ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಶುರುವಾಗಿ ಇಂದಿಗೆ 22 ವರ್ಷ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ಗೆ ಇಂದು 22ನೇ ವರ್ಷದ ಹುಟ್ಟುಹಬ್ಬ. ಕಳೆದ 22 ವರ್ಷಗಳಲ್ಲಿ ಜಾಗತಿಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಏನೇ ಮಾಹಿತಿ ಬೇಕೆಂದರೂ ಗೂಗಲ್‌ ಸರ್ಚ್‌ ಮಾಡುವಷ್ಟರ ಮಟ್ಟಿಗೆ ಗೂಗಲ್‌ ತನ್ನ ಪ್ರಖ್ಯಾತಿಯನ್ನ ಗಳಿಸಿಕೊಂಡಿದೆ. ಜಾಗತಿಕವಾಗಿ ಗೂಗಲ್‌ ಇಂದು ಸಾಕಷ್ಟು ಪ್ರಸಿದ್ದಿ ಪಡೆದುಕೊಂಡಿದೆ. ಸರ್ಚ್‌ ಇಂಜಿನ್‌ ದೈತ್ಯ ಎನಿಸಿಕೊಂಡಿದೆ. ಸದ್ಯ ಇಂದು 22ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗೂಗಲ್‌ ಹುಟ್ಟುಹಬ್ಬದ ವಿಶೇಷವಾಗಿ ಗೂಗಲ್‌ ಡೂಡಲ್‌ ಅನ್ನು ರಚಿಸಿದೆ.

ಸರ್ಚ್‌ ಇಂಜಿನ್‌ ದೈತ್ಯ

ಹೌದು, ಇಂದು ಸರ್ಚ್‌ ಇಂಜಿನ್‌ ದೈತ್ಯ ತನ್ನ 22ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಆದರೆ ಗೂಗಲ್ ಅಧಿಕೃತವಾಗಿ ಪ್ರಾರಂಭವಾಗಿದ್ದು ಸೆಪ್ಟೆಂಬರ್ 8, 1998 ರಂದು ಆದರೆ ಕಂಪನಿಯು ಸೆಪ್ಟೆಂಬರ್ 27 ರಂದು ತನ್ನ ಜನ್ಮದಿನವನ್ನು ಆಚರಿಸಿಕೊಳ್ಳುವುದನ್ನು ರೂಡಿಸಿಕೊಂಡಿದೆ. ಇನ್ನು ಗೂಗಲ್‌ನ 22 ನೇ ಹುಟ್ಟುಹಬ್ಬದ ಗೂಗಲ್ ಡೂಡಲ್‌ನಲ್ಲಿ ವೀಡಿಯೊ ಕರೆ ಮಾಡುವ ಲ್ಯಾಪ್‌ಟಾಪ್ ಮುಂದೆ ಕುಳಿತುಕೊಳ್ಳುವ ಲೋಗೋ ‘ಜಿ' ವಿಶೇಷತೆಯನ್ನು ಒಳಗೊಂಡಿದೆ. ಇನ್ನುಳಿದಂತೆ ಗೂಗಲ್‌ ಹುಟ್ಟಹಬ್ಬದ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ನ ಹಾದಿ

ಗೂಗಲ್‌ನ ಹಾದಿ

ಗೂಗಲ್ ಅನ್ನು ಸ್ಟಾಡ್‌ಫೋರ್ಡ್‌ನಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಎನ್ನುವವರು 1998 ರಲ್ಲಿ ಪ್ರಾರಂಭಿಸಿದರು. ಇನ್ನು "ಗೂಗಲ್" ಎನ್ನುವ ಪದ "ಗೂಗೋಲ್" ಎಂಬ ಗಣಿತ ಪದದಿಂದ ಬಂದಿದೆ. ಜಗತ್ತಿನ ಎಲ್ಲಾ ವಿಚಾರಗಳನ್ನು ತಿಳಿಸುವ ಪ್ರಯತ್ನದ ಫಲವಾಗಿ ಗೂಗಲ್‌ ಇಂದು ಹೆಮ್ಮರವಾಗಿ ಬೆಳೆದಿದೆ.

ಗೂಗಲ್‌ ಡೂಡಲ್‌ ವಿಶೇಷತೆ

ಗೂಗಲ್‌ ಡೂಡಲ್‌ ವಿಶೇಷತೆ

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಹುಟ್ಟುಹಬ್ಬದ ವಿಶೇಷ ಗೂಗಲ್‌ ಡೂಡಲ್‌ನಲ್ಲಿ ವೀಡಿಯೊ ಕರೆ ಮಾದರಿಯ G ಜೊತೆಗೆ OOGLE. Goo gle ಡೂಡಲ್‌ ಅನ್ನು ಹೊಂದಿದೆ. ಇದರಲ್ಲಿ ಒಂದು ತುಂಡು ಕೇಕ್ ಮತ್ತು ಉಡುಗೊರೆಗಳ ಮಾದರಿಯನ್ನು ಒಳಗೊಂಡಿದೆ. ಹಾಗೇ ನೋಡಿದ್ರೆ ಗೂಗಲ್‌ 1998ರಿಂದ ತನ್ನ ಲೋಗೋ ಮೂಲಕ ಜಾಲತಾಣವನ್ನು ಸದಾ ನವೀನತೆಯಿಂದ ಕಾಣುವಂತೆ ಅದು ನೋಡಿಕೊಳ್ಳುತ್ತಿದೆ. ಖ್ಯಾತನಾಮರ ಹುಟ್ಟುಹಬ್ಬ, ವಿಶೇಷ ದಿನಗಳ ಪ್ರಯುಕ್ತ ಗೂಗಲ್‌ ಡೂಡಲ್‌ ರಚಿಸುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದಾಗಿದೆ.

Google

ಇನ್ನು ನೀವು Google ಮುಖಪುಟದಿಂದ ಡೂಡಲ್ ಅನ್ನು ಟ್ಯಾಪ್ ಮಾಡಿದರೆ, ಅದು ಗೂಗಲ್, ಹುಡುಕಾಟ ಫಲಿತಾಂಶಗಳ ಪುಟಕ್ಕೆ ತೆರೆಯುತ್ತದೆ. ನೀವು ಗೂಗಲ್ ಡೂಡಲ್ ಅನ್ನು ಫೇಸ್‌ಬುಕ್, ಟ್ವಿಟರ್ ಮತ್ತು ಇಮೇಲ್ ಮೂಲಕ ಹಂಚಿಕೊಳ್ಳಬಹುದು. ಲಿಂಕ್‌ಗಾಗಿ ಕಾಪಿ ಬಟನ್ ಸಹ ಇದೆ. ಆದ್ದರಿಂದ ಇದನ್ನು ಎಲ್ಲಿಯಾದರೂ ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ. ಪ್ರತಿ ಡೂಡಲ್‌ನಂತೆ, ಇದು ಕೂಡ ಆಚರಣೆಯ ಬಗ್ಗೆ ಸಣ್ಣ ವಿವರಣೆಯೊಂದಿಗೆ ಪುಟವನ್ನು ಹೊಂದಿದೆ.

Best Mobiles in India

Read more about:
English summary
Just like most of us during this pandemic, Google is also celebrating its birthday through a video call.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X