ಆನ್‌ಲೈನ್ ಅರ್ಡರ್‌ಗಳಿಗೆ ಸಹಾಯ ಮಾಡಲು ಮುಂದಾದ ಜಿ-ಮೇಲ್‌: ಏನಿದು ಹೊಸ ಫೀಚರ್ಸ್‌ ?

|

ಆನ್‌ಲೈನ್ ಶಾಪಿಂಗ್ ಅಂತೂ ಈಗ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಇ-ಕಾಮರ್ಸ್‌ ತಾಣಗಳು ಸ್ಟೋರ್‌ಗಳ ಬೆಲೆಗಿಂತ ಕೈಗೆಟಕುವ ಬೆಲೆಯಲ್ಲಿ ಮಾರಾಟ ಮಾಡುವುದರಿಂದ ಗ್ರಾಹಕರು ಸಹ ಹೆಚ್ಚಾಗಿ ಆಕರ್ಷಿತರಾಗಿದ್ದಾರೆ. ಹಾಗೆಯೇ ನಗರ ಪ್ರದೇಶದಲ್ಲಿದ್ದ ಈ ಆನ್‌ಲೈನ್‌ ಶಾಪಿಂಗ್‌ ಇಂದಿನ ದಿನದಲ್ಲಿ ಹಳ್ಳಿಗಳಿಗೂ ವಿಸ್ತರಿಸಿಕೊಂಡಿದೆ. ಈ ನಡುವೆ ಆನ್‌ಲೈನ್ ಶಾಪಿಂಗ್‌ ಸಂಬಂಧ ಗೂಗಲ್‌ ತನ್ನ ಜಿ-ಮೇಲ್‌ ಮೂಲಕ ಪ್ರಮುಖ ಫೀಚರ್ಸ್‌ ಅನ್ನು ನೀಡಲು ಮುಂದಾಗಿದೆ.

ಆನ್‌ಲೈನ್

ಹೌದು, ಆನ್‌ಲೈನ್ ನಲ್ಲಿ ಏನಾದರೂ ಆರ್ಡರ್ ಮಾಡಿದ ಬಳಿಕ ಗ್ರಾಹಕರು ಅದು ಬರುವವರೆಗೂ ಕಾಯಬೇಕು, ಇದು ಸಾಮಾನ್ಯ ಪ್ರಕ್ರಿಯೆ. ಕೆಲವೊಮ್ಮೆ ಈ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡುವುದು ಸ್ವಲ್ಪ ಕಷ್ಟದ ಕೆಲಸವೂ ಆಗಿರಬಹುದು. ಹಾಗೆಯೇ ನೀವು ಆನ್‌ಲೈನ್‌ ಶಾಪಿಂಗ್‌ ಆಪ್‌ನಿಂದ ಹೊರಗಿದ್ದ ಸಂದರ್ಭದಲ್ಲಿ ಮೇಲ್‌ನಲ್ಲಿ ಇದರ ಬಗ್ಗೆ ಮಾಹಿತಿ ಬರುತ್ತಿರುತ್ತವೆ, ಇದು ಸಹ ನಿಮಗೆ ತಿಳಿದಿರುವ ಸಾಮಾನ್ಯ ಸಂಗತಿ ಇದೆಲ್ಲದರ ಜೊತೆಗೆ ಆರ್ಡರ್ ಟ್ರ್ಯಾಕಿಂಗ್ ವಿವರಗಳನ್ನು ನಿಖರವಾಗಿ ತಿಳಿಸುವ ಫೀಚರ್ಸ್‌ ಅನ್ನು ನೀಡಲು ಗೂಗಲ್‌ ಸಿದ್ಧವಾಗಿದೆ.

