿದಾಗ, ಸಾಮಾನ್ಯ ಫೋನ್ ಕರೆಗಳಂತೆಯೇ ಕಾಲ್‌ ನೋಟಿಫಿಕೇಶನ್ ಕಾಣಬಹುದಾಗಿದೆ.

PC ಯಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

PC ಯಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

ಹಂತ:1 ಲ್ಯಾಪ್‌ಟಾಪ್‌ನಲ್ಲಿ ಜಿ-ಮೇಲ್‌ ಕರೆ ಮಾಡಲು ನಿಮ್ಮ ವೆಬ್ ಬ್ರೌಸರ್‌ನಲ್ಲಿ Gmail ತೆರೆಯಿರಿ.
ಹಂತ:2 ನಂತರ ಎಡಭಾಗದ ಬಾರ್‌ನಲ್ಲಿ, "ಮೀಟ್" ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಹೊಸ ಸಭೆ" ಕ್ಲಿಕ್ ಮಾಡಿ.
ಹಂತ:3 ಇನ್ವೈಟ್‌ ಲಿಂಕ್‌ನೊಂದಿಗೆ ಹೊಸ ವಿಂಡೋ ಪಾಪ್ ಅಪ್ ಆಗುತ್ತದೆ.
ಹಂತ:4 ಈ ಲಿಂಕ್‌ ಅನ್ನು ನಿಮ್ಮ ಕರೆ ಮಾಡುವವರಿಗೆ ಇಮೇಲ್ ಮೂಲಕ ಕಳುಹಿಸಬಹುದು.
ಹಂತ:5 ನಂತರ, "ಈಗ ಸೇರಿಕೊಳ್ಳಿ" ಬಟನ್ ಅನ್ನು ಕ್ಲಿಕ್ ಮಾಡಿ. ಅದೇ ಲಿಂಕ್ ಮೂಲಕ ಇತರ ವ್ಯಕ್ತಿಯು ಸೇರುವವರೆಗೆ ಕಾಯಿರಿ. ಹೀಗೆ ಮಾಡುವ ಮೂಲಕ ಜಿ-ಮೇಲ್‌ ಕರೆಯಲ್ಲಿ ಭಾಗವಹಿಸಬಹುದು.

Best Mobiles in India

English summary
Gmail app clocks over 10 billion installs on Google Play Store: 4th app to hit this milestone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X