ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ ಸೇರ್ಪಡೆ ಮಾಡಿದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಕಸ್ಟಮ್‌ ಎಮೋಜಿಗಳನ್ನು ಪರಿಚಯಿಸಿದೆ. ಬಳಕೆದಾರರಿಗೆ ವೈಯುಕ್ತೀಕರಿಸಿದ ಅನುಭವ ನೀಡುವುದಕ್ಕೆ ಈ ಎಮೋಜಿಗಳು ಅನುಕೂಲವಾಗಿವೆ ಎನ್ನಲಾಗಿದೆ. ಇದರಿಂದ ಬಳಕೆದಾರರು ತಮ್ಮನ್ನು ತಾವು ವ್ಯಕ್ತಪಡಿಸಲು ಎಮೋಜಿಗಳನ್ನು ಬಳಸಬಹುದಾಗಿದೆ. ಕಸ್ಟಮ್‌ ಎಮೋಜಿಗಳನ್ನು ಚಾಟ್‌ ಸಂದೇಶಗಳು ಮತ್ತು ಕಾಮೆಂಟ್‌ಗಳನ್ನು ಬಳಸಬಹುದಾಗಿದೆ.

ಗೂಗಲ್‌

ಹೌದು, ಗೂಗಲ್‌ ಕಸ್ಟಮ್‌ ಎಮೋಜಿಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಬಳೆದಾರರ ಅನುಭವ ಸಾಕಷ್ಟು ಸುಧಾರಿಸಲಿದೆ ಎಂದು ಹೇಳಲಾಗಿದೆ. ಜೊತೆಗೆ ಸಹದ್ಯೋಗಿಗಳು ಅಪ್‌ಲೋಡ್ ಮಾಡಿದ ಕಸ್ಟಮ್ ಎಮೋಜಿಗಳನ್ನು ಚಾಟ್ ಸಂದೇಶಗಳು ಮತ್ತು ಕಾಮೆಂಟ್‌ಗಳಲ್ಲಿ ಎಲ್ಲಾ ಸಹೋದ್ಯೋಗಿಗಳು ವೀಕ್ಷಿಸಬಹುದು. ಇದಲ್ಲದೆ ಈ ಎಮೋಜಿಗಳನ್ನು ಅಂತಿಮ ಬಳಕೆದಾರರಿಗೆ ಪ್ರಾರಂಭಿಸುವ ಮೊದಲು ಇದರಲ್ಲಿ ಕೆಲವು ಮಾರ್ಗಸೂಚಿಗಳನ್ನು ತರುವ ಸಾಧ್ಯತೆಯಿದೆ. ಹಾಗಾದ್ರೆ ಗೂಗಲ್‌ ಕಸ್ಟಮ್‌ ಎಮೋಜಿಗಳ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕಸ್ಟಮ್‌

ಗೂಗಲ್‌ ಕಸ್ಟಮ್‌ ಎಮೋಜಿ ಇದೀಗ ಗೂಗಲ್‌ ವರ್ಕ್‌ಸ್ಪೇಸ್‌ ಬಳಕೆದಾರರಿಗೆ ಲಭ್ಯವಿದೆ. ಬಳಕೆದಾರರು ಈ ಫೀಚರ್ಸ್‌ ಅನ್ನು ಆಕ್ಟಿವ್‌ ಗೊಳಿಸಿದ ನಂತರ ಚಾಟ್ ಅಥವಾ ಜಿ-ಮೆಲ್‌ನಲ್ಲಿ ಕಸ್ಟಮ್‌ ಎಮೋಜಿಗಳನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಅಂದರೆ ಗೂಗಲ್‌ನ ವೆಬ್‌ ಆವೃತ್ತಿ ಮತ್ತು ಜಿ-ಮೇಲ್‌ ಚಾಟ್‌ನಲ್ಲಿ ಮಾತ್ರ ಈ ಎಮೋಜಿಗಳು ಲಭ್ಯವಾಗಲಿವೆ. ವೈಯಕ್ತಿಕ ಗೂಗಲ್‌ ಖಾತೆಗಳನ್ನು ಹೊಂದಿರುವವರಿಗೆ ಇದು ಲಭ್ಯವಾಗುವುದಿಲ್ಲ. ಇನ್ನು ಬ್ಲಾಗ್‌ಪೋಸ್ಟ್ ಪ್ರಕಾರ, ಅಂತಿಮ ಬಳಕೆದಾರರಿಗೆ ಪ್ರಾರಂಭಿಸುವ ಮೊದಲು, ಅಡ್ಮಿನ್ಸ್‌ ಸಾಂಸ್ಥಿಕ ಮಾರ್ಗಸೂಚಿಗಳನ್ನು ಸೆಟ್‌ ಮಾಡಬಹುದು.

ಕಸ್ಟಮ್‌

ಕಸ್ಟಮ್‌ ಎಮೋಜಿಗಳನ್ನು ಬಳಸಿಕೊಂಡು ಬಳಕೆದಾರರು ಚಾಟ್‌ ಮಾಡಬಹುದು. ಅಲ್ಲದೆ ಚಾಟ್‌ಗಳಿಗೆ ಕಾಮೆಂಟ್‌ ಮಾಡುವಾಗಲೂ ಕೂಡ ಎಮೋಜಿಗಳನ್ನು ಬಳಸಬಹುದಾಗಿದೆ. ಇದಲ್ಲದೆ ಎಮೋಜಿಗಳ ಬಳಕೆಯಲ್ಲಿ ನಿಯಂತ್ರಣ ಮಾಡುವುದಕ್ಕಾಗಿ ಅಡ್ಮಿನ್‌ ಅನ್ನು ಕೂಡ ನೇಮಿಸಿಕೊಳ್ಳುವುದಕ್ಕೆ ಅವಕಾಶವಿದೆ. ಇದರಿಂದ ಕಸ್ಟಮ್‌ ಎಮೋಜಿಗಳು ಬಳಕೆದಾರರಿಗೆ ಅತ್ಯುತ್ತಮ ಚಾಟ್‌ ಅನುಭವ ನೀಡಲಿದೆ ಎಂದು ಗೂಗಲ್‌ ಹೇಳಿದೆ.

