ಗೂಗಲ್‌ನಿಂದ ಆಂಡ್ರಾಯ್ಡ್‌ ಬಳಕೆದಾರರಿಗೆ 6 ಹೊಸ ಫೀಚರ್ಸ್‌ ಬಿಡುಗಡೆ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಈಗಗಾಲೇ ಹಲವು ಸೇವೆಗಳನ್ನ ಪರಿಚಯಿಸಿ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಇದೀಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ಗೂಗಲ್ ಆರು ಹೊಸ ಫೀಚರ್ಸ್‌ಗಳನ್ನು ಪ್ರಕಟಿಸಿದೆ. ಈ ಫೀಚರ್ಸ್‌ಗಳಲ್ಲಿ ಎಮೋಜಿ ಕಿಚನ್‌ ಆನ್‌ ಜಿಬೋರ್ಡ್‌ನಲ್ಲಿ ಹೊಸ ಅಪ್ಡೇಟ್‌, ಆಟೋ ಜನರೇಟೆಡ್‌ ನರೇಟರ್ಸ್‌ ಫಾರ್‌ ಬುಕ್ಸ್‌, ಲೇಬಲ್ಸ್‌ ಫಾರ್‌ ಆಂಡ್ರಾಯ್ಡ್ ಅಪ್ಸ್‌ ಮತ್ತು ಹೆಚ್ಚಿನ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈ ಎಲ್ಲಾ ಆಂಡ್ರಾಯ್ಡ್ ಫೀಚರ್ಸ್‌ಗಳು ಎಲ್ಲಾ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ.

ಗೂಗಲ್‌

ಹೌದು, ಗೂಗಲ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗಾಗಿ ಆರು ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈ ಮೂಲಕ ತನ್ನ ಫೀಚರ್ಸ್‌ಗಳಲ್ಲಿ ಹೊಸ ಆಪ್ಡೇಟ್‌ ಅನ್ನು ಮಾಡಿದ್ದು, ಬಳಕೆದಾರರಿಗೆ ಇನ್ನಷ್ಟು ಉಪಯೋಗವನ್ನು ಕಲ್ಪಿಸಿದೆ. ಇನ್ನು Gboard ನಲ್ಲಿ ಎಮೋಜಿ ಕಿಚನ್‌ ಫೀಚರ್ಸ್‌ ಬಳಕೆದಾರರಿಗೆ ತಮ್ಮ ನೆಚ್ಚಿನ ಎಮೋಜಿಗಳನ್ನು ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳಲ್ಲಿ ಬೆರೆಸಲು ಅನುವು ಮಾಡಿಕೊಡುತ್ತದೆ. ಇನ್ನುಳಿದಂತೆ ಈ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಜಿಬೋರ್ಡ್‌ ಎಮೋಜಿ ಕಿಚನ್‌ ಫೀಚರ್ಸ್‌ ಮೂಲಕ ಬಳಕೆದಾರರಿಗೆ ತಮ್ಮ ನೆಚ್ಚಿನ ಎಮೋಜಿಗಳನ್ನು ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳಲ್ಲಿ ಮಿಕ್ಸ್‌ ಮಾಡಲು ಅನುವು ಮಾಡಿಕೊಡುತ್ತದೆ. ನೀವು ಎರಡು ಎಮೋಜಿಗಳನ್ನು ಟ್ಯಾಪ್ ಮಾಡುವಾಗ ಸೂಚಿಸಿದ ಸಂಯೋಜನೆಗಳನ್ನು ತರುವ ಮೂಲಕ ಇದನ್ನು ಮಾಡಲು Google ಸುಲಭಗೊಳಿಸುತ್ತದೆ. ಹೆಚ್ಚಿನ ಸಲಹೆಗಳನ್ನು ನೋಡಲು ನೀವು ಒಂದು ಎಮೋಜಿಯನ್ನು ಎರಡು ಬಾರಿ ಟ್ಯಾಪ್ ಮಾಡಬಹುದು. ಈ ಫೀಚರ್ಸ್‌ ಈಗಾಗಲೇ ಜಿಬೋರ್ಡ್ ಬೀಟಾದಲ್ಲಿ ಲಭ್ಯವಿದೆ, ಮತ್ತು ಇದು ಮುಂದಿನ ವಾರಗಳಲ್ಲಿ ಆಂಡ್ರಾಯ್ಡ್ 6.0 ವರ್ಷನ್‌ನಲ್ಲಿ ಲಭ್ಯವಾಗಲಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ಆಟೋ ಜನರೇಟೆಡ್‌ ನರೇಟರ್ಸ್‌ ಫಾರ್‌ ಬುಕ್ಸ್‌ ಫೀಚರ್ಸ್‌ ಅನ್ನು ಸೇರಿಸುತ್ತಿದೆ. ಇದು Google Play ಪುಸ್ತಕಗಳಿಗಾಗಿ ಸಾಕಷ್ಟು ಸುದಾರಣೆಯನ್ನು ತರಲಿದೆ. ಸದ್ಯ ಇದು ಪ್ರಸ್ತುತ ಬೀಟಾದಲ್ಲಿ ಲಭ್ಯವಿದೆ. ಗೂಗಲ್ ಪ್ರಸ್ತುತ ಯುಎಸ್ ಮತ್ತು ಯುಕೆಗಳಲ್ಲಿ ಪ್ರಕಾಶಕರೊಂದಿಗೆ ಕೆಲಸ ಮಾಡುತ್ತಿದೆ ಮತ್ತು 2021 ರ ಆರಂಭದಲ್ಲಿ ಅದನ್ನು ಎಲ್ಲಾ ಪ್ರಕಾಶಕರಿಗೆ ತಲುಪಿಸಲು ಯೋಜಿಸಿದೆ. ಇನ್ನು ಮೋಟಾರು ವಿಕಲಾಂಗರಿಗಾಗಿ ಆಂಡ್ರಾಯ್ಡ್‌ನಲ್ಲಿ Google ನ ವಾಯ್ಸ್‌ ಎಂಟ್ರಿ ಫೀಚರ್ಸ್‌ ಈಗ ಲೇಬಲ್‌ಗಳನ್ನು ಹೊಂದಿದೆ. ""open Photos", "tap Search", ಅಥವಾ "tap Your Map"ನಂತಹ ವಿಭಿನ್ನ ಅಪ್ಲಿಕೇಶನ್‌ಗಳಿಗೆ ಲೇಬಲ್‌ಗಳನ್ನು ಸೇರಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

