ಮೊಬೈಲ್ 'ಜಿಮೇಲ್' ಆವೃತ್ತಿಯಲ್ಲೂ ಬರಲಿದೆ 'ಡಾರ್ಕ್ ಮೋಡ್'!

|

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇಷ್ಟವಾಗುವ ವೈಶಿಷ್ಟ್ಯವಾಗಿ ಮಾರ್ಪಟ್ಟಿರುವ ಡಾರ್ಕ್ ಮೋಡ್ ಇದೀಗ ಆಂಡ್ರಾಯ್ಡ್ 'ಜಿಮೇಲ್' ಆವೃತ್ತಿಗೂ ಬರಲಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಜಿಮೇಲ್ ಆವೃತ್ತಿ 2019.06.09ರಲ್ಲಿ ಹೊಸ ಡಾರ್ಕ್ ಮೋಡ್ ಅನ್ನು ಆಂಡ್ರಾಯ್ಡ್ ಪೊಲೀಸ್ ಗುರುತಿಸಿದ್ದು, ಶೀಘ್ರದಲ್ಲೇ ಮೊಬೈಲ್ 'ಜಿಮೇಲ್' ಆವೃತ್ತಿಯೂ ಡಾರ್ಕ್ ಮೋಡ್ ಪಡೆಯಲಿದೆ.

ಮೊಬೈಲ್ 'ಜಿಮೇಲ್' ಆವೃತ್ತಿಯಲ್ಲೂ ಬರಲಿದೆ 'ಡಾರ್ಕ್ ಮೋಡ್'!

ಹೌದು, ಫೇಸ್‌ಬುಕ್ ಮೆಸೆಂಜರ್ ಮತ್ತು ಕ್ರೋಮ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಡಾರ್ಕ್ ಮೋಡ್ ಅನ್ನು ಈಗಾಗಲೇ ಪರಿಚಯಿಸಿವೆ. ವಾಟ್ಸ್ಆಪ್ ಈ ವೈಶಿಷ್ಟ್ಯವನ್ನು ತರುವಲ್ಲಿ ಕೆಲಸ ಮಾಡುತ್ತಿದೆ. ಜತೆಗೆ ಇದೀಗ ಜಿಮೇಲ್ ಅನ್ನು ಸಹ ಡಾರ್ಕ್ ಮೋಡ್‌ನೊಂದಿಗೆ ಗುರುತಿಸಲಾಗಿರುವುದು ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಬಳಕೆದಾರರಿಗೆ ಇದು ಸಿಹಿಸುದ್ದಿ ಎಂದು ಹೇಳಬಹುದು.

ಕಣ್ಣಿಗೆ ಹೆಚ್ಚು ಶ್ರಮ ನೀಡದ ಮತ್ತು ಬ್ಯಾಟರಿ ಉಳಿಕೆಯ ಉದ್ದೇಶವನ್ನೂ ಹೊಂದಿರುವ ಗೂಗಲ್, ಜಿಮೇಲ್‌ನಲ್ಲಿ ಮೊದಲಿಗೆ ಡಾರ್ಕ್ ಮೋಡ್ ಪರಿಚಯಿಸುತ್ತಿದೆ. ನಂತರದಲ್ಲಿ ಗೂಗಲ್ ಸಮೂಹದ ಇತರ ಆಪ್‌ಗಳಾದ ಗೂಗಲ್ ಸೆಟ್ಟಿಂಗ್ಸ್, ಗೂಗಲ್ ಡಿಸ್ಕವರ್, ಗೂಗಲ್ ಸರ್ಚ್ ಮತ್ತು ಗೂಗಲ್ ಅಸಿಸ್ಟೆಂಟ್‌ನಲ್ಲಿ ಹಂತಹಂತವಾಗಿ ಡಾರ್ಕ್ ಮೋಡ್ ಬರಲಿದೆ ಎನ್ನಲಾಗಿದೆ.

ಮೊಬೈಲ್ 'ಜಿಮೇಲ್' ಆವೃತ್ತಿಯಲ್ಲೂ ಬರಲಿದೆ 'ಡಾರ್ಕ್ ಮೋಡ್'!

ಇನ್ನು ಇದೇ ಜುಲೈ 2ನೇ ತಾರೀಣಿನಿಂದ ಎಲ್ಲಾ ಜಿಮೇಲ್ ಮತ್ತು ಜಿ ಸೂಟ್ ಬಳಕೆದಾರರಿಗೆ ಡೈನಾಮಿಕ್ ಇಮೇಲ್ ವೈಶಿಷ್ಟ್ಯವನ್ನು ಗೂಗಲ್ ಇತ್ತೀಚೆಗೆ ಘೋಷಿಸಿದೆ. ಈ ವೈಶಿಷ್ಟ್ಯವು ಪ್ರಸ್ತುತ ಬೀಟಾದಲ್ಲಿ ಲಭ್ಯವಿದ್ದು, ಡೈನಾಮಿಕ್ ಇಮೇಲ್‌ಗಳ ವೈಶಿಷ್ಟ್ಯವು ಕಂಪೆನಿಗಳಿಗೆ ತಮ್ಮ ಇಮೇಲ್‌ಗಳಲ್ಲಿ ಸಂವಾದಾತ್ಮಕ ವಿಷಯವನ್ನು ಸೇರಿಸಲು ಅವಕಾಶ ಮಾಡಿಕೊಡುತ್ತದೆ.

ಓದಿರಿ: ಭಾರತದಲ್ಲಿ 'ಹುವಾವೇ' ಕಥೆಯೇನು?..ಭೀತಿಯಿಂದ ತತ್ತರಿಸಿದ ಚೀನಾದಿಂದ ಮನವಿ!!

ಒಂದು ವೇಳೆ ಮೇಲ್‌ ಏನಾದರೂ ಹ್ಯಾಕ್ ಆದರೆ ಮಾಹಿತಿಯನ್ನು ಇದು ಸಂರಕ್ಷಿಸುತ್ತದೆ. ಇದು ನಿಮ್ಮ ಮೇಲ್‌ಗಳಲ್ಲಿ ಅಂತರ್‌ ನಿರ್ಮಿತ ಮಾಹಿತಿ ನಿರ್ವಹಣೆ ಮಾಡುತ್ತದೆ. ಇ ಮೇಲ್‌ಗಳ ಎಕ್ಸಾಪೈರೇಷನ್ ಡೇಟ್‌ ಅಳವಡಿಸಲು ಸಹ ಅವಕಾಶವನ್ನು ಕಲ್ಪಿಸುತ್ತದೆ. ಕಾಮೆಂಟ್ ಪೋಸ್ಟ್‌ಗಳನ್ನು ಪ್ರತ್ಯೇಕ ಇಮೇಲ್ ಎಚ್ಚರಿಕೆಗಳ ಬದಲಿಗೆ ಜಿಮೇಲ್‌ನಲ್ಲಿ ನೇರವಾಗಿ ನೋಡಲು ಅನುಮತಿಸುತ್ತದೆ.

Best Mobiles in India

English summary
Dark Mode has become an increasingly appeasing feature among smartphone users, now Gmail Dark Mode Spotted in Android App. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X