'ಬ್ರೇವ್‌ ಬ್ರೌಸರ್‌' ಎಂಟ್ರಿಯಿಂದ 'ಗೂಗಲ್‌ ಕ್ರೋಮ್‌'ಗೆ ಶುರುವಾಗಿದೆ ಕಂಟಕ!

|

ಜಗತ್ತಿನಲ್ಲಿ ಹಲವು ಅತ್ಯುತ್ತಮ ಸೇವೆಗಳನ್ನು ನೀಡುತ್ತ ಟೆಕ್‌ ದಿಗ್ಗಜ ಎಂದೇನಿಸಿಕೊಂಡಿರುವ ಗೂಗಲ್ ಸಂಸ್ಥೆಯು ಬಳಕೆದಾರರ ನೆಚ್ಚಿನ ಸರ್ಚ್ ಇಂಜಿನ್ ಆಗಿದೆ. ಏನೇ ಅಗತ್ಯ ಮಾಹಿತಿ ಬೇಕಿದ್ದರೂ ಬಳಕೆದಾರರಿಗೆ ಮೊದಲು ನೆನಪಿಗೆ ಬರುವುದೇ ಗೂಗಲ್. ಸುಮಾರು 2 ಬಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರು ಇಂಟರ್ನೆಟ್‌ ಸೇವೆಗಾಗಿ 'ಗೂಗಲ್‌ ಕ್ರೋಮ್‌' ಬ್ರೌಸರ್‌ ಅನ್ನು ಬಳೆಸುತ್ತಿದ್ದಾರೆ. ಆದರೆ ಈಗ ಗೂಗಲ್‌ ಕಂಟಕ ಶುರುವಾಗಿದೆ.

'ಬ್ರೇವ್‌ ಬ್ರೌಸರ್‌' ಎಂಟ್ರಿಯಿಂದ 'ಗೂಗಲ್‌ ಕ್ರೋಮ್‌'ಗೆ ಶುರುವಾಗಿದೆ ಕಂಟಕ!

ಹೌದು, ಪ್ರಸ್ತುತ ಅತೀ ಜನಪ್ರಿಯವಾಗಿರುವ ಗೂಗಲ್ ಕ್ರೋಮ್‌ ಬ್ರೌಸರ್‌ಗೆ 2018ರಲ್ಲಿ ಬಿಡುಗಡೆ ಆಗಿದ್ದ 'ಬ್ರೇವ್‌' ಬ್ರೌಸರ್‌ ಇದೀಗ ಪ್ರಬಲ ಎದುರಾಳಿ ಎಂದೆನಿಸಿದೆ. ಈ ಬ್ರೇವ್‌ ಬ್ರೌಸರ್‌ ಓಪೆನ್‌ ಮಾದರಿಯ ಕ್ರೋಮಿಯಮ್ ಬೇಸಡ್‌ ಬ್ರೌಸರ್‌ ಆಗಿದ್ದು, ಅನಗತ್ಯ ಬರುವ ಥರ್ಡ್‌ಪಾರ್ಟಿ ಆಡ್ಸ್‌ ಮತ್ತು ಕುಕ್ಕಿಸ್‌ಗಳನ್ನು ಆಟೋಮ್ಯಾಟಿಕ್ ಆಗಿ ಬ್ಲಾಕ್‌ ಮಾಡಲಿದ್ದು, ಬಳಕೆದಾರರ ಖಾಸಗಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

'ಬ್ರೇವ್‌ ಬ್ರೌಸರ್‌' ಎಂಟ್ರಿಯಿಂದ 'ಗೂಗಲ್‌ ಕ್ರೋಮ್‌'ಗೆ ಶುರುವಾಗಿದೆ ಕಂಟಕ!

ಗೂಗಲ್‌ ಕ್ರೋಮ್‌, ಮೊಜಿಲ್ಲಾ ಫೈರ್‌ಫಾಕ್ಸ್‌, ಸಫಾರಿ, ಮತ್ತು ಬ್ರೇವ್‌ ಬ್ರೌಸರ್‌ಗಳು ಮುಂಚಣೀಯ ಸ್ಥಾನದಲ್ಲಿದ್ದು, ಇವುಗಳಲ್ಲಿಗ ಬ್ರೆವ್‌ ತನ್ನ ಅತ್ಯುತ್ತಮ ಫೀಚರ್ಸ್‌ಗಳಿಂದಾಗಿ ಕ್ರೋಮ್‌ಗೆ ನೇರವಾದ ಸ್ಫರ್ಧಿಯಾದಂತಾಗಿದೆ. ಹಾಗಾದರೇ ಬ್ರೇವ್‌ ಬ್ರೌಸರ್‌ನ ವಿಶೇಷತೆಗಳೆನು ಮತ್ತು ಯಾವ ಅಂಶಗಳು ಗೂಗಲ್‌ ಕ್ರೋಮ್‌ಗೆ ಎದುರಾಳಿ ಎಂದೆನಿಸಿಕೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು? ಓದಿರಿ : ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು?

