ದೀಪಾವಳಿಗೆ ಗೂಗಲ್ ನೀಡಲಿದೆ ಭಾರಿ ಉಡುಗೊರೆ!...ಏನು ಗೊತ್ತಾ?

ಗೂಗಲ್ ಗ್ರಾಮೀಣ ಪ್ರದೇಶದ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ.

|

ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿರುವ ಗೂಗಲ್, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಾತ್ರ ಸೋಲುತ್ತಾ ಬಂದಿದೆ.!! ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಮಾರುಕಟ್ಟಗೆ ಬಿಡುತ್ತಿದ್ದ ಗೂಗಲ್ ಇದೀಗ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಹೊಸ ಅಲೆ ಎಬ್ಬಿಸಲು ಮುಂದಾಗಿದೆ.!!

ಇತ್ತೀಚಿಗೆ ಕೇವಲ 2000 ರೂಪಾಯಿಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಹೇಳಿದ್ದ ಗೂಗಲ್, ಇದೀಗ ದೀಪಾವಳಿ ವೇಳೆಗೆ ಭಾರತೀಯರಿಗೆ ಹೊಸದೊಂದು ಕೊಡುಗೆ ನೀಡಲು ಮುಂದಾಗಿದೆ.!! ಈ ಬಗ್ಗೆ ಗೂಗಲ್ ಮಾಹಿತಿ ಬಿಡುಗಡೆ ಮಾಡಿದೆ.!! ಹಾಗಾದರೆ, ಭಾರತೀಯರ ಪ್ರಮುಖ ಹಬ್ಬಕ್ಕೆ ಗೂಗಲ್ ನೀಡುವ ಉಡುಗೊರೆ ಏನು? ಗೂಗಲ್‌ನ ಹೊಸ ಯೋಜನೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್!!

ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್!!

ಕೇವಲ 2000 ರೂಪಾಯಿಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಹೇಳಿದ್ದ ಗೂಗಲ್, ಇದೀಗ ದೀಪಾವಳಿ ವೇಳೆಗೆ ಭಾರತೀಯರಿಗೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಹೇಳಿದೆ. ಆದರೆ, ಈ ಬಾರಿ ಬೆಲೆಯನ್ನು ನಿಗದಿಪಡಿಸಿ ಹೇಳಿಲ್ಲ.!!

ಮೈಕ್ರೊಮ್ಯಾಕ್ಸ್, ಕಾರ್ಬನ್, ಲಾವಾಗೆ ಫೈಟ್!!

ಮೈಕ್ರೊಮ್ಯಾಕ್ಸ್, ಕಾರ್ಬನ್, ಲಾವಾಗೆ ಫೈಟ್!!

ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಮೈಕ್ರೊಮ್ಯಾಕ್ಸ್, ಕಾರ್ಬನ್, ಲಾವಾ ಮೊಬೈಲ್ ಕಂಪೆನಿಗಳಂತೆ ಗೂಗಲ್ ಕೂಡ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಈ ಬಗ್ಗೆ ಗೂಗಲ್ ಸ್ಪಷ್ಟಪಡಿಸಿದೆ.!!

ಗ್ರಾಮೀಣ ಪ್ರದೇಶಕ್ಕೆ ಗೂಗಲ್ ಗುರಿ!!

ಗ್ರಾಮೀಣ ಪ್ರದೇಶಕ್ಕೆ ಗೂಗಲ್ ಗುರಿ!!

ಭಾರತದ ಬಹುತೇಕ ನಗರಗಳು ಈಗಾಗಲೇ ಸ್ಮಾರ್ಟ್‌ಫೋನ್‌ನಿಂದ ಆವೃತವಾಗಿದೆ. ಹಾಗಾಗಿ, ಗೂಗಲ್ ಗ್ರಾಮೀಣ ಪ್ರದೇಶದ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಮಹಿಳೆಯರ ಸಬಲೀಕರಣ ಆಲೋಚನೆಯೂ ಗೂಗಲ್‌ಗಿದೆ.!!

ಕೇವಲ 2000 ಕ್ಕೆ ಸ್ಮಾರ್ಟ್‌ಫೋನ್‌!!

ಕೇವಲ 2000 ಕ್ಕೆ ಸ್ಮಾರ್ಟ್‌ಫೋನ್‌!!

ಹೌದು, ಗೂಗಲ್ ಸಿಎಒ ಸುಂದರ್‌ ಪಿಚೈ ಈ ಬಗ್ಗೆ ಮೊದಲೇ ಸ್ಪಷ್ಟಪಡಿಸಿದ್ದು, ಕೇವಲ 2000 ಕ್ಕೆ ಗೂಗಲ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತದೆ.!! ಹಾಗಾಗಿ, ದೀಪಾವಳಿಗೆ ಅತ್ಯಂತ ಕಡಿಮೆ ಬೆಲೆಯ ಗೂಗಲ್ ಸ್ಮಾರ್ಟ್‌ಫೋನ್ ಭಾರತೀಯರಿಗೆ ಸಿಗುವುದು ಪಕ್ಕಾ!!

Best Mobiles in India

English summary
mobile phone users in India may need to wait until Diwali . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X