ಬರ್ತಿದೆ ಲೇಜಿ ಲೋಡಿಂಗ್‌..! ಇನ್ಮುಂದೆ ಬ್ರೌಸರ್‌ನಲ್ಲಿ ಲೋಡಿಂಗ್‌ ಇರುವುದೇ ಇಲ್ಲ..!

By Avinash
|

ನೀವು ಯಾವುದೇ ಇಂಟರ್‌ನೆಟ್‌ ಬ್ರೌಸರ್ ತೆರದು ಯಾವುದಾದರೂ ವೆಬ್‌ಸೈಟ್‌ಗೆ ಹೋದರೆ ಅಲ್ಲಿರುವ ಚಿತ್ರಗಳು, ವಿಡಿಯೋ, ಮತ್ತು ವಿಷಯಗಳು ಲೋಡಿಂಗ್‌ ಸಮಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿಯೇ ಇಂಟರ್‌ನೆಟ್‌ ಡೇಟಾ ಉಳಿಸಲು ಹಾಗೂ ವೇಗದ ಕನೆಕ್ಟಿವಿಟಿಗೆ ಗೂಗಲ್‌ ಹೊಸ ಫೀಚರ್‌ ಬಿಡುಗಡೆ ಮಾಡಿದೆ.

ಬರ್ತಿದೆ ಲೇಜಿ ಲೋಡಿಂಗ್‌..! ಇನ್ಮುಂದೆ ಬ್ರೌಸರ್‌ನಲ್ಲಿ ಲೋಡಿಂಗ್‌ ಇರುವುದೇ ಇಲ್ಲ!

ಗೂಗಲ್‌ ತನ್ನ ಕ್ರೋಮ್‌ ಬ್ರೌಸರ್‌ನಲ್ಲಿ ಬಿಡುಗಡೆ ಮಾಡಿರುವ ಫೀಚರ್‌ಗೆ ಲೇಜಿ ಲೋಡಿಂಗ್‌ ಎಂದು ಹೆಸರಿಟ್ಟಿದ್ದು, ಕುತೂಹಲ ಮೂಡಿಸಿದೆ. ಈ ಫೀಚರ್‌ನಿಂದ ಬಳಕೆದಾರರು ಇಂಟರ್‌ನೆಟ್ ಡೇಟಾ ಉಳಿಸಬಹುದು ಮತ್ತು ವೇಗದ ಇಂಟರ್‌ನೆಟ್‌ ಕನೆಕ್ಟಿವಿಟಿ ಪಡೆಯಬಹುದು. ಆದರೆ, ಈ ಫೀಚರ್‌ ಎಲ್ಲರಿಗೂ ಲಭ್ಯವಿಲ್ಲ.

ಪರೀಕ್ಷಾರ್ಥ ಆವೃತ್ತಿಯಲ್ಲಿ ಲಭ್ಯ

ಪರೀಕ್ಷಾರ್ಥ ಆವೃತ್ತಿಯಲ್ಲಿ ಲಭ್ಯ

ಗೂಗಲ್‌ ಕ್ರೋಮ್‌ನ ಲೇಜಿ ಲೋಡಿಂಗ್‌ ಫೀಚರ್ ಎಲ್ಲರಿಗೂ ಲಭ್ಯವಿಲ್ಲ. ಬದಲಾಗಿ ಗೂಗಲ್ ಕ್ರೋಮ್‌ನ ಪರೀಕ್ಷಾರ್ಥ ಆವೃತ್ತಿಯಾದ ಕೆನರಿ ಚಾನೆಲ್‌ನಲ್ಲಿ ಲಭ್ಯವಿದ್ದು, ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದೆ. ನಂತರ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆಯಿದೆ.

ಬ್ಲಿಪಿಂಗ್ ಕಂಪ್ಯೂಟರ್ ವೆಬ್‌ಸೈಟ್‌ನಲ್ಲಿ ಮೊದಲು

ಬ್ಲಿಪಿಂಗ್ ಕಂಪ್ಯೂಟರ್ ವೆಬ್‌ಸೈಟ್‌ನಲ್ಲಿ ಮೊದಲು

ಕ್ರೋಮ್‌ ಬ್ರೌಸರ್‌ನ ಹೊಸ ಫೀಚರ್ ಲೇಜಿ ಲೋಡಿಂಗ್‌ ಕ್ರೋಮ್‌ನ ಕೆನರಿ ಆವೃತ್ತಿ 70.0.3521.0ನಲ್ಲಿ ಲಭ್ಯವಿದ್ದು, ಇದನ್ನು ಬ್ಲಿಪಿಂಗ್ ಕಂಪ್ಯೂಟರ್ ವೆಬ್‌ಸೈಟ್‌ ಮೊದಲು ಗುರುತಿಸಿದೆ. ಈ ಫೀಚರ್ ಬಳಸಲು ಬ್ರೌಸರ್‌ನ ಕನಿಷ್ಟ ಜ್ಞಾನ ಇದ್ದರೆ ಸಾಕು ಎಂದು ಹೇಳಲಾಗಿದೆ.

