ಸೂಪರ್‌ ಫಾಸ್ಟ್‌ ವೇಗದಲ್ಲಿ ಕೆಲಸ ಮಾಡಲಿದೆ 'ಗೂಗಲ್ ಅಸಿಸ್ಟಂಟ್' ಹೊಸ ಆವೃತ್ತಿ!

|

ಈಗಾಗಲೇ ಜನಪ್ರಿಯವಾಗಿರುವ ಗೂಗಲ್ ಅಸಿಸ್ಟಂಟ್' ಫೀಚರ್‌ ಅನ್ನು ಸ್ಮಾರ್ಟ್‌ಫೋನ್‌ ಸೇರಿದಂತೆ ಹಲವು ಡಿವೈಸ್‌ಗಳಲ್ಲಿ ಸಹ ಬಳಸಲಾಗುತ್ತಿದೆ. ವಾಯಿಸ್‌ ಕಮಾಂಡ್ ಕೆಲಸ ನಿರ್ವಹಿಸುವ ಈ ಆಯ್ಕೆ ಬಳಕೆದಾರರ ಉಪಯುಕ್ತವಾಗಿದ್ದು, ಇದೀಗ ಗೂಗಲ್ ಅಸಿಸ್ಟಂಟ್ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಅವುಗಳನ್ನು ನೀವು ತಿಳಿದುಕೊಳ್ಳಲೇಬೇಕಿದೆ.

ಸೂಪರ್‌ ಫಾಸ್ಟ್‌ ವೇಗದಲ್ಲಿ ಕೆಲಸ ಮಾಡಲಿದೆ 'ಗೂಗಲ್ ಅಸಿಸ್ಟಂಟ್' ಹೊಸ ಆವೃತ್ತಿ!

ಹೌದು, ಕ್ಯಾಲಿಫೊರ್ನಿಯದಲ್ಲಿ ನಡೆಯುತ್ತಿರುವ ಗೂಗಲ್ I/O ಸಮ್ಮೇಳನದಲ್ಲಿ ಗೂಗಲ್ ಅಸಿಸ್ಟಂಟ್ ಸೇವೆಯ ಹೊಸ ಅವತಾರಗಳನ್ನು ತಿಳಿಸಲಾಗಿದ್ದು, ಪ್ರಸ್ತುತ ಲಭ್ಯವಿರುವ ಗೂಗಲ್‌ ಅಸಿಸ್ಟಂಟ್‌ಗಿಂತ 10ಪಟ್ಟು ವೇಗದಲ್ಲಿ ಮುಂಬರಲಿರುವ ಗೂಗಲ್ ಅಸಿಸ್ಟಂಟ್ ಸೇವೆ ನೀಡಲಿದೆ. ಈ ನಿಟ್ಟಿನಲ್ಲಿ ಗೂಗಲ್‌ ಅಸಿಸ್ಟಂಟ್‌ ಹೊಸದಾಗಿ ಅಸಿಸ್ಟಂಟ್ ಡ್ರೈವಿಂಗ್‌ ಮೋಡ್, ವೆಬ್‌ ಮಾದರಿಯಲ್ಲಿ ಅಸಿಸ್ಟಂಟ್‌ ಡುಪ್ಲೆಕ್ಸ್‌ ಆಯ್ಕೆಗಳು ಬಳಕೆದಾರರಿಗೆ ಪರಿಚಯಿಸಿದೆ.

ಸೂಪರ್‌ ಫಾಸ್ಟ್‌ ವೇಗದಲ್ಲಿ ಕೆಲಸ ಮಾಡಲಿದೆ 'ಗೂಗಲ್ ಅಸಿಸ್ಟಂಟ್' ಹೊಸ ಆವೃತ್ತಿ!