ಟ್ರ್ಯಾಕಿಂಗ್

ಪ್ರಸ್ತುತ ಆರ್ಡರ್ ಟ್ರ್ಯಾಕಿಂಗ್ ಮಾಹಿತಿಯನ್ನು ಪಡೆದುಕೊಳ್ಳಲು ಇಮೇಲ್‌ ತೆರೆದು ಅದರಲ್ಲಿ ಯಾವ ಆರ್ಡರ್‌ ಎಂಬುದನ್ನು ಸರ್ಚ್‌ ಮಾಡಿ ಹುಡುಕಬೇಕಿತ್ತು. ಅದಕ್ಕೂ ಮಿಗಿಲಾಗಿ ಇಲ್ಲಿ ಹಲವಾರು ಲಿಂಕ್‌ ತೆರೆದುಕೊಳ್ಳುತ್ತಿದ್ದವು. ಜೊತೆಗೆ ಆರ್ಡರ್‌ ನಂಬರ್‌ ಅನ್ನೂ ಸಹ ನಮೂದು ಮಾಡಬೇಕಿತ್ತು. ಇದೆಲ್ಲಕ್ಕೂ ಫುಲ್‌ಸ್ಟಾಪ್‌ ಇಡಲು ಗೂಗಲ್‌ ಮುಂದಾಗಿದ್ದು, 'ಇಮೇಲ್ ನಿಮ್ಮ ಸಮಯವನ್ನು ಉಳಿಸಲು ಮತ್ತು ನಿಮ್ಮ ಎಲ್ಲಾ ಆರ್ಡರ್‌ ಮೇಲೆ ಕಣ್ಣಿಡಲು ಸಹಾಯ ಮಾಡುತ್ತದೆ' ಎಂದು ಗೂಗಲ್‌ ತನ್ನ ಬ್ಲಾಗ್‌ ಫೋಸ್ಟ್‌ನಲ್ಲಿ ಉಲ್ಲೇಖಿಸಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ಇ-ಮೇಲ್‌ಗೆ ಬಂದ ಮೇಲ್‌ಗಳನ್ನು ಓಪನ್‌ ಮಾಡಿ ಟ್ರ್ಯಾಕ್ ಮಾಡಲು ಸುಲಭ ಮಾರ್ಗ ಕಲ್ಪಿಸಲಾಗಿದೆ. ಇದರ ಜೊತೆಗೆ ಟ್ಯ್ರಾಕಿಂಗ್ ಸಂಖ್ಯೆಗಳನ್ನು ಹೊಂದಿರುವ ಆರ್ಡರ್‌ಗಳು ನಿಮ್ಮ ಇನ್‌ಬಾಕ್ಸ್‌ ಲಿಸ್ಟ್‌ ವ್ಯೂ ನಲ್ಲಿಯೂ ಸಹ ಆರ್ಡರ್‌ ಸ್ಟೇಟಸ್‌ ವಿವರಗಳನ್ನು ತೋರಿಸುತ್ತದೆ. ಹಾಗೆಯೇ ಬಳಕೆದಾರರು ತಮ್ಮ ಪ್ರಸ್ತುತ ಆರ್ಡರ್‌ನ ಸ್ಥಿತಿ ಮತ್ತು ಇನ್ನಿತರೆ ವಿವರವನ್ನು ವೈಯಕ್ತಿಕ ಇಮೇಲ್‌ಗಳ ಮೂಲಕ ಲಿಸ್ಟ್‌ ವ್ಯೂ ನಲ್ಲಿಯೇ ವೀಕ್ಷಿಸಲು ಸಾಧ್ಯವಾಗುತ್ತದೆ.