ಪೇಜ್‌ ಲೋಡಿಂಗ್

ಪೇಜ್‌ ಲೋಡಿಂಗ್

ಬ್ರೌಸ್‌ ಮಾಡುವಾಗ ವೆಬ್‌ ಪೇಜ್‌ನಲ್ಲಿ ಅಬೋವ್‌ ದಿ ಫೋಲ್ಡ್‌ ಮತ್ತು ಬಿಲೋವ್‌ ದಿ ಫೋಲ್ಡ್‌ ಎಂಬ ಎರಡು ಭಾಗಗಳಿದ್ದು, ಅಬೋವ್‌ ದಿ ಫೋಲ್ಡ್‌ ನಿಮಗೆ ಸ್ಕ್ರೀನ್‌ನಲ್ಲಿ ಕಂಟೆಂಟ್ ತೋರಿಸುತ್ತದೆ. ಬಿಲೋವ್‌ ದಿ ಫೋಲ್ಡ್‌ನಲ್ಲಿ ನೀವು ಸ್ಕ್ರಾಲ್ ಮಾಡಿದಾಗ ಕಂಟೆಂಟ್‌ಗಳು ಕಾಣುತ್ತವೆ. ಆದರೆ, ಒಂದೇ ಬಾರಿಗೆ ಲೋಡ್ ಆಗಿರುತ್ತದೆ.

ವೇಗದ ಪೇಜ್ ಲೋಡಿಂಗ್‌

ವೇಗದ ಪೇಜ್ ಲೋಡಿಂಗ್‌

ಲೇಜಿ ಲೋಡಿಂಗ್ ಫೀಚರ್‌ ಬ್ರೌಸರ್‌ನ್ನು ವೇಗದ ಲೋಡಿಂಗ್‌ಗೆ ಸಿದ್ದಗೊಳಿಸುತ್ತದೆ. ಲೇಜಿ ಲೋಡಿಂಗ್‌ ಕಾರ್ಯನಿರ್ವಹಿಸುವುದು ಹೇಗೆ ಎಂದರೆ ವೆಬ್‌ಸೈಟ್‌ನ ಮೇಲಿನ ಭಾಗವನ್ನು ಮಾತ್ರ ಲೋಡ್ ಮಾಡಿ ವೇಗವಾಗಿ ಓದುಗರಿಗೆ ನೀಡುತ್ತದೆ. ನಂತರ ನೀವು ಸ್ಕ್ರಾಲ್‌ ಮಾಡಿದಾಗ ಕೆಳಗಿನ ಭಾಗವನ್ನು ಲೋಡ್ ಮಾಡಿ ವೇಗದ ಲೋಡಿಂಗ್‌ಗೆ ನೆರವಾಗುತ್ತದೆ. ಲೇಜಿ ಲೋಡಿಂಗ್ ಫೀಚರ್ ಎಷ್ಟು ಬೇಕೋ ಅಷ್ಟು ಡೇಟಾ ಮಾತ್ರ ತೆಗೆದುಕೊಂಡು ಓದುಗರಿಗೆ ಡೇಟಾವನ್ನು ಸಹ ಉಳಿಸುತ್ತದೆ.

ಜನೇವರಿಯಲ್ಲಿಯೇ ಬಂದಿದ್ದ ಲೇಜಿ ಲೋಡಿಂಗ್

ಜನೇವರಿಯಲ್ಲಿಯೇ ಬಂದಿದ್ದ ಲೇಜಿ ಲೋಡಿಂಗ್

ಗೂಗಲ್‌ ತನ್ನ ಕ್ರೋಮ್‌ ಬ್ರೌಸರ್‌ನಲ್ಲಿ ಲೇಜಿ ಲೋಡಿಂಗ್‌ ಫೀಚರ್‌ನ್ನು ಜನೇವರಿಯಲ್ಲಿಯೇ ಪರಿಚಯಿಸಿತ್ತು. ಇದನ್ನು ಆಂಡ್ರಾಯ್ಡ್‌ ಡಿವೈಸ್‌ಗಳಿಗಾಗಿ ಗೂಗಲ್ ಅಭಿವೃದ್ಧಿ ಪಡಿಸಿದ್ದು, ಪರೀಕ್ಷಾರ್ಥ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಗೂಗಲ್ ಈಗ ವರ್ಲ್ಡ್‌ವೈಡ್ ವೆಬ್‌ ಕನ್ಸೋರಿಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಪ್ರಯತ್ನಗಳು ನಡೆಯುತ್ತಿದ್ದು, ಬ್ರೌಸರ್ ಅಭಿವೃದ್ಧಿ ಕಾಣುತ್ತಿದೆ. ಆದಷ್ಟೂ ಬೇಗ ಲೇಜಿ ಲೋಡಿಂಗ್ ಫೀಚರ್ ಬರುವುದರಲ್ಲಿ ಅಚ್ಚರಿ ಪಡಬೇಕಿಲ್ಲ.

Best Mobiles in India

English summary
Google brings ‘lazy loading’ to Chrome for desktop: How it can help you save data & make browsing faster. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X