ಜಿ-ಮೇಲ್‌ ಸೇವೆಯಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಸರಿಪಡಿಸಿದ ಗೂಗಲ್‌!

|

ಇಂದು ಭಾರತವೂ ಸೇರಿದಂತೆ ವಿಶ್ವದಾದ್ಯಂತ ಜಿ-ಮೇಲ್‌, ಗೂಗಲ್‌ ಡ್ರೈವ್‌, ಗೂಗಲ್‌ ಡಾಕ್ಸ್‌, ಗೂಗಲ್‌ ಮೀಟ್‌ ಸೇವೆಗಳಲ್ಲಿ ಸಾಕಷ್ಟು ಸಮಸ್ಯೆ ಕಾಣಿಸಿಕೊಂಡಿದೆ. ಗೂಗಲ್‌ನ ಸೇವೆಗಳಲ್ಲಿ ಉಂಟಾದ ತಾಂತ್ರಿಕದೋಷದಿಂದ ವಿಶ್ವದಾದ್ಯಂತ ಜಿ-ಮೇಲ್‌ ಸೇವೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಿದೆ. ಇದಲ್ಲದೆ Gmail ಮತ್ತು Google ಡ್ರೈವ್‌ನೊಂದಿಗಿನ ಸಮಸ್ಯೆಯ ವರದಿ ಜಗತ್ತಿನೆಲ್ಲಡೆ ಕಾಣಿಸಿಕೊಂಡಿತ್ತು. ಜಗತ್ತಿನ 11% ಬಳಕೆದಾರರು ಜನಪ್ರಿಯ ಇಮೇಲ್ ಸೇವೆಯಲ್ಲಿ ಸಂದೇಶಗಳನ್ನು ಸ್ವೀಕರಿಸುವಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದೆ, ಎಂದು ವರದಿ ಆಗಿದೆ.

ಗೂಗಲ್‌

ಹೌದು, ಗೂಗಲ್‌ ಜಿ-ಮೇಲ್‌, ಗೂಗಲ್‌ ಡ್ರೈಊವ್‌, ಗೂಗಲ್‌ ಮೀಟ್‌ ಸೇವೆಗಳಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಿತ್ತು. ಆದರೆ ಸಂಜೆ ವೇಳೆಗೆ ಸರಿಯಾಗಿದೆ ಎಂದು ವರದಿಯಾಗಿದೆ. ಬೆಳಿಗ್ಗೆ ಕಾಣಿಸಿಕೊಂಡ ಸಮಸ್ಯೆ ಸಂಜೆಯ ತನಕವೂ ಮುಂದುವರೆದಿದ್ದರ ಪರಿಣಾಮ ಜಗತ್ತಿನ ಎಲ್ಲೆಡೆ ಜಿ-ಮೇಲ್‌ ಸೇವೆಯಲ್ಲಿ ಯಾವುದೇ ಇಮೇಲ್‌ ಸಂದೇಶಗಳನ್ನ ಕಳುಹಿಸಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಸೊಶೀಯಲ್‌ ಮೀಡಿಯಾಗಳಲ್ಲಿ ಗೂಗಲ್‌ ಸೇವೆಯಲ್ಲಿ ಉಂಟಾದ ಸಮಸ್ಯೆಯ ಬಗ್ಗೆ ಸಾಕಷ್ಟು ಮಂದಿ ವರದಿ ಮಾಡಿದ್ದರು, ಇದನ್ನು ಸ್ವೀಕರಿಸಿದ ಗೂಗಲ್‌ ತನ್ನ ಸೇವೆಯಲ್ಲಿ ಉಂಟಾದ ದೋಷವನ್ನ ಸರಿಪಡಿಸಿದ್ದು, ಇದೀಗ ಊಗಲ್‌ ಜಿ-ಮೇಲ್‌ ಸೇವೆ ಎಲ್ಲರಿಗೂ ಲಭ್ಯವಾಗುತ್ತಿದೆ.