ಮುಂದಿನ ತಲೆಮಾರಿನ 'ಗೂಗಲ್ ಅಸಿಸ್ಟಂಟ್ ಸೇವೆಯು' ಸೂಪರ್‌ ಫಾಸ್ಟ್ ವೇಗದಲ್ಲಿರಲಿದ್ದು, ಮೊದಲು ಕಂಪನಿಯ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲಿದೆ. ಆನಂತರದ ದಿನಗಳಲ್ಲಿ ಇತರೆ ಡಿವೈಸ್‌ ಮತ್ತು ಉಳಿದ ಸ್ಮಾರ್ಟ್‌ಫೋನ್‌ಗಳಿಗೆ ದೊರೆಯಲಿವೆ. ಹಾಗಾದರೇ ಬರಲಿರುವ ಹೊಸ 'ಗೂಗಲ್ ಅಸಿಸ್ಟಂಟ್' ಯಾವೆಲ್ಲ ಸೇವೆಗಳನ್ನು ನೀಡಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಸೂಪರ್‌ ಫಾಸ್ಟ್‌ ವೇಗ

ಸೂಪರ್‌ ಫಾಸ್ಟ್‌ ವೇಗ

ಸದ್ಯ ಚಾಲ್ತಿಯಿರುವ ಗೂಗಲ್ ಅಸಿಸ್ಟಂಟ್ ಸೇವೆಗಿಂತ ಸುಮಾರು 10ಪಟ್ಟು ವೇಗದಲ್ಲಿ ಹೊಸ ಗೂಗಲ್ ಅಸಿಸ್ಟಂಟ್‌ನ ಸೇವೆಯು ಇರಲಿದ್ದು, ಬಳಕೆದಾರರ ಮಾತುಗಳನ್ನು ಗ್ರಹಿಸಿಕೊಂಡು ಅವರ ಅಗತ್ಯವಾದ ಮಾಹಿತಿಗಳನ್ನು ವೇಗವಾಗಿ ಪ್ರತಿಕ್ರಿಸುವ ಸಾಮರ್ಥ್ಯವನ್ನು ಪಡೆದಿರಲಿದೆ. ಗೂಗಲ್‌ ಅಸಿಸ್ಟಂಟ್‌ ನೆರವಿನಿಂದ ವಾಯಿಸ ಕಮಾಂಡ್‌ ಮೂಲಕವೇ ಬಹುತೇಕ ಕೆಲಸಗಳು ನಡೆಯಲಿವೆ.

ಗೂಗಲ್ ಅಸಿಸ್ಟಂಟ್ ಡ್ರೈವಿಂಗ್ ಮೋಡ್

ಗೂಗಲ್ ಅಸಿಸ್ಟಂಟ್ ಡ್ರೈವಿಂಗ್ ಮೋಡ್

ಗೂಗಲ್ ಅಸಿಸ್ಟಂಟ್ ತುಂಬಾ ಸ್ಮಾರ್ಟ್‌ ಆಗಿ ಕಾರ್ಯನಿರ್ವಹಿಸಲಿದ್ದು, ಡ್ರೈವಿಂಗ್‌ ಟೈಮ್‌ನಲ್ಲಿಯೂ ಬಳಕೆದಾರರಿಗೆ ಅನುಕೂಲವಾಗಲೆಂದು ಈ ಹೊಸ ಆಯ್ಕೆ ನೀಡಿದೆ. ವಾಯಿಸ್‌ ಫಾರ್ವರ್ಡ್ ಡ್ಯಾಶ್‌ಬೋರ್ಡ್‌ ರಚನೆಯನ್ನು ಮಾಡಲಾಗಿದ್ದು, ಬಳಕೆದಾರರು ಡ್ರೈವ್‌ ಮಾಡಬೇಕಾದರೇ, ನ್ಯಾವಿಗೇಶನ್‌ ಮಾಹಿತಿ ಸೇರಿದಂತೆ ಕರೆ, ಮೆಸ್ಸೆಜ್ ಮತ್ತು ಮೀಡಿಯಾ ಆಯ್ಕೆಗಳನ್ನು ಗೂಗಲ್ ಅಸಿಸ್ಟಂಟ್ ನಿಭಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿರಲಿದೆ.

