ಗೂಗಲ್‌ನ ಈ ಫೀಚರ್ಸ್‌ 42 ಭಾಷೆಗಳ ಬೆಂಬಲ ಪಡೆದಿದೆ!

|

ನಿಮಗೆ ಯಾವುದೇ ಮಾಹಿತಿಬೇಕಿದ್ದರೂ ಸ್ಮಾರ್ಟ್‌ಫೋನ್‌ ತೆಗೆದು ಗೂಗಲ್‌ನಲ್ಲಿ ಸರ್ಚ್‌ ಮಾಡೋದು ಸಾಮಾನ್ಯವಾಗಿ ಬಿಟ್ಟಿದೆ, ಅಷ್ಟರ ಮಟ್ಟಿಗೆ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ವಿಶ್ವಾಸವನ್ನ ಉಳಿಸಿಕೊಂಡಿದೆ. ಸದ್ಯ ಗೂಗಲ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಪ್‌ಡೇಟ್‌ ಆಗಿದ್ದು, ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇದೀಗ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಇದು ಗೂಗಲ್‌ ಬಳಕೆದಾರರ ಪಾಲಿಗೆ ಡಬ್ಬಲ್‌ ಖುಷಿ ನೀಡಲಿದೆ.

ಹೌದು

ಹೌದು, ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ರೀಡ್‌ ಇಟ್‌( read it) ಅನ್ನೋ ಫೀಚರ್ಸ್‌ ಒಂದನ್ನ ಪರಿಚಯಿಸಿದೆ. ಈಗಾಗ್ಲೇ ಗೂಗಲ್‌ ಅಸಿಸ್ಟೆಂಟ್‌ ಪರಿಚಯಿಸಿರುವುದರಿಂದ 'ರೀಡ್‌ ಇಟ್‌' ಫೀಚರ್ಸ್‌ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಲಿದೆ. ಈ ಪೀಚರ್ಸ್‌ನಿಂದ ನೀವು ಯಾವುದೇ ವೆಬ್‌ ಪೇಜ್‌ ಅನ್ನು ಓದುವುದಕ್ಕೆ ಕಷ್ಟ ಪಡಬೇಕಿಲ್ಲ. ನೀವು ಗೂಗಲ್‌ಗೆ ಹೇ ಗೂಗಲ್‌ ರೀಡ್‌ ಇಟ್‌ ಅಂದ್ರೆ ಸಾಕು ನೀವು ನೀಡಿದ ಮಾಹಿತಿಯನ್ನ ಓದುತ್ತದೆ.

ಗೂಗಲ್‌ ''ರೀಡ್‌ ಇಟ್‌''

ಗೂಗಲ್‌ ''ರೀಡ್‌ ಇಟ್‌''

ಗೂಗಲ್‌ ಕಾಲಕಾಲಕ್ಕೆ ತಕ್ಕಂತೆ ಆಪ್ಡೇಟ್‌ ಆಗುತ್ತಲೇ ಇದೆ. ಇದೀಗ ರೀಡ್‌ ಇಟ್‌ ಫೀಚರ್ಸ್ ಪರಿಚಯಿಸಿ ಬಳಕೆದಾರರಿಗೆ ವೆಬ್‌ಪೇಜ್‌ಗಳನ್ನ ಓದಲು ಅನುಕೂಲಮಾಡಿಕೊಟ್ಟಿದೆ. ನೀವು ವೆಬ್‌ಪೇಜ್‌ ಅಥವಾ ಇತರೆ ಯಾವುದೇ ಲೇಖನವನ್ನ ಗೂಗಲ್‌ನಲ್ಲಿ ಓದಬೇಕಾದರೆ ನೀವು ಓದುವ ಅವಶ್ಯಕತೆ ಇಲ್ಲ. ಹೇ ಗೂಗಲ್‌ ರೀಡ್‌ ಇಟ್‌ ಅಂದರೆ ಸಾಕು ಗೂಗಲ್‌ ನಿಮಗೆ ವೆಬ್‌ ಪೇಜ್‌ನಲ್ಲಿನ ಮಾಹಿತಿಯನ್ನ ಓದುತ್ತಾ ತಿಳಿಸುತ್ತಾ ಹೋಗುತ್ತದೆ, ಹೇ ಗೂಗಲ್‌ ರೀ ಲೌಂಡ್‌ ಅಂದರೆ ಸಾಕು ಇನ್ನೂ ಜೋರಾಗಿ ಹೇಳುತ್ತದೆ. ಈ ಮೂಲಕ ಬಳಕೆದಾರರು ಬಯಸುವ ವೆಬ್‌ಪೇಜ್‌ನಲ್ಲಿನ ಮಾಹಿತಿಯನ್ನ ತಿಳಿದುಕೊಳ್ಳಲು ಸುಲಭವಾಗುತ್ತದೆ.

