ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳ ಗುಣಮಟ್ಟ ಸುಧಾರಿಸಲು ಗೂಗಲ್‌ನಿಂದ ಹೊಸ ನಿಯಮ!

|

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವು ಅಪ್ಲಿಕೇಶನ್‌ಗಳು ಲಭ್ಯವಿವೆ. ಆದರೆ ಎಲ್ಲವೂ ಕೂಡ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೆ ಕೆಲವು ಅಪ್ಲಿಕೇಶನ್‌ಗಳು ಬಳಕೆದರರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿವೆ. ಇದೆ ಕಾರಣಕ್ಕೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವು ಅನುಪಯುಕ್ತ ಅಪ್ಲಿಕೇಶನ್‌ಗಳು ತುಂಬಿ ತುಳುಕುತ್ತಿವೆ. ಇದೇ ಕಾರಣಕ್ಕೆ ಗೂಗಲ್‌ ತನ್ನ ಪ್ಲೇ ಸ್ಟೋರ್‌ ಅನ್ನು ಶುದ್ದಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಅಪ್ಲಿಕೇಶನ್‌ ಗುಣಮಟ್ಟ ಮತ್ತು ಅನ್ವೇಷಣೆ ಸುಧಾರಿಸಲು ಹೊಸ ರೂಲ್ಸ್‌ ಅನ್ನು ಘೋಷಿಸಿದೆ.

ಗೂಗಲ್‌

ಹೌದು, ಗೂಗಲ್‌ ಪ್ಲೇ ಸ್ಟೋರ್‌ ತನ್ನ ಪ್ಲೇ ಸ್ಟೋರ್ ಅನ್ನು ಶುದ್ದಗೊಳಿಸುವ ಪ್ರಯತ್ನದಲ್ಲಿ, ಬಳಕೆದಾರರಿಗೆ ಅಪ್ಲಿಕೇಶನ್ ಗುಣಮಟ್ಟ ಸುಧಾರಿಸಲು ಹೊಸ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಘೋಷಿಸಿದೆ. ಈ ನೀತಿ ಅನ್ವಯ ಹೊಸ ರೂಲ್ಸ್‌ಗಳನ್ನು ಪೂರೈಸದ ಅಪ್ಲಿಕೇಶನ್ ಟೈಟಲ್‌, ಐಕಾನ್ ಮತ್ತು ಡೆವಲಪರ್ ಹೆಸರನ್ನು ಗೂಗಲ್‌ ಪ್ಲೇ ನಲ್ಲಿ ಅನುಮತಿಸಲಾಗುವುದಿಲ್ಲ ಎಂದು ಗೂಗಲ್‌ ಕಂಪೆನಿ ಹೇಳಿದೆ. ಹಾಗಾದ್ರೆ ಈ ಹೊಸ ರೂಲ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ಪರಿಚಯಿಸಿರುವ ಹೊಸ ನೀತಿಗಳ ಅನ್ವಯ ಟೈಟಲ್‌ ರೂಲ್ಸ್‌, ಅಪ್ಲಿಕೇಶನ್ ಟೈಟಲ್‌ ಅನ್ನು 30 ಅಕ್ಷರಗಳಿಗೆ ಸೀಮಿತಗೊಳಿಸುವುದು, ಸ್ಟೋರ್‌ ಕಾರ್ಯಕ್ಷಮತೆಯನ್ನು ಸೂಚಿಸುವ ಕೀವರ್ಡ್‌ಗಳನ್ನು ನಿಷೇಧಿಸುವುದು, ಐಕಾನ್‌ನಲ್ಲಿ ಪ್ರಚಾರ, ಶೀರ್ಷಿಕೆ ಮತ್ತು ಡೆವಲಪರ್ ಹೆಸರಿನಲ್ಲಿ ಮತ್ತು ಅಪ್ಲಿಕೇಶನ್ ಐಕಾನ್‌ನಲ್ಲಿ ಬಳಕೆದಾರರನ್ನು ದಾರಿ ತಪ್ಪಿಸುವಂತಹ ಗ್ರಾಫಿಕ್ ಅಂಶಗಳನ್ನು ತೆಗೆದುಹಾಕುವುದು. ಗೂಗಲ್‌ ಪ್ಲೇ ಸ್ಟೋರ್‌ ನಿಯಮ ಬದಲಾವಣೆಯ ಹೆಚ್ಚಿನ ವಿವರಗಳು ಈ ವರ್ಷದ ಅಂತ್ಯಕ್ಕೆ ತಿಳಿಯಲಿದೆ.