ವಹಿಕಲ್‌ ಕಂಟ್ರೋಲ್ ಆಯ್ಕೆ

ವಹಿಕಲ್‌ ಕಂಟ್ರೋಲ್ ಆಯ್ಕೆ

ಬಳಕೆದಾರರು ಗೂಗಲ್ ಅಸಿಸ್ಟಂಟ್ ಮೂಲಕವೇ ತಮ್ಮ ವಾಹನವನ್ನು ಕಂಟ್ರೊಲ್‌ ಮಾಡಬಹುದಾದ ಆಯ್ಕೆ ಇರಲಿದ್ದು, ಮರ್ಸಿಡಿಸ್‌ ಬೆಂಜ್‌ ಮತ್ತು ಹುಂಡೈ ಕಾರುಗಳಲ್ಲಿ ಗೂಗಲ್ ಅಸಿಸ್ಟಂಟ್‌ ಕನೆಕ್ಟ್ ಆಯ್ಕೆ ಬರಲಿವೆ. ಹಾಗೇ ಮನೆ ಮತ್ತು ಆಫೀಸ್‌ನ ಎಸಿ ಯನ್ನು ಅಲ್ಲಿಗೆ ತಲುಪುವ ಮೊದಲೆ ಆನ್‌ ಆಫ್‌ ಮಾಡುವ ಮತ್ತು ನಿಯಂತ್ರಿಸುವ ಫೀಚರ್‌ ಸಹ ಗೂಗಲ್ ಅಸಿಸ್ಟಂಟ್‌ನಲ್ಲಿ ಸೇರಿಕೊಳ್ಳಲಿದೆ.

ಡುಪ್ಲೆಕ್ಸ್‌ ಆಯ್ಕೆ

ಡುಪ್ಲೆಕ್ಸ್‌ ಆಯ್ಕೆ

ಗೂಗಲ್ ಅಸಿಸ್ಟಂಟ್‌ನ ಡುಪ್ಲೆಕ್ಸ್ ಆಯ್ಕೆ ಬಳಸಿ ಸ್ಮಾರ್ಟ್‌ಫೋನ್‌ ಮೂಲಕವೇ ರೆಸ್ಟೊರೆಂಟ್‌ನಲ್ಲಿ ಸೀಟ್ ಮುಂಗಡವಾಗಿ ಕಾಯ್ದಿರಿಸುವ ಆಯ್ಕೆಯನ್ನು ಇದು ಒಳಗೊಂಡಿದ್ದು, ಕಳೆದ ವರ್ಷವೇ ಈ ಆಯ್ಕೆಗೆ ಗೂಗಲ್ ಆಸಕ್ತಿ ತೋರಿಸಿತ್ತು. ಇದೀಗ ಈ ಸೇವೆಯನ್ನು ವೆಬ್‌ ಮಾದರಿ ಆವೃತ್ತಿಗೂ ವಿಸ್ತರಿಸಲು ಮುಂದಾಗಿದ್ದು, ಸೂಪರ್‌ ಫಾಸ್ಟ್‌ ವೇಗದಲ್ಲಿ ಕೆಲಸಗಳು ನಡೆಯಲಿವೆ.

ಟಿಕೆಟ್ ಬುಕ್ಕ್ ಮಾಡಿ

ಟಿಕೆಟ್ ಬುಕ್ಕ್ ಮಾಡಿ

ಗೂಗಲ್ ಅಸಿಸ್ಟಂಟ್‌ ಡುಪ್ಲೆಕ್ಸ್‌ ಆಯ್ಕೆ ಮೂಲಕ ಮುಂಗಡ ಸಿನಿಮಾ ಟಿಕೆಟ್‌ ಬುಕ್ಕಿಂಗ್ ಮಾಡಬಹುದಾಗಿದೆ. ಹಾಗೇ ಟ್ರಿಪ್‌ ಹೋರಡಲು ಬಾಡಿಗೆ ಕಾರಗಳ ಬೇಕಾಗಿದ್ದರೇ ಅವುಗಳನ್ನು ಸಹ ಗೂಗಲ್ ಅಸಿಸ್ಟಂಟ್‌ ಮೂಲಕವೇ ಬುಕ್ಕಿಂಗ್‌ ಮಾಡಿಕೊಳ್ಳುವ ಸೌಲಭ್ಯವು ಲಭ್ಯವಾಗಲಿದೆ.

Best Mobiles in India

English summary
Google Assistant Becoming 10 Times Faster, Duplex for Web, and More I/O Announcements.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X