ಕಾರ್ಯವೈಖರಿ ಹೇಗೆ

ಕಾರ್ಯವೈಖರಿ ಹೇಗೆ

ಗೂಗಲ್‌ನಲ್ಲಿ ನೀವು ಸರ್ಚ್‌ ಮಾಡಿದ ಮಾಹಿತಿ ಅಥವಾ ವೆಬ್‌ ಪೇಜ್‌ ಅನ್ನು ಓಪನ್‌ ಮಾಡಿ ಗೂಗಲ್‌ ಅಸಿಸ್ಟೆಂಟ್‌ ತೆರೆದು ಗೂಗಲ್‌ ರೀಡ್‌ ಇಟ್‌ ಅಂದರೆ ಈ ಫೀಚರ್ಸ್ನ ಉಪಯೋಗ ನಿಮಗೆ ಸಿಗಲಿದೆ. ನೀವು ಗೂಗಲ್‌ ಅಸಿಸ್ಟೆಂಟ್‌ ಅನ್ನು ವೆಬ್‌ಫೇಜ್‌ ಓದಲು ಹೇಳಿದಾಗ ನೀವು ಆಯ್ಕೆ ಮಾಡಿದ ವೇಬ್‌ ಪೇಜ್‌ ನಿಧಾನವಾಗಿ ಸ್ಕ್ರಾಲ್‌ ಆಗುತ್ತಾ ಹೋಗುತ್ತದೆ. ಅಲ್ಲದೆ ಗೂಗಲ್‌ ರೀಡ್‌ ಮಾಡುತ್ತಾ ಹೋದಂತೆ ವೇಬ್‌ಪೇಜ್‌ನಲ್ಲಿನ ಟೆಕ್ಸ್ಟ್‌ ಹೈಲೆಟ್‌ ಆಗುತ್ತದೆ. ಇದರಿಂದ ಗೂಗಲ್‌ ಹೇಳುತ್ತಿರೋದು ಯಾವ ಪದವನ್ನ ಅನ್ನೊದನ್ನ ನೀವು ತಿಳಿದುಕೊಳ್ಳಲು ಸಾಧ್ಯವಾಗಲಿದೆ.

