ಹೆಲ್ತ್ ಕನೆಕ್ಟ್ ಆಪ್‌ ಪರಿಚಯಿಸಿದ ಗೂಗಲ್‌; ಇದರ ಕೆಲಸ ಏನು ಗೊತ್ತಾ!?

|

ಸಾಮಾನ್ಯವಾಗಿ ದೈಹಿಕ ಆರೋಗ್ಯ ಮೇಲ್ಪಿಚಾರಣೆ ಮಾಡಲು ಇತ್ತೀಚಿಗೆ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಮುನ್ನೆಲೆಗೆ ಬಂದಿವೆ. ಇದರಲ್ಲಿ ಸಮಯದ ಜೊತೆಗೆ ಬಳಕೆದಾರರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಅದರಂತೆ ಗೂಗಲ್‌ ಸಹ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಆದರೆ, ಇದೆಲ್ಲಕ್ಕೂ ಮಿಗಿಲಾಗಿ ಗೂಗಲ್‌ ಹೊಸ ಆರೋಗ್ಯ ಸಂಬಂಧಿ ಸೇವೆಗೆ ಮುಂದಾಗಿದೆ.

ಹೆಲ್ತ್ ಕನೆಕ್ಟ್

ಹೌದು, ಗೂಗಲ್‌ 'ಹೆಲ್ತ್ ಕನೆಕ್ಟ್' (Google Health Connect) ಮೂಲಕ ಬಳಕೆದಾರರ ಆರೋಗ್ಯ ಮೇಲ್ವಿಚಾರಣೆ ಮಾಡಲು ಗೂಗಲ್‌ ಮುಂದಾಗಿದೆ. ಹಾಗೆಯೇ ಈ ಆಪ್‌ ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಇದರ ಬೀಟಾ ಆವೃತ್ತಿಯನ್ನು ಗೂಗಲ್ ಪ್ಲೇ ಸ್ಟೋರ್‌ ಮೂಲಕ ನೀವು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಈ ಆಪ್‌ ಅನ್ನು ಗೂಗಲ್‌ ಸೋಮವಾರ ಅನಾವರಣ ಮಾಡಿದೆ.

ಸ್ಯಾಮ್‌ಸಂಗ್‌ನೊಂದಿಗೆ ಸಹಯೋಗ

ಸ್ಯಾಮ್‌ಸಂಗ್‌ನೊಂದಿಗೆ ಸಹಯೋಗ

ಆರೋಗ್ಯ ಹಾಗೂ ಫಿಟ್‌ನೆಸ್ ಉತ್ಸಾಹಿಗಳನ್ನು ಗುರಿಯಾಗಿಟ್ಟುಕೊಂಡು, ಒಂದೇ ಅಪ್ಲಿಕೇಶನ್‌ನಲ್ಲಿ ಸಮಗ್ರ ಆರೋಗ್ಯ ಮಾಹಿತಿಯನ್ನು ನೀಡಲು ಅನಕೂಲ ಆಗುವ ಹಾಗೆ ಆಪ್‌ ನಿರ್ಮಾಣ ಮಾಡಲಾಗಿದೆ. ಪ್ರಮುಖವಾಗಿ ಗೂಗಲ್‌ ಸ್ಯಾಮ್‌ಸಂಗ್‌ ಸಹಯೋಗದೊಂದಿಗೆ ಈ ಆಪ್‌ ರಚಿಸಿರುವುದು ವಿಶೇಷ.