ಗೂಗಲ್‌

ಸೊಶೀಯಲ್‌ ಮೀಡಿಯಾದಲ್ಲಿ ಬೆಳಿಗ್ಗೆಯಿಂದಲೂ ಚರ್ಚೆಯಲ್ಲಿದ್ದ ಮಾತು ಒಂದೇ ಗೂಗಲ್‌ನ ಜಿ-ಮೇಲ್‌ ಸೇವೆ ಕಾರ್ಯನಿರ್ವಹಿಸುತ್ತಿಲ್ಲ. ಯಾವುದೇ ಮೇಲ್‌ ಸಮದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲ ಅನ್ನೊದಾಗಿತ್ತು. ಅದರಲ್ಲೂ ಹಲವಾರು ಬಳಕೆದಾರರು Gmail ಮೂಲಕ ಇಮೇಲ್‌ಗಳನ್ನು ಕಳುಹಿಸುವ ಮತ್ತು Google ಡ್ರೈವ್‌ನಲ್ಲಿ ಫೈಲ್‌ಗಳನ್ನು ಅಪ್‌ಲೋಡ್ ಮಾಡುವ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಇದಲ್ಲದೆ ಇನ್ನೂ ಹೆಚ್ಚುವರಿಯಾಗಿ, ಗೂಗಲ್ ಡಾಕ್ಸ್ ಮತ್ತು ಗೂಗಲ್ ಮೀಟ್‌ ಸೇವೆಯಲ್ಲೂ ಕೆಲವು ಬಳಕೆದಾರರು ಕನೆಕ್ಟಿವಿಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಆಗಿತ್ತು.

Gmail

ಇನ್ನು ಕೆಲವು ಬಳಕೆದಾರರು ತಮ್ಮ ಇಮೇಲ್‌ಗಳಿಗೆ Attachmentಗಳನ್ನು ಅಪ್‌ಲೋಡ್ ಮಾಡುವಾಗ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದಲ್ಲದೆ, #Gmail ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ವಿಶ್ವದಾದ್ಯಂತ ಅನೇಕ ಭಾಗಗಳಲ್ಲಿ ಟ್ರೆಂಡಿಂಗ್ ಆಗಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಈ ಸಮಸ್ಯೆಯು ಬಳಕೆದಾರರ ಮೇಲೆ ನೇರ ಪರಿಣಾಮ ಬೀರಿತ್ತು. ಅಲ್ಲದೆ Gmail ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪ್ರತಿಬಿಂಬಿಸಲು ಜಿ ಸೂಟ್ ಸ್ಥಿತಿ ಡ್ಯಾಶ್‌ಬೋರ್ಡ್ ಅನ್ನು ಸಹ ಆಪ್ಡೇಟ್‌ ಮಾಡಲಾಗಿತ್ತು.

ಗೂಗಲ್‌

ಆದರೆ ಸದ್ಯ ಇದೀಗ ಗೂಗಲ್‌ ನ ಜಿ-ಮೇಲ್, ಡ್ರೈವ್, ಮೀಟ್ ಮತ್ತು ಇತರ ಗೂಗಲ್ ಸೇವೆಯ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಗೂಗಲ್‌ ಹೇಳಿದೆ. ಅಲ್ಲದೆ ಬಳಕೆದಾರರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ. ಜೊತೆಗೆ ನಿಮ್ಮ ತಾಳ್ಮೆ ಮತ್ತು ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳ ಎಂದು ಗೂಗಲ್ ಹೇಳಿದೆ. ಈ ಮೂಲಕ ಬೆಳಿಗ್ಗೆಯಿಂದ ತೊಂದರೆ ಅನುಭವಿಸಿದ್ದ ಸಾಕಷ್ಟು ಬಳಕೆದಾರರು ನಿಟ್ಟುಸಿರುಬಿಡುವಂತಾಗಿದೆ,

Best Mobiles in India

English summary
Gmail, Drive, Meet, and other Google services were facing disruptions for hours today.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X