ಇನ್ಮುಂದೆ ಗೂಗಲ್‌ ಚಾಟ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲೂ ಡಾರ್ಕ್‌ಮೋಡ್‌ ಲಭ್ಯ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಚಾಟ್‌ ಸೇವೆ ಕೂಡ ಒಮದಗಿದೆ. ಸದ್ಯ ಇದೀಗ ಗೂಗಲ್‌ ಚಾಟ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಡಾರ್ಕ್‌ಮೋಡ್‌ ಬೆಂಬಲವನ್ನು ಸೇರಿಸಿದೆ. ವೆಬ್‌ಗಾಗಿ ಗೂಗಲ್ ಚಾಟ್ ಮತ್ತು ಅದರ ಆಂಡ್ರಾಯ್ಡ್ ಮತ್ತು ಐಒಎಸ್ ಆಪ್‌ಗಳನ್ನು ಸ್ವೀಕರಿಸಿದ ಸುಮಾರು ಒಂದು ವರ್ಷದ ನಂತರ ಡೆಸ್ಕ್‌ಟಾಪ್ ಆಪ್ ಡಾರ್ಕ್ ಮೋಡ್‌ಗೆ ಬೆಂಬಲವನ್ನು ಪಡೆಯುತ್ತಿದೆ.

ಗೂಗಲ್ ಚಾಟ್‌

ಹೌದು, ಗೂಗಲ್ ಚಾಟ್‌ ಇದೀಗ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಡಾರ್ಕ್ ಮೋಡ್ ಬೆಂಬಲವನ್ನು ಪಡೆದುಕೊಂಡಿದೆ. ಈ ಬೆಂಬಲವು ಪ್ರೋಗ್ರೆಸ್ಸಿವ್ ವೆಬ್ ಆಪ್ ಗಾಗಿ ಸಹ ಹೊರಹೊಮ್ಮುತ್ತಿದೆ. ಇದರ ಜೊತೆಗೆ, ಗೂಗಲ್ ಕ್ಯಾಲೆಂಡರ್ ಬಳಕೆದಾರರು ತಮ್ಮ ಕೆಲಸದ ಸ್ಥಳವನ್ನು ಸೇರಿಸಲು ಅವಕಾಶ ನೀಡುವ ಸಾಮರ್ಥ್ಯವನ್ನು ಪಡೆಯುತ್ತಿದೆ. ತಮ್ಮ ಕ್ಯಾಲೆಂಡರ್‌ಗೆ ವಾರಕ್ಕೊಮ್ಮೆ ಕೆಲಸ ಮಾಡುವ ಸ್ಥಳದ ದಿನಚರಿಯನ್ನು ಸೇರಿಸಲು ಮತ್ತು ಯೋಜನೆಗಳು ಬದಲಾದರೆ ತಮ್ಮ ಸ್ಥಳವನ್ನು ಅಪ್‌ಡೇಟ್ ಮಾಡಲು ಸಹ ಸಾಧ್ಯವಾಗುತ್ತದೆ. ಹಾಗಾದ್ರೆ ಗೂಗಲ್‌ ಹೊಸದಾಗಿ ಪರಿಚಯಿಸಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್

ಟೆಕ್ ದೈತ್ಯ ತನ್ನ ವೆಬ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಗೂಗಲ್ ಚಾಟ್‌ಗಾಗಿ ಡಾರ್ಕ್ ಮೋಡ್ ಅನ್ನು ಘೋಷಿಸಿದೆ. ಬ್ಲಾಗ್ ಪೋಸ್ಟ್ ಮೂಲಕ ಪ್ರಗತಿಶೀಲ ವೆಬ್ ಅಪ್ಲಿಕೇಶನ್ (ಪಿಡಬ್ಲ್ಯೂಎ) ಬಗ್ಗೆ ಮಾಹಿತಿ ನೀಡಿದೆ. ಈ ಫೀಚರ್ಸ್‌ ಅನ್ನು ನಿರ್ವಾಹಕರಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಗೂಗಲ್ ಹೇಳುತ್ತದೆ. ಸೆಟ್ಟಿಂಗ್ಸ್> ಥೀಮ್ ಸೆಟ್ಟಿಂಗ್ಸ್ ಗೆ ಹೋಗಿ ನಂತರ ಡಾರ್ಕ್ ಮೋಡ್ ಆಯ್ಕೆ ಮಾಡುವ ಮೂಲಕ ಇದನ್ನು ಕಾಣಬಹುದು. ಅದೇ ವಿಧಾನವು ಗೂಗಲ್‌ ಚಾಟ್ PWA ಮತ್ತು ಅಪ್ಲಿಕೇಶನ್ನ ವೆಬ್ ಆವೃತ್ತಿಗೆ ಸಹ ಅನ್ವಯಿಸುತ್ತದೆ.