ವಿಶೇಷತೆ

ವಿಶೇಷತೆ

ಗೂಗಲ್‌ ರೀಡ್‌ ಇಟ್‌ ಫೀಚರ್ಸ್‌ ನಿಂದಾಗಿ ನೀವು ನಿಮಗೆ ಕ್ಲಿಷ್ಟಕರವಾದ ಪದವನ್ನು ಸಹ ಗೂಗಲ್‌ ಓದಿಕೊಡುತ್ತದೆ. ಈ ಮೂಲಕ ಆ ಪದದ ಉಚ್ಚಾರಣಾಹೇಗೆ ಅನ್ನೊದು ನಿಮಗೆ ತಿಳಿಯುತ್ತದೆ. ಅಲ್ಲದೆ ನೀವು ಪ್ರತಿಪುಟವನ್ನು ತೆರೆದು ಓದುವ ಬದಲು ಗೂಗಲ್‌ ರೀಡ್‌ ಇಟ್‌ ಓದುವಾಗ ಎಲ್ಲಾ ಪೇಜ್‌ಗಳು ಕೂಡ ಸ್ಕ್ರಾಲ್‌ ಆಗುತ್ತಾ ಹೋಗುತ್ತದೆ. ಇದರಿಂದ ನೀವು ಮತ್ತೆ ಮತ್ತೆ ಪೇಜ್‌ ಅನ್ನು ತೆಗೆಯುವ ಅವಶ್ಯಕತೆ ಇರೋದಿಲ್ಲ. ಅಷ್ಟೇ ಅಲ್ಲ ನಿಮ್ಮ ವೇಗಕ್ಕೆ ತಕ್ಕಂತೆ ಗೂಗಲ್‌ ರೀಡ್‌ ಇಟ್‌ ಓದುವ ವೇಗವನ್ನು ಬದಲಾಯಿಸಬಹುದು. ಅಲ್ಲದೆ ಅವರು ಇಷ್ಟಪಡುವ ವಾಯ್ಸ್‌ ಅನ್ನು ಸಹ ಆಯ್ಕೆ ಮಾಡಬಹುದಾಗಿದ್ದು, ನ್ಯಾಚುರಲ್‌ ವಾಯ್ಸ್‌ನಲ್ಲಿ ಕೇಳಿದಂತೆಯೇ ಭಾಸವಾಗುತ್ತದೆ ಎಂದು ಗೂಗಲ್‌ ಹೇಳಿಕೊಂಡಿದೆ.

ಯಾವ ಭಾಷೆಗಳಲ್ಲಿ ಲಭ್ಯ

ಯಾವ ಭಾಷೆಗಳಲ್ಲಿ ಲಭ್ಯ

ಗೂಗಲ್‌ ಬಳಕೆದಾರರು ತಾವು ಬ್ರೌಸ್ ಮಾಡುತ್ತಿರುವ ವೆಬ್‌ಪೇಜ್‌ ಬೇರೆ ಭಾಷೆಯಲ್ಲಿದ್ದರೆ ಆ ವೆಬ್‌ಪೇಜ್‌ಗಳನ್ನ ತಮ್ಮ ಸ್ಥಳೀಯ ಭಾಷೆಗಳಲ್ಲಿ ಜೋರಾಗಿ ಓದಲು ಗೂಗಲ್ ಅಸಿಸ್ಟೆಂಟ್ ಅಲ್ಲಿ ಕೇಳಬಹುದಾಗಿದೆ. ಇದರಿಂದ ನಿಮಗೆ ಅರ್ಥವಾಗ ಭಾಷೆಯಲ್ಲಿನ ಮಾಹಿತಿಯನ್ನ ನಿಮ್ಮ ಸ್ಥಳಿಯ ಭಾಷೆಗೆ ತಕ್ಕಂತೆ ಅರ್ಥೈಸಿಕೊಳ್ಳಬಹುದಾಗಿದೆ. ಇನ್ನು ಈ ಹೊಸ ಫೀಚರ್ಸ್‌ ಭಾರತದ ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಇತರೆ ಒಟ್ಟು 42 ಭಾಷೆಗಳನ್ನು ಬೆಂಬಲಿಸುತ್ತದೆ. ನಿಮಗೆ ಬೇಕಾದ ಭಾಷೆಯನ್ನ ಆಯ್ಕೆ ಮಾಡಲು ಭಾಷ ಅನುವಾದ ಮೆನುವನ್ನು ಕ್ಲಿಕ್‌ ಮಾಡಬೇಕಾಗಿರುತ್ತದೆ. ಆಗ ನೀವು ಬಯಸಿದ ಭಾಷೆಯಲ್ಲಿ ಗೂಗಲ್‌ ಓದುತ್ತದೆ.

Most Read Articles
Best Mobiles in India

English summary
Google announced a pretty neat little feature that is going to make reading web articles on phones a lot easier.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X