ಶೈನ್‌ ಆಗುತ್ತಿದೆ ಬ್ರೇವ್‌

ಶೈನ್‌ ಆಗುತ್ತಿದೆ ಬ್ರೇವ್‌

ಕಳೆದ 2018ರಲ್ಲಿ ಪರಿಚಿತವಾದ ಬ್ರೆವ್‌ ಬ್ರೌಸರ್‌ ಮೊದಲು ಐಓಎಸ್‌ ಮಾದರಿಯ ಓಎಸ್‌ಗೆ ಮಾತ್ರ ಬೆಂಬಲ ಹೊಂದಿತ್ತು. ಆದ್ರೆ ಇದೀಗ ಆಂಡ್ರಾಯ್ಡ್, ಮ್ಯಾಕ್‌ಓಎಸ್‌, ವಿಂಡೊಸ್‌ ಮತ್ತು ಲಿನಿಕ್ಸ್‌ ಓಎಸ್‌ ಮಾದರಿಗಳಲ್ಲಿಯೂ ಲಭ್ಯವಾಗುತ್ತಿದೆ. ಈ ಮೂಲಕ ಬ್ರೆವ್‌ನ ಜನಪ್ರಿಯತೆ ಸಹ ಹೆಚ್ಚಿಸಿಕೊಳ್ಳುತ್ತಿದ್ದು, ಬ್ರೌಸರ್‌ Rankingನಲ್ಲಿಯೂ ಸಹ ಮುಂಚೂಣಿಯತ್ತ ಸಾಗುತ್ತಿದೆ.

ಮೇನ್‌ ಫೀಚರ್ಸ್‌

ಮೇನ್‌ ಫೀಚರ್ಸ್‌

ಈ ಬ್ರೌಸರ್‌ನ ಲೋಡಿಂಗ್ ವೇಗವು ಅತ್ಯುತ್ತಮವಾಗಿದ್ದು, 2x ವೇಗವನ್ನು ಡೆಸ್ಕ್‌ಟಾಪ್‌ನಲ್ಲಿ ಮತ್ತು ಮೊಬೈಲ್‌ನಲ್ಲಿ 8x ಫಾಸ್ಟ್‌ ವೇಗವನ್ನು ಕಾಣಬಹುದಾಗಿದೆ. ಮುಖ್ಯವಾಗಿ ಪ್ರೈವಸಿ ಸೆಟ್ಟಿಂಗ್‌ನಲ್ಲಿ ಬಳಕೆದಾರರಿಗೆ ಹೆಚ್ಚಿನ ಸುರಕ್ಷತಾ ಆಯ್ಕೆಗಳು ಲಭ್ಯವಾಗುತ್ತವೆ. ಥರ್ಡ್‌ಪಾರ್ಟಿ ಆಪ್ಸ್‌ ಮತ್ತು ಟ್ರಾಕರ್ಸ್‌ಗಳಿಂದ ಭದ್ರತೆಯ ಅಂಶಗಳನ್ನು ಸಹ ಈ ಬ್ರೌಸರ್‌ ಹೊಂದಿದೆ.

ಓದಿರಿ : ಸರ್ಚ್‌ ಪ್ರೈವೆಸಿ ಕಾಪಾಡುವ 5 ಬೆಸ್ಟ್‌ ಬ್ರೌಸರ್‌ಗಳು!ಓದಿರಿ : ಸರ್ಚ್‌ ಪ್ರೈವೆಸಿ ಕಾಪಾಡುವ 5 ಬೆಸ್ಟ್‌ ಬ್ರೌಸರ್‌ಗಳು!