ಎಲ್ಲಾ ಆಪ್‌ಗಳನ್ನು ಏಕೀಕರಣಗೊಳಿಸುವ ಗುರಿ

ಎಲ್ಲಾ ಆಪ್‌ಗಳನ್ನು ಏಕೀಕರಣಗೊಳಿಸುವ ಗುರಿ

ಈ ಸಂಬಂಧ ಗೂಗಲ್‌ ಪ್ರತಿಕ್ರಿಯಿಸಿದ್ದು, ಎಲ್ಲಾ ಫಿಟ್‌ನೆಸ್ ಆಪ್‌ಗಳ ನಿರ್ವಹಣೆಯನ್ನು ಕೇಂದ್ರೀಕರಿಸಲು ಈ ಆಪ್‌ ಬಳಕೆದಾರರಿಗೆ ಸಹಾಯ ಮಾಡುತ್ತದೆ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಬಳಕೆದಾರರು ಆರೋಗ್ಯ ಮತ್ತು ಫಿಟ್‌ನೆಸ್ ಡೇಟಾವನ್ನು ಹಂಚಿಕೊಳ್ಳಬಹುದು. ಇದಿಷ್ಟೇ ಅಲ್ಲದೆ, ಆಪ್‌ನಲ್ಲಿ ಹೆಚ್ಚಿನ ಕ್ರೆಡಿಟ್ ಪಡೆಯಲು, ಬೇರೆ ಆಪ್‌ಗಳಲ್ಲಿ ಮೇಲ್ವಿಚಾರಣೆ ಮಾಡಲಾದ ವರ್ಕೌಟ್‌ನ ಡೇಟಾವನ್ನು ಸಹ ಈ ಹೆಲ್ತ್ ಕನೆಕ್ಟ್ ಆಪ್‌ಜೊತೆ ಶೇರ್‌ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌ ಹೊಂದಿರುವ ಬಳಕೆದಾರರು ಈಗಾಗಲೇ ಔರಾ, ಮೈ ಫೀಟ್‌ನೆಸ್‌ಪಾಲ್‌, ಲೈಫ್‌ಸಮ್‌ ಸೇರಿದಂತೆ ಇನ್ನಿತರೆ ಆಪ್‌ಗಳಲ್ಲಿ ತಮ್ಮ ಆರೋಗ್ಯ ಸಂಬಂಧ ಡಾಟಾ ಇದ್ದರೆ ಅದನ್ನು ಈ ಆಪ್‌ಗೆ ಜೋಡಿಸಬಹುದು ಹಾಗೂ ಶೇರ್‌ ಮಾಡಿಕೊಳ್ಳಬಹುದು. ಗೂಗಲ್ ಪ್ರಕಾರ, ಪ್ರಸ್ತುತ ಹತ್ತು ಆರೋಗ್ಯ, ಫಿಟ್‌ನೆಸ್ ಮತ್ತು ವೆಲ್‌ನೆಸ್ ಆಪ್‌ಗಳು ಈ ಪ್ಲಾಟ್‌ಫಾರ್ಮ್‌ನೊಂದಿಗೆ ಹೊಂದಿಕೊಳ್ಳಲಿವೆಯಂತೆ.

ಅನುಮತಿ ನಿರ್ವಹಣೆ ಸುಲಭ

ಅನುಮತಿ ನಿರ್ವಹಣೆ ಸುಲಭ

ಇನ್ನು ಬಳಕೆದಾರರಿಗೆ ಕೇಂದ್ರೀಕೃತ ಗೌಪ್ಯತೆ ನಿಯಂತ್ರಣಗಳನ್ನು ನೀಡುವ ವೇಳೆ ಇದು ನಿಮ್ಮ ಆಪ್‌ಗಳ ನಡುವಿನ ಸಂಪರ್ಕವನ್ನು ಸುಲಭವಾಗಿಸುತ್ತದೆ. ಅಂದರೆ ಈ ಹಿಂದೆ ಡೇಟಾ ಅನುಮತಿಗಳನ್ನು ನಿರ್ವಹಿಸಲು ಬಳಕೆದಾರರು ಹಲವು ಆಪ್‌ಗಳನ್ನು ನ್ಯಾವಿಗೇಟ್ ಮಾಡಬೇಕಾಗಿತ್ತು. ಆದರೆ, ಈ ಹೊಸ ಹೆಲ್ತ್ ಕನೆಕ್ಟ್‌ ಆಪ್‌ನೊಂದಿಗೆ ಬಳಕೆದಾರರು ಡೇಟಾಗೆ ಪ್ರವೇಶ ಪಡೆದಿರುವ ಆಪ್‌ಗಳ ನಿಯಂತ್ರಣಗಳನ್ನು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ವಹಿಸಬಹುದಾಗಿದೆ. ಇನ್ನು ಒಮ್ಮೆ ಅನುಮತಿ ನೀಡಿದ ಬಳಿಕ ಆಪ್‌ ಕಳೆದ 30 ದಿನಗಳ ಹೊಸ ಡೇಟಾದ ಪ್ರವೇಶದೊಂದಿಗೆ ಹೊಸ ಡೇಟಾವನ್ನು ನೀಡಲಿದೆ.

 40 ಕ್ಕೂ ಹೆಚ್ಚು ಡೇಟಾ ಪ್ರಕಾರ

ಈ ಹೆಲ್ತ್‌ ಕನೆಕ್ಟ್‌ ಆಪ್‌ ಆರು ವಿಭಾಗಗಳಲ್ಲಿ 40 ಕ್ಕೂ ಹೆಚ್ಚು ಡೇಟಾ ಪ್ರಕಾರಗಳನ್ನು ನೀಡುತ್ತದೆ. ಹಾಗೆಯೇ ಈ ಹೆಲ್ತ್ ಕನೆಕ್ಟ್‌ನೊಂದಿಗೆ ಬಳಕೆದಾರರು ಯಾವುದೇ ಸಮಯದಲ್ಲಿ ಡೇಟಾವನ್ನು ಪ್ರವೇಶಿಸುವ ಆಪ್‌ಗಳನ್ನು ನೋಡಲು, ಒಂದೇ ಸ್ಥಳದಲ್ಲಿ ಅನುಮತಿಗಳನ್ನು ಸುಲಭವಾಗಿ ನಿರ್ವಹಿಸಲು ಬಳಕೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಗೂಗಲ್ ಬರೆದುಕೊಂಡಿದೆ.

ಕೇಂದ್ರೀಕೃತ ಗೌಪ್ಯತೆ

ಬಳಕೆದಾರರಿಗೆ ಕೇಂದ್ರೀಕೃತ ಗೌಪ್ಯತೆ ನಿಯಂತ್ರಣಗಳನ್ನು ಒದಗಿಸುವುದರ ಜೊತೆಗೆ ಅತ್ಯುತ್ತಮ ಆಪ್‌ ಅನುಭವವನ್ನು ಉತ್ತೇಜಿಸಲು ನಾವು ಸ್ಯಾಮ್‌ಸಂಗ್‌ನೊಂದಿಗೆ ಹೊಸ ಏಕೀಕೃತ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ ಎಂದು ಗೂಗಲ್‌ ಈ ಹಿಂದೆ ಘೋಷಣೆ ಮಾಡಿತ್ತು. ಹಾಗೆಯೇ ಸ್ಯಾಮ್‌ಸಂಗ್‌ ಹೆಲ್ತ್‌ ಗೂಗಲ್‌ ಫಿಟ್‌ ಹಾಗೂ ಫಿಟ್‌ಬಿಟ್‌ ಅನ್ನು ಇದಕ್ಕೆ ಸಂಪರ್ಕಿಸಲಾಗುತ್ತದೆ. ಎಲ್ಲಾ ಡೆವಲಪರ್‌ಗಳು ಸಹ ಆಂಡ್ರಾಯ್ಡ್‌ ಜೆಟ್‌ಪ್ಯಾಕ್‌ ಮೂಲಕ ಹೆಲ್ತ್‌ ಕನೆಕ್ಟ್‌ನ ಸಾಮಾನ್ಯ API ಗಳಿಗೆ ಪ್ರವೇಶವನ್ನು ಪಡೆಯಬಹುದು ಎಂದು ಗೂಗಲ್‌ ತಿಳಿಸಿತ್ತು.

 ಹೆಲ್ತ್ ಕನೆಕ್ಟ್‌ ಆಪ್

ಜೊತೆಗೆ ಹೆಲ್ತ್ ಕನೆಕ್ಟ್‌ ಆಪ್, ನಿದ್ರೆ, ಪೋಷಣೆ, ದೇಹದ ಆರೋಗ್ಯ ಸಂಬಂಧಿ ಏರಿಳಿತದ ವಿವರ ಮತ್ತು ಹೃದಯ ಬಡಿತ ಮತ್ತು ರಕ್ತದೊತ್ತಡದಂತಹ ಪ್ರಮುಖವಾದ ಮಾಹಿತಿ ಸೇರಿದಂತೆ ಅನೇಕ ಸಾಮಾನ್ಯ ಆರೋಗ್ಯ ಮತ್ತು ಫಿಟ್‌ನೆಸ್ ಡೇಟಾ ಪ್ರಕಾರಗಳು ಮತ್ತು ವರ್ಗಗಳನ್ನು ಬೆಂಬಲಿಸಲಿದೆ.

Best Mobiles in India

Read more about:
English summary
Smartwatches have recently come to the fore for physical health monitoring in general. However, Google has created a new app called Health Connect.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X