ಗೂಗಲ್‌ ಮತ್ತು ಸ್ಯಾಮ್‌ಸಂಗ್‌ನಿಂದ ಹೊಸ ಹೆಲ್ತ್‌ ಕನೆಕ್ಟ್‌ API ಬಿಡುಗಡೆ!

|

ಗೂಗಲ್‌ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳು ಪರಸ್ಪರ ಸಹಯೋಗದೊಂದಿಗೆ ಹೊಸ ಪ್ಲಾಟ್‌ಫಾರ್ಮ್‌ ನಿರ್ಮಿಸಲು ಮುಂದಾಗಿವೆ. ಈ ಎರಡು ದಿಗ್ಗಜ ಕಂಪೆನಿಗಳ ಸಹಯೋಗದೊಂದಿಗೆ ಹೆಲ್ತ ಕನೆಕ್ಟ್‌ ಪ್ಲಾಟ್‌ಫಾರ್ಮ್‌ ಬರಲಿದೆ. ಇದು API (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಆಗಿದ್ದು, ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ಮತ್ತು ಡಿವೈಸ್‌ಗಳ ನಡುವೆ ಬಳಕೆದಾರರ ಹೆಲ್ತ್‌ ಡೇಟಾವನ್ನು ಸಿಂಕ್ ಮಾಡುವುದನ್ನು ಸಕ್ರಿಯಗೊಳಿಸುತ್ತದೆ.

ಗೂಗಲ್‌

ಹೌದು, ಗೂಗಲ್‌ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳ ಸಹಯೋಗದಲ್ಲಿ ಹೆಲ್ತ್‌ ಕನೆಕ್ಟ್‌ ಪ್ಲಾಟ್‌ಫಾರ್ಮ್‌ ಬರಲಿದೆ. ಇದು ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ಮತ್ತು ಡಿವೈಸ್‌ಗಳ ನಡುವೆ ಹೆಲ್ತ್‌ ಡೇಟಾವನ್ನು ಸಿಂಕ್‌ ಮಾಡಲಿದೆ. ಹೆಲ್ತ್‌ ಡೇಟಾವನ್ನು ಟ್ರ್ಯಾಕ್ ಮಾಡಲು ವಿವಿಧ ಪ್ರೋಗ್ರಾಂಗಳಿಂದ ಡೇಟಾವನ್ನು ಸುರಕ್ಷಿತವಾಗಿ ಪ್ರವೇಶಿಸಲು ಡೆವಲಪರ್‌ಗಳಿಗೆ ಈ ಪ್ಲಾಟ್‌ಫಾರ್ಮ್‌ ಅವಕಾಶ ನೀಡಲಿದೆ. ಇನ್ನುಳಿದಂತೆ ಹೆಲ್ತ್‌ ಕನೆಕ್ಟ್‌ ಪ್ಲಾಟ್‌ಫಾರ್ಮ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಲ್ತ್‌ ಕನೆಕ್ಟ್‌

ಹೆಲ್ತ್‌ ಕನೆಕ್ಟ್‌ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರ ಆರೋಗ್ಯ ಮತ್ತು ಫಿಟ್‌ನೆಸ್ ಡೇಟಾವನ್ನು ನಿರ್ವಹಿಸಲು ಅವಕಾಶ ನೀಡಲಿದೆ. ಇನ್ನು ಈ ಪ್ಲಾಟ್‌ಫಾರ್ಮ್‌ ವ್ಯಾಯಾಮ ಮತ್ತು ನಿದ್ರೆ ಸೇರಿದಂತೆ 50 ಕ್ಕೂ ಹೆಚ್ಚು ಡೇಟಾ ವಿಭಾಗಗಳನ್ನು ಬೆಂಬಲಿಸಲಿದೆ. ಜೊತೆಗೆ ಹೃದಯ ಬಡಿತ ಮತ್ತು ರಕ್ತದೊತ್ತಡದಂತಹ ಪ್ರಮುಖ ಅಂಶಗಳನ್ನು ಹೊಂದಿದೆ. ಇದಲ್ಲದೆ ಬಳಕೆದಾರರು ತಮ್ಮ ಡೇಟಾದ ಮೇಲೆ ಕಂಪ್ಲೀಟ್‌ ಕಂಟ್ರೋಲ್‌ ಹೊಂದಿದ್ದಾರೆ ಅನ್ನೊದನ್ನ ಖಾತರಿಪಡಿಸಲು, ಹೊಸ API ಕೇಂದ್ರೀಕೃತ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀಡಲಿದೆ.

ಪ್ಲಾಟ್‌ಫಾರ್ಮ್‌

ಇನ್ನು ಈ ಪ್ಲಾಟ್‌ಫಾರ್ಮ್‌ ಮೂಲಕ ಬಳಕೆದಾರರು ಡಿವೈಸ್‌ನಲ್ಲಿನ ಡೇಟಾವನ್ನು ಹಂಚಿಕೊಳ್ಳಲು ಬಯಸುವ ಅಪ್ಲಿಕೇಶನ್‌ಗಳಿಗೆ ದೃಢೀಕರಣವನ್ನು ಒದಗಿಸುವುದನ್ನು ಸರಳಗೊಳಿಸುತ್ತದೆ. ಇದಲ್ಲದೆ ಹೆಲ್ತ್ ಕನೆಕ್ಟ್‌ನ ಸಂಪೂರ್ಣ ಪ್ರಯೋಜನಗಳು ಮತ್ತು ಸಾಮರ್ಥ್ಯವನ್ನು ಅರಿತುಕೊಳ್ಳಲು ನಾವು ಗೂಗಲ್‌ನೊಂದಿಗೆ ಸಹಯೋಗ ಹೊಂದಿದ್ದೇವೆ ಎಂದು ಸ್ಯಾಮ್‌ಸಂಗ್‌ ಕಾರ್ಯನಿರ್ವಾಹಕ VP TaeJong Jay Yang ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಸ್ಯಾಮ್‌ಸಂಗ್ ಹೆಲ್ತ್ ಕೂಡ ಹೆಲ್ತ್ ಕನೆಕ್ಟ್ ಅನ್ನು ಅಳವಡಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