ಭದ್ರತೆಗೆ ಹೆಚ್ಚಿನ ಆದ್ಯತೆ

ಭದ್ರತೆಗೆ ಹೆಚ್ಚಿನ ಆದ್ಯತೆ

ಬ್ರೇವ್‌ ಬ್ರೌಸರ್‌ ಹೆಚ್ಚು ಜನಪ್ರಿಯತೆ ಹೊಂದಲು ಅದರ ಫೀಚರ್ಸ್‌ಗಳೆ ಕಾರಣ. ಅವುಗಳಲ್ಲಿ ಥರ್ಡ್‌ಪಾರ್ಟಿ ಟ್ರಾಕರ್‌ ಮತ್ತು ಅನಗತ್ಯ ಜಾಹಿರಾತುಗಳ ಕಿರಿ ಕಿರಿ ಮುಕ್ತವಾಗಿದ ಆಯ್ಕೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಪ್ರತಿದಿನ ಎಷ್ಟು ಜಾಹಿರಾತುಗಳು ಬ್ಲಾಕ್‌ ಆಗಿವೆ ಮತ್ತು ಟ್ರ್ಯಾಕರ್ಸ್‌ ಬ್ಲಾಕ್‌ ಆಗಿದ್ದಾರೇ ಎನ್ನುವ ಕುರಿತು ಮಾಹಿತಿಯನ್ನು ಸಹ ನೋಡಬಹುದಾಗಿದೆ.

ಕ್ರಿಪ್ಟೊಕರೆನ್ಸಿ ಸೇವೆ

ಕ್ರಿಪ್ಟೊಕರೆನ್ಸಿ ಸೇವೆ

ಸದ್ಯ ಕ್ರಿಪ್ಟೋಕರೆನ್ಸನಿ ಮಾದರಿಯಂತೆ ಬ್ರೇವ್‌ ಬ್ರೌಸರ್‌ ಕಂಪನಿಯು ಸಹ ಹೊಸ ಸಾಹಸಕ್ಕೆ ಸಜ್ಜಾಗಿದ್ದು, ಎಥೆರಿಯಮ್, ಲೆಡ್ಜರ್ ಮತ್ತು ಟ್ರೆಜರ್ ಮಾದರಿಯಂತೆ ಕ್ರಿಪ್ಟೊಕರೆನ್ಸಿ ಸಹ ಲಾಂಚ್ ಆಗಲಿದೆ. ಈ ಮೂಲಕ ಗ್ರಾಹಕರು ಕ್ರಿಪ್ಟೋಕರೆನ್ಸನಿ ಫಂಡ್‌ ಅರ್ನ್‌ ಮಾಡಬಹುದು ಮತ್ತು ಫಂಡ್ ಅನ್ನು ಮಾರಲುಬಹುದು. ಕಸ್ಟೋಡೈಲ್‌ ವಾಲೆಟ್‌ ನಲ್ಲಿ ಸ್ಟೋರ್‌ ಮಾಡಬಹುದಾಗಿದೆ.

ಓದಿರಿ : ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!ಓದಿರಿ : ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!

ಜಾಹಿರಾತು ಮುಕ್ತ

ಜಾಹಿರಾತು ಮುಕ್ತ

ಬ್ರೇವ್‌ ಬ್ರೌಸರ್‌ ಜಾಹಿರಾತು ಮುಕ್ತವಾದ ರಚನೆಯನ್ನು ಹೊಂದಿದ್ದು, ಕೇಲವು ಅನಗತ್ಯವಾದ ಥರ್ಡ್‌ಪಾರ್ಟ ಟ್ರಾಕ್‌ ಅನ್ನು ಬಂದಮಾಡಲಿದೆ. ಥರ್ಡ್‌ಪಾರ್ಟಿ ಕುಕ್ಕಿಸ್‌ಗಳನ್ನು ಹಾಗೂ ಬ್ಲಾಕ್‌ ಸ್ಟ್ರಿಪ್ಟ್‌ ಮಾಡಲಿದೆ.ಆದರೆ HTTPS ಸೌಲಭ್ಯವನ್ನು ಒಳಗೊಂಡಿದ್ದು, ಬಳಕೆದಾರುರು ಯಾವುದೇ ಸ್ಥಳದಲ್ಲಿದ್ದರೂ ಪ್ರೈವಸಿ ಸುರಕ್ಷತೆಯನ್ನು ಒದಗಿಸಲಿದೆ.

ಓದಿರಿ : ಸೋನಿಯಿಂದ ಹೊಸ ಸೌಂಡ್‌ಬಾರ್ ಬಿಡುಗಡೆ!.ಬೆಲೆ ಮಾತ್ರ ದುಬಾರಿ!ಓದಿರಿ : ಸೋನಿಯಿಂದ ಹೊಸ ಸೌಂಡ್‌ಬಾರ್ ಬಿಡುಗಡೆ!.ಬೆಲೆ ಮಾತ್ರ ದುಬಾರಿ!

Best Mobiles in India

English summary
New browser Brave that automatically blocks third-party ads and cookies. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X