ವಿವಾದದ ನಂತರ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಿದ 'ಗೂಗಲ್'!

|

ಗೂಗಲ್ ತನ್ನ ಬಳಕೆದಾರರ ಲೊಕೇಷನ್ ಹಿಸ್ಟರಿಯನ್ನು ಅವರ ಅನುಮತಿ ಇಲ್ಲದೆಯೂ ಬಳಸಿಕೊಳ್ಳುತ್ತಿದೆ ಎಂಬ ವಿವಾದದ ಬೆನ್ನಲ್ಲೇ ಇದೀಗ ಹೊಸ ಸಿಹಿ ಸುದ್ದಿ ಬಂದಿದೆ. ಗೂಗಲ್ ತನ್ನ ಬಳಕೆದಾರರಿಗೆ ಸ್ವಯಂಚಾಲಿತವಾಗಿ ಲೊಕೇಷನ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದ್ದು, ಬಳಕೆದಾರರು ಈಗ ಈ ಫೀಚರ್ ಅನ್ನು ನಿಯಂತ್ರಿಸಬಹುದು.

ಹೌದು, ಇನ್ಮುಂದೆ ಗೂಗಲ್ ಬಳಕೆದಾರರು ಲೊಕೇಷನ್ ಹಿಸ್ಟರಿಯನ್ನು ಬೇಕಾದಲ್ಲಿ, ಇಲ್ಲವೇ ಬೇಡವೆಂದಾದಲ್ಲಿ ಅಥವಾ ಸೀಮಿತ ಅವಧಿಗೆ ಉಳಿಸಿಕೊಳ್ಳಲು ಬಯಸಿದಲ್ಲಿ ಮತ್ತು ನಂತರ ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಆಯ್ಕೆಯನ್ನು ಶೀಘ್ರದಲ್ಲೇ ನೀಡುವುದಾಗಿ ಗೂಗಲ್ ಹೇಳಿದೆ. ಹೊಸ ಅಪ್‌ಡೇಟ್ ಮೂಲಕ ಈ ಫೀಚರ್ ಆಯ್ಕೆ ಸಿಗಲಿದೆ ಎಂದು ಕಂಪೆನಿ ತಿಳಿಸಿದೆ.

ವಿವಾದದ ನಂತರ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಿದ 'ಗೂಗಲ್'!

ಗೂಗಲ್ ಬಳಕೆದಾರರು ಆಫ್‌ಲೈನಿನಲ್ಲಿರುವಾಗ ಮತ್ತು ಫೋನ್ ಬಳಸದೆ ಇದ್ದರೂ ಸಹ ಅವರ ಲೊಕೇಷನ್ ಅನ್ನು ಕಂಪೆನಿ ಟ್ರ್ಯಾಕ್ ಮಾಡುತ್ತಿದೆ ಎಂದು ಗೂಗಲ್ ಒಪ್ಪಿಕೊಂಡಾಗ ಕಳೆದ ವರ್ಷ ಒಂದು ದೊಡ್ಡ ಆಘಾತವೇ ಸೃಷ್ಟಿಯಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದ್ದ ಬೆನ್ನಲೇ ಸ್ವಯಂಚಾಲಿತವಾಗಿ ಲೊಕೇಷನ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಪರಿಚಯಿಸಲಾಗಿದೆ.

ಗೂಗಲ್ ಸಂಸ್ಥೆ ಹೇಳಿದಂತೆ, ಬಳಕೆದಾರರು ಲೊಕೇಷನ್ ಹಿಸ್ಟರಿಯನ್ನು ಬೇಕಾದಲ್ಲಿ, ಇಲ್ಲವೇ ಬೇಡವೆಂದಾದಲ್ಲಿ ಅಥವಾ ಸೀಮಿತ ಅವಧಿಗೆ ಉಳಿಸಿಕೊಳ್ಳಲು ಬಯಸಿದಲ್ಲಿ ಮತ್ತು ನಂತರ ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಆಯ್ಕೆಯನ್ನು ಪಡೆಯಲಿದ್ದಾರೆ. ಡೇಟಾದ ಎಲ್ಲಾ ಅಥವಾ ಅದರ ಭಾಗವನ್ನು ಕೈಯಾರೆ ಅಳಿಸಲು ನಿಯಂತ್ರಣ ಪಡೆಯಲಿದ್ದೀರಾ ಎಂದು ಹೇಳಿದೆ.

ವಿವಾದದ ನಂತರ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಿದ 'ಗೂಗಲ್'!

ಡೇಟಾ ಚಟುವಟಿಕೆಯನ್ನು ಉಳಿಸಲು ಬಯಸುವ ಸಮಯದ ಫ್ರೇಮ್ ಅನ್ನು ಬಳಕೆದಾರರು ಆರಿಸಬೇಕಾಗುತ್ತದೆ.ಇದು 3 ತಿಂಗಳಿನಿಂದ 18 ತಿಂಗಳುಗಳವರೆಗೆ ಇರುತ್ತದೆ. ಹಳೆಯದಾಗಿರುವ ಡೇಟಾವನ್ನು ನಿಯಮಿತವಾಗಿ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ. ಲೊಕೇಷನ್ ಹಿಸ್ಟರಿ,ವೆಬ್ ಮತ್ತು ಅಪ್ಲಿಕೇಶನ್ ಚಟುವಟಿಕೆಗಾಗಿ ಹೊಸ ವೈಶಿಷ್ಟ್ಯಗಳು ಕೆಲ ವಾರಗಳಲ್ಲಿ ಹೊರಬರಲಿದೆ.

ಓದಿರಿ: ಬೆಂಗಳೂರಿನಲ್ಲಿ ಬೆಚ್ಚಿಬೀಳುವ ಘಟನೆ!.ಚಾರ್ಜ್ ಹಾಕಿ ಫೋನ್ ಬಳಸುವವರೇ ಇಲ್ಲಿ ನೋಡಿ!

Best Mobiles in India

English summary
Following mounting concerns over data privacy infringement, Google has announced in its official blog post that a new auto-delete feature for Location history and web activity has been introduced.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X