ಗೂಗಲ್‌

ಗೂಗಲ್‌ ಈ ಫೀಚರ್ಸ್‌ ಅನ್ನು ಪ್ರಸ್ತುತ ಯುಎಸ್‌ನಲ್ಲಿ ಪರೀಕ್ಷಿಸಲು ಪ್ರಾರಂಭಿಸಿದೆ. ಇದಾದ ನಂತರ ಜಗತ್ತಿನ ಎಲ್ಲಾ ಕಡೆ ವಿಸ್ತರಣೆ ಮಾಡುವ ಆಲೋಚನೆಯಲ್ಲಿದ್ದು, ಈ ಫೀಚರ್ಸ್‌ನಲ್ಲಿ ಅಂದಾಜು ಆಗಮನದ ದಿನಾಂಕವನ್ನೂ ಸಹ ತೋರಿಸಲಾಗುತ್ತದೆ. ಇದರ ಜೊತೆಗೆ 'ನಾಳೆ ತಲುಪುತ್ತದೆ', 'ಇಂದು ತಲುಪಲಿದೆ' ಎಂಬ ಲೇಬಲ್‌ ಅನ್ನು ಸಹ ರಚಿಸಲಿದೆ.

ನೀವು ಮಾಡಬೇಕಿರುವುದೇನು?

ನೀವು ಮಾಡಬೇಕಿರುವುದೇನು?

ನಿಮ್ಮ ಇನ್‌ಬಾಕ್ಸ್‌ನಲ್ಲಿ ಪ್ಯಾಕೇಜ್ ಟ್ರ್ಯಾಕಿಂಗ್ ನವೀಕರಣಗಳನ್ನು ಸ್ವೀಕರಿಸಬೇಕು ಎಂದರೆ ಮೊದಲು ಸೆಟ್ಟಿಂಗ್‌ ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಿದೆ. ಅದರಂತೆ ಜಿ-ಮೇಲ್‌ನ ಸೆಟ್ಟಿಂಗ್‌ಗಳಲ್ಲಿ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಬೇಕಿದೆ. ನಂತರ ಜಿ-ಮೇಲ್‌ ಆಟೋಮ್ಯಾಟಿಕ್‌ ಆಗಿ ಟ್ರ್ಯಾಕಿಂಗ್ ಸಂಖ್ಯೆಗಳನ್ನು ಬಳಸಿಕೊಂಡು ಆರ್ಡರ್ ಸ್ಥಿತಿಗಳನ್ನು ತಾನೇ ಹುಡುಕಿಕೊಳ್ಳುತ್ತದೆ. ಜೊತೆಗೆ ಆ ಮಾಹಿತಿಯನ್ನು ನಿಮ್ಮ ಇನ್‌ಬಾಕ್ಸ್‌ನಲ್ಲಿ ಡಿಸ್‌ಪ್ಲೇ ಮಾಡುತ್ತದೆ. ಇದರ ಹೊರತಾಗಿ ಈ ಫೀಚರ್ಸ್‌ ಬೇಡ ಎಂದರೆ ಯಾವಾಗ ಬೇಕಾದರೂ ಸೆಟ್ಟಿಂಗ್‌ಗೆ ಹೋಗಿ ಇದನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.

ಜಿ-ಮೇಲ್‌

ಇದರ ಹೊರತಾಗಿ ಮುಂಬರುವ ದಿನಗಳಲ್ಲಿ, ಜಿ-ಮೇಲ್‌ ವಿಳಂಬವಾಗುವ ಆರ್ಡರ್‌ ಬಗ್ಗೆಯೂ ಲೇಬಲ್ ರಚಿಸಲು ಮುಂದಾಗಿದೆ. ಇದರಲ್ಲಿ ಎಷ್ಟು ದಿನ ವಿಳಂಬ ಆಗಲಿದೆ ಎಂಬಿತ್ಯಾದಿ ಮಾಹಿತಿ ಪ್ರದರ್ಶನ ಆಗುತ್ತದೆ. ಹೀಗಾಗಿ ನೀವು ಇ-ಕಾಮರ್ಸ್‌ ಸೈಟ್‌ಗೆ ಹೋಗಿ ಅಲ್ಲಿ ಆರ್ಡರ್‌ ವಿವರ ಪಡೆಯುವ ಕೆಲಸ ತಪ್ಪುತ್ತದೆ.

Best Mobiles in India

English summary
Online shopping has also become more popular now. Meanwhile, Google is ready to provide new features related to online shopping in Gmail.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X