ಹೆಲ್ತ್ ಕನೆಕ್ಟ್

ಹೆಲ್ತ್ ಕನೆಕ್ಟ್ ಓಪನ್ ಸೋರ್ಸ್ ಬೀಟಾ ಪ್ರೋಗ್ರಾಂ ಆಗಿದೆ. ಇದರಿಂದ ಎಲ್ಲಾ ಡೆವಲಪರ್‌ಗಳು ಮೌಲ್ಯಮಾಪನ ಮಾಡಬಹುದು. ಆರಂಭಿಕ ಪ್ರವೇಶ ಕಾರ್ಯಕ್ರಮದ ಭಾಗವಾಗಿ ಮೈಫಿಟ್‌ನೆಸ್‌ಪಾಲ್‌, ಲೀಪ್‌ ಫಿಟ್‌ನೆಸ್‌ ಮತ್ತು ವಿಥಿಂಗ್ಸ್ ಸೇರಿದಂತೆ ಇತರೆ ಡೆವಲಪರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಗೂಗಲ್‌ ಘೊಷಣೆ ಮಾಡಿದೆ. ಸದ್ಯ ಸ್ಯಾಮ್‌ಸಂಗ್‌ ಮತ್ತು ಗೂಗಲ್‌ನ ಹೊಸ ಪಾಲುದಾರಿಕೆಯು ಬಳಕೆದಾರರಿಗೆ ಸಮಗ್ರ ಆರೋಗ್ಯ ಪರಿಹಾರಗಳನ್ನು ನೀಡಲಿದೆ ಎಂದು ಹೇಳಲಾಗ್ತಿದೆ. ಇದರಿಂದ ಬಳಕೆದಾರರ ಬಳಸಿ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಡೆವಲಪರ್‌ಗಳು ಹೆಲ್ತ್ ಕನೆಕ್ಟ್ ಅನ್ನು ಹೇಗೆ ಬಳಸುತ್ತಾರೆ ಎಂಬುದು ಆಸಕ್ತಿದಾಯಕವಾಗಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ಇತ್ತೀಚಿಗೆ ತನ್ನ ವಾರ್ಷಿಕ ಸಮ್ಮೆಳನದಲ್ಲಿ ಹೊಸ ಆಂಡ್ರಾಯ್ಡ್‌ 13 ಫೀಚರ್ಸ್‌ಗಳನ್ನು ಪ್ರಕಟಿಸಿದೆ. ನಿಮ್ಮ ಸ್ಮಾರ್ಟ್‌ಫೋನ್ ಅನುಭವವು ಹೆಚ್ಚು ಸುರಕ್ಷಿತ ಮತ್ತು ಪ್ರೈವೆಸಿ ಹೊಂದಿರುವುದನ್ನ ಖಚಿತಪಡಿಸುವ ಹೊಸ ಅಪ್ಡೇಟ್‌ಗಳ ಫೀಚರ್ಸ್‌ ಗುಂಪನ್ನು ಇದರಲ್ಲಿ ಪರಿಚಯಿಸಲಿದೆ. ಇನ್ನು ಆಂಡ್ರಾಯ್ಡ್ 13 ರೋಲ್‌ಔಟ್ ಈ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಆಂಡ್ರಾಯ್ಡ್‌ 13 ಮುಖ್ಯವಾಗಿ ಪ್ರೈವೆಸಿ ಮತ್ತು ಸೆಕ್ಯುರಿಟಿಗೆ ಹೆಚ್ಚಿನ ಅದ್ಯತೆ ನೀಡಿದೆ. ಇದಕ್ಕಾಗಿ ಪ್ರೈವೆಸಿ ಮತ್ತು ಸುರಕ್ಷತೆಯ ಅಪ್ಡೇಟ್‌ಗಳನ್ನು ತರುವುದಕ್ಕೆ ಕೇಂದ್ರೀಕರಿಸಲಾಗಿದೆ ಎಂದು ಗೂಗಲ್‌ ಹೇಳಿದೆ. ಸದ್ಯ ಗೂಗಲ್‌ ತನ್ನ ಆಂಡ್ರಾಯ್ಡ್‌ 13 ಬೀಟಾ 1 ಮತ್ತು ಡೆವಲಪರ್ ಪ್ರಿವ್ಯೂನಲ್ಲಿ ಅಂತಹ ಕೆಲವು ಫೀಚರ್ಸ್‌ಗಳನ್ನು ತೋರಿಸಿದೆ. ಅದರಂತೆ ನೋಟಿಫಿಕೇಶನ್‌ಗಳನ್ನು ಪುಶ್‌ ಮಾಡುವ ಮೊದಲು ಅಪ್ಲಿಕೇಶನ್‌ಗಳು ಬಳಕೆದಾರರ ಅನುಮತಿಗಳನ್ನು ಪಡೆಯುವ ಅಗತ್ಯವಿದೆ. ಇನ್ನು ಸಂವಾದಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಿಸಲು, ನಿಮ್ಮ ಡಿಜಿಟಲ್ ಗುರುತನ್ನು ಸಂಗ್ರಹಿಸಲು ಹೊಸ ಮಾರ್ಗಗಳನ್ನು ಪರಿಚಯಿಸಲಿದೆ.

Best Mobiles in India

Read more about:
English summary
Google and Samsung launches health connect API to sync fitness data between various apps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X