ಗೂಗಲ್

ಇನ್ನು ಗೂಗಲ್ ಮ್ಯಾಪ್‌ನಲ್ಲಿ ಹೊಸ ಗೋ ಟ್ಯಾಬ್ ಇದೆ, ಇದು ಬಳಕೆದಾರರಿಗೆ ತಮ್ಮ ನೆಚ್ಚಿನ ಸ್ಥಳಗಳಿಗೆ ನ್ಯಾವಿಗೇಟ್ ಮಾಡಲು ಸುಲಭವಾಗುತ್ತದೆ. ನಿರ್ದೇಶನಗಳು, ನೇರ ಸಂಚಾರ, ಮಾರ್ಗ ಅಡೆತಡೆಗಳು ಮತ್ತು ಇಟಿಎಗಳನ್ನು ತ್ವರಿತವಾಗಿ ನೋಡಲು ನಿಮ್ಮ ಆಗಾಗ್ಗೆ ಸ್ಥಳಗಳನ್ನು ನೀವು ಗೂಗಲ್ ನಕ್ಷೆಗಳಲ್ಲಿ ಪಿನ್ ಮಾಡಬಹುದು. ಸಾರ್ವಜನಿಕ ಸಾರಿಗೆಗಾಗಿ ನೀವು ನಿರ್ದಿಷ್ಟ ಮಾರ್ಗಗಳನ್ನು ಸಹ ಪಿನ್ ಮಾಡಬಹುದು. ಮುಂದಿನ ವಾರಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಗೂಗಲ್ ನಕ್ಷೆಗಳಲ್ಲಿ ಗೋ ಟ್ಯಾಬ್ ಲಭ್ಯವಿರುತ್ತದೆ. ಅಲ್ಲದೆ ಗೂಗಲ್‌ ಆಂಡ್ರಾಯ್ಡ್ ಆಟೋವನ್ನು ಹೊಸ ದೇಶಗಳಿಗೆ ವಿಸ್ತರಿಸುವುದಾಗಿ ಗೂಗಲ್ ಘೋಷಿಸಿದೆ. Nearby share ಆಪ್ಡೇಟ್‌ ಕೂಡ ಇದೆ.ಇದು Google Play ನಿಂದ ಅಪ್ಲಿಕೇಶನ್‌ಗಳನ್ನು ಹಂಚಿಕೊಳ್ಳಲು ನಿಮಗೆ ಅನುಮತಿಸುತ್ತದೆ. ಈ ನವೀಕರಣವು ಮುಂದಿನ ವಾರಗಳಲ್ಲಿ ಲಭ್ಯವಿರುತ್ತದೆ.

Most Read Articles
Best Mobiles in India

English summary
Google has announced six new features for Android smartphones. These features include a new update for Emoji Kitchen on Gboard, auto-generated narrators for books, labels for Android apps, and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X