ಇದಲ್ಲದೆ

ಇದಲ್ಲದೆ ಕಂಪನಿಯ ಮಾರ್ಗಸೂಚಿಗಳಿಗೆ ಬದ್ಧವಾಗಿರದ ಕಸ್ಟಮ್ ಎಮೋಜಿಗಳನ್ನು ಬ್ರೌಸ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ ಎಮೋಜಿಗಳನ್ನು ಡಿಲೀಟ್‌ ಮಾಡಬಹುದಾದ ಅಡ್ಮಿನ್‌ಗಳನ್ನು ಕೂಡ ನೇಮಿಸುವುದಕ್ಕೆ ಸಾಧ್ಯವಿದೆ. ಇನ್ನು ಕಸ್ಟಮ್‌ ಎಮೋಜಿಗಳನ್ನು ಕ್ರಿಯೆಟ್‌ ಮಾಡಲು ಅಂತಿಮ ಬಳಕೆದಾರರ ಕಾರ್ಯಚಟುವಟಿಕೆಯು ಲಭ್ಯವಾಗುವ ಮೊದಲು ಅಡ್ಮಿನ್‌ ಕಂಟ್ರೋಲ್‌ಗಳು ಬರಲಿವೆ. ಇದೇ ಮಾದರಿಯಲ್ಲಿ ಈ ಹಿಂದೆ, ಗೂಗಲ್‌ ತನ್ನ ಚಾಟ್ ಮೂಲಕ ಏಕಕಾಲದಲ್ಲಿ ಅನೇಕ ಫೋಟೋಗಳು ಕಳುಹಿಸುವ ಫೀಚರ್ಸ್‌ ಪರಿಚಯಿಸಿತ್ತು.

ಗೂಗಲ್‌

ಇನ್ನು ಗೂಗಲ್‌ ಇತ್ತೀಚಿಗೆ ತನ್ನ ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಹೊಸ ಬದಲಾವಣೆಯನ್ನು ಕೂಡ ಮಾಡಿದೆ. ಇದರಿಂದ ಬಳಕೆದಾರರು ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಆರ್‌ಸಿಎಸ್‌ ಅನ್ನು ಆನ್ ಮಾಡಿ ಯುನೈಟೆಡ್ ಫ್ಲೈಟ್‌ಗಳಲ್ಲಿ ಮೆಸೆಜಿಂಗ್ ಕಳುಹಿಸಲು ಯುನೈಟೆಡ್ ಏರ್‌ಲೈನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದರೊಂದಿಗೆ ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ ಐಕಾನ್‌ ಡಿಸೈನ್‌ ಅನ್ನು ಕೂಡ ಬದಲಾಯಿಸಿದೆ. ಇದೀಗ ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ ಮೂಲಕವೇ ಗೂಗಲ್‌ ಸರ್ಚ್‌ ಹಾಗೂ ಗೂಗಲ್‌ ಮ್ಯಾಪ್‌ಗೆ ಪ್ರವೇಶ ಪಡೆಯುವುದಕ್ಕೆ ಅವಕಾಶವನ್ನು ನೀಡಲಾಗಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ವಾಟ್ಸಾಪ್‌ ಹಾಗೂ ಇನ್‌ಸ್ಟಾಗ್ರಾಮ್‌ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದಕ್ಕಾಗಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆರ್‌ಸಿಎಸ್‌ ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಇನ್ನು ಗೂಗಲ್‌ ಮೆಸೇಜ್‌ ಆಪ್‌ ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಣೆ ಮಾಡುವುದಕ್ಕೆ ಕೂಡ ಸಾಧ್ಯವಿದೆ. ಅಷ್ಟೇ ಅಲ್ಲ ವಿಳಾಸಗಳು, ಡೋರ್ ಕೋಡ್‌ ಮತ್ತು ಫೋನ್ ಸಂಖ್ಯೆಗಳನ್ನು ಒಳಗೊಂಡ ಟೆಕ್ಸ್ಟ್‌ ಮೆಸೇಜ್‌ಗಳನ್ನು ಸುಲಭವಾಗಿ ಹುಡುಕುವುದಕ್ಕೆ ಸಹಾಯ ಮಾಡಲಿದೆ. ಇದಲ್ಲದೆ ನಿಮ್ಮ ವಾರ್ಷಿಕೋತ್ಸವಗಳು, ಜ್ಞಾಪನೆಗಳನ್ನು ನೀಡುವ ಸಾಮರ್ಥ್ಯವನ್ನು ಕೂಡ ಇದೀಗ ಗೂಗಲ್‌ ಮೆಸೇಜ್‌ ಅಪ್‌ನಲ್ಲಿ ನೀಡಲಾಗಿದೆ.

Best Mobiles in India

Read more about:
English summary
Google brings custom emojis to gmail and web version of Chat

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X