ಗೂಗಲ್‌

ಆದರೆ ನೀವು ಗೂಗಲ್‌ ಪ್ಲೇ ಸ್ಟೋರ್‌ ಲಿಸ್ಟ್‌ ಪೇಜ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಶೀರ್ಷಿಕೆ, ಐಕಾನ್ ಮತ್ತು ಡೆವಲಪರ್ ಹೆಸರು ಪ್ರಮುಖ ಆವಿಷ್ಕಾರ ಅಂಶಗಳಾಗಿರುವುದರಿಂದ, ಈ ಅಂಶಗಳನ್ನು ಗುರುತಿಸಬಹುದಾದ ಮತ್ತು ಅನನ್ಯವಾಗಿಡಲು ನಾವು ಹೊಸ ನೀತಿಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದ್ದೇವೆ" ಎಂದು ಗೂಗಲ್ ಅಪ್ಡೇಟ್‌ ಮಾಡಿದೆ. 2008 ರಲ್ಲಿ ಪ್ರಾರಂಭವಾದ ಗೂಗಲ್ ಪ್ಲೇ, ಡೆವಲಪರ್‌ಗಳಿಗೆ ಪ್ಲೇ ಸ್ಟೋರ್‌ನಲ್ಲಿ ಕೆಲವೇ ಕೆಲವು ಅಪ್ಲಿಕೇಶನ್‌ಗಳು ಮತ್ತು ಗೇಮ್‌ ಲೈವ್ ಆಗಿದ್ದರಿಂದ ಆರಂಭದಲ್ಲಿಯೇ ಹೆಚ್ಚಿನ ಗಮನ ಸೆಳೆದಿತ್ತು. ಅಲ್ಲದೆ ಪ್ರಸ್ತುತ 190 ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಪ್ರೇಕ್ಷಕರಿಗೆ ಲಭ್ಯವಿದೆ.

ಸ್ಟೋರ್‌ನಲ್ಲಿ

ಇನ್ನು ಪ್ಲೇ ಸ್ಟೋರ್‌ನಲ್ಲಿ ಸ್ಟೋರ್ ಇಮೇಜ್‌ಗಳು, ವಿಡಿಯೋ, ವಿವರಣೆಗಳಿಗೆ ನೀವು ಒದಗಿಸುವ ಅನನ್ಯ ಸ್ವತ್ತುಗಳು, ನಿಮ್ಮ ಅಪ್ಲಿಕೇಶನ್ ಹೆಸರನ್ನು ಸಹ ಬಳಕೆದಾರರು ಏನು ಡೌನ್‌ಲೋಡ್ ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ನಿರ್ಧಾರ ಮೂಡಿಸುವಂತಿರಬೇಕು ಎಂದು ಗೂಗಲ್ ಹೇಳಿದೆ. ಸದ್ಯ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬಣ್ಣ ಬಣ್ಣದ ಗ್ರಾಫಿಕ್ಸ್‌ ಐಕಾನ್‌ ಮೂಲಕ ಗಮನ ಸೆಳೆಯುವ ಅಪ್ಲಿಕೇಶನ್‌ಗಳು ನಂತರ ಬಳಕೆದಾರರ ದಾರಿ ತಪ್ಪಿಸಿವೆ. ಅದರಲ್ಲೂ ಹೆಚ್ಚಿನ ಅಪ್ಲಿಕೇಶನ್‌ಗಳು ನಕಲಿ ಕೂಡ ಆಗಿವೆ. ಇದೇ ಕಾರಣಕ್ಕೆ ಬಳಕೆದಾರರಿಗೆ ಉತ್ತಮವಾದ ಸೇವೆ ನೀಡುವ ನಿಟ್ಟಿನಲ್ಲಿ ಗೂಗಲ್‌ ಈ ಹೊಸ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದೆಎ.

Most Read Articles
Best Mobiles in India

English summary
Google announced new policies and guidelines to improve app quality on Play Store.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X