ಡಾರ್ಕ್ ಮೋಡ್

ಸದ್ಯ ಡಾರ್ಕ್ ಮೋಡ್ ಕ್ರಮೇಣವಾಗಿ ಹೊರಹೊಮ್ಮುತ್ತಿದೆ ಆದ್ದರಿಂದ ಬಳಕೆದಾರರು ಈ ಕ್ಷಣವೇ ಪಡೆದುಕೊಳ್ಳಲು ಸಾದ್ಯವಿಲ್ಲ. ಇದು ಪೂರ್ಣಗೊಳ್ಳಲು 15 ದಿನಗಳವರೆಗೆ ತೆಗೆದುಕೊಳ್ಳಬಹುದು. ಹೊಸ ಫೀಚರ್ ಎಲ್ಲಾ ಗೂಗಲ್‌ ವರ್ಕ್‌ಸ್ಪೇಸ್‌ ಗ್ರಾಹಕರಿಗೆ ಹಾಗೂ G Suite Basic ಮತ್ತು Business ಗ್ರಾಹಕರಿಗೆ ಲಭ್ಯವಿರುತ್ತದೆ. ಇದಲ್ಲದೆ ಬಳಕೆದಾರರು ತಮ್ಮ ಕೆಲಸದ ಸ್ಥಳವನ್ನು ನೇರವಾಗಿ ಕ್ಯಾಲೆಂಡರ್‌ಗೆ ಸೇರಿಸುವ ಅವಕಾಶವನ್ನು ಸಹ ಗೂಗಲ್ ಪರಿಚಯಿಸಿದೆ. ಬಳಕೆದಾರರು ವಾರದಲ್ಲಿ ತಮ್ಮ ಕೆಲಸದ ಸ್ಥಳವನ್ನು ಸೇರಿಸಬಹುದು ಮತ್ತು ಯೋಜನೆಗಳು ಬದಲಾದರೆ ಅದನ್ನು ಬದಲಾಯಿಸಬಹುದಾಗಿದೆ.

ಗೂಗಲ್‌

ಇನ್ನು ಈ ವೈಶಿಷ್ಟ್ಯವನ್ನು ತಮ್ಮ ಸಂಸ್ಥೆಯಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿಯಂತ್ರಿಸುವ ಅಧಿಕಾರವನ್ನು ಈಗಾಗಲೇ ನಿರ್ವಾಹಕರಿಗೆ ನೀಡಲಾಗಿದೆ. ಈ ವೈಶಿಷ್ಟ್ಯವು ಪೂರ್ವನಿಯೋಜಿತವಾಗಿರುತ್ತದೆ. ಆದರೆ ಡೊಮೇನ್ ಅಥವಾ OU ಮಟ್ಟದಲ್ಲಿ ನಿಷ್ಕ್ರಿಯಗೊಳಿಸಬಹುದು ಎಂದು ಗೂಗಲ್‌ ಹೇಳಿದೆ. ನಿರ್ವಾಹಕರು ಈ ಫೀಚರ್ಸ್‌ ಅನ್ನು ನಿಷ್ಕ್ರಿಯಗೊಳಿಸಲು ಬಯಸಿದರೆ, ಅವರು ಆಗಸ್ಟ್ 30 ರ ಮೊದಲು ನಿರ್ವಾಹಕ ಕನ್ಸೋಲ್‌ನಲ್ಲಿ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ನಂತರ ಈ ವೈಶಿಷ್ಟ್ಯವನ್ನು ಪೂರ್ವನಿಯೋಜಿತವಾಗಿ ಆಫ್ ಮಾಡಲಾಗುತ್ತದೆ.

ಫೀಚರ್ಸ್‌

ನೀವು ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದಲ್ಲಿ, ಬಳಕೆದಾರರು ವಾರದ ಯಾವ ದಿನಗಳು ಅವರು ಕಚೇರಿಯಲ್ಲಿ, ಮನೆಯಿಂದ ಕೆಲಸ ಮಾಡಲು ಅಥವಾ ಬೇರೆ ಸ್ಥಳದಿಂದ ಇರಲು ಯೋಜಿಸುತ್ತಾರೆ ಎಂಬುದನ್ನು ಇತರರಿಗೆ ತೋರಿಸಬಹುದು. ಇದು ವೈಯಕ್ತಿಕ ಸಭೆಗಳನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುತ್ತದೆ. ಈ ಫೀಚರ್ಸ್‌ ಎಲ್ಲಾ ಗೂಗಲ್ ವರ್ಕ್‌ಸ್ಪೇಸ್ ಬಿಸಿನೆಸ್ ಸ್ಟ್ಯಾಂಡರ್ಡ್, ಬಿಸಿನೆಸ್ ಪ್ಲಸ್, ಎಂಟರ್‌ಪ್ರೈಸ್ ಸ್ಟ್ಯಾಂಡರ್ಡ್, ಎಂಟರ್‌ಪ್ರೈಸ್ ಪ್ಲಸ್, ಎಜುಕೇಶನ್ ಪ್ಲಸ್ ಮತ್ತು ಲಾಭರಹಿತ ಮತ್ತು ಜಿ ಸೂಟ್ ಬಿಸಿನೆಸ್ ಗ್ರಾಹಕರಿಗೆ ಲಭ್ಯವಿರುತ್ತದೆ ಎಂದು ಗೂಗಲ್ ಹೇಳಿದೆ.

Best Mobiles in India

English summary
Google Calendar’s new feature that will help people organise their commitments better will begin rolling out for end-users